Site icon Vistara News

Puneeth Rajkumar: ಮಾತು ಉಳಿಸಿಕೊಂಡ ಪ್ರಕಾಶ್‌ ರೈ, ಯಶ್‌; ಅಪ್ಪು ಹೆಸರಲ್ಲಿ ಆರು ಆಂಬ್ಯುಲೆನ್ಸ್‌ ಕೊಡುಗೆ

rocking star yash words by providing 5 appu express ambulances

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಚಿತ್ರ ನಟ ಪ್ರಕಾಶ್‌ ರೈ ಅವರು ಶನಿವಾರ ಅಪ್ಪು ಎಕ್ಸ್‌ಪ್ರೆಸ್‌ ಹೆಸರಿನ ಐದು ಆಂಬ್ಯುಲೆನ್ಸ್‌ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ಪುನೀತ್‌ ನೆನಪಿನಲ್ಲಿ ಜನೋಪಕಾರಿಯಾಗಿ ಏನು ಮಾಡಬಹುದು ಎಂದು ಯೋಚಿಸಿದಾಗ ಪ್ರತಿ ಜಿಲ್ಲೆಗೊಂದು ಆಂಬ್ಯುಲೆನ್ಸ್‌ ಕೊಡುವ ಯೋಜನೆ ಅವರಿಗೆ ಹೊಳೆದಿತ್ತು. ಹಾಗೆ ಮೊದಲ ಆಂಬ್ಯುಲೆನ್ಸ್‌ ಕೊಟ್ಟಿದ್ದರು. ಇದೀಗ ಐದು ಆಂಬ್ಯುಲೆನ್ಸ್‌ ಜತೆಯಾಗಿ ಬಿಡುಗಡೆಯಾಗಿದೆ. ಈಗ ಇದು ಕೇವಲ ಪ್ರಕಾಶ್‌ ರೈ ಕನಸಲ್ಲ. ಅವರೊಂದಿಗೆ ಯಶ್‌ ಸೇರಿದಂತೆ ಇನ್ನೂ ಹಲವರು ಕೈಜೋಡಿಸಿ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

2022ರ ಅಕ್ಟೋಬರ್ 21ರಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಪುನೀತ್‌ ರಾಜ್‌ಕುಮಾರ್‌ (Puneeth Rajkuma) ಅವರ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಯಶ್‌ ತಾನು ಈ ಪುನೀತ್‌ ನೆನಪಿನಲ್ಲಿ ಒಂದು ಒಳ್ಳೆಯ ಕೆಲಸ ಮಾಡಲು ಮುಂದಾಗಿದ್ದಾಗಿ ಹೇಳಿದ್ದರು. ಇದೀಗ ಪ್ರಕಾಶ್‌ ರೈ ಕನಸಿಗೆ ಅವರೂ ಕೈಜೋಡಿಸಿದ್ದಾರೆ. ಈ ಕಾರ್ಯಕ್ಕೆ ಅವರು ತಮಿಳು ನಟ ಸೂರ್ಯ ಹಾಗೂ ತೆಲುಗಿನ ಚಿರಂಜೀವಿ ಕೂಡಾ ಬೆಂಬಲ ನೀಡಿದ್ದಾರೆ.

ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ನಟ ಯಶ್ (Yash) ತಾವೂ ಸಹ ಈ ಕಾರ್ಯದಲ್ಲಿ ಕೈ ಜೋಡಿಸುವುದಾಗಿ ಘೋಷಿಸಿ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದೊಂದು ಆಂಬ್ಯುಲೆನ್ಸ್‌ ಅನ್ನು ತಲುಪಿಸೋಣ ಎಂದಿದ್ದರು. ಆ ಸೇವಾಕಾರ್ಯದ ಭಾಗವಾಗಿ ಇದೀಗ ಕರ್ನಾಟಕದ ಆರು ಜಿಲ್ಲೆಗಳಿಗೆ ಅಪ್ಪು ಆಂಬ್ಯುಲೆನ್ಸ್‌ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ ಹಾಗೂ ಚಿರಂಜೀವಿ ಅವರುಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

ಇದನ್ನೂ ಓದಿ: Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

ಪ್ರಕಾಶ್‌ ರೈ ಟ್ವೀಟ್‌

ಅಪ್ಪು ಸಮಾಜ ಸೇವೆ ಮುಂದುವರಿಯಬೇಕೆಂಬ ಆಶಯ

ಆಂಬ್ಯುಲೆನ್ಸ್‌ ಚಿತ್ರಗಳನ್ನು ಹಂಚಿಕೊಳ್ಳುವುದರ ಜತೆಗೆ ವಿಶೇಷ ವಿಡಿಯೊವೊಂದನ್ನೂ ಸಹ ಅಪ್‌ಲೋಡ್ ಮಾಡಿರುವ ಪ್ರಕಾಶ್ ರೈ ಮಾತನಾಡಿ ʻʻಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರಿಸಬೇಕಾಗಿದೆ. ಆ ಆಶಯದಿಂದ ಶುರುವಾಗಿದ್ದು, ʻಅಪ್ಪು ಎಕ್ಸ್‌ಪ್ರೆಸ್‌ʼ ಆಂಬ್ಯುಲೆನ್ಸ್‌. ಕರ್ನಾಟಕದ ಎಲ್ಲ ಜಿಲ್ಲೆಗೂ ಒಂದೊಂದು ಆಂಬ್ಯುಲೆನ್ಸ್‌ ಕೊಡಬೇಕು ಎಂಬುದು ನನ್ನ ಮತ್ತು ನನ್ನ ಪ್ರಕಾಶ್ ರಾಜ್ ಫೌಂಡೇಶನ್ ಕನಸು. ಅಪ್ಪು ಎಕ್ಸ್​ಪ್ರೆಸ್ ಆಂಬ್ಯುಲೆನ್ಸ್‌ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ 5 ಇದೆ. ಅದರ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬ್ಯುಲೆನ್ಸ್ ವಿತರಿಸುತ್ತಿದ್ದೇವೆ. ಈ ಸಲ ನಮ್ಮ ಜತೆ ಚಿರಂಜೀವಿ, ಸೂರ್ಯ, ಯಶ್‌ ಹಾಗೂ ಅವರ ಸ್ನೇಹಿತ ವೆಂಕಟ್‌ ಇದ್ದರು. ಆ ಭಾರ ನಂದೂ ಕೂಡ ಎಂದು ಯಶ್‌ ಹೇಳಿದರು.” ಎಂದಿದ್ದಾರೆ.

ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು

ಮಾತು ಮುಂದುವರಿಸಿ ʻʻಆದರೆ ಈ ಬಾರಿ ನಾನು ಒಬ್ಬಂಟಿಯಲ್ಲ. ನಮ್ಮೊಂದಿಗೆ ಮೆಗಾಸ್ಟಾರ್ ಚಿರಂಜೀವಿ, ನಟ ಸೂರ್ಯ, ನಮ್ಮೆಲ್ಲರ ಪ್ರೀತಿಯ ಯಶ್ ಹಾಗೂ ವೆಂಕಟ್ ಅವರುಗಳು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಆಂಬ್ಯುಲೆನ್ಸ್ ವಿತರಣೆಯನ್ನು ದೊಡ್ಡ ಸಮಾರಂಭ ಮಾಡಿ ಮಾಡಬಹುದಿತ್ತು. ಆದರೆ ಯಶ್ ಹಾಗೂ ನಾನು ಯೋಚಿಸಿದೆವು ಸಮಾರಂಭ ಮಾಡಲು ಖರ್ಚಾಗುವ ಹಣದಲ್ಲಿ ಇನ್ನೊಂದು ಆಂಬ್ಯುಲೆನ್ಸ್‌ ಖರೀದಿ ಮಾಡಬಹುದೆಂದು ಹಾಗಾಗಿ ಅಬ್ಬರವಿಲ್ಲದೆ ಸರಳವಾಗಿ ವಿತರಣೆ ಮಾಡುತ್ತಿದ್ದೇವೆ” ಎಂದಿದ್ದಾರೆ ಪ್ರಕಾಶ್ ರೈ.

ಇದು ಯಶ್‌ ಹಾಗೂ ನನ್ನ ರಾಜಕಾರಣ

ʻʻಇದು ರಾಜಕಾರಣ ಎಂದೂ ಎಲ್ಲರೂ ಹೇಳುತ್ತಾರೆ. ಆದರೆ ಇದು ನನ್ನ ಮತ್ತು ಯಶ್‌ ಅವರ ರಾಜಕಾರಣ ಅಂದರೆ. ಪ್ರೀತಿಯನ್ನು ಹಂಚುವ, ಪುನೀತ್‌ ರಾಜಕುಮಾರ್‌ ಅವರನ್ನು ಸಂಭ್ರಮಿಸುವ ರಾಜಕಾರಣʼʼ ಎಂದರು ಪ್ರಕಾಶ್‌ ರೈ. ಅಂದಹಾಗೆ ಮಾರ್ಚ್‌ 26ರಂದೇ ಪ್ರಕಾಶ್‌ ರೈ ಹುಟ್ಟುಹಬ್ಬ. ಅವರಿಗೆ ಈಗ 58 ವರ್ಷ.

Exit mobile version