Site icon Vistara News

Actor Ramcharan: RRR ಆಸ್ಕರ್‌ ಗೆದ್ದ ಬಳಿಕ ದೇಶಕ್ಕೆ ವಾಪಸ್ಸಾದ ರಾಮ್‌ಚರಣ್‌ಗೆ ಪ್ರಭುದೇವರಿಂದ ಬಿಗ್ ಸರ್‌ಪ್ರೈಸ್

Prrabhudeva RC 15 surprises Actor Ramcharan

ಬೆಂಗಳೂರು: ಆರ್‌ಆರ್‌ಆರ್ ಆಸ್ಕರ್‌ ಪ್ರಶಸ್ತಿ ದೊರೆತ ಬಳಿಕ ರಾಮ್‌ ಚರಣ್‌ (Actor Ramcharan) ಅವರು ಭಾರತಕ್ಕೆ ಮರಳಿದ್ದು, ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಅವರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಇದೀಗ RC15 ಚಿತ್ರತಂಡದಿಂದ ವಿಭಿನ್ನವಾಗಿ ನಟನನ್ನು ವೆಲ್‌ಕಮ್‌ ಮಾಡಲಾಗಿದೆ. ಈ ಸಿನಿಮಾ ಭಾಗವಾಗಿರುವ ಪ್ರಭುದೇವ ಹಾಗೂ ಚಿತ್ರತಂಡ ನಾಟು ನಾಟು ಹಾಡನ್ನು ಸೆಟ್‌ನಲ್ಲಿಯೇ ಸ್ಟೆಪ್ಸ್‌ ಹಾಕಿ ರಾಮ್‌ಚರಣ್‌ ಅವರನ್ನು ಸ್ವಾಗತಿಸಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತಂಡಕ್ಕೆ ಧನ್ಯವಾದ ಅರ್ಪಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ರಾಮ್ ಚರಣ್, “ಇಂತಹ ಆತ್ಮೀಯ ಸ್ವಾಗತಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ ಅಷ್ಟೇ ಹೇಳಲು ಸಾಧ್ಯವಿಲ್ಲ. ನಮ್ಮ ಗ್ರ್ಯಾಂಡ್ ಮಾಸ್ಟರ್ ಪ್ರಭುದೇವ ಸರ್ ಅವರ ಸಪ್ರೈಸ್‌ಗೂ ಧನ್ಯವಾದಗಳು. ಮತ್ತೆ RC15 ಚಿತ್ರದ ಚಿತ್ರೀಕರಣಕ್ಕೆ ಮರಳಿದ್ದು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

ಆಸ್ಕರ್ ಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿರುವ ರಾಮ್‌ ಚರಣ್‌, “ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ರಾಜಮೌಳಿ ಸರ್‌, ಕೀರವಾಣಿ ಮತ್ತು ಚಂದ್ರಬೋಸ್‌ ಸರ್‌ ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ಭಾರತದ ಎಲ್ಲ ಭಾಗದ ಜನರು ಆರ್‌ಆರ್‌ಆರ್‌ ಸಿನಿಮಾ ನೋಡಿ ಹರಸಿದ್ದಾರೆ. ನಾಟು ನಾಟು ಹಾಡು ನಮ್ಮದಲ್ಲ ಬದಲಾಗಿ ಭಾರತೀಯರದ್ದು” ಎಂದು ಹೇಳಿದ್ದಾರೆ.

ರಾಮ್‌ ಚರಣ್‌ ಪೋಸ್ಟ್‌

RC15 ಸಿನಿಮಾ

RC15 ಚಲನಚಿತ್ರಕ್ಕೆ ತಾತ್ಕಾಲಿಕವಾಗಿ RC15 ಎಂದು ಹೆಸರಿಸಲಾಗಿದೆ. ಇದರಲ್ಲಿ ಕಿಯಾರಾ ಆಡ್ವಾಣಿ, ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಆರ್‌ಸಿ 15 ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಭುದೇವ ಮುಂದಿನ ಸಿನಿಮಾ ‘wolfʼ

ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕರಾಗಿರುವ ಸಂದೇಶ್‌ ನಾಗರಾಜ್‌ ಅವರು ನಿರ್ಮಿಸಿದ್ದಾರೆ. ವಿನು ವೆಂಕಟೇಶ್‌ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಬರೆಯುವುದರ ಜತೆ ಆಕ್ಷನ್‌ ಕಟ್‌ ಕೂಡ ಹೇಳಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಬಹುಕೋಟಿ ವೆಚ್ಚವನ್ನು ಮಾಡಲಾಗಿದೆ.

ಇದನ್ನೂ ಓದಿ: Oscars 2023: ನಮ್ಮ ಮಗು ನಮಗೆ ತುಂಬ ಅದೃಷ್ಟವನ್ನು ತರುತ್ತಿದೆ: ರಾಮ್‌ಚರಣ್‌

ಚಿತ್ರದಲ್ಲಿ ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಪುಷ್ಪ ಖ್ಯಾತಿಯ ಅನಸೂಯ ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ. ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿರುವುದಾಗಿ ಚಿತ್ರತಂಡ ತಿಳಿಸಿದೆ.

Exit mobile version