Site icon Vistara News

Thalapathy Vijay: ಧೂಮಪಾನದ ವೈಭವೀಕರಣ; `ಲಿಯೋ’ ನಟ ದಳಪತಿ ವಿಜಯ್‌ ವಿರುದ್ಧ ದೂರು ದಾಖಲು

Police complaint against Thalathy Vijay

ಬೆಂಗಳೂರು; ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ಲಿಯೋ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ಭಾರಿ ವೀಕ್ಷಣೆ ಕಂಡಿದ್ದರೂ ಇದೀಗ ಈ ಹಾಡು ವಿವಾದಕ್ಕೆ ಗುರಿಯಾಗಿದೆ. ವಿಜಯ್ ಅವರ ಲಿಯೋ ಸಿನಿಮಾದ ಮೊದಲ ಹಾಡು ʻʻನಾ ರೆಡಿʼʼ ಒಂದಲ್ಲ ಎರಡು ಬಾರಿ ವಿವಾದಕ್ಕೆ ಒಳಗಾಗಿದೆ. ಇದಕ್ಕೂ ಮುನ್ನ, ಪಟ್ಟಾಲಿ ಮಕ್ಕಳ್ ಕಚ್ಚಿ (Pattali Makkal Katchi) ಅಧ್ಯಕ್ಷ ಮತ್ತು ಸಂಸದ ಅನ್ಬುಮಣಿ ರಾಮದಾಸ್ (Anbumani Ramadoss) ಅವರು ಹಾಡಿನಲ್ಲಿ ವಿಜಯ್ ಧೂಮಪಾನವನ್ನು ವೈಭವೀಕರಿಸಿದ್ದಾರೆ ಎಂದು ಟೀಕಿಸಿದ್ದರು. ಧೂಮಪಾನದ ದೃಶ್ಯಗಳನ್ನು ಮಾಡಬೇಡಿ ಎಂದು ಅನ್ಬುಮಣಿ ಅವರು ವಿಜಯ್ ಅವರನ್ನು ಕೇಳಿಕೊಂಡರು ಇದೀಗ, ಚೆನ್ನೈ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಚಿತ್ರದ ವಿರುದ್ಧ ಮತ್ತು ವಿಜಯ್ ಹಾಡಿನ ಕುರಿತು ಧೂಮಪಾನ ಸೇವನೆಯನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಡಿನ ಕೆಲವು ಸ್ಟಿಲ್‌ಗಳಲ್ಲಿ ನಟ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ.

ಚೆನ್ನೈನ ಜೆ.ಜೆ.ನಗರದ ಆರ್‌ಟಿಐ ಸೆಲ್ವಂ ಅವರು ಚಿತ್ರದ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದು, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ವಿಜಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಹಾಡಿನ ಮೂಲಕ ವಿಜಯ್ ಮಾದಕ ದ್ರವ್ಯ ಸೇವನೆಯನ್ನು ವೈಭವೀಕರಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ನಾ ರೆಡಿ ವಿಡಿಯೊ ಹಾಡು ಇನ್ನೂ ಅನಾವರಣಗೊಳ್ಳದಿದ್ದರೂ, ಹಾಡಿನ ಕೆಲವು ಸ್ಟಿಲ್‌ಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದರಲ್ಲಿ ವಿಜಯ್ ಸಿಗರೇಟ್ ಸೇದುತ್ತಿರುವಾಗ ಹಾಡಿನಲ್ಲಿ ನೂರಾರು ನೃತ್ಯಗಾರರು ಬಿಯರ್ ಮಗ್‌ಗಳನ್ನು ಹಿಡಿದಿದ್ದಾರೆ.

ಇದನ್ನೂ ಓದಿ: Thalapathy Vijay: ಪೂಜಾ ಹೆಗ್ಡೆ ಜತೆ `ಬುಟ್ಟಬೊಮ್ಮ’ ಸ್ಟೆಪ್‌ ಹಾಕೋ ವೇಳೆ ನಾಚಿ ನೀರಾದ ದಳಪತಿ ವಿಜಯ್‌!

ಮಾಸ್ಟರ್ʼ ಸಿನಿಮಾ ಬಳಿಕ ವಿಜಯ್‌ ಮತ್ತು ಲೋಕೇಶ್‌ ಕನಕರಾಜ್‌ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ. ಲಿಯೋದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಸಹ ನಟಿಸಿದ್ದಾರೆ.

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ, ಲಿಯೋ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version