ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿನಯದ ಸಿಟಾಡೆಲ್‌ಗೆ ಸಿರೀಸ್ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ ನಟಿ ರಿಚರ್ಡ್ ಮ್ಯಾಡೆನ್ ಅಭಿನಯದ ರುಸ್ಸೋ ಬ್ರದರ್ಸ್ ಸಿಟಾಡೆಲ್‌ನಲ್ಲಿ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪ್ರಿಯಾಂಕಾ ಅನೇಕ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ಸಹ ಭಾಗವಾಗಿದ್ದಾರೆ. ಅದಕ್ಕೂ ಮುನ್ನ, ಪ್ರಿಯಾಂಕಾ ಅವರು ಸಂದರ್ಶನವೊಂದರಲ್ಲಿ ಬಾಲಿವುಡ್‌ನ ಪ್ರಯಾಣ ಹಾಗೂ ಹಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಏಕೆ ನಿರ್ಧರಿಸಿದ್ದಾರಂಬುದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಟಿ ಈ ಹಿಂದೆ ‘ಡ್ಯಾಮೇಜಿಂಗ್’ ಫೇರ್‌ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸಿರುವ ಬಗ್ಗೆ ಮಾತನಾಡಿದ್ದಾರೆ. ನಟಿ ಕೂಡ ಅದರಲ್ಲಿ ಸಿಲುಕಿಕೊಂಡಿರುವುದರ ಬಗ್ಗೆ ಹೇಳಿದ್ದಾರೆ.
2000ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ, ಪ್ರಿಯಾಂಕಾ ಚೋಪ್ರಾ ಕೆಲವು ವರ್ಷಗಳ ನಂತರ 2002ರಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2003 ರಲ್ಲಿ ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆರಂಭಿಕ ವರ್ಷಗಳಲ್ಲಿ ಚಲನಚಿತ್ರೋದ್ಯಮದಲ್ಲಿ, ನಟಿ ಬಣ್ಣದ ಕುರಿತಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. 2000ರ ದಶಕದ ಮಧ್ಯಭಾಗದಲ್ಲಿ ‘ಹಾನಿಕಾರಕ’ ಚರ್ಮದ ಫೇರ್‌ನೆಸ್ ಜಾಹೀರಾತುಗಳ ಭಾಗವಾಗಿದ್ದಕ್ಕಾಗಿ ಅವರು ಪಶ್ಚಾತ್ತಾಪವನ್ನು ಪಟ್ಟಿರುವಾದಿಗಿಯೂ ಹೇಳಿಕೊಂಡರು.
ಬಾಲಿವುಡ್ ಇಂಡಸ್ಟ್ರಿಯಲ್ಲಿ ನನ್ನನ್ನು ಮೂಲೆಗೆ ತಳ್ಳಲಾಯಿತು. ಅವಕಾಶಗಳು ಸಿಗುತ್ತಿರಲಿಲ್ಲ, ನನಗೆ ಬೇಕು ಅಂತಲೇ ಅವಕಾಶಗಳಿಂದ ವಂಚಿಸಲಾಗುತ್ತಿತ್ತು. ಸಂಗೀತದ ಅವಕಾಶ ಬಂದಾಗ ನಾನು ಅಮೆರಿಕಕ್ಕೆ ಹೋಗಲು ನಿರ್ಧರಿಸಿದೆ. ಪಿಟ್ಬುಲ್, ವಿಲ್.ಐ.ಎಂ, ಫಾರೆಲ್ ವಿಲಿಯಮ್ಸ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದಾಗ್ಯೂ, ಅವರಿಗೆ ನಾನು ನಟನೆಯಲ್ಲಿ ಹೆಚ್ಚು ಉತ್ತಮ ಅರಿತುಕೊಂಡರು. ನಂತರ ನನಗೆ ‘ಕ್ವಾಂಟಿಕೋ’ನಲ್ಲಿ ಪಾತ್ರ ಸಿಕ್ಕಿತುʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra : ಬಾಲಿವುಡ್‌ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
“ನಾನು ಸಿನಿಮಾ ರಂಗಕ್ಕೆ ಸೇರಿದಾಗ ನೀವು ನ್ಯಾಯಯುತವಾಗಿದ್ದರೆ, ನಿಮಗೆ ಕೆಲವು ರೀತಿಯ ಯಶಸ್ಸು ಅಥವಾ ಕಾಸ್ಟಿಂಗ್ ಗ್ಯಾರಂಟಿ ಆಗುತ್ತಿತ್ತು. ನಾನು ಫೇರನೆಸ್ ಕ್ರೀಮ್‌ರೊಳಗೆ ಸಿಲುಕಿಕೊಂಡಿದ್ದೆ. ಈ ಕಮರ್ಷಿಯಲ್ ತುಂಬ ಹಾನಿಕಾರಕವಾಗಿದೆ. ನಾನು ಈ ಕ್ರೀಮ್ ಅನ್ನು ಬಳಸಲು ಪ್ರಾರಂಭಿಸುತ್ತೇನೆ ಮತ್ತು ನನಗೆ ಕೆಲಸವೂ ಸಿಗುತ್ತದೆ. ಇದೆಲ್ಲ ನಡೆದದ್ದು 2000ರಲ್ಲಿʼʼಎಂದರು.
ಪ್ರಿಯಾಂಕಾ ಜತೆಗೆ ಸೈಫ್ ಅಲಿ ಖಾನ್ ಮತ್ತು ನೇಹಾ ಧೂಪಿಯಾ ಕೂಡ ಫೇರ್‌ನೆಸ್ ಕ್ರೀಮ್ ಅಭಿಯಾನದ ಭಾಗವಾಗಿದ್ದರು. ಸಿಟಾಡೆಲ್‌ನ ಪ್ರಚಾರಕ್ಕಾಗಿ ಪಿಗ್ಗಿ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಶೀಘ್ರದಲ್ಲೇ ನಟಿ ‘ಸಿಟಾಡೆಲ್’ ಮತ್ತು ‘ಲವ್ ಎಗೇನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.