ಬೆಂಗಳೂರು: ಚಿತ್ರ ನಿರ್ಮಾಪಕರಿಗೆ ಪೈರಸಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಾಲಿವುಡ್ ಅಲ್ಲದೇ ದಕ್ಷಿಣ ಚಿತ್ರರಂಗವೂ ಪೈರಸಿ ಭೀತಿಯಲ್ಲಿ ಇದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿಯೂ RRR, ಕೆಜಿಎಫ್ ಹಾಗೂ ಪುಷ್ಪ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹವಾ ಸೃಷ್ಟಿ ಮಾಡಿದೆ.
ಆದರೆ ದುಃಖಕರ ಸಂಗತಿ ಎಂದರೆ ಇಂತಹ ಚಿತ್ರಗಳು ಪೈರಸಿಗೆ ಒಳಗಾಗುತ್ತಿವೆ. ಇತ್ತೀಚೆಗೆ ವಿಕ್ರಮ್ ಮತ್ತು ಮೇಜರ್ ಸಖತ್ ಟ್ರೆಂಡಿಂಗ್‌ನಲ್ಲಿತ್ತು. ಇದೀಗ ವಿಕ್ರಮ್ ಸಿನಿಮಾವನ್ನು ತಮಿಳು ರಾಕರ್ಸ್ ಟೆಲಿಗ್ರಾಮ್ ಮೂಲಕ ಸೋರಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಫುಲ್ ಎಚ್‌ಡಿ ಗುಣಮಟ್ಟದ ವಿಡಿಯೊವನ್ನು ಆಪ್‌ಲೋಡ್ ಮಾಡಲಾಗಿದೆ. ಸಿನಿಮಾ ಅಧಿಕೃತವಾಗಿ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರ ಸೋರಿಕೆ ಆಗಿದೆ.
ಇದನ್ನೂ ಓದಿ | ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರಕ್ಕೆ ಸಿಕ್ಕಿತು ಪ್ರಮಾಣ ಪತ್ರ
ಪೃಥ್ವಿರಾಜ್, ಮೇಜರ್ ಸಿನಿಮಾ ಕೂಡ ಇದೇ ಹೊತ್ತಿಗೆ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಚಿತ್ರಗಳ ನಡುವೆ ಪೈಪೋಟಿ ಹೆಚ್ಚಲಿದೆ. ಚಿತ್ರದ ಕಲೆಕ್ಷನ್ ಮೇಲೆ ಇದರಿಂದ ಭಾರಿ ಪರಿಣಾಮ ಬೀಳಲಿದೆ. ʼಮೇಜರ್ʼ ಕೂಡ ಇದೇ ಸಮಸ್ಯೆಗೆ ಒಳಗಾಗಿದೆ. ಬೀಸ್ಟ್, ರಾಧೆ ಶ್ಯಾಮ್, ಪುಷ್ಪ, ಆಚಾರ್ಯ ಮತ್ತು ಅನೇಕ ಸಿನಿಮಾಗಳು ಈಗಾಗಲೇ ಪೈರಸಿಗೆ ಒಳಗಾಗಿದ್ದವು.
200 ಕೋಟಿ ರೂ. ಗಳಿಸಿದೆ ವಿಕ್ರಮ್
ವಿಕ್ರಂ ಸಿನಿಮಾ ಒಟಿಟಿ ಮೂಲಕ 200 ಕೋಟಿ ರೂಪಾಯಿ ಬಿಸ್‌ನೆಸ್ ಮಾಡಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಕಮಲ್ ಹಾಸನ್ ಅವರ ʼರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ʼ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ʼವಿಕ್ರಮ್ʼ ಸಿನಿಮಾದಲ್ಲಿ ಘಟನಾಘಟಿ ಕಲಾವಿದರು ನಟಿಸಿದ್ದಾರೆ. ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಕೂಡ ಮಿಂಚಿದ್ದಾರೆ. ಸೂರ್ಯ ಅತಿಥಿ ಪಾತ್ರ ಮಾಡಿದ್ದು, ಪ್ರಮುಖ ಕಲಾವಿದರ ಕಾರಣಕ್ಕೆ ಚಿತ್ರಕ್ಕೆ ಹೈ ವೋಲ್ಟೇಜ್ ಬಂದಂತಾಗಿದೆ.
ಇದನ್ನೂ ಓದಿ | Vikram: ʼಬುರ್ಜ್ ಖಲೀಫಾʼ ಮೇಲೆ ಅನಾವರಣಗೊಳ್ಳಲಿದೆ ʼವಿಕ್ರಮ್ʼ ಟ್ರೈಲರ್