ಬೆಂಗಳೂರು: ಮಾರ್ಚ್ 17ರಂದು ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜನುಮದಿನ. ಈ ವಿಶೇಷ ದಿನವನ್ನು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಚೇರಿನಲ್ಲಿ ಕುಳಿತುಕೊಂಡಿರುವ ಅಪ್ಪು ಪ್ರತಿಮೆ, ಅಪ್ಪು ಸಮಾಧಿ ಬಳಿ ಅರಳಿ ನಿಂತಿದೆ. ಥೇಟ್ ಪುನೀತ್ ರಾಜ್‌ಕುಮಾರ್ ಅವರನ್ನೇ ಹೋಲುವ ಈ ಪ್ರತಿಮೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೀಣ್ಯದ ಶಶಿಕುಮಾರ್ ಎಂಬುವವರು ಈ ಪ್ರತಿಮೆ ಮಾಡಿಸಿದ್ದು, ಅಭಿಮಾನಿಗಳು ಪುಳಕಿತರಾಗಿದ್ದಾರೆ. ಸಿಲಿಕಾನ್‌ನಿಂದ ಪ್ರತಿಮೆ ಮಾಡಲಾಗಿದೆ ಎಂದು ಶಶಿಕುಮಾರ್ ಹೇಳಿಕೊಂಡಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವು ಸದಾ ಇರುವಂಥದ್ದು. ಅವರ ಹೆಸರನ್ನು ಉಳಿಸುವಂತಹ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ನೆರೆದಿದ್ದಾರೆ. ರಾಜ್ ಕುಟುಂಬ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಮಧ್ಯರಾತ್ರಿ ಫ್ಯಾನ್ಸ್ ಜತೆ ಸೇರಿ ರಾಘವೇಂದ್ರ ರಾಜ್‌ಕುಮಾರ್ ಕೇಕ್ ಕತ್ತರಿಸಿದ್ದಾರೆ.
ಇಲ್ಲಿದೆ ವಿಡಿಯೊ
ಇದನ್ನೂ ಓದಿ: Puneeth Rajkumar: ʼಅಪ್ಪು ಎರಡು ವರ್ಷದ ಮಗುʼ: ನಮಿಸಿದ ಪುನೀತ್ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್
ಇದನ್ನೂ ಓದಿ: Puneeth Rajkumar: ʼಅಪ್ಪು ಎರಡು ವರ್ಷದ ಮಗುʼ: ನಮಿಸಿದ ಪುನೀತ್ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್
ಕಂಠೀರವದಲ್ಲಿ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್ 18ರಂದು ಸಂಜೆ 6ರಿಂದ 10 ಗಂಟೆವರೆಗೂ ಸಂಗೀತ ಸಂಜೆ ನಡೆಯಲಿದೆ. ಅಪ್ಪು ಚಲನಚಿತ್ರಗಳ ಗೀತೆಗಳನ್ನು ಹಾಡಲಾಗುತ್ತದೆ. ಮಾರ್ಚ್ 17ರ ಬೆಳಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋದ ಪುನೀತ್ ಪುಣ್ಯ ಭೂಮಿ ಬಳಿ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಿದ್ದಾರೆ. ಕಂಠೀರವಕ್ಕೆ ಆಗಮಿಸುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಿದ್ದಾರೆ.