Site icon Vistara News

Pawan Kalyan: ಪವನ್‌ ಕಲ್ಯಾಣ್‌ ಮಾಜಿ ಪತ್ನಿ ಮರು ಮದುವೆಗೆ ರೆಡಿ!

Renu Desai Second Marriage

ಬೆಂಗಳೂರು: ಟಾಲಿವುಡ್ ನ ಖ್ಯಾತ ನಟರಲ್ಲಿ ಪವನ್ ಕಲ್ಯಾಣ (Pawan Kalyan) ಕೂಡ ಒಬ್ಬರು. ಇವರು ಹಲವಾರು ಚಿತ್ರದಲ್ಲಿ ನಟಿಸಿ ಜನ ಮನ್ನಣೆಯನ್ನು ಪಡೆದು ಟಾಲಿವುಡ್ ನಲ್ಲಿ ಒಬ್ಬ ಖ್ಯಾತ ನಟ ಎನಿಸಿಕೊಂಡಿದ್ದಾರೆ. ಆದರೆ ಇಂತಹ ಮಹಾನ್ ನಟ ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ಎದುರಿಸಿದ್ದಾರೆ. ಪವನ್‌ ಕಲ್ಯಾಣ್‌ ತಮ್ಮ ಮೊದಲ ಪತ್ನಿ (Pawan Kalyan’s ex-wife) ರೇಣು ದೇಸಾಯಿ (Renu desai) ಅವರಿಂದ ವಿಚ್ಛೇದನ ಪಡೆದು ದೂರವಾಗಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಇದೀಗ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ (Renu Desai Second Marriage) ಅವರು ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ನಟಿ ರೇಣು ದೇಸಾಯಿ ಅವರು ಇತ್ತೀಚೆಗೆ ಜನಪ್ರಿಯ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆಯ ಯೋಜನೆಯ ಬಗ್ಗೆ ಪ್ರಸ್ತಾಪಮಾಡಿದ್ದಾರೆ.

ಸಂದರ್ಶನದಲ್ಲಿ ನಟಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಳ್ಳುತ್ತಿರುವಾಗ ಈ ವಿಚಾರ ತಿಳಿಸಿದ್ದಾರೆ. ಹಾಗೇ ಮುಂದಿನ ಎರಡು ಅಥವಾ ಮೂರು ವರ್ಷದೊಳಗೆ ಮರು ಮದುವೆಯಾಗಲು ಯೋಜಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಹಾಗಾಗಿ ಈಗಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದ ಅವರ ಮಕ್ಕಳಿಗೆ ತಂದೆಯ ಪ್ರೀತಿ ಸಿಗಲಿದೆ ಎನ್ನಲಾಗಿದೆ.

Renu Desai Second Marriage

ನಟಿ ರೇಣು ದೇಸಾಯಿಯವರು 2012ರಲ್ಲಿ ಪವನ್ ಕಲ್ಯಾಣ್ ಅವರಿಗೆ ಡಿವೋರ್ಸ್ ನೀಡಿದ್ದರು. ಆದರೆ ಅವರು ಇಷ್ಟು ವರ್ಷಗಳ ಕಾಲ ಯಾಕೆ ಮರು ಮದುವೆಯಾಗಿಲ್ಲ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರಿಸಿದ ನಟಿ ರೇಣು ದೇಸಾಯಿ ಅವರು, ಆ ಸಮಯದಲ್ಲಿ ಮಕ್ಕಳಿಗೆ ಆರೈಕೆಯ ಅಗತ್ಯವಿತ್ತು. ಅವರಿಗೆ ತನ್ನ ಸಹಾಯ ಬೇಕಿತ್ತು. ಆದರೆ ತಾನು ಮದುವೆಯಾದರೆ ಪತಿಯೊಂದಿಗೆ ಸಮಯ ಕಳೆಯಬೇಕಾಗುತ್ತದೆ ಆಗ ಮಕ್ಕಳಿಗೆ ಒಂಟಿತನ ಕಾಡುತ್ತದೆ. ಈಗಾಗಲೇ ತಂದೆ ಇಲ್ಲದೆ ನರಳುತ್ತಿದ್ದ ಮಕ್ಕಳಿಗೆ ತಾಯಿಯ ಪ್ರೀತಿ ಸಿಗದಿದ್ದರೆ ಅವರಿಗೆ ಅನೇಕ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಇನ್ನೆರಡು ಮೂರು ವರ್ಷಗಳಲ್ಲಿ ಅವರು ದೊಡ್ಡವರಾಗುತ್ತಾರೆ. ಕಾಲೇಜಿಗೆ ಹೋಗುತ್ತಾರೆ. ಅಲ್ಲಿ ಅವರು ಸ್ನೇಹಿತರು ಮತ್ತು ಪ್ರೇಮಿಗಳ ಹೊಸ ಪ್ರಪಂಚಕ್ಕೆ ಕಾಲಿಡುತ್ತಾರೆ. ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆಗ ಅವರು ಪೋಷಕರ ಮೇಲೆ ಅವಲಂಬಿತರಾಗಿರುವುದಿಲ್ಲ. ಹಾಗಾಗಿ ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

Renu Desai Second Marriage

ಅಲ್ಲದೇ ಮರು ಮದುವೆಗೆ ತಮ್ಮ ಮಕ್ಕಳ ಬೆಂಬಲ ಇರುವುದಾಗಿ ತಿಳಿಸಿದ್ದಾರೆ. ಹಾಗೇ ಮರುಮದುವೆಯಿಂದ ತಾವು ಮತ್ತೆ ಸಂತೋಷವನ್ನು ಕಂಡುಕೊಳ್ಳುವ ಬಯಕೆಯನ್ನು ನಟಿ ವ್ಯಕ್ತಪಡಿಸಿದ್ದಾರೆ. ಇದು ನಟಿ ರೇಣು ದೇಸಾಯಿ ಅವರಿಗೆ ತಮ್ಮ ಮಕ್ಕಳ ಬಗ್ಗೆ ಎಷ್ಟು ಕಾಳಜಿ, ಜವಾಬ್ದಾರಿ ಇದೆ ಎಂಬುದರ ಬಗ್ಗೆ ತಿಳಿಸುತ್ತದೆ.

ಇದನ್ನೂ ಓದಿ: Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

ಇತ್ತ ನಟ ಪವನ್ ಕಲ್ಯಾಣ್ ಅವರು ಚಿತ್ರರಂಗದ ಜೊತೆಗೆ ರಾಜಕೀಯ ರಂಗಕ್ಕೂ ಪ್ರವೇಶ ಮಾಡಿದ್ದಾರೆ. ಅವರು ತಮ್ಮದೇ ಜನಸೇನಾ ಪಾರ್ಟಿ ಎಂಬ ರಾಜಕೀಯ ಪಕ್ಷವನ್ನು ಕಟ್ಟಿಕೊಂಡು 2019ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲನುಭವಿಸಿದ್ದರು. ಆದರೆ 2024ರಲ್ಲಿ ಆಂಧ್ರಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಹಾಗಾಗಿ ಅವರು ಇನ್ನು ಮುಂದೆ ಚಿತ್ರರಂಗದಲ್ಲಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

Exit mobile version