Site icon Vistara News

Prithviraj | 50,000 ಕಾಸ್ಟ್ಯೂಮ್‌, 500 ಟರ್ಬನ್‌ ಶೂಟಿಂಗ್‌ನಲ್ಲಿ ಬಳಕೆ

Prithviraj Film

ಬೆಂಗಳೂರು: ಪೌರಾಣಿಕ ಕಥೆ ಹೊಂದಿರುವ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಹಣ ಮಾಡುತ್ತಿರುವುದನ್ನು ಕಂಡ ಬಾಲಿವುಡ್‌ ಮಂದಿ ಅಂತಹ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೆ ಅಕ್ಷಯ್‌ ಕುಮಾರ್‌ ನಟನೆಯ ಪೃಥ್ವಿರಾಜ್‌ ಹೊಸ ಸೇರ್ಪಡೆ. ಪೃಥ್ವಿರಾಜ್‌ ಟ್ರೈಲರ್‌ ಬಿಟ್ಟಿದ್ದೇ ಬಿಟ್ಟಿದ್ದು ಕೋಟಿ ಜನರು ವೀಕ್ಷಿಸಿದ್ದಾರೆ.

ಪೃಥ್ವಿರಾಜ್‌ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆ ಕಾಣ್ತಾ ಇರೋದು ಇನ್ನೂ ವಿಶೇಷ. 1991‌ ರಲ್ಲಿ ಕಿರುತರೆಯಲ್ಲಿ ಬಂದ ಚಾಣಕ್ಯ ಧಾರವಾಹಿಯನ್ನು ನಿರ್ದೇಶಿಸಿದ ಖ್ಯಾತೀಯ ಚಂದ್ರ ಪ್ರಕಾಶ್ ದ್ವೀವೇದಿ ಈ ಚಿತ್ರದಲ್ಲಿ  ಬರಹಗಾರ ಹಾಗೂ ನಿರ್ದೇಶಕರಾಗಿದ್ದಾರೆ. ಇದನ್ನು ಯಶ್‌ ರಾಜ್‌ ಫಿಲ್ಮಸ್‌ ನಿರ್ಮಾಣ ಮಾಡಿದ್ದು, ಪೃಥ್ವಿರಾಜ್‌ ಚೌಹಾಣ್‌ ಪಾತ್ರದಲ್ಲಿ ಅಕ್ಷಯ್‌ ಕುಮಾರ ನಟಿಸಲಿದ್ದಾರೆ.

ಇದನ್ನೂ ಓದಿ | ಬಿಡುಗಡೆ ಆಯಿತು ಪೃಥ್ವಿರಾಜ್‌ ಟ್ರೇಲರ್‌, ಮಿಂಚಿದರು ಅಕ್ಷಯ್‌, ಮಾನುಷಿ ಛಿಲ್ಲರ್

ಈ ಸಿನಿಮಾದ ಶೂಟಿಂಗ್‌ನಲ್ಲಿ 50,000ಕ್ಕೂ ಅಧಿಕ ಕಾಸ್ಟ್ಯೂಮ್‌ ಸಿದ್ಧಪಡಿಸಲಾಗಿತ್ತು ಎಂದು ಚಿತ್ರತಂಡ ಹೇಳಿಕೊಂಡಿದೆ. ಜತೆಗೆ 500 ವಿವಿಧ ಟರ್ಬನ್‌, ಅಂದರೆ ಪೇಟಗಳನ್ನು ಕೂಡ ಬಳಸಲಾಗಿದೆ ಎಂದು ತಿಳಿದುಬಂದಿದೆ. ಅವರ ಎದುರು 2017ರ ಮಿಸ್‌ ವರ್ಲ್ಡ್‌ ವಿಜೇತೆ ಮಾನುಷಿ ಛಿಲ್ಲರ್‌ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಂಜಯ್‌ ದತ್‌ ಮತ್ತು ಸೋನು ಸೂದ್‌ ಕೂಡ್ ನಟಿಸಿದ್ದಾರೆ.

ಪೃಥ್ವಿರಾಜ್‌ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆ ಕಾಣ್ತಾ ಇರೋದು ಇನ್ನೂ ವಿಶೇಷ. 1991‌ ರಲ್ಲಿ ಕಿರುತರೆಯಲ್ಲಿ ಬಂದ ಚಾಣಕ್ಯ ಧಾರವಾಹಿಯನ್ನು ನಿರ್ದೇಶಿಸಿದ ಖ್ಯಾತೀಯ ಚಂದ್ರ ಪ್ರಕಾಶ್ ದ್ವೀವೇದಿ ಈ ಚಿತ್ರದಲ್ಲಿ  ಬರಹಗಾರ ಹಾಗೂ ನಿರ್ದೇಶಕರಾಗಿದ್ದಾರೆ. ಇದನ್ನು ಯಶ್‌ ರಾಜ್‌ ಫಿಲಂಸ್‌ ನಿರ್ಮಾಣ ಮಾಡಿದ್ದು, ಪೃಥ್ವಿರಾಜ್‌ ಚೌಹಾಣ್‌ ಪಾತ್ರದಲ್ಲಿ ಅಕ್ಷಯ್‌ ಕುಮಾರ ನಟಿಸಲಿದ್ದಾರೆ. ಈ ಹಿಂದೆ 2022ರ ಜನವರಿ 21ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದೀಗ ಸಿನಿಮಾ ಜೂನ್‌ 3 ರಂದು ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ | ವಿಮಲ್‌ಗಾಗಿ ಫ್ಯಾನ್ಸ್‌ ಕ್ಷಮೆ ಯಾಚಿಸಿದ ಅಕ್ಷಯ್‌ ಕುಮಾರ್

Exit mobile version