Site icon Vistara News

Prabhu Deva: ಮಗಳು, ಪತ್ನಿ ಜತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಭು ದೇವ!

Prabhu Deva with wife Himani and newborn daughter

ಬೆಂಗಳೂರು: ಭಾರತದ ಮೈಕೆಲ್ ಜಾಕ್ಸನ್ ಎಂತಲೇ ಖ್ಯಾತಿ ಪಡೆದಿರುವ ನೃತ್ಯ ಸಂಯೋಜಕ-ನಟ ಮತ್ತು ನಿರ್ದೇಶಕ ಪ್ರಭು ದೇವ (Prabhu Deva) ಎರಡನೇ ಪತ್ನಿ ಹಿಮಾನಿ ಹಾಗೂ ಒಂದು ತಿಂಗಳ ಮಗು ಜತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ ಪ್ರಭುದೇವ. ಪ್ರಭುದೇವ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿರಲಿಲ್ಲವಂತೆ. ಹೀಗಾಗಿ ಅವರ ಕುಟುಂಬಕ್ಕೆ ಸಂಭ್ರಮ ತಂದಿದೆ. ಇದೇ ಮೊದಲ ಬಾರಿಗೆ ಮಗುವಿನ ಜತೆ ನಟ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ವಿಡಿಯೊ ಹಾಗೂ ಫೋಟೊಗಳು ವೈರಲ್‌ ಆಗುತ್ತಿವೆ.

ಪ್ರಭುದೇವ ಮೊದಲ ಪತ್ನಿ ಹೆಸರು ರಮ್ಲತ್‌. ಇವರು ಮುಸ್ಲಿಂ ಆಗಿದ್ದು ಮದುವೆ ನಂತರ ಹಿಂದು ಧರ್ಮಕ್ಕೆ ಮತಾಂತರವಾದರು. ನಂತರ ರಮ್ಲತಾ ಎಂದು ಹೆಸರು ಬದಲಿಸಿಕೊಂಡು. ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ 1995ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಗಂಡು ಮಕ್ಕಳು. ಪ್ರಭುದೇವ ಇತ್ತೀಚೆಗೆ ತಮ್ಮ ಎರಡನೇ ಪತ್ನಿ ಹಿಮಾನಿಯೊಂದಿಗೆ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಪ್ರಭುದೇವ ಮೊದಲ ಪತ್ನಿಯಿಂದ ಗಂಡು ಮಗು ಪಡೆದಿದ್ದರು. ಆದರೆ ಮೊದಲ ಮಗ ಕ್ಯಾನ್ಸರ್‌ ಕಾರಣದಿಂದ ನಿಧನರಾದರು. ಈ ವಿಚಾರವನ್ನು ಇತ್ತೀಚೆಗೆ ಪ್ರಭುದೇವ ಜೀ ಕನ್ನಡ ವಾಹಿನಿಯ ʻವೀಕೆಂಡ್‌ ವಿತ್‌ ರಮೇಶ್‌ʼ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಮೊದಲ ಪತ್ನಿ ಜತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಡಿವೋರ್ಸ್ ಪಡೆದರು. ಕೋವಿಡ್ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯಯಾಗಿರುವ ಹಿಮಾನಿ ಸಿಂಗ್ ಜತೆ ಡೇಟ್‌, ಮಾಡಿ ಬಳಿಕ ಗುಟ್ಟಾಗಿಯೇ ಮದುವೆಯಾಗಿದ್ದರು. ಪ್ರಭುದೇವ, ತಮಿಳು ನಟಿ ನಯನತಾರಾ ಜತೆ ರಿಲೇಶನ್‌ಶಿಪ್‌ನಲ್ಲಿಯೂ ಇದ್ದರು. ಕೆಲವು ದಿನಗಳ ಹಿಂದಷ್ಟೇ ಪ್ರಭುದೇವ ಜೀ ಕನ್ನಡದ ʻವೀಕೆಂಡ್‌ ವಿತ್‌ ರಮೇಶ್‌ʼ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮೊದಲ ಬಾರಿಗೆ ಹಿಮಾನಿ ಸಿಂಗ್‌ ಕ್ಯಾಮರಾ ಮುಂದೆ ಬಂದು ಪತಿಯನ್ನು ಹೊಗಳಿದ್ದರು.

ಇದನ್ನೂ ಓದಿ: Kannada New Film | K ಕರಟಕ D ದಮನಕ; ಇದು ಶಿವಣ್ಣ-ಪ್ರಭುದೇವ-ಭಟ್ಟರ ಹೊಸ ಸಿನಿಮಾ ಜಾತಕ!

ಇದನ್ನೂ ಓದಿ: Actor Prabhudeva: 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾದ ಪ್ರಭು ದೇವ

ದರ್ಶನ ಮುಗಿಸಿ ಹೊರಬಂದ ಪ್ರಭುದೇವ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ದೇವಸ್ಥಾನದಿಂದ ಹೊರ ಹೋಗಲು ಪ್ರಭುದೇವ ಕಷ್ಟಪಡುವಂತೆ ಆಯಿತು.

ಯೋಗರಾಜ್ ಭಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಕರಟಕ ಧಮನಕ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದೆ. ರೆಟ್ರೋ ಮಾದರಿಯಲ್ಲಿರುವ ಪೋಸ್ಟರ್ ಗಮನ ಸೆಳೆದಿತ್ತು.

‘ಕರಟಕ ದಮನಕ’ ಎಂದರೇನು?

ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕರಟಕ ದಮನಕ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.

Exit mobile version