ಬೆಂಗಳೂರು: ನಿರ್ದೇಶಕ ಮಣಿರತ್ನಂ ನಿರ್ದೇಶನದ ಐತಿಹಾಸಿಕ ಚಿತ್ರ ಪೊನ್ನಿಯಿನ್ ಸೆಲ್ವನ್ ಭಾಗ-1 (Ponniyin Selvan: I) ತಮಿಳುನಾಡಿನಲ್ಲಿ ಹವಾ ಸೃಷ್ಟಿ ಮಾಡಿದೆ. ʻಬಾಹುಬಲಿ 2ʼ ಮತ್ತು ʻವಿಕ್ರಮ್’ ಚಿತ್ರದ ದಾಖಲೆ ಸೆಡ್ಡು ಹೊಡೆದು ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ಟ್ರೇಡ್ ಮೂಲಗಳ ಪ್ರಕಾರ ವಿಕ್ರಮ್ ಸಿನಿಮಾ ತಮಿಳುನಾಡಿನಲ್ಲಿ 183 ಕೋಟಿ. ರೂ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಪೊನ್ನಿಯಿನ್ ಸೆಲ್ವನ್ 186 ಕೋಟಿ. ರೂ ಗಳಿಕೆ ಕಂಡು ವಿಕ್ರಮ್ ಸಿನಿಮಾವನ್ನು ಹಿಂದಿಕ್ಕಿದೆ.
ವ್ಯಾಪಾರ ವಿಶ್ಲೇಷಕ ತ್ರಿನಾಥ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ʻʻವಿಕ್ರಮ್ ಸಿನಿಮಾ ಗಳಿಕೆಗಿಂತ ತಮಿಳುನಾಡಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಇದಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಬುಧವಾರದ ಅಂತ್ಯದ ವೇಳೆಗೆ, PS1 ರ ತಮಿಳುನಾಡಿನಲ್ಲಿ ₹186 ಕೋಟಿಗಳಷ್ಟು ಕಲೆಕ್ಷನ್ ಮಾಡಿದೆ. ವಿಕ್ರಮ್ ತನ್ನ ಒಟ್ಟು ಜೀವಿತಾವಧಿಯಲ್ಲಿ ಕಲೆಕ್ಷನ್ ಮಾಡಿರುವುದನ್ನು ಕೇವಲ ಎರಡೇ ವಾರಗಳಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗಳಿಕೆ ಈ ಸಿನಿಮಾ ಕಂಡಿದೆ. ದೀಪಾವಳಿಯವರೆಗೆ ಯಾವುದೇ ಪ್ರಮುಖ ಸಿನಿಮಾಗಳು ಬಿಡುಗಡೆಯಾಗದೇ ಇದ್ದರೆ, PS1 ಆರಾಮವಾಗಿ ₹200 ಕೋಟಿ ದಾಟುತ್ತದೆ ”ಎಂದು ಹೇಳಿಕೊಂಡಿದ್ದಾರೆ. ಇದೀಗ ಚಿತ್ರ ಒಟ್ಟು ₹ 450 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 20 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ | Ponniyin Selvan: I | ಮಾರುಕಟ್ಟೆಗೆ ಬಂತು ಪೊನ್ನಿಯನ್ ಸೆಲ್ವನ್ ಥೀಮ್ ರೇಷ್ಮೆ ಸೀರೆಗಳು!
ಪೊನ್ನಿಯಿನ್ ಸೆಲ್ವನ್-2ಕ್ಕೆ ತಯಾರಿ!
ಚಿತ್ರದ ಎರಡನೇ ಭಾಗವು ಇನ್ನು ಒಂಬತ್ತು ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಹಾಗೂ ತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ ಎಂದು ಮಣಿರತ್ನಂ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಪೊನ್ನಿಯಿನ್ ಸೆಲ್ವನ್ ಭಾಗ 1ರಲ್ಲಿ ಐಶ್ವರ್ಯಾ ಮತ್ತು ತ್ರಿಷಾ ರಾಣಿಯರ ಲುಕ್ನಲ್ಲಿ ಮಿಂಚಿದ್ದರು. ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ. ಇನ್ನು ಪೊನ್ನಿಯಿನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಮ್, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | Ponniyin Selvan | ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೆ ಮಣಿರತ್ನಂ ಮಿಂಚು!