ಬೆಂಗಳೂರು: ನಟಿ ಪ್ರೀತಿ ಜಿಂಟಾ (Preity Zinta) ಆಗಾಗ ತಮ್ಮ ಅವಳಿ ಮಕ್ಕಳ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 2016ರಲ್ಲಿ ಪ್ರೀತಿ ಜಿಂಟಾ ಹಾಗೂ ಜೀನ್ ಗುಡೆನಫ್ (Gene Goodenough) ಅವರು ಪ್ರೀತಿಸಿ ವಿವಾಹವಾದ ನಂತರ ಚಿತ್ರರಂಗದಿಂದ ದೂರ ಉಳಿದರು. ಪತಿಯ ಜತೆ ವಿದೇಶದಲ್ಲಿ ನೆಲೆಸಿರುವ ಪ್ರೀತಿ ಜಿಂಟಾ ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ. ಮುದ್ದಾದ ಅವಳಿ ಮಕ್ಕಳಾದ ಜಿಯಾ ಜಿಂಟಾ ಹಾಗೂ ಜೈ ಜಿಂಟಾ (Jai and Gia) ಕುರಿತು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಪುಟ್ಟ ಮಗು ಜೈ ಜಿಂಟಾ ನೆಲ ಒರೆಸುವ ವಿಡಿಯೊವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇವರ ಮಕ್ಕಳಿಗೆ ಈಗ 2 ವರ್ಷ. ಅವರ ಪೈಕಿ ಈ ವೀಡಿಯೊದಲ್ಲಿ ಪ್ರೀತಿ ಜಿಂಟಾ ಅವರ ಮಗ ಜೈ ನೆಲದ ಮೇಲೆ ಮಲಗಿಕೊಂಡು ನೆಲವನ್ನು ಒರೆಸುತ್ತಿರುವುದನ್ನು ಕಾಣಬಹುದು. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರು ಈ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರ ಮಗ ಜೈ ಕೈಯಲ್ಲಿ ಬಟ್ಟೆಯಿದ್ದು, ಅದನ್ನು ಎಳೆದುಕೊಂಡು ಕೋಣೆ ಪೂರ್ತಿ ಓಡಾಡುವುದನ್ನು ನೋಡಬಹುದು. ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ʻʻತಾಯಿಗೆ ಈಗಲೇ ಸಹಾಯ ಮಾಡಲು ಹೊರಟಿದ್ದಾನೆ ಮಗʼʼಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು, ʻʻಸ್ವಚ್ಛ ಭಾರತ್ʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Ram Charan: ಪ್ರಿಯಾಂಕಾ ಚೋಪ್ರಾ ಕುಟುಂಬದ ಜತೆ ರಾಮ್‌ಚರಣ್-ಉಪಾಸನಾ
ಪ್ರೀತಿ ಜಿಂಟಾ ಮಗು ಜೈ ಜಿಂಟಾ
ಕೇವಲ ಅರ್ಧ ಗಂಟೆಯಲ್ಲಿ ವಿಡಿಯೊ ಸುಮಾರು 10,000 ಲೈಕ್‌ಗಳನ್ನು ಪಡೆದುಕೊಂಡಿದೆ. ಪ್ರೀತಿ ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಜತೆಗೆ ಇತ್ತೀಚೆಗಷ್ಟೇ ಹೋಳಿಯನ್ನು ಆಚರಿಸಿಕೊಂಡಿದ್ದರು. ಈ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಆಯೋಜಿಸಿದ್ದ ಹೋಳಿ ಪಾರ್ಟಿಗೆ ಸ್ನೇಹಿತರನ್ನು ಆಹ್ವಾನಿಸಲಾಗಿತ್ತು. ನಟಿ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜೀನ್ ಗುಡೆನಫ್ ಕೂಡ ಇದರಲ್ಲಿ ಭಾಗಿ ಆಗಿದ್ದರು.