Site icon Vistara News

Ponniyin Selvan | ʻಪೊನ್ನಿಯನ್‌ ಸೆಲ್ವನ್‌ ಭಾಗ-2ʼ ರಿಲೀಸ್‌ ಡೇಟ್‌ ಅನೌನ್ಸ್‌!

Ponniyin Selvan

ಬೆಂಗಳೂರು: ಮಣಿರತ್ನಂ ನಿರ್ದೇಶನದ ಐತಿಹಾಸಿಕ ಚಿತ್ರ ʻಪೊನ್ನಿಯನ್ ಸೆಲ್ವನ್ ಭಾಗ-1 (Ponniyin Selvan ) ಸೆಪ್ಟೆಂಬರ್‌ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಚಿತ್ರದ ಎರಡನೇ ಭಾಗ ಯಾವಾಗ ರಿಲೀಸ್‌ ಆಗುತ್ತದೆ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ʻಪೊನ್ನಿಯನ್ ಸೆಲ್ವನ್ ಭಾಗ-2ʼ 2023ರ ಏಪ್ರಿಲ್‌ 28ರಂದು ಥಿಯೇಟರ್‌ಗಳಿಗೆ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.

ʻಪೊನ್ನಿಯನ್ ಸೆಲ್ವನ್ ಭಾಗ-1′ ವಿಶ್ವಾದ್ಯಂತ 450 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಬಿಡುಗಡೆ ದಿನಾಂಕವನ್ನು ತಿಳಿಸಲು ಜಯಂ ರವಿ, ವಿಕ್ರಮ್, ಕಾರ್ತಿ ಮತ್ತು ಐಶ್ವರ್ಯ ರೈ ಒಳಗೊಂಡ ಕಿರು ವಿಡಿಯೊವನ್ನು ಚಿತ್ರತಂಡ ಹಂಚಿಕೊಂಡಿದೆ.

ಇದನ್ನೂ ಓದಿ | Ponniyin Selvan: I | ʻವಿಕ್ರಮ್‌ʼ ಚಿತ್ರದ ದಾಖಲೆ ಸೆಡ್ಡು ಹೊಡೆದ ಪೊನ್ನಿಯಿನ್ ಸೆಲ್ವನ್‌-1: ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು?

ಪೊನ್ನಿಯನ್ ಸೆಲ್ವನ್ ಭಾಗ 1ರಲ್ಲಿ ಐಶ್ವರ್ಯಾ ಮತ್ತು ತ್ರಿಷಾ ರಾಣಿಯರ ಲುಕ್​ನಲ್ಲಿ ಮಿಂಚಿದ್ದರು. ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತ ಕತೆ ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ.

ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಚಿಯಾನ್ ವಿಕ್ರಮ್​, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಯರಾಮ್, ಶರತ್‌ಕುಮಾರ್, ಪ್ರಭು, ಐಶ್ವರ್ಯಾ ಲಕ್ಷ್ಮೀ, ವಿಕ್ರಮ್ ಪ್ರಭು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಎ.ಆರ್ ರೆಹಮಾನ್ ಸಂಯೋಜಿಸಿದ್ದಾರೆ.

ಇದನ್ನೂ ಓದಿ | Ponniyin Selvan | ಬಿಡುಗಡೆಗೆ ಸಜ್ಜಾಗಿದೆಯಂತೆ ʻಪೊನ್ನಿಯನ್‌ ಸೆಲ್ವನ್‌ ಭಾಗ-2ʼ: ರಿಲೀಸ್‌ ಡೇಟ್‌ ಫಿಕ್ಸ್‌?

Exit mobile version