ಬೆಂಗಳೂರು: ಜನಪ್ರಿಯ ಹಾಸ್ಯನಟ ಬೋಂಡಾ ಮಣಿ (Bonda Mani) ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಡಿಸೆಂಬರ್ 23ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸ್ವಲ್ಪ ಸಮಯದಿಂದ ನಟ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಣಿ ಅವರು ಪೊಜಿಚಲೂರಿನಲ್ಲಿರುವ ( Pozhichalur) ತಮ್ಮ ನಿವಾಸದಲ್ಲಿ ಮೂರ್ಛೆ ಹೋಗಿದ್ದರು ಎಂದು ಹೇಳಲಾಗಿದೆ. ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಬೋಂಡಾ ಮಣಿ ಅವರ ಪಾರ್ಥಿವ ಶರೀರವನ್ನು ಪೊಜಿಚಲೂರಿಯ ಅವರ ನಿವಾಸದಲ್ಲಿ ಇರಿಸಲಾಗಿದೆ. ಸಂಜೆ 5ರ ಸುಮಾರಿಗೆ ಕ್ರೋಂಪೇಟೆಯಲ್ಲಿರುವ (Chrompet) ಚಿತಾಗಾರದಲ್ಲಿ ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಧನುಷ್ ಮತ್ತು ವಿಜಯ್ ಸೇತುಪತಿ ಅವರು ಬೋಂಡಾ ಮಣಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಮಾಡಿದ್ದರು. ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ. 270 ಚಿತ್ರಗಳಲ್ಲಿ ಹಲವಾರು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: Raichur News: ಶಾಸಕ ಮಾನಪ್ಪ ವಜ್ಜಲ್ ಪುತ್ರ ಹೃದಯಾಘಾತದಿಂದ ನಿಧನ
#BondaMani Passed away #RIP pic.twitter.com/8rb4Mno8FI
— Senthilraja R (@SenthilraajaR) December 23, 2023
Aalntha Irangal 🙏 #BondaMani sir 😢 pic.twitter.com/FeCEJA6JH5
— Dhanushksdurai Dhanushksdurai (@dhanushksdurai) December 24, 2023
ಭಾಗ್ಯರಾಜ್ ಅವರ ‘ಪಾವುನ್ನು ಪಾವುನುಧಾನ್’ ಚಿತ್ರದ ಮೂಲಕ ಪರಿಚಯವಾದ ಅವರು ‘ಪೊನ್ವಿಲಾಂಗು’, ‘ಪೊಂಗಲೋ ಪೊಂಗಲ್’, ‘ಸುಂದರ ಟ್ರಾವೆಲ್ಸ್’, ‘ಮರುದಮಲೈ’, ‘ವಿನ್ನರ್’, ‘ವೇಲಾಯುಧಂ’ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದರು. . ಬೋಂಡಾ ಮಣಿ ಅವರ ನಿಧನಕ್ಕೆ ಅವರ ಫ್ಯಾನ್ಸ್ ಸೇರಿದಂತೆ ಸಿನಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.