South Cinema
Actor Ramcharan: RRR ಆಸ್ಕರ್ ಗೆದ್ದ ಬಳಿಕ ದೇಶಕ್ಕೆ ವಾಪಸ್ಸಾದ ರಾಮ್‌ಚರಣ್‌ಗೆ ಪ್ರಭುದೇವರಿಂದ ಬಿಗ್ ಸರ್‌ಪ್ರೈಸ್
RC15 ಚಿತ್ರತಂಡದಿಂದ ವಿಭಿನ್ನವಾಗಿ ನಟನನ್ನು ವೆಲ್‌ಕಮ್ ಮಾಡಿದ್ದಾರೆ.ತಂಡಕ್ಕೆ ಧನ್ಯವಾದ ಅರ್ಪಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ ರಾಮ್‌ಚರಣ್ (Actor Ramcharan).
ಬೆಂಗಳೂರು: ಆರ್‌ಆರ್‌ಆರ್ ಆಸ್ಕರ್ ಪ್ರಶಸ್ತಿ ದೊರೆತ ಬಳಿಕ ರಾಮ್ ಚರಣ್ (Actor Ramcharan) ಅವರು ಭಾರತಕ್ಕೆ ಮರಳಿದ್ದು, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಇದೀಗ RC15 ಚಿತ್ರತಂಡದಿಂದ ವಿಭಿನ್ನವಾಗಿ ನಟನನ್ನು ವೆಲ್‌ಕಮ್ ಮಾಡಲಾಗಿದೆ. ಈ ಸಿನಿಮಾ ಭಾಗವಾಗಿರುವ ಪ್ರಭುದೇವ ಹಾಗೂ ಚಿತ್ರತಂಡ ನಾಟು ನಾಟು ಹಾಡನ್ನು ಸೆಟ್‌ನಲ್ಲಿಯೇ ಸ್ಟೆಪ್ಸ್ ಹಾಕಿ ರಾಮ್‌ಚರಣ್ ಅವರನ್ನು ಸ್ವಾಗತಿಸಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಂಡಕ್ಕೆ ಧನ್ಯವಾದ ಅರ್ಪಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ರಾಮ್ ಚರಣ್, “ಇಂತಹ ಆತ್ಮೀಯ ಸ್ವಾಗತಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ ಅಷ್ಟೇ ಹೇಳಲು ಸಾಧ್ಯವಿಲ್ಲ. ನಮ್ಮ ಗ್ರ್ಯಾಂಡ್ ಮಾಸ್ಟರ್ ಪ್ರಭುದೇವ ಸರ್ ಅವರ ಸಪ್ರೈಸ್‌ಗೂ ಧನ್ಯವಾದಗಳು. ಮತ್ತೆ RC15 ಚಿತ್ರದ ಚಿತ್ರೀಕರಣಕ್ಕೆ ಮರಳಿದ್ದು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿರುವ ರಾಮ್ ಚರಣ್, “ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ರಾಜಮೌಳಿ ಸರ್, ಕೀರವಾಣಿ ಮತ್ತು ಚಂದ್ರಬೋಸ್ ಸರ್ ಅವರ ಬಗ್ಗೆ ನಮಗೆ ಹೆಮ್ಮೆಯಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ಭಾರತದ ಎಲ್ಲ ಭಾಗದ ಜನರು ಆರ್‌ಆರ್‌ಆರ್ ಸಿನಿಮಾ ನೋಡಿ ಹರಸಿದ್ದಾರೆ. ನಾಟು ನಾಟು ಹಾಡು ನಮ್ಮದಲ್ಲ ಬದಲಾಗಿ ಭಾರತೀಯರದ್ದು” ಎಂದು ಹೇಳಿದ್ದಾರೆ.
ರಾಮ್ ಚರಣ್ ಪೋಸ್ಟ್
RC15 ಸಿನಿಮಾ
RC15 ಚಲನಚಿತ್ರಕ್ಕೆ ತಾತ್ಕಾಲಿಕವಾಗಿ RC15 ಎಂದು ಹೆಸರಿಸಲಾಗಿದೆ. ಇದರಲ್ಲಿ ಕಿಯಾರಾ ಆಡ್ವಾಣಿ, ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಆರ್‌ಸಿ 15 ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಭುದೇವ ಮುಂದಿನ ಸಿನಿಮಾ ‘wolfʼ
ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕರಾಗಿರುವ ಸಂದೇಶ್ ನಾಗರಾಜ್ ಅವರು ನಿರ್ಮಿಸಿದ್ದಾರೆ. ವಿನು ವೆಂಕಟೇಶ್ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಬರೆಯುವುದರ ಜತೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಬಹುಕೋಟಿ ವೆಚ್ಚವನ್ನು ಮಾಡಲಾಗಿದೆ.
ಇದನ್ನೂ ಓದಿ: Oscars 2023: ನಮ್ಮ ಮಗು ನಮಗೆ ತುಂಬ ಅದೃಷ್ಟವನ್ನು ತರುತ್ತಿದೆ: ರಾಮ್‌ಚರಣ್
ಚಿತ್ರದಲ್ಲಿ ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಪುಷ್ಪ ಖ್ಯಾತಿಯ ಅನಸೂಯ ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ. ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿರುವುದಾಗಿ ಚಿತ್ರತಂಡ ತಿಳಿಸಿದೆ.
South Cinema
Actor Suriya: ಮುಂಬೈನಲ್ಲಿ 70 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ನಟ ಸೂರ್ಯ
ಕಾಲಿವುಡ್ ನಟ ಸೂರ್ಯ (Actor Suriya) ಅವರು ಮುಂಬೈನಲ್ಲಿ ಬಹು ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದಾರೆ. ಅದರ ಬೆಲೆ 70 ಕೋಟಿ ರೂ. ಎನ್ನಲಾಗಿದೆ.
ಮುಂಬೈ: ಕಾಲಿವುಡ್ ನಟ ಸೂರ್ಯ (Actor Suriya) ಬಹುಬೇಡಿಕೆಯ ನಟರಲ್ಲಿ ಒಬ್ಬರು. ಅವರ ಪತ್ನಿ ಜ್ಯೋತಿಕಾ ಅವರೂ ಕೂಡ ಸಿನಿಮಾಗಳಲ್ಲಿ ಮಿಂಚಿದವರೇ. ಇದೀಗ ಈ ದಂಪತಿ ಮಹಾರಾಷ್ಟ್ರದ ಮುಂಬೈನಲ್ಲಿ ಬಹು ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ನ್ನು ಖರೀದಿಸಿರುವುದಾಗಿ ವರದಿಯಾಗಿದೆ. ಅವರು ಖರೀದಿಸಿರುವ ಅಪಾರ್ಟ್‌ಮೆಂಟ್ ಬೆಲೆ ಬರೋಬ್ಬರಿ 70 ಕೋಟಿ ರೂ. ಎಂದು ವರದಿಯಿದೆ.
ಇದನ್ನೂ ಓದಿ: Actor Suriya: ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ ಕಾಲಿವುಡ್ ನಟ ಸೂರ್ಯ: ಫೋಟೊ ವೈರಲ್
ಇಂಡಿಯಾ ಗ್ಲಿಟ್ಜ್ ಈ ಬಗ್ಗೆ ವರದಿ ಮಾಡಿದೆ. ಸೂರ್ಯ ಅವರು ಕೊಂಡುಕೊಂಡಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಸುಮಾರು 9000 ಚದರ ಅಡಿ ಜಾಗಕ್ಕೆ ಹಬ್ಬಿದೆ. ಅದರಲ್ಲಿ ಅತ್ಯಂತ ಸುಂದರವಾದ ಉದ್ಯಾನವನ, ಹಲವಾರು ಪಾರ್ಕಿಂಗ್ ಸ್ಥಳಗಳು ಸೇರಿ ಅನೇಕ ಐಷಾರಾಮಿ ಸೌಲಭ್ಯ ಅಪಾರ್ಟ್‌ಮೆಂಟ್‌ನಲ್ಲಿ ಇದೆ ಎಂದು ವರದಿಯಿದೆ. ಅವರ ಅಪಾರ್ಟ್‌ಮೆಂಟ್ ಸನಿಹದಲ್ಲಿಯೇ ಹಲವು ಬಾಲಿವುಡ್ ತಾರೆಗಳ ಮನೆ ಹಾಗೂ ರಾಜಕಾರಣಿಗಳ ಮನೆಗಳು ಇವೆ ಎನ್ನಲಾಗಿದೆ.
ಸೂರ್ಯ ಅವರು ಈಗಾಗಲೇ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿ ಅದರಲ್ಲಿ ಕುಟುಂಬ ಸಮೇತವಾಗಿ ವಾಸವಿದ್ದರೆ. ಇದೀಗ ಖರೀದಿಸಿರುವ ಈ ಅಪಾರ್ಟ್‌ಮೆಂಟ್ ಅವರ ಕುಟುಂಬದವರಿಗೆ, ಸಹೋದರರಿಗೆ ಗೆಸ್ಟ್ ಹೌಸ್ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಮಕ್ಕಳ ಜನ್ಮದಿನ ಸೇರಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಚರಿಸುವುದಕ್ಕೆ ಈ ಮನೆಯನ್ನು ಬಳಸಬಹುದು ಎನ್ನಲಾಗಿದೆ.
ಇದನ್ನೂ ಓದಿ: Vijay Antony | ಶೂಟಿಂಗ್ ವೇಳೆ ಅಪಘಾತ: ಕಾಲಿವುಡ್ ನಟ ವಿಜಯ್ ಆ್ಯಂಟೊನಿ ಗಂಭೀರ
ಸೂರ್ಯ ತಮ್ಮ ಮುಂದಿನ ಸಿನಿಮಾ ʼಸೂರ್ಯ 42ʼಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ವೆಂಕಾಟೆರ್, ಅರತಾರ್, ಮಂದಾಂಕರ್, ಮುಕಾತಾರ್, ಪೆರುಮಾನಾಥರ್ ಸೇರಿ ಅನೇಕರ ಜತೆಯಲ್ಲಿ ನಟಿಸಲಿದ್ದಾರೆ. ದಿಶಾ ಪಟಾನಿ ಅವರು ಸೂರ್ಯ ಅವರಿಗೆ ಜತೆಯಾಗಿ ನಟಿಸಲಿದ್ದಾರೆ. ಸಿರುತೈ ಶಿವ ನಿರ್ದೇಶನ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿರಲಿದ್ದು, ವಿಶ್ವದಾದ್ಯಂತ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅದಷ್ಟೇ ಅಲ್ಲದೆ ಸೂರ್ಯ ಅವರು ತಮ್ಮ ಸಿನಿಮಾವಾದ ಸೂರರೈ ಪೊಟ್ರುವಿನ ಹಿಂದಿ ರಿಮೇಕ್‌ಗೆ ಬಂಡವಾಳ ಹಾಕಲಿದ್ದಾರೆ.
South Cinema
Actress Kajal Aggarwal : ನಂದಮುರಿ ಬಾಲಕೃಷ್ಣಗೆ ಜೋಡಿಯಾಗಲಿದ್ದಾರೆ ನಟಿ ಕಾಜಲ್ ಅಗರ್ವಾಲ್
ನಂದಮುರಿ ಬಾಲಕೃಷ್ಣ ಅವರ ಎನ್‌ಬಿಕೆ 108 ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ (Actress Kajal Aggarwal) ನಾಯಕ ನಟಿಯಾಗಿ ನಟಿಸಲಿದ್ದಾರೆ. ಈ ವಿಚಾರವನ್ನು ಸಿನಿ ತಂಡ ಅಧಿಕೃತಗೊಳಿಸಿದೆ.
ಹೈದರಾಬಾದ್: ವೀರ ಸಿಂಹ ರೆಡ್ಡಿ ಸಿನಿಮಾ ಹಿಟ್ ಆದ ಸಂತಸದಲ್ಲಿ ನಟ ನಂದಮುರಿ ಬಾಲಕೃಷ್ಣ ಅವರಿದ್ದಾರೆ. ಅದರ ಬೆನ್ನಲ್ಲೇ ನಟ ಅನಿಲ್ ರವಿಪುಡಿ ಅವರ ಇನ್ನೂ ಹೆಸರಿಡದ ʼಎನ್‌ಬಿಕೆ 108ʼ ಸಿನಿಮಾ ನಟನೆಯಲ್ಲೂ ಬಿಜಿಯಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾವಾದ ಇದರಲ್ಲಿ ಬಾಲಯ್ಯ ಅವರಿಗೆ ಜತೆಯಾಗಿ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ಇಲ್ಲಿಯವರೆಗಿತ್ತು. ಆದರೆ ಇದೀಗ ಚಿತ್ರತಂಡ ಆ ಕುತೂಹಲಕ್ಕೆ ತೆರೆ ಎಳೆದಿದ್ದು, ನಟಿ ಕಾಜಲ್ ಅಗರ್ವಾಲ್ (Actress Kajal Aggarwal) ಅವರನ್ನು ಸಿನಿಮಾ ತಂಡಕ್ಕೆ ಕರೆತಂದಿರುವುದಾಗಿ ಘೋಷಿಸಿದೆ.
ಇದನ್ನೂ ಓದಿ: South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!
ಈ ಬಗ್ಗೆ ತಮಿಳಿನ ಸಿನಿಮಾಗಳ ಪಿಆರ್ ಆಗಿರುವ ವಂಶಿ ಶೇಖರ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಎನ್‌ಬಿಕೆ 108 ಸಿನಿ ತಂಡ ಪ್ರತಿಭಾನ್ವಿತ ನಟಿ ಕಾಜಲ್ ಅಗರ್ವಾಲ್ ಅವರನ್ನು ಚಿತ್ರಕ್ಕೆ ಬರಮಾಡಿಕೊಂಡಿದೆ. ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಸುದ್ದಿಗಳು ಸದ್ಯದಲ್ಲೇ ಹೊರಬೀಳಲಿವೆ” ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಬಾಲಕೃಷ್ಣ ಅವರು ಈಗಾಗಲೇ ಎನ್‌ಬಿಕೆ 108 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ನಟಿ ಕಾಜಲ್ ಕೂಡ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ಮಾಹಿತಿಯಿದೆ.
ಎನ್‌ಬಿಕೆ 108 ಸಿನಿಮಾ ಕಳೆದ ಆಗಸ್ಟ್‌ನಲ್ಲೇ ಘೋಷಣೆಯಾಗಿತ್ತು. ಈ ಬಗ್ಗೆ ನಿರ್ದೇಶಕ ಅನಿಲ್ ಅವರೇ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಅದಲ್ಲದೆ ಸಿನಿಮಾಕ್ಕೆ ಎಸ್.ಥಾಮನ್ ಅವರ ಸಂಗೀತ ನಿರ್ದೇಶನವಿರಲಿದೆ ಎಂದೂ ಅವರು ತಿಳಿಸಿದ್ದರು.
South Cinema
Viral News : ಕಪಲ್ ಗೋಲ್ ಎಂದರೆ ಹೀಗಿರಬೇಕು ಎನ್ನುತ್ತಿದೆ ಈ ಸ್ಟಾರ್ ಜೋಡಿ; ನೆಟ್ಟಿಗರು ಫುಲ್ ಫಿದಾ
ತಮಿಳು ನಟ ಅಜಿತ್ ಕುಮಾರ್ ಹಾಗೂ ಅವರ ಪತ್ನಿ ಶಾಲಿನಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral News) ಆಗಿವೆ.
ಬೆಂಗಳೂರು: ಮದುವೆಯಾದವರ ಆಗದಿರುವವರು ಎಲ್ಲರೂ ಕಾಣುವ ಕನಸೆಂದರೆ ಅದು ಕಪಲ್ ಗೋಲ್. ಬಾಳ ಸಂಗಾತಿ ಜತೆ ಹೀಗೇ ಇರಬೇಕು, ಇಷ್ಟೇ ಅನ್ಯೋನ್ಯವಾಗಿರಬೇಕು ಎಂದು ಎಲ್ಲರೂ ಎಂದುಕೊಳ್ಳುತ್ತಾರೆ. ಸಿನಿಮಾ ತಾರಾ ಜೋಡಿಗಳೂ ಕೂಡ ಅದೇ ರೀತಿ ಗೋಲ್ ಸೆಟ್ ಮಾಡುವಂತಹ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತಾರೆ. ಇದೀಗ ಆ ಸಾಲಿಗೆ ತಮಿಳಿನ ಅಜಿತ್ ಕುಮಾರ್-ಶಾಲಿನಿ ದಂಪತಿ ಕೂಡ ಸೇರಿಕೊಂಡಿದ್ದಾರೆ. ಅವರ ಕಪಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral News) ಆಗಿದೆ.
ಇದನ್ನೂ ಓದಿ: NSA Ajit Doval: ಅಜಿತ್ ದೋವಲ್ ಲಂಡನ್ ಭೇಟಿ: ಖಲಿಸ್ತಾನ್, ಬಿಬಿಸಿ, ಭಯೋತ್ಪಾದನೆ ವಿಚಾರದಿಂದಾಗಿ ಈ ಬಾರಿ ಮಾತುಕತೆ ಕಠಿಣ
ನಟ ಅಜಿತ್ ಕುಮಾರ್, ಶಾಲಿನಿ ಮತ್ತು ಅವರ ಇಬ್ಬರು ಮಕ್ಕಳಾದ ಅನುಷ್ಕಾ ಹಾಗೂ ಆದ್ವಿಕ್ ಇತ್ತೀಚೆಗೆ ಪ್ರವಾಸ ಹೋಗಿ ಬಂದಿದ್ದಾರೆ. ಆ ಪ್ರವಾಸದಲ್ಲಿ ಪೂರ್ತಿ ಕುಟುಂಬ ಸಾಕಷ್ಟು ಎಂಜಾಯ್ ಮಾಡಿದೆ. ಪ್ರವಾಸದಲ್ಲಿ ಅಜಿತ್ ಜತೆಗೆ ತಾವು ಇರುವ ಫೋಟೋಗಳನ್ನು ನಟಿ ಶಾಲಿನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮುದ್ರದ ಮಧ್ಯೆ ಇರುವ ಯಾಚ್ ಒಂದರಲ್ಲಿ ಅಜಿತ್‌ಗೆ ಒರಗಿ ತಾವು ಕುಳಿತಿರುವ ಫೋಟೋ ಹಾಗೆಯೇ ಅಜಿತ್ ಪಕ್ಕದಲ್ಲಿ ನಿಂತಿರುವ ಫೋಟೋವನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಈ ಫೋಟೋಗಳಿಗೆ ಯಾವುದೇ ಕ್ಯಾಪ್ಶನ್ ಕೊಟ್ಟಿಲ್ಲ. ಆದರೆ ಅವರ ಅಭಿಮಾನಿಗಳೇ ಈ ಫೋಟೋಗಳಿಗೆ ತರೇವಾರು ಕ್ಯಾಪ್ಶನ್‌ಗಳನ್ನು ಕೊಡಲಾರಂಭಿಸಿದ್ದಾರೆ. “ಕಪಲ್ ಗೋಲ್ ಎಂದರೆ ಇದೇ ನೋಡಿ”, “ಮುದ್ದಾದ ಅಣ್ಣ ಅತ್ತಿಗೆ”, “ಬದುಕಿದರೆ ನಿಮ್ಮಂತೆ ಬದುಕಬೇಕು” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಫೋಟೋಗಳಿಗೆ ಬಂದಿವೆ.
ಇದಕ್ಕೂ ಮೊದಲು ಈ ಜೋಡಿಯ ಇನ್ನೊಂದು ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದಂಪತಿಯು ಮಗ ಆದ್ವಿಕ್‌ನೊಂದಿಗೆ ಫುಟ್‌ಬಾಲ್ ಗ್ರೌಂಡ್‌ನಲ್ಲಿ ಇದ್ದ ಫೋಟೋ ಅದಾಗಿತ್ತು. ಆ ಫೋಟೋಗೆ ಕೂಡ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಕುಟುಂಬವೆಂದರೆ ಹೀಗಿರಬೇಕು” ಎಂದು ಹೇಳಿದ್ದರು.
ಇದನ್ನೂ ಓದಿ: Ajith Kumar | ಅಜಿತ್ ಕುಮಾರ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ʻತುನಿವುʼ ಹೊಸ ಪೋಸ್ಟರ್ ಔಟ್ !
ನಟ ಅಜಿತ್ ಕುಮಾರ್ ಅವರು ಎಚ್.ವಿನೋಥ್ ನಿರ್ದೇಶನದ ಥುನಿವು ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ವರ್ಷಕ್ಕೂ ಮೊದಲು ಅಜಿತ್ ಅವರ ಎಕೆ 62 ಸಿನಿಮಾವನ್ನು ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಮಗೀಜ್ ಥಿರುಮೇನಿ ಅವರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಚಿತ್ರೀಕರಣ ನಂತರ ಅಜಿತ್ ಅವರು ಬೈಕ್‌ನಲ್ಲಿ ವಿಶ್ವ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
South Cinema
Dhruva Sarja: ʻಕೆಡಿʼ ಚಿತ್ರಕ್ಕೆ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಡಲಿದ್ದಾರಾ?
ಯುಗಾದಿ (Dhruva Sarja) ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದ ಪವರ್‌ಫುಲ್ ಪಾತ್ರ ಸತ್ಯವತಿಯ ಫಸ್ಟ್ ಲುಕ್ ರಿವೀಲ್ ಮಾಡುತ್ತಿದೆ ಚಿತ್ರತಂಡ. ಆದರೆ ಸತ್ಯವತಿ ಯಾರೆಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಇತ್ತು. ಇದೀಗ ಶಿಲ್ಪಾ ಶೆಟ್ಟಿ ಎಂದು ವರದಿಯಾಗಿದೆ.
ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್ ಕಾಂಬಿನೇಶನ್ ಸಿನಿಮಾ ʻಕೆಡಿ’ ಸಿನಿಮಾ ಹೊಸ ಅಪಡೇಟ್ ಶೇರ್ ಮಾಡಿಕೊಂಡಿದೆ. ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದ ಪವರ್‌ಫುಲ್ ಪಾತ್ರ ಸತ್ಯವತಿಯ ಫಸ್ಟ್ ಲುಕ್ ರಿವೀಲ್ ಮಾಡುತ್ತಿದೆ ಚಿತ್ರತಂಡ. ಆದರೆ, ಸತ್ಯವತಿ ಯಾರೆಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಇತ್ತು. ಇದೀಗ ಶಿಲ್ಪಾ ಶೆಟ್ಟಿ ಎಂದು ವರದಿಯಾಗಿದೆ.
ನಟಿ ಶಿಲ್ಪಾ ಶೆಟ್ಟಿ ಸದ್ದಿಲ್ಲದೇ ತಮ್ಮ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಶಿಲ್ಪಾ ಶೆಟ್ಟಿ ಪಾತ್ರದ ಫಸ್ಟ್ ಲುಕ್ ಚಿತ್ರತಂಡ ಅನಾವರಣ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರವಿಚಂದ್ರನ್ ಅವರ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಫ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.
ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ. ಸದ್ಯ ಧ್ರುವ ಸರ್ಜಾ ʻಮಾರ್ಟಿನ್ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಎ.ಪಿ ಅರ್ಜುನ್ ಮಾರ್ಟಿನ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ನಿರ್ದೇಶಕ ಪ್ರೇಮ್ ಪೋಸ್ಟ್
ಇದನ್ನೂ ಓದಿ: Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʻಮಾರ್ಟಿನ್ʼ ಸಿನಿಮಾದ ಬಿಗ್ ಅಪ್‌ಡೇಟ್ ಇಲ್ಲಿದೆ!
ಮಾರ್ಟಿನ್ ಸಿನಿಮಾ
ಮಾರ್ಟಿನ್ ಸಿನಿಮಾ ಟೀಸರ್ ಕೂಡ ಬಿಡುಗಡೆಗೊಂಡಿದ್ದು ಸಖತ್ ಹವಾ ಕ್ರಿಯೇಟ್ ಮಾಡಿತ್ತು. ಅದ್ಧೂರಿ ಬಜೆಟ್ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ‘ಮಾರ್ಟಿನ್ (‘MARTIN’ TEASER), ಕ್ಲೈಮ್ಯಾಕ್ಸ್‌ನ ಆ್ಯಕ್ಷನ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿರುವುದು ಎಂದು ಹೇಳಲಾಗಿತ್ತು.
ಮಾರ್ಟಿನ್ ಚಿತ್ರಕ್ಕೆಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.ಮಾರ್ಟಿನ್ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್ ಪಾಠಕ್ ಸಹ ‘ಮಾರ್ಟಿನ್’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು