Site icon Vistara News

Pavitra Lokesh | ಪವಿತ್ರಾ ಲೋಕೇಶ್‌-ನರೇಶ್‌ ನಡುವೆ ಬ್ರೇಕಪ್‌ ಆಗಿದೆ ಅಂತಿದೆ ಟಾಲಿವುಡ್‌!

Pavitra Lokesh

ಬೆಂಗಳೂರು : ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ (Pavitra Lokesh) ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಇಬ್ಬರೂ ಮೈಸೂರಿನ ಹೋಟೆಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದರು. ಇದೀಗ ಇಬ್ಬರೂ ಜತೆಯಲ್ಲಿ ಇಲ್ಲ, ಬೇರೆ ಆಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ.

ನರೇಶ್‌ ಮತ್ತು ತಮ್ಮ ಸಂಬಂಧದ ವದಂತಿ ಬಗ್ಗೆ ಪವಿತ್ರಾ ಈ ಹಿಂದೆ ʻʻಹೆಣ್ಣು ಮತ್ತು ಗಂಡು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೆ ಅವರ ಮಧ್ಯೆ ಏನೋ ಇದೆ ಎಂದು ಹೇಳುವುದು ಸರಿಯಲ್ಲʼʼ ಎಂದಿದ್ದರು. ನರೇಶ್‌ ಪತ್ನಿ ಮಾಡಿರುವ ಆಪಾದನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ ʻʻನರೇಶ್‌ ಅವರ ಪತ್ನಿ ಬಗ್ಗೆ ನನಗೆ ತಿಳಿದಿಲ್ಲ. ಅವರು ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಒಡವೆ, ಆಭರಣಗಳನ್ನು ನಾನು ನರೇಶ್‌ ಅವರಿಂದ ಪಡೆದಿದ್ದೆ ಎಂಬ ಆಪಾದನೆ ನನ್ನ ಮೇಲೆ ಹೊರಿಸಿದ್ದಾರೆ. ಆದರೆ ಇದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾನು ಸ್ವತಃ ದುಡಿದು ಒಡವೆಗಳನ್ನು ಮಾಡಿಕೊಂಡಿದ್ದೇನೆ. ಅದಕ್ಕೆ ಸಾಕ್ಷಿಗಳು ಕೂಡ ನನ್ನಲ್ಲಿವೆ. ನರೇಶ್‌ ಅವರು ಶ್ರೀಮಂತ ವ್ಯಕ್ತಿ ಆಗಿರಬಹುದು. ನನ್ನ ಬಳಿ ಅಷ್ಟಾಗಿ ಹಣ ಇಲ್ಲದಿರಬಹುದು. ಆದರೆ ನಾನು ಕಷ್ಟಪಟ್ಟು ದುಡಿದ ಹಣದಿಂದ ಒಡವೆಗಳನ್ನು ಮಾಡಿಸಿಕೊಂಡಿದ್ದೇನೆʼʼ ಎಂದು ಗರಂ ಆಗಿ ಉತ್ತರಿಸಿದ್ದರು. ಆದರೆ ಇದೀಗ ಟಾಲಿವುಡ್‌ ಅಂಗಳದಲ್ಲಿ ನರೇಶ್‌ ಮತ್ತು ಪವಿತ್ರಾ ನಡುವಿನ ಸಂಬಂಧ ಮುರಿದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ | Pavitra Lokesh | ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಸೈಬರ್‌ ಠಾಣೆ ಮೆಟ್ಟಿಲೇರಿದ ನಟಿ

ಸಿನಿಮಾದಲ್ಲಿ ಅಷ್ಟಾಗಿ ಬರುತ್ತಿಲ್ಲ ಆಫರ್‌!
ಈ ಪ್ರಕರಣದ ನಿಟ್ಟಿನಲ್ಲಿ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ಗೆ ಅಷ್ಟಾಗಿ ಸಿನಿಮಾಗಳು ಬರುತ್ತಿಲ್ಲ. ಇಬ್ಬರ ನಡುವೆ ಬಾಂಧವ್ಯ ಇಲ್ಲ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿದ ಸಿನಿಮಾಗಳು ಹಿಟ್‌ ಆಗಿದ್ದವು. ಇದೀಗ ಇಬ್ಬರಿಗೂ ಆಫರ್‌ ಕಡಿಮೆಯಾಗಿದೆ ಎಂದು ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ. ವಿವಾದಕ್ಕೆ ಸಿಲುಕಿರುವ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ತೆಲುಗು ಮಂದಿ ಆಸಕ್ತಿ ತೋರುತ್ತಿಲ್ಲ ಎಂತಲೂ ಸುದ್ದಿಯಾಗಿದೆ. ಆದರೀಗ ಇಬ್ಬರ ಬ್ರೇಕಪ್ ಸುದ್ದಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸ್ಪಷ್ಟನೆ ಮಾಡಬೇಕಿದೆ.

ಪವಿತ್ರಾ ಲೋಕೇಶ್ ಜತೆಗಿನ ಸ್ನೇಹದ ಬಗ್ಗೆ ಈ ಹಿಂದೆ ನಟ ನರೇಶ್ ʻʻಪವಿತ್ರಾ ನನಗೆ ನಾಲ್ಕು ವರ್ಷಗಳಿಂದ ಪರಿಚಯ. ಇದುವರೆಗೆ 6 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನ್ನ ವೈಯಕ್ತಿಕ ಜೀವನದಲ್ಲಿ ನೊಂದು ಖಿನ್ನತೆಯ ಮಟ್ಟಕ್ಕೆ ಹೋಗಿದ್ದ ವೇಳೆ ಪವಿತ್ರಾ ಲೋಕೇಶ್ ಸಿನೆಮಾ ಸೆಟ್‌ನಲ್ಲಿ ಕಷ್ಟ ಸುಖ ಮಾತನಾಡುವಾಗ ಆತ್ಮೀಯವಾಗಿ ನನಗೆ ಹತ್ತಿರವಾದರು. ಅವರು ನನಗೆ ಉತ್ತಮ ಸ್ನೇಹಿತೆ, ಮಾರ್ಗದರ್ಶಿ. ನಾವು ಮದುವೆಯಾಗಿಲ್ಲ, ಮುಂದೆ ಮದುವೆಯಾಗುತ್ತೇವೋ ಇಲ್ಲ ಸ್ನೇಹಿತರಾಗಿರುತ್ತೇವೋ ನಮ್ಮಿಬ್ಬರ ವೈಯಕ್ತಿಕ ನಿರ್ಧಾರʼʼಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ | Pavitra Lokesh | ನನ್ನ ಮನೆ ಬಾಗಿಲಿಗೆ ಬಂದಿರೋದು ಅವಳು ಎಂದ ರಮ್ಯಾ ರಘುಪತಿ

Exit mobile version