ಮುಂಬಯಿ: ವಿವಾಹ ಪೂರ್ವ ಲೈಂಗಿಕತೆ ಅಥವಾ ಗರ್ಭಧಾರಣೆ ಅವರವರ ವೈಯಕ್ತಿಕ ಆಯ್ಕೆ. ಯಾರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೋ ಅಂತಹವರೂ ಇದನ್ನು ಮುಕ್ತವಾಗಿ ಆಚರಿಸುತ್ತಾರೆ ಎಂದು ಬಾಲಿವುಡ್ ನಟಿ ದಿಯಾ ಮಿರ್ಜಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ದಿಯಾ ಲೈಂಗಿಕತೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ನನ್ನ ಪ್ರಕಾರ ನಮ್ಮ ವೈಯಕ್ತಿಕ ಆಯ್ಕೆ ನಮ್ಮ ಹಕ್ಕು. ಇದನ್ನು ನಂಬಿದವರಿಗೆ ಯಾವುದೇ ಬೆದರಿಕೆ, ಹಿಂಜರಿಕೆ ಇರುವುದಿಲ್ಲ. ವಿವಾಹ ಪೂರ್ವ ಲೈಂಗಿಕತೆ ಅಥವಾ ಗರ್ಭಧಾರಣೆಯಂತಹ ವಿಷಯಗಳ ಬಗ್ಗೆ ಹಿಂಜರಿಕೆಯ ಆಲೋಚನೆಗಳನ್ನು ಹೊಂದಿರುವ ಅನೇಕ ಜನರಿದ್ದರೂ ಸಹ, ಅದು ಅವರ ವೈಯಕ್ತಿಕ ಆಯ್ಕೆ ಎಂದು ಹೇಳುವ ಸಾಕಷ್ಟು ಜನರು ನಮ್ಮಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ| Brahmastra trailer ಔಟ್, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್ ಇಂಡಿಯಾ ಚಿತ್ರ ಬರಲಿದೆಯಾ?
ದಿಯಾ ಮಿರ್ಜಾ ಕಳೆದ ವರ್ಷ ಫೆಬ್ರವರಿಯಲ್ಲಿ ವೈಭವ್ ರೇಖಿ ಎಂಬುವವರ ಜತೆ ಮದುವೆಯಾಗಿದ್ದರು. ಇದು ಇಬ್ಬರಿಗೂ ಎರಡನೇಯ ವಿವಾಹವಾಗಿತ್ತು. ಇವರಿಬ್ಬರೂ ಒಟ್ಟಿಗೆ ಓಡಾಡುತ್ತಿದ್ದ ವೇಳೆ ಅವರು ಗರ್ಭಿಣಿಯಾಗಿರುವುದರಿಂದ ಈ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಗಳು ಆಗ ಹರಿದಾಡಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ನನ್ನ ವಿವಾಹ ಪೂರ್ವದಲ್ಲಿಯೇ ತಾಯಿಯಾಗುತ್ತಿದ್ದೇನೆ ಎಂದು ನಾನು ಈ ಮದುವೆ ಆಗಿಲ್ಲ ಎಂದಿದ್ದಾರೆ.
2014 ರಲ್ಲಿ ಉದ್ಯಮಿ ಸಾಹಿಲ್ ಎಂಬುವವರ ಜೊತೆ ದಿಯಾ ಮಿರ್ಜಾ ಮದುವೆಯಾಗಿದ್ದರು. ಐದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಿಯಾ 2019 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಆದಾದ ಬಳಿಕ ಉದ್ಯಮಿ ವೈಭವ್ ರೇಖಿ ಜೊತೆ ಮದುವೆಯಾದರು. ಆದೇ ವರ್ಷ ಗಂಡು ಮಗುವಿಗೂ ಜನ್ಮ ನೀಡಿದ್ದರು. ಆದರೆ, 9 ತಿಂಗಳಿಗೂ ಮುನ್ನವೇ ಇದು ಹುಟ್ಟಿದ್ದರಿಂದ ಮಗುವಿನ ಮೇಲೆ ಹೆಚ್ಚು ನಿಗಾ ವಹಿಸಲಾಗುತ್ತಿದೆ. ಇತ್ತೀಚಿಗಷ್ಟೇ ಮಗುವನ್ನು ದಿಯಾ ದಂಪತಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಮಗುವಿಗೆ ಅವ್ಯಾನ್ ಅಜಾದ್ ರೇಖಿ ಎಂದು ಹೆಸರಿಡಲಾಗಿದ್ದು, ಮಗನ ಒಂದು ವರ್ಷದ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಗಿದೆ.
ಇದನ್ನು ಓದಿ| ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್ ನೈಟ್ಸ್