Site icon Vistara News

ತ್ರಿಷಾ ಈಗ ರಾಜಕುಮಾರಿ ಕುಂದವೈ: ಪೊನ್ನಿಯನ್‌ ಸೆಲ್ವಂ ಚಿತ್ರದಲ್ಲಿ ಫುಲ್‌ ಮಿಂಚಿಂಗ್‌

trisha new look

ಚೆನ್ನೈ: ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರವಾಗಿರುವ ಪೊನ್ನಿಯನ್ ಸೆಲ್ವಂ ಭಾಗ 1 ರ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಸಿನಿಮಾ ತಂಡ ಕೂಡ ಪ್ರತಿದಿನ ಹೊಸ ಹೊಸ ಅಪ್​ಡೇಟ್​ಗಳನ್ನು ನೀಡುತ್ತಿದೆ. ಈ ಹಿಂದೆ ನಟ ಕಾರ್ತಿಕ್, ವಿಕ್ರಮ್, ಐಶ್ವರ್ಯಾ ಅವರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್​ ಮಾಡಿದ್ದ ಚಿತ್ರತಂಡ ಈಗ ಟಾಲಿವುಡ್​ ಸೂಪರ್ ಬ್ಯೂಟಿ ತ್ರಿಷಾ ಅವರ ಹೊಸ ಲುಕ್​ನ ಪೋಸ್ಟರ್​ನ್ನು ಬಿಡುಗಡೆ ಮಾಡಿದ್ದಾರೆ.

ಎರಡು ಭಾಗದಲ್ಲಿ ಪೊನ್ನಿಯನ್ ಸೆಲ್ವಂ ಚಿತ್ರ ಮೂಡಿಬರಲಿದೆ. ಮೊದಲ ಭಾಗದಲ್ಲಿ ದೊಡ್ಡ ತಾರಾಗಣವೇ ಇದ್ದು, ಐತಿಹಾಸಿಕ ಪಾತ್ರದಲ್ಲಿ ಎಲ್ಲಾ ತಾರೆಯರು ಕಂಗೊಳಿಸುತ್ತಿದ್ದಾರೆ. ನಟಿ ತ್ರಿಷಾ ಇದರಲ್ಲಿ ರಾಜಕುಮಾರಿ ಕುಂದವೈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೈಕಾ ಪ್ರೊಡೆಕ್ಷನ್ ತ್ರಿಷಾ ಅವರ ಹೊಸ ಅವತಾರದ ಪೋಸ್ಟರ್​ನ್ನು ಶೇರ್ ಮಾಡಿಕೊಂಡಿದ್ದು, ಪುರುಷರ ಜಗತ್ತಿನಲ್ಲಿ ಧೈರ್ಯದ ಮಹಿಳೆ, ರಾಜಕುಮಾರಿ ಕುಂದವೈ ಅನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ| ಪಳುವೂರಿನ ರಾಣಿ ನಂದಿನಿಯಾದ ನಟಿ ಐಶ್ವರ್ಯಾ ರೈ ಬಚ್ಚನ್, ಮಹಾರಾಣಿ ಲುಕ್​ಗೆ ಅಭಿಮಾನಿಗಳು ಫಿದಾ

3 ವರ್ಷ ಚಿತ್ರೀಕರಣದ ಬಳಿಕ ರಿಲೀಸ್​ಗೆ ರೆಡಿಯಾಗಿರುವ ಪೊನ್ನಿಯನ್​ ಸೆಲ್ವಂ ಚಿತ್ರದ ಪ್ರಚಾರವನ್ನು ಚಿತ್ರತಂಡ ಭರ್ಜರಿಯಾಗಿ ಮಾಡುತ್ತಿದೆ. ಬ್ಯಾಕ್​ ಟು ಬ್ಯಾಕ್ ಹೊಸ ಹೊಸ ಪೋಸ್ಟರ್​ಗಳನ್ನು ನೀಡುವ ಮೂಲಕ ಸಿನಿ ಪ್ರೇಕ್ಷಕರಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.

ಐತಿಹಾಸಿಕ ಕಾದಂಬರಿಯನ್ನು ಆಧರಿಸಿ ಪೊನ್ನಿಯನ್ ಸೆಲ್ವಂ ಚಿತ್ರವನ್ನು ನಿರ್ಮಿಸಲಾಗಿದ್ದು, ಈ ಕಾದಂಬರಿಯು ಚೋಳ ರಾಜವಂಶದ ಒಂದನೇ ರಾಜ ರಾಜ ಚೋಳನ ಕಥೆಯೆಂದು ಹೇಳಲಾಗುತ್ತಿದೆ.

ತ್ರಿಷಾ ಹೊಸ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾದ ಹೊಸ ಆಪ್​ಡೇಟ್​ಗಾಗಿ ಕಾಯುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 30ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಚಿತ್ರ ರಿಲೀಸ್​ ಆಗುತ್ತಿದ್ದು, ಸಿನಿಮಾ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

ಇದನ್ನು ಓದಿ| Thalaiva 169: 12 ವರ್ಷದ ಬಳಿಕ ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ಲೋಕ ಸುಂದರಿ-ಸೂಪರ್‌ ಸ್ಟಾರ್

Exit mobile version