ಬೆಂಗಳೂರು : ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ಅವರ ಸಂಬಂಧದ ವದಂತಿಗಳು ಹರಿದಾಡುತ್ತಿರುವ ಬೆನ್ನಲ್ಲೆ ನಟಿ ಪವಿತ್ರಾ ಲೋಕೇಶ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಇದೀಗ ನಟ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಮಾಧ್ಯಮದವರೊಂದಿಗೆ ಮಾತನಾಡಿ ʻʻಪವಿತ್ರ ಲೋಕೇಶ್ ನನ್ನ ಮನೆಗೆ ಬಂದದ್ದೂ ಸತ್ಯ, ನಾನು ಊಟ ಬಡಿಸಿದ್ದೂ ಸತ್ಯʼʼ ಎಂದು ತಿರುಗೇಟು ನೀಡಿದ್ದಾರೆ.
ರಮ್ಯಾ ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪವಿತ್ರಾ ಲೊಕೇಶ್ ಹೇಳಿಕೆ ನೀಡಿದ್ದರು. ಈ ಕುರಿತು ರಮ್ಯಾ ರಘುಪತಿ ಪ್ರತಿಕ್ರಿಯಿಸಿ, ʻʻಪವಿತ್ರಾ ಲೋಕೇಶ್ ಅವರಿಗೆ ನಾನು ಯಾರು ಎಂದೇ ಗೊತ್ತಿಲ್ಲ ಎಂದರೆ ನಾನು ಏನೆಂದು ಹೇಳಲಿ? ಅವರು ಮನೆಗೆ ಬಂದಾಗ ಗೌರವಯುತವಾಗಿ ಕಳಿಸಿದ್ದೇನೆʼʼ ಎಂದು ಹೇಳಿದ್ದಾರೆ. ʻʻ3 ಕೋಟಿ ಕಮಿಟ್‌ಮೆಂಟ್ ಕೊಟ್ಟು ವಿಚ್ಛೇದನ ನೀಡಿ ಎಂದು ನರೇಶ್ ಅವರು ಹೇಳಿದ್ದಾರೆ. ನನ್ನದೇ ಆಸ್ತಿ ಅದು. ನನ್ನ ಮಗನೇ ಅದಕ್ಕೆ ವಾರಸುದಾರ. ಆದ್ದರಿಂದ ನನಗೆ ವಿಚ್ಛೇದನ ಬೇಡʼʼ ಎಂದು ರಮ್ಯಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Pavitra Lokesh | ಸುಚೇಂದ್ರ ಪ್ರಸಾದ್ ಜತೆ ಮದುವೆ ಆಗಿರಲಿಲ್ಲ, ನರೇಶ್ ಜತೆಗೂ ಆಗಿಲ್ಲ: ಪವಿತ್ರಾ ಲೋಕೇಶ್
ರಮ್ಯಾ ಅವರ ತವರು ಹೈದಾರಾಬಾದ್. ಅಲ್ಲಿಯೇ ಅವರು ಮಾತನಾಡಲಿ ಎಂದು ಪವಿತ್ರಾ ಲೋಕೇಶ್ ಹೇಳಿದ್ದರು. ಈ ವಿಚಾರವಾಗಿ ರಮ್ಯಾ ರಘುಪತಿ ʻʻನಾನು ಹುಟ್ಟಿ ಬೆಳೆದಿರುವುದು ಕರ್ನಾಟಕದಲ್ಲಿ. ಪವಿತ್ರಾ ಲೋಕೇಶ್ ಒಬ್ಬರೇ ಕರ್ನಾಟಕದವರಲ್ಲ. ನಾನೂ ಕರ್ನಾಟಕದವಳೇ. ನಾನು ಇಲ್ಲೇ ಹುಟ್ಟಿದ್ದು, ಇಲ್ಲೇ ಓದಿದ್ದು, ಇಲ್ಲೇ ವಾಸವಿದ್ದದ್ದುʼʼ ಎಂದು ಗರಂ ಆಗಿ ಉತ್ತರಿಸಿದ್ದಾರೆ.
ʻʻನನ್ನ ಮನೆ ಬಾಗಿಲಿಗೆ ಬಂದಿರುವುದು ಪವಿತ್ರಾ ಲೋಕೇಶ್ ಅವರು. ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ ಎಂದು ಕೇಳಿದ್ದೇನೆ. ಕೇವಲ 6 ತಿಂಗಳಿದು ಎಂದಿದ್ದಾರೆ. ಅವರು ಎಷ್ಟು ನೊಂದಿರಬಹುದು, ಮಕ್ಕಳ ಗತಿ ಏನಾಗಲಿಕ್ಕಿಲ್ಲʼʼ ಎಂದು ಹೇಳಿದರು.
ʻʻಪವಿತ್ರಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಕೈ ಹಿಡಿದಿದ್ದನ್ನು ಪಾಲಿಸುವುದು ನಮ್ಮ ಧರ್ಮ. ಎಂತಹ ಪರಿಸ್ಥಿತಿಯಲ್ಲೂ ನಾನು ಜತೆಗೆ ಇರುತ್ತೇನೆ. ಮೆರವಣಿಗೆಯನ್ನು ಬೆಳವಣಿಗೆ ಎನ್ನಬಾರದುʼʼ ಎಂದು ನಟ ಸುಚೆಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಮದುವೆಯಾಗಿರುವುದಕ್ಕೆ ದಾಖಲೆ ಏನಾದರೂ ಇದೆಯಾ? ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜತೆಗೆ ಇದ್ದೆವು ಎನ್ನುವುದನ್ನು ನಾನು ಹೇಳಲಾಗುವುದಿಲ್ಲ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ ಎಂದು ನಟಿ ಪವಿತ್ರಾ ಲೊಕೇಶ್ ಹೇಳಿದ್ದರು.
ಇದನ್ನೂ ಓದಿ | Pavitra Lokesh | ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಸೈಬರ್ ಠಾಣೆ ಮೆಟ್ಟಿಲೇರಿದ ನಟಿ