Site icon Vistara News

Prakash Raj: ಜೈಭೀಮ್‌ ಸಿನಿಮಾಗಿಲ್ಲ ರಾಷ್ಟ್ರ ಪ್ರಶಸ್ತಿ; ಮತ್ತೆ ಕೇಂದ್ರದತ್ತ ವಕ್ರದೃಷ್ಟಿ ಬೀರಿದ ಪ್ರಕಾಶ್‌ ರಾಜ್!

Prakash Raj Thalapathy Vijay

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ತಮ್ಮ ಹೇಳಿಕೆಗಳ ಮೂಲಕ ಆಗಾಗ ವಿವಾದಕ್ಕೆ ಗುರಿಯಾಗುವ ನಟ ಪ್ರಕಾಶ್ ರಾಜ್ (Prakash Raj) ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನ್ಯೂಸ್ ತಮಿಳುನಾಡು ಟಿವಿಯ ಹಲೋ ತಮಿಳುನಾಡು ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುವಾಗ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ಅಷ್ಟೇ ಅಲ್ಲದೇ ಜಾತೀಯತೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ಜೈ ಭೀಮ್ ಸಿನಿಮಾ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲದಿರುವ ಬಗ್ಗೆ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು. ದಳಪತಿ ವಿಜಯ್ ರಾಜಕೀಯ (Thalapathy Vijay) ಪ್ರವೇಶದ ಕುರಿತು ಮಾತನಾಡಿದ್ದಾರೆ.

ಪ್ರಕಾಶ್‌ ರಾಜ್‌ ಮಾತನಾಡಿ ʻಜೈ ಭೀಮ್ ರಾಷ್ಟ್ರೀಯ ಪ್ರಶಸ್ತಿಯನ್ನು ಯಾವುದೋ ಒಂದು ಕಾರಣಕ್ಕಾಗಿ ನೀಡಲಾಗಿಲ್ಲ. ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗ ಮತ್ತು ಚಲನಚಿತ್ರ ಸೆನ್ಸಾರ್ ಮಂಡಳಿ ಎಲ್ಲವೂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ,’’ ಎಂದು ಹೇಳಿದರು. ಅಷ್ಟೇ ಅಲ್ಲದೇ ಕೇರಳ ರಾಜ್ಯದಲ್ಲಿಯೇ ಕೇರಳ ಸ್ಟೋರಿ ಚಲನಚಿತ್ರವನ್ನು ಬ್ಯಾನ್‌ ಮಾಡಿರುವ ಬಗ್ಗೆ ಮಾತನಾಡಿ ʻ“ಚಿತ್ರವನ್ನು ನಿಷೇಧಿಸುವುದನ್ನು ನಾನು ಒಪ್ಪುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಸಾಮಾನ್ಯ. ಆದರೆ ಅದನ್ನು ಬೆಂಬಲಿಸುವಲ್ಲಿ ನನಗೆ ಸಮಸ್ಯೆ ಇದೆ. ಇದು ನಿಮ್ಮ ಉದ್ದೇಶವನ್ನು ತೋರಿಸುತ್ತದೆ,’’ ಎಂದರು.

ದಳಪತಿ ವಿಜಯ್ ರಾಜಕೀಯ ಪ್ರವೇಶದ ಕುರಿತು ಮಾತನಾಡಿ ʻʻದಳಪತಿ ವಿಜಯ್ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರಕ್ಕೆ ಬರಲು ವಿಜಯ್‌ಗೆ ಎಲ್ಲ ಹಕ್ಕಿದೆʼʼ ಎಂದರು. ಬಳಿಕ ಯಶಸ್ವಿ ರಾಜಕೀಯ ಜೀವನ ನಡೆಸಿದ ಎನ್‌ಟಿ ರಾಮರಾವ್ ಮತ್ತು ಎಂಜಿಆರ್ ಅವರಂತಹ ಚಿತ್ರರಂಗದ ದಿಗ್ಗಜರ ಹೆಸರನ್ನು ಪ್ರಸ್ತಾಪಿಸಿದ ಪ್ರಕಾಶ್ ರಾಜ್, ʻʻಅಂದಿನಿಂದ ಕಾಲ ಬದಲಾಗಿದೆ ಮತ್ತು ಚಲನಚಿತ್ರಗಳಲ್ಲಿನ ಜನಪ್ರಿಯತೆಯು ರಾಜಕೀಯದಲ್ಲಿ ಇನ್ನು ಮುಂದೆ ಸಹಾಯ ಮಾಡುವುದಿಲ್ಲ ʼʼಎಂದು ಹೇಳಿದರು. ʻʻವಿಜಯ್ ರಾಜಕೀಯಕ್ಕೆ ಬಂದರೆ, ಅವರು ವಿರುದ್ಧವಾದ ಸಿದ್ಧಾಂತಗಳನ್ನು ಹೊಂದಿದ್ದರೆ ಅವರನ್ನು ಪ್ರಶ್ನಿಸಲು ನಾನು ಹಿಂಜರಿಯುವುದಿಲ್ಲʼʼ ಎಂದು ಪ್ರಕಾಶ್‌ ರಾಜ್‌ ಹೇಳಿದರು ಹೇಳಿದರು.

ಇದನ್ನೂ ಓದಿ: Prakash Raj : ಪ್ರಕಾಶ್‌ರಾಜ್‌ ಚಹಾ ಅಂಗಡಿ ಚಂದ್ರನಿಂದ ಮಂಗಳ, ಶುಕ್ರನತ್ತ ಶಿಫ್ಟ್ ;‌ ಇನ್ನೂ ಬುದ್ಧಿ ಬಂದಿಲ್ವಾ ಅಂದ್ರು ನೆಟ್ಟಿಗರು!

ಈ ಹಿಂದೆ ಕೂಡ ರಾಷ್ಟ್ರ ಪ್ರಶಸ್ತಿ ಕುರಿತು ಪ್ರಕಾಶ್‌ ರಾಜ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಸಂವಿಧಾನವನ್ನು ಬದಲಾಯಿಸಲು ಬಯಸಿದವರು, ಮಹಾತ್ಮ ಗಾಂಧಿ ಹಂತಕನನ್ನು ಬೆಂಬಲಿಸುವವರು ‘ಜೈ ಭೀಮ್’ ಸಂಭ್ರಮಿಸುವರೆ?” ಎಂದು ಪ್ರಶ್ನಿಸಿದ್ದರು. ಕಳೆದ ವರ್ಷ ಬಿಡುಗಡೆಯಾದ ಜೈ ಭೀಮ್ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಆಸ್ಕರ್‌ಗೂ ಸಹ ಆಯ್ಕೆಯಾಗಿತ್ತು. ಅಲ್ಲದೆ, 94ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಗಾಗಿ 275 ಚಲನಚಿತ್ರಗಳೊಂದಿಗೆ ಸ್ಪರ್ಧಿಸಿತು. ಆದರೆ, ಪ್ರಶಸ್ತಿ ಸಿಗಲಿಲ್ಲ. ಈ ಸಿನಿಮಾ ಖಂಡಿತಾ ರಾಷ್ಟ್ರಪ್ರಶಸ್ತಿಯಲ್ಲಿ ಮನ್ನಣೆ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಇತ್ತೀಚಿನ ಘೋಷಣೆ ಕಾಲಿವುಡ್‌ಗೆ ನಿರಾಸೆ ಮೂಡಿಸಿದೆ.

Exit mobile version