Priyanka Chopra speaks out about starring in 'damaging' fairness cream ad Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ? Vistara News
Connect with us

South Cinema

Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ?

ಪ್ರಿಯಾಂಕಾ (Priyanka Chopra) ಅನೇಕ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ಸಹ ಭಾಗವಾಗಿದ್ದಾರೆ. ಅದಕ್ಕೂ ಮುನ್ನ, ಪ್ರಿಯಾಂಕಾ ಅವರು ಸಂದರ್ಶನವೊಂದರಲ್ಲಿ ಬಾಲಿವುಡ್‌ನ ಪ್ರಯಾಣ ಹಾಗೂ ಹಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಏಕೆ ನಿರ್ಧರಿಸಿದ್ದಂರೆಂಬದನ್ನು ಬಹಿರಂಗಪಡಿಸಿದ್ದಾರೆ.

VISTARANEWS.COM


on

Priyanka Chopra
Koo

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿನಯದ ಸಿಟಾಡೆಲ್‌ಗೆ ಸಿರೀಸ್‌ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ ನಟಿ ರಿಚರ್ಡ್ ಮ್ಯಾಡೆನ್ ಅಭಿನಯದ ರುಸ್ಸೋ ಬ್ರದರ್ಸ್ ಸಿಟಾಡೆಲ್‌ನಲ್ಲಿ ಆ್ಯಕ್ಷನ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪ್ರಿಯಾಂಕಾ ಅನೇಕ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ಸಹ ಭಾಗವಾಗಿದ್ದಾರೆ. ಅದಕ್ಕೂ ಮುನ್ನ, ಪ್ರಿಯಾಂಕಾ ಅವರು ಸಂದರ್ಶನವೊಂದರಲ್ಲಿ ಬಾಲಿವುಡ್‌ನ ಪ್ರಯಾಣ ಹಾಗೂ ಹಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಏಕೆ ನಿರ್ಧರಿಸಿದ್ದಾರಂಬುದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಟಿ ಈ ಹಿಂದೆ ‘ಡ್ಯಾಮೇಜಿಂಗ್’ ಫೇರ್‌ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸಿರುವ ಬಗ್ಗೆ ಮಾತನಾಡಿದ್ದಾರೆ. ನಟಿ ಕೂಡ ಅದರಲ್ಲಿ ಸಿಲುಕಿಕೊಂಡಿರುವುದರ ಬಗ್ಗೆ ಹೇಳಿದ್ದಾರೆ.

2000ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ, ಪ್ರಿಯಾಂಕಾ ಚೋಪ್ರಾ ಕೆಲವು ವರ್ಷಗಳ ನಂತರ 2002ರಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2003 ರಲ್ಲಿ ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಆರಂಭಿಕ ವರ್ಷಗಳಲ್ಲಿ ಚಲನಚಿತ್ರೋದ್ಯಮದಲ್ಲಿ, ನಟಿ ಬಣ್ಣದ ಕುರಿತಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. 2000ರ ದಶಕದ ಮಧ್ಯಭಾಗದಲ್ಲಿ ‘ಹಾನಿಕಾರಕ’ ಚರ್ಮದ ಫೇರ್‌ನೆಸ್ ಜಾಹೀರಾತುಗಳ ಭಾಗವಾಗಿದ್ದಕ್ಕಾಗಿ ಅವರು ಪಶ್ಚಾತ್ತಾಪವನ್ನು ಪಟ್ಟಿರುವಾದಿಗಿಯೂ ಹೇಳಿಕೊಂಡರು.

ಬಾಲಿವುಡ್ ಇಂಡಸ್ಟ್ರಿಯಲ್ಲಿ ನನ್ನನ್ನು ಮೂಲೆಗೆ ತಳ್ಳಲಾಯಿತು. ಅವಕಾಶಗಳು ಸಿಗುತ್ತಿರಲಿಲ್ಲ, ನನಗೆ ಬೇಕು ಅಂತಲೇ ಅವಕಾಶಗಳಿಂದ ವಂಚಿಸಲಾಗುತ್ತಿತ್ತು. ಸಂಗೀತದ ಅವಕಾಶ ಬಂದಾಗ ನಾನು ಅಮೆರಿಕಕ್ಕೆ ಹೋಗಲು ನಿರ್ಧರಿಸಿದೆ. ಪಿಟ್ಬುಲ್, ವಿಲ್.ಐ.ಎಂ, ಫಾರೆಲ್ ವಿಲಿಯಮ್ಸ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದಾಗ್ಯೂ, ಅವರಿಗೆ ನಾನು ನಟನೆಯಲ್ಲಿ ಹೆಚ್ಚು ಉತ್ತಮ ಅರಿತುಕೊಂಡರು. ನಂತರ ನನಗೆ ‘ಕ್ವಾಂಟಿಕೋ’ನಲ್ಲಿ ಪಾತ್ರ ಸಿಕ್ಕಿತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra : ಬಾಲಿವುಡ್​ನ ಪೊಲಿಟಿಕ್ಸ್​ಗೆ ಹೆದರಿ ಹಾಲಿವುಡ್​ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ

“ನಾನು ಸಿನಿಮಾ ರಂಗಕ್ಕೆ ಸೇರಿದಾಗ ನೀವು ನ್ಯಾಯಯುತವಾಗಿದ್ದರೆ, ನಿಮಗೆ ಕೆಲವು ರೀತಿಯ ಯಶಸ್ಸು ಅಥವಾ ಕಾಸ್ಟಿಂಗ್ ಗ್ಯಾರಂಟಿ ಆಗುತ್ತಿತ್ತು. ನಾನು ಫೇರನೆಸ್‌ ಕ್ರೀಮ್‌ರೊಳಗೆ ಸಿಲುಕಿಕೊಂಡಿದ್ದೆ. ಈ ಕಮರ್ಷಿಯಲ್‌ ತುಂಬ ಹಾನಿಕಾರಕವಾಗಿದೆ. ನಾನು ಈ ಕ್ರೀಮ್ ಅನ್ನು ಬಳಸಲು ಪ್ರಾರಂಭಿಸುತ್ತೇನೆ ಮತ್ತು ನನಗೆ ಕೆಲಸವೂ ಸಿಗುತ್ತದೆ. ಇದೆಲ್ಲ ನಡೆದದ್ದು 2000ರಲ್ಲಿʼʼಎಂದರು.

ಪ್ರಿಯಾಂಕಾ ಜತೆಗೆ ಸೈಫ್ ಅಲಿ ಖಾನ್ ಮತ್ತು ನೇಹಾ ಧೂಪಿಯಾ ಕೂಡ ಫೇರ್‌ನೆಸ್ ಕ್ರೀಮ್ ಅಭಿಯಾನದ ಭಾಗವಾಗಿದ್ದರು. ಸಿಟಾಡೆಲ್‌ನ ಪ್ರಚಾರಕ್ಕಾಗಿ ಪಿಗ್ಗಿ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಶೀಘ್ರದಲ್ಲೇ ನಟಿ ‘ಸಿಟಾಡೆಲ್’ ಮತ್ತು ‘ಲವ್ ಎಗೇನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

South Cinema

Actor Jeetendra: ಶ್ರೀದೇವಿ, ರೇಖಾ ಜತೆ ಅಫೇರ್‌ ಇದ್ರೂ ಹೇಮಾ ಮಾಲಿನಿ ಜತೆ ಮದುವೆಯಾಗಲು ಹೊರಟಿದ್ರು ನಟ ಜೀತೇಂದ್ರ!

Actor Jeetendra: ನಟ ಜೀತೇಂದ್ರ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ವಿವಾದತ್ಮಕವಾಗಿತ್ತು. ಹಲವಾರು ನಟಿಯರೊಂದಿಗೆ ಅವರ ಹೆಸರು ತುಳುಕು ಹಾಕಿಕೊಂಡಿತ್ತು.

VISTARANEWS.COM


on

Edited by

Actor Jeetendra
Koo

ಬೆಂಗಳೂರು: 80ರ ದಶಕದಲ್ಲಿ ಬಾಲಿವುಡ್ ನಟ ಜೀತೇಂದ್ರ (Actor Jeetendra) ಅವರು ಬಾಲಿವುಡ್‌ ಚಿತ್ರರಂಗವನ್ನೇ ಆಳಿದವರು. ಅವರ ಅಂದವಾಗಿರಲಿ, ನೃತ್ಯವಾಗಲಿ, ನಟನೆಯಾಗಲಿ ಸಖತ್‌ ಕ್ರೇಜ್‌ ಹುಟ್ಟು ಹಾಕಿತ್ತು. ಪ್ರತಿಯೊಬ್ಬ ನಟಿಗೂ ಆಗಿನ ಕಾಲಕ್ಕೆ ಅವರ ಜತೆ ತೆರೆ ಹಂಚಿಕೊಳ್ಳುವ ಕನಸಾಗಿತ್ತು. ಆದರೆ ನಟ ಜೀತೇಂದ್ರ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ವಿವಾದತ್ಮಕವಾಗಿತ್ತು. ಹಲವಾರು ನಟಿಯರೊಂದಿಗೆ ಅವರ ಹೆಸರು ತುಳುಕು ಹಾಕಿಕೊಂಡಿತ್ತು.

ಜೀತೇಂದ್ರ ಅವರು ವಿ ಶಾಂತಾರಾಮ್ ಅವರ ʻನವರಂಗ್ʼ ಚಿತ್ರದ ಮೂಲಕ ಜೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 30 ಟೇಕ್‌ಗಳ ಬಳಿಕವೂ ಸಿನಿಮಾಗೆ ಡೈಲಾಗ್‌ ಡೆಲಿವರಿ ಮಾಡಲು ಪರಾದುಡುತ್ತಿದ್ದರು. ಆದರೆ, 5 ವರ್ಷಗಳ ನಂತರ, ಅದೇ ನಿರ್ದೇಶಕರು ಅವರನ್ನು ಗೀತ್ ಗಾಯ ಪಥರೋನ್ ನೇ (Geet Gaaya Patharon Ne) ಚಿತ್ರದಲ್ಲಿ ನಾಯಕನನ್ನಾಗಿ ಮಾಡಿದರು. ಅವರ ಶ್ರಮ ಕೊನೆಗೂ ಫಲ ನೀಡಿತು. ನಂತರ, ನಟ ಫರ್ಜ್, ಹಂಜೋಲಿ, ಕಾರವಾನ್, ಹಿಮ್ಮತ್ವಾಲಾ, ಧರಮ್ ವೀರ್, ತೋಹ್ಫಾ ಮತ್ತು ಅನೇಕ ಇತರ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿದರು.

ವರದಿಯ ಪ್ರಕಾರ, ನಟ ಜೀತೇಂದ್ರ ಅವರು ಶೋಭಾ ಕಪೂರ್‌ ಅವರನ್ನು ಮೊದಲು ಭೇಟಿಯಾದರು. ಬಳಿಕ ಅವರನ್ನೇ ಮದುವೆಯಾದರು. ಆದರೆ ಆಗ ಶೋಭಾ ಕಪೂರ್‌ ಅವರಿಗೆ ಕೇವಲ 14 ವರ್ಷ. ಆಗ ಅವರಿಗೆ ಮೊದಲ ನೋಟದಲ್ಲೇ ಪ್ರೀತಿಯಾಗಿರಲಿಲ್ಲ. ಬರಬರುತ್ತ ಇಬ್ಬರ ಸಂಬಂಧ ಗಟ್ಟಿಯಾಗ ತೊಡಗಿತು. ಜೀತೇಂದ್ರ ಅವರ ತಂದೆಗೆ ಹೃದಯಾಘಾತವಾದ ನಂತರ, ಜೀತೇಂದ್ರ ತಮ್ಮ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು. ಶೋಭಾ ಗಗನಸಖಿಯಾದರು. ಇದಾದ ಬಳಿಕ ಜೀತೇಂದ್ರʻ ಏಕ್ ಬೇಚಾರʼ ಚಿತ್ರದ (Ek Bechara) ಚಿತ್ರೀಕರಣದ ಸಮಯದಲ್ಲಿ ರೇಖಾಗೆ ಹತ್ತಿರವಾಗಿದ್ದರು. ಜೋಡಿಯು ಸೂಪರ್ ಹಿಟ್ ಆಯಿತು. ಮತ್ತೆ ಇದೇ ಜೋಡಿ ಅನೋಖಿ ಅದಾದಲ್ಲಿ (Anokhi Ada) ನಟಿಸಿತು. ಹೀಗೆ ರೇಖಾ ಅವರಿಗೆ ನಟ ಜೀತೇಂದ್ರ ಹತ್ತರವಾದಂತೆ ಶೋಭಾ ಜತೆಗಿನ ಸಂಬಂಧ ಕೊನೆಗೊಂಡಿತು.

ಇದನ್ನೂ ಓದಿ: Samantha Ruth Prabhu: ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಊ ಅಂಟಾವ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಸಮಂತಾ!

ಜಿತೇಂದ್ರ ಹಾಗೂ ಹೇಮಾ ಮಾಲಿನಿ ನಡುವೆ ಸಂಬಂಧದ ವದಂತಿಗಳು ಹರಿದಾಡಿದ್ದವು. ಹೇಮಾ ಮಾಲಿನಿ ಅವರ ಪುಸ್ತಕ `ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್’ ಪ್ರಕಾರ, ಹೇಮಾ ಮಾಲಿನಿ ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಹೇಮಾ ಮಾಲಿನಿ ಹಾಗೂ ಜೀತೇಂದ್ರ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿರಲಿಲ್ಲ. ಆದರೆ ಈ ಎರಡೂ ಕುಟುಂಬಕ್ಕೆ ಹೇಮಾ ಮಾಲಿನಿ ಹಾಗೂ ಜೀತೇಂದ್ರ ಮದುವೆಯಾಗಬೇಕೆಂದು ಬಯಸಿತ್ತು. ಇವರಿಬ್ಬರೂ ಇನ್ನೇನು ಮದುವೆಯಾಗಬೇಕೆಂಬಷ್ಟರಲ್ಲಿ ಧರ್ಮೇಂದ್ರ ಅವರು ಜೀತೇಂದ್ರ ಅವರ ಪತ್ನಿ ಶೋಭಾ ಜತೆಗೆ ಹೋಗಿ ಮದುವೆಯನ್ನು ತಡೆದರು. ಜೀತೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ತುಷಾರ್ ಕಪೂರ್ ಹಾಗೂ, ಏಕ್ತಾ ಕಪೂರ್‌.

Continue Reading

South Cinema

Samantha Ruth Prabhu: ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಊ ಅಂಟಾವ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಸಮಂತಾ!

Samantha Ruth Prabhu: ಕಪ್ಪು ಬಣ್ಣದ ಗ್ಲಾಮರಸ್ ಡ್ರೆಸ್ ಧರಿಸಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಸ್ಟೆಪ್​ ಹಾಕಿದ್ದಾರೆ ನಟಿ ಸಮಂತಾ.

VISTARANEWS.COM


on

Edited by

Samantha Ruth Prabhu dance to Oo Antava Serbian club
Koo

ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ವರುಣ್ ಧವನ್ ಸದ್ಯ ವಿದೇಶದಲ್ಲಿದ್ದಾರೆ. ರಾಜ್ ಮತ್ತು ಡಿಕೆ ಅವರೊಂದಿಗೆ ತಮ್ಮ ಸಿಟಾಡೆಲ್ ಸಿರೀಸ್‌ ಚಿತ್ರೀಕರಣದಲ್ಲಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆ ಬೆಲ್‌ಗ್ರೇಡ್‌ನ ಕ್ಲಬ್‌ ಒಂದಕ್ಕೆ ಮೋಜು ಮಾಡಲು ಹೋಗಿದ್ದ ವೇಳೆ ಸಮಂತಾರ ಊ ಅಂಟಾವ ಊಹು ಅಂಟಾವ ಹಾಡಿಗೆ ಸಮಂತಾ, ವರುಣ್ ಧವನ್ ಹಾಗೂ ಇತರರು ಹಾಡಿಗೆ ಸಖತ್ ಸ್ಟೆಪ್​ಗಳನ್ನು ಹಾಕಿದ್ದಾರೆ. ಆ ವಿಡಿಯೊ ಇದೀಗ ವೈರಲ್ ಆಗಿದೆ.

ವರುಣ್, ಸಮಂತಾ ಮತ್ತು ಸಿಕಂದರ್ ಖೇರ್ ಪ್ರಸ್ತುತ ಸರ್ಬಿಯಾದಲ್ಲಿ ಸಿಟಾಡೆಲ್ ಚಿತ್ರೀಕರಣದಲ್ಲಿದ್ದಾರೆ. ಕಪ್ಪು ಬಣ್ಣದ ಗ್ಲಾಮರಸ್ ಡ್ರೆಸ್ ಧರಿಸಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಸ್ಟೆಪ್​ ಹಾಕಿದ್ದಾರೆ ನಟಿ ಸಮಂತಾ. ವರುಣ್ ಧವನ್ ಸಹ ಖುಷಿಯಾಗಿ ಊ ಅಂಟಾವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಮಂತಾ-ವರುಣ್ ಜತೆಗೆ ಚಿತ್ರತಂಡದ ಇನ್ನೂ ಕೆಲವು ಸದಸ್ಯರು ಪಬ್​ನಲ್ಲಿ ಹಾಜರಿದ್ದು ಅವರೂ ಸಹ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಪ್ರಿಯಾಂಕಾ ಚೋಪ್ರಾ ನಟಿಸಿರುವ ಇಂಗ್ಲೀಷ್ ವೆಬ್ ಸರಣಿಯ ಹಿಂದಿ ಅವತರಣಿಕೆ ಇದಾಗಿದೆ. ಇಂಗ್ಲೀಷ್​ನಲ್ಲಿ ರೂಸ್ಸೋ ಬ್ರದರ್ಸ್ ಈ ವೆಬ್ ಸರಣಿಗೆ ಚಿತ್ರಕತೆ ಬರೆದು ನಿರ್ಮಾಣ ಮಾಡಿದ್ದರೆ ಹಿಂದಿಯಲ್ಲಿ ರಾಜ್ ಮತ್ತು ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Samantha Ruth Prabhu : ಹಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ! ಯಾವ ಸಿನಿಮಾ?

ವೈರಲ್‌ ವಿಡಿಯೊ

ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?

‘ಫ್ಯಾಮಿಲಿ ಮ್ಯಾನ್ 2’ ವೆಬ್‌ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ ಮ್ಯಾನ್‌ ಸಿರೀಸ್‌ ಬರುವ ಸಮಯದಲ್ಲಿ ಸಮಂತಾ ಅವರು ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿರಲಿಲ್ಲ. ಆದರೆ ಸಿರೀಸ್‌ನಲ್ಲಿ ಸಮಂತಾ ನಟಿಸಿರುವ ದೃಶ್ಯಗಳೇ ಇಬ್ಬರನ್ನು ಬೇರೆ ಮಾಡಿದ್ದು ಎನ್ನುವ ಸುದ್ದಿ ವೈರಲ್‌ ಆಗಿತ್ತು. ‘ಫ್ಯಾಮಿಲಿ ಮ್ಯಾನ್ 2’ ಸಿರೀಸ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ‘ಸಿಟಾಡೆಲ್‌’ ಭಾರತೀಯ ವರ್ಷನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿರೀಸ್‌ನಲ್ಲಿ ಸಮಂತಾ, ಪ್ರಿಯಾಂಕಾ ಚೋಪ್ರಾರಂತೆ ಹಾಟ್‌ ದೃಶ್ಯಗಳನ್ನು ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ʼಖುಷಿʼ ಇದೇ ಸೆಪ್ಟೆಂಬರ್‌ 1ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ʼಮಹಾನಟಿʼ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.

Continue Reading

South Cinema

Actor Rajinikanth: 32 ವರ್ಷಗಳ‌ ನಂತರ ಒಂದಾದ ರಜಿನಿ- ಬಚ್ಚನ್! ಮತ್ತೊಂದು ಸಾಹಸಕ್ಕೆ ಕೈ ಹಾಕಿದ ಲೈಕಾ

Actor Rajinikanth: ರಜನಿಕಾಂತ್‌ ಅವರ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜತೆ ಬಾಲಿವುಡ್ ನಟ ಅಮಿತಾಭ್‌ ಬಚ್ಚನ್ ಕೂಡ ನಟಿಸುತ್ತಿದ್ದಾರೆ.

VISTARANEWS.COM


on

Edited by

After 32 years Rajini Big B share screen
Koo

ಬೆಂಗಳೂರು: ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ (Actor Rajinikanth) ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್, ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್‌, ಸೂಪರ್ ಸ್ಟಾರ್ ರಜನಿಕಾಂತ್ ಜತೆ ಮತ್ತೆ ಕೈ ಜೋಡಿಸಿದೆ. ರಜನಿಕಾಂತ್‌ ಅವರ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜತೆ ಬಾಲಿವುಡ್ ನಟ ಅಮಿತಾಭ್‌ ಬಚ್ಚನ್ ಕೂಡ ನಟಿಸುತ್ತಿದ್ದಾರೆ.

ರಜನಿಕಾಂತ್ ಹಾಗೂ ಅಮಿತಾಭ್‌ ಭಚ್ಚನ್‌ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ರಜನಿ ಹಾಗೂ ಅಮಿತಾಭ್‌ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು.

ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಣ ಹಾಕುತ್ತಿದೆ. ಬಹಳ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಪ್ರಾಜೆಕ್ಟ್ ಮುಂದಿನ ತಿಂಗಳ ಅಂತ್ಯಕ್ಕೆ ಸೆಟ್ಟೇರಲಿದೆ.

ಲೈಕಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಜೈಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್, ರಜನಿ ಹಾಗೂ ಬಚ್ಚನ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Jailer Release Date: ರಜನಿಕಾಂತ್‌ ನಟನೆಯ ʻಜೈಲರ್‌ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌: ಹೇಗಿದೆ ಪ್ರೊಮೊ?

Actor Rajinikanth

ಆಗಸ್ಟ್‌ 10ರಂದು ತೆರೆ ಕಾಣಲಿದೆ ಜೈಲರ್‌

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ ಪಿಕ್ಚರ್ಸ್ ಬೆಂಬಲದೊಂದಿಗೆ ಮೂಡಿ ಬರುತ್ತಿರುವ ಜೈಲರ್ ಸಿನಿಮಾ ವಿಶ್ವಾದ್ಯಂತ ಆಗಸ್ಟ್‌ 10ರಂದು ತೆರೆ ಕಾಣುತ್ತಿದೆ. ಜೈಲರ್ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ʻಪೆಟ್ಟಾʼ, ʻದರ್ಬಾರ್ʼ ಬಳಿಕ ಮೂರನೇ ಬಾರಿಗೆ ರಜನಿಕಾಂತ್ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶವನ್ನು ಅನಿರುದ್ಧ್‌ ಗಿಟ್ಟಿಸಿಕೊಂಡಿದ್ದಾರೆ.

ರಜನಿಕಾಂತ್ ಮತ್ತು ಶಿವರಾಜಕುಮಾರ್ ಅವರ ಭಾಗವಾಗಿ, ಜೈಲರ್ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ನಟಿಸಲಿದ್ದಾರೆ. ವಸಂತ ರವಿ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜಿನಿಕಾಂತ್ ಪ್ರಸ್ತುತ, ಐಶ್ವರ್ಯಾ ರಜನಿಕಾಂತ್ ಅವರ ಚಿತ್ರ ʻಲಾಲ್ ಸಲಾಮ್ʼ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಜನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Continue Reading

South Cinema

Iraivan Movie: ಜಯಂ ರವಿ ಜತೆ ನಯನತಾರಾ ರೊಮ್ಯಾನ್ಸ್!

Iraivan Movie: ಜಯಂ ರವಿ ಅವರು ಟ್ವಿಟರ್‌ನಲ್ಲಿ ಪೋಸ್ಟರ್‌ ಜತೆ ಬಿಡುಗಡೆಯ ದಿನಾಂಕ ಪ್ರಕಟಿದರು. ಪೋಸ್ಟರ್‌ನಲ್ಲಿ ಜಯಂ ರವಿ ಮತ್ತು ನಯನತಾರಾ ಜತೆಗೆ ರಕ್ತದ ಕಲೆಯಿರುವ ಚಾಕು ಇದೆ.

VISTARANEWS.COM


on

Edited by

Jayam Ravi Nayanthara
Koo

ಬೆಂಗಳೂರು: ನಯನತಾರಾ ಮತ್ತು ಜಯಂ ರವಿ ಎಂಟು ವರ್ಷಗಳ ನಂತರ ʻಇರೈವನ್ʼ ಸಿನಿಮಾ (Iraivan Movie) ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇದು ಕಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ʻಇರೈವನ್ʼ ಸಿನಿಮಾ ಆಗಸ್ಟ್ 25ರಂದು ಚಿತ್ರಮಂದಿರಗಳಲ್ಲಿ ಲಗ್ಗೆ ಇಡಲಿದೆ.

ಜಯಂ ರವಿ ಅವರು ಟ್ವಿಟರ್‌ನಲ್ಲಿ ಪೋಸ್ಟರ್‌ ಜತೆ ಬಿಡುಗಡೆಯ ದಿನಾಂಕ ಪ್ರಕಟಿದರು. ಪೋಸ್ಟರ್‌ನಲ್ಲಿ ಜಯಂ ರವಿ ಮತ್ತು ನಯನತಾರಾ ಜತೆಗೆ ರಕ್ತದ ಕಲೆಯಿರುವ ಚಾಕು ಇದೆ. ಅಹ್ಮದ್ ಬರೆದು ನಿರ್ದೇಶಿಸಿದ ಇರೈವನ್ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಜಯಂ ರವಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಯನತಾರಾ ಪಾತ್ರದ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗಬೇಕಿದೆ. ʻಇರೈವನ್’ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತವಿದ್ದರೆ, ಹರಿ ಕೆ ವೇದಾಂತ್ ಅವರ ಛಾಯಾಗ್ರಹಣ ಮತ್ತು ಮಣಿಕಂದ ಬಾಲಾಜಿ ಅವರ ಸಂಕಲನವಿದೆ.

ಇದನ್ನೂ ಓದಿ: Actress Nayanthara: ಅವಳಿ ಮಕ್ಕಳ ಜತೆ ಕ್ಯೂಟ್‌ ಆಗಿ ಫೋಟೊಶೂಟ್‌ ಮಾಡಿಸಿಕೊಂಡ ನಯನತಾರಾ!

2015ರಲ್ಲಿ ‘ತಾನಿ ಓರುವನ್’ ಎಂಬ ಚಿತ್ರದಲ್ಲಿ ಜಯಂರವಿ- ನಯನತಾರಾ ಜತೆಯಾಗಿ ನಟಿಸಿದ್ದರು. ‘ಇರೈವನ್’ ಸಿನಿಮಾ ಮೂಲಕ ಮತ್ತೆ ಈ ಜೋಡಿ ಒಂದಾಗುತ್ತಿದೆ. ಆಕ್ಷನ್ ಥ್ರಿಲ್ಲರ್ ಇರೈವನ್‌ನಲ್ಲಿ ರಾಹುಲ್ ಬೋಸೆ, ಅಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ, ಬಗ್ಸ್ ಸೇರಿದಂತೆ ಹಲವರು ನಟಿಸಿದ್ದಾರೆ.

Continue Reading
Advertisement
Love propose at Oval Stadium
ಕ್ರಿಕೆಟ್4 mins ago

WTC Final 2023 : ಸ್ಟೇಡಿಯಂನಲ್ಲೇ ಪ್ರಪೋಸ್​, ಅಲ್ಲೇ ಕಿಸ್​, ಅಲ್ಲೇ ರೊಮ್ಯಾನ್ಸ್​​, ಓವಲ್​ನಲ್ಲೊಂದು ಪ್ರೇಮ ಪ್ರಸಂಗ!

Chief Minister Siddaramaiah
ಕರ್ನಾಟಕ11 mins ago

ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ; ’ಶಕ್ತಿ’ ಟಿಕೆಟ್​​ ಹಂಚಲಿರುವ ಸಿಎಂ ಸಿದ್ದರಾಮಯ್ಯ

curd myths
ಆರೋಗ್ಯ39 mins ago

Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Horoscope Today
ಪ್ರಮುಖ ಸುದ್ದಿ2 hours ago

Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!

Hindu janajagruti samiti pressmeet
ಕರ್ನಾಟಕ7 hours ago

ಜೂ.16 ರಿಂದ 22ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವʼ

Man Dies Of Heart Attack In Noida
ಕ್ರೀಡೆ7 hours ago

Heart Attack: ಬ್ಯಾಡ್ಮಿಂಟನ್‌ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ವ್ಯಕ್ತಿ ಸಾವು

Digital Payment
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ

aamir khan to act in rajamouli movie
ಸಿನಿಮಾ8 hours ago

Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌!

Minister Pralhad Joshi
ಕರ್ನಾಟಕ8 hours ago

ಹುಬ್ಬಳ್ಳಿ ಏರ್‌ಪೋರ್ಟ್‌ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್‌ ಜೋಶಿ ಧನ್ಯವಾದ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ1 day ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Autodrivers oppose free bus service
ಕರ್ನಾಟಕ14 hours ago

Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್‌ ವಾರ್ನಿಂಗ್‌

accident in kerala
ವೈರಲ್ ನ್ಯೂಸ್19 hours ago

Viral Video: ಬಸ್ಸು ಮತ್ತು ಲಾರಿ ಮಧ್ಯೆ ಸ್ಕೂಟರ್‌ ಅಪ್ಪಚ್ಚಿ, ಸವಾರರ ಕಣ್ ಮುಂದೆ ಯಮ ರಪ್ ಅಂತ ಪಾಸ್ ಆದ!

Cancellation of tenders for 108 ambulances and Dinesh Gundu rao
ಆರೋಗ್ಯ2 days ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ2 days ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ2 days ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ2 days ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ2 days ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ3 days ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ3 days ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ3 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

ಟ್ರೆಂಡಿಂಗ್‌

error: Content is protected !!