Site icon Vistara News

Actor Prabhudeva: 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾದ ಪ್ರಭು ದೇವ

Prabhu Deva & His Wife Himani Give Birth To A Baby Girl

ಬೆಂಗಳೂರು: ಭಾರತದ ಮೈಕೆಲ್ ಜಾಕ್ಸನ್ ಎಂತಲೇ ಖ್ಯಾತಿ ಪಡೆದಿರುವ ನೃತ್ಯ ಸಂಯೋಜಕ-ನಟ ಮತ್ತು ನಿರ್ದೇಶಕ ಪ್ರಭುದೇವ (Actor Prabhudeva) ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ನಟ 50ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಈವರೆಗೂ ಪ್ರಭುದೇವ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿರಲಿಲ್ಲವಂತೆ. ಹೀಗಾಗಿ ಅವರ ಕುಟುಂಬಕ್ಕೆ ಸಂಭ್ರಮ ತಂದಿದೆ. ಆದರೆ ಪ್ರಭುದೇವ ಮಾತ್ರ ಈ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿಲ್ಲ.

ಪ್ರಭುದೇವ ಮೊದಲ ಪತ್ನಿ ಹೆಸರು ರಮ್ಲತ್‌. ಇವರು : ಮುಸ್ಲಿಂ ಆಗಿದ್ದು ಮದುವೆ ನಂತರ ಹಿಂದು ಧರ್ಮಕ್ಕೆ ಮತಾಂತರವಾದರು. ನಂತರ ರಮ್ಲತಾ ಎಂದು ಹೆಸರು ಬದಲಿಸಿಕೊಂಡು. ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ 1995 ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಗಂಡು ಮಕ್ಕಳು. ಪ್ರಭುದೇವ ಇತ್ತೀಚೆಗೆ ತಮ್ಮ ಎರಡನೇ ಪತ್ನಿ ಹಿಮಾನಿಯೊಂದಿಗೆ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಪ್ರಭುದೇವ ಮೊದಲ ಪತ್ನಿಯಿಂದ ಗಂಡು ಮಗು ಪಡೆದಿದ್ದರು. ಆದರೆ ಮೊದಲ ಮಗ ಕ್ಯಾನ್ಸರ್‌ ಕಾರಣದಿಂದ ನಿಧನರಾದರು. ಈ ವಿಚಾರವನ್ನು ಇತ್ತೀಚೆಗೆ ಪ್ರಭುದೇವ ಜೀ ಕನ್ನಡ ವಾಹಿನಿಯ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಮೊದಲ ಪತ್ನಿ ಜತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಡಿವೋರ್ಸ್ ಪಡೆದರು. ಕೋವಿಡ್ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯಯಾಗಿರುವ ಹಿಮಾನಿ ಸಿಂಗ್ ಜತೆ ಡೇಟ್‌, ಮಾಡಿ ಬಳಿಕ ಗುಟ್ಟಾಗಿಯೇ ಮದುವೆಯಾಗಿದ್ದರು.

ಇದನ್ನೂ ಓದಿ: Aditi Prabhudeva | ನಟಿ ಅದಿತಿ ಪ್ರಭುದೇವ ಮದುವೆ ಸಂಭ್ರಮದ ಫೋಟೊಗಳು ಇಲ್ಲಿವೆ!

ಪ್ರಭುದೇವ, ತಮಿಳು ನಟಿ ನಯನತಾರಾ ಜತೆ ರಿಲೇಶನ್‌ಶಿಪ್‌ನಲ್ಲಿಯೂ ಇದ್ದರು. ಕೆಲವು ದಿನಗಳ ಹಿಂದಷ್ಟೇ ಪ್ರಭುದೇವ ಜೀ ಕನ್ನಡದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮೊದಲ ಬಾರಿಗೆ ಹಿಮಾನಿ ಸಿಂಗ್‌ ಕ್ಯಾಮರಾ ಮುಂದೆ ಬಂದು ಪತಿಯನ್ನು ಹೊಗಳಿದ್ದರು. ಇದೀಗ 50ನೇ ವಯಸ್ಸಿನಲ್ಲಿ ಪ್ರಭುದೇವ ಹೆಣ್ಣು ಮಗುವಿನ ತಂದೆ ಆಗಿದ್ದಾರೆ.

ಹಿಮಾನಿ ಸಿಂಗ್‌ ಕೆಲವು ದಿನಗಳ ಹಿಂದೆಯೇ ಮಗುವಿಗೆ ಜನ್ಮ ನೀಡಿದ್ದು ಪ್ರಭುದೇವ ಮಾತ್ರ ಈ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿಲ್ಲ. ಪ್ರಭುದೇವ ಅಭಿಮಾನಿಗಳು ಮಗುವಿಗೆ ಹಾರೈಸುತ್ತಿದ್ದಾರೆ.

Exit mobile version