Site icon Vistara News

Prithviraj Trailer: ಸೂಪರ್ ಸ್ಟಾರ್ ಜತೆ ಅಭಿನಯಿಸಲಿದ್ದಾರೆ Miss World…

ಬೆಂಗಳೂರು: ಸದಾ ಬಾಲಿವುಡ್‌ನಲ್ಲಿ ಸದ್ದು ಮಾಡ್ತಾನೇ ಇರೋ ಅಕ್ಷಯ್‌ ಕುಮಾರ್‌ 2019 ರಲ್ಲಿ ತೆರೆ ಕಂಡ ಬಾಲಾ ದಲ್ಲಿ ಮಿಂಚಿದ್ದರು. ಮತ್ತು ಹೌಸ್‌ಫುಲ್‌ ಆದ ಚಿತ್ರವಾಗಿತ್ತು. ಇದೀಗ ಹೊಸ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಹೌದು ಅಕ್ಷಯ್‌ ಕುಮಾರ್‌ ಅವರ ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ ʼಪೃಥ್ವಿರಾಜ್‌ ʼ (Prithviraj) ಸಿನಿಮಾದ ಟ್ರೈಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ರಿಲೀಸ್‌ ಆಗಿ ಸದ್ದು ಮಾಡ್ತಿದೆ. ಇದರಲ್ಲಿ ಅಕ್ಷಯ್‌ ಕುಮಾರ್‌ ಜತೆಗೆ Miss World ಅಭಿನಯಿಸಲಿದ್ದಾರೆ.

ದನ್ನೂ ಓದಿ | ವಿಮಲ್‌ಗಾಗಿ ಫ್ಯಾನ್ಸ್‌ ಕ್ಷಮೆ ಯಾಚಿಸಿದ ಅಕ್ಷಯ್‌ ಕುಮಾರ್

ಟ್ರೈಲರ್‌ ಬಿಟ್ಟಿದ್ದೇ ಬಿಟ್ಟಿದ್ದು ಕೋಟಿ ಜನರು ವೀಕ್ಷಿಸಿದ್ದಾರೆ. ಮತ್ತು ಪೃಥ್ವಿರಾಜ್‌ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆ ಕಾಣ್ತಾ ಇರೋದು ಇನ್ನೂ ವಿಶೇಷ. 1991‌ ರಲ್ಲಿ ಕಿರುತರೆಯಲ್ಲಿ ಬಂದ ಚಾಣಕ್ಯ ಧಾರವಾಹಿಯನ್ನು ನಿರ್ದೇಶಿಸಿದ ಖ್ಯಾತೀಯ ಚಂದ್ರ ಪ್ರಕಾಶ್ ದ್ವೀವೇದಿ ಈ ಚಿತ್ರದಲ್ಲಿ  ಬರಹಗಾರ ಹಾಗೂ ನಿರ್ದೇಶಕರಾಗಿದ್ದಾರೆ. ಇದನ್ನು ಯಶ್‌ ರಾಜ್‌ ಫಿಲ್ಮಸ್‌ ನಿರ್ಮಾಣ ಮಾಡಿದ್ದು, ಪೃಥ್ವಿರಾಜ್‌ ಚೌಹಾಣ್‌ ಪಾತ್ರದಲ್ಲಿ ಅಕ್ಷಯ್‌ ಕುಮಾರ ನಟಿಸಲಿದ್ದಾರೆ.

ಅವರ ಎದರು 2017 ರ ಮಿಸ್‌ ವರ್ಲ್ಡ್‌ ವಿಜೇತೆ ಮಾನುಷಿ ಚಿಲ್ಲರ್‌ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಂಜಯ್‌ ದತ್‌ ಮತ್ತು ಸೋನು ಸೂದ್‌ ಕೂಡ್ ನಟಿಸಿದ್ದಾರೆ. ಈ ಹಿಂದೆ ಜನವರಿ 21ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದೀಗ ಸಿನಿಮಾ ಜೂನ್‌ 3 ರಂದು ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ |Major : ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಸಿನಿಮಾ ಟ್ರೈಲರ್‌ ಔಟ್

Exit mobile version