Puneeth Rajkumar: ಚೇರ್‌ನಲ್ಲಿ ಕುಳಿತ ಅಪ್ಪು ಪ್ರತಿಮೆಗೆ ಪುನೀತ್ ಫ್ಯಾನ್ಸ್‌ ಫುಲ್ ಫಿದಾ! - Vistara News

ಸಿನಿಮಾ

Puneeth Rajkumar: ಚೇರ್‌ನಲ್ಲಿ ಕುಳಿತ ಅಪ್ಪು ಪ್ರತಿಮೆಗೆ ಪುನೀತ್ ಫ್ಯಾನ್ಸ್‌ ಫುಲ್ ಫಿದಾ!

ಅಪ್ಪು (Puneeth Rajkumar) ನಮ್ಮೊಂದಿಗೆ ಇಲ್ಲ ಎಂಬ ನೋವು ಸದಾ ಇರುವಂಥದ್ದು. ಅವರ ಹೆಸರನ್ನು ಉಳಿಸುವಂತಹ ಕಾರ್ಯ ಆಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ನೆರೆದಿದ್ದಾರೆ. ರಾಜ್ ಕುಟುಂಬ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದೆ

VISTARANEWS.COM


on

Appu Pose sitting on a chair, staue viral
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾರ್ಚ್​ 17ರಂದು ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನುಮದಿನ. ಈ ವಿಶೇಷ ದಿನವನ್ನು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಚೇರಿನಲ್ಲಿ ಕುಳಿತುಕೊಂಡಿರುವ ಅಪ್ಪು ಪ್ರತಿಮೆ, ಅಪ್ಪು ಸಮಾಧಿ ಬಳಿ ಅರಳಿ ನಿಂತಿದೆ. ಥೇಟ್ ಪುನೀತ್ ರಾಜ್‌ಕುಮಾರ್‌ ಅವರನ್ನೇ ಹೋಲುವ ಈ ಪ್ರತಿಮೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪೀಣ್ಯದ ಶಶಿಕುಮಾರ್ ಎಂಬುವವರು ಈ ಪ್ರತಿಮೆ ಮಾಡಿಸಿದ್ದು, ಅಭಿಮಾನಿಗಳು ಪುಳಕಿತರಾಗಿದ್ದಾರೆ. ಸಿಲಿಕಾನ್‌ನಿಂದ ಪ್ರತಿಮೆ ಮಾಡಲಾಗಿದೆ ಎಂದು ಶಶಿಕುಮಾರ್ ಹೇಳಿಕೊಂಡಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವು ಸದಾ ಇರುವಂಥದ್ದು. ಅವರ ಹೆಸರನ್ನು ಉಳಿಸುವಂತಹ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ನೆರೆದಿದ್ದಾರೆ. ರಾಜ್ ಕುಟುಂಬ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಮಧ್ಯರಾತ್ರಿ ಫ್ಯಾನ್ಸ್ ಜತೆ ಸೇರಿ ರಾಘವೇಂದ್ರ ರಾಜ್​ಕುಮಾರ್ ಕೇಕ್ ಕತ್ತರಿಸಿದ್ದಾರೆ.

ಇಲ್ಲಿದೆ ವಿಡಿಯೊ

ಇದನ್ನೂ ಓದಿ: Puneeth Rajkumar: ʼಅಪ್ಪು ಎರಡು ವರ್ಷದ ಮಗುʼ: ನಮಿಸಿದ ಪುನೀತ್‌ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್‌

Puneeth Rajkumar

ಇದನ್ನೂ ಓದಿ: Puneeth Rajkumar: ʼಅಪ್ಪು ಎರಡು ವರ್ಷದ ಮಗುʼ: ನಮಿಸಿದ ಪುನೀತ್‌ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್‌

ಕಂಠೀರವದಲ್ಲಿ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್‌ 18ರಂದು ಸಂಜೆ 6ರಿಂದ 10 ಗಂಟೆವರೆಗೂ ಸಂಗೀತ ಸಂಜೆ ನಡೆಯಲಿದೆ. ಅಪ್ಪು ಚಲನಚಿತ್ರಗಳ ಗೀತೆಗಳನ್ನು ಹಾಡಲಾಗುತ್ತದೆ. ಮಾರ್ಚ್‌ 17ರ ಬೆಳಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋದ ಪುನೀತ್ ಪುಣ್ಯ ಭೂಮಿ ಬಳಿ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಿದ್ದಾರೆ. ಕಂಠೀರವಕ್ಕೆ ಆಗಮಿಸುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

Bengaluru Film Festival: ವಿಧಾನಸೌಧದ ಎದುರು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

VISTARANEWS.COM


on

film festival
Koo

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival)ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕೃತ ಚಾಲನೆ ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಡಾ. ಶಿವರಾಜ್ ಕುಮಾರ್, ಚಿತ್ರೋತ್ಸವದ ರಾಯಭಾರಿ ಡಾಲಿ ಧನಂಜಯ, ಬಾಂಗ್ಲಾ ನಟಿ ಅಜ್ಮೇರಿ ಬಂಧಾನ್, ನಿರ್ದೇಶಕ ಡಾ. ಜಬ್ಬರ್ ಪಟೇಲ್ ಮತ್ತಿತರರು ಭಾಗಿಯಾಗಿದ್ದರು. ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್, ಗಾಯಕಿ ಚೈತ್ರಾ ಸೇರಿದಂತೆ ಹೆಸರಾಂತ ಕಲಾವಿದರು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಫೆಬ್ರವರಿ 29ರಿಂದ ಮಾರ್ಚ್ 7ರ ವರೆಗೆ ಸುಮಾರು ಎಂಟು ದಿನಗಳ ಕಾಲ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ಇದರಲ್ಲಿ 50 ರಾಷ್ಟ್ರಗಳ ಸುಮಾರು 180 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಒರಾಯನ್ ಮಾಲ್‌ನ ಪಿವಿಆರ್‌, ಸುಚಿತ್ರಾ ಫಿಲ್ಮ್ ಸೊಸೈಟಿ ಹಾಗೂ ಕಲಾವಿದರ ಸಂಘದಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಮಾ. 7ರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ರಾಜ್ಯಪಾಲರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾ ಕಣಕ್ಕಿಳಿಯುತ್ತಿವೆ.

ಇದನ್ನೂ ಓದಿ: BIFFES 2024: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ‘ಲೈನ್ ಮ್ಯಾನ್ʼ!

ನಟ ಡಾಲಿ ಧನಂಜಯ್‌ ರಾಯಭಾರಿ

ಇತ್ತೀಚೆಗೆ 2023-24ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ಡಾಲಿ ಧನಂಜಯ್‌ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಚಲನಚಿತ್ರೋತ್ಸವದ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ʼʼಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆʼʼ ಎಂದು ಹೇಳಿದ್ದರು.

Continue Reading

ಸಿನಿಮಾ

Actor K Shivaram: ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದ ಖ್ಯಾತಿಯ, ʻಬಾನಲ್ಲೆ ಮಧುಚಂದ್ರಕೆʼ ಹೀರೊ ಕೆ. ಶಿವರಾಮ್ ವಿಧಿವಶ

Actor K Shivaram : ಬಾ ನಲ್ಲೆ ಮಧುಚಂದ್ರಕೆ ಸೇರಿದಂತೆ ಎಂಟು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದ ನಟ, ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು‌ ಉದ್ಯೋಗ ಪಡೆದ ಮೊದಲ ಸಾಧಕ ಕೆ. ಶಿವರಾಮ್‌ ಇನ್ನಿಲ್ಲ.

VISTARANEWS.COM


on

Actor K Shivaram no more
Koo

ಬೆಂಗಳೂರು: ʻಬಾನಲ್ಲೆ ಮಧುಚಂದ್ರಕೆʼ (Baa nalle Madhuchandrake) ಸಿನಿಮಾ ಮೂಲಕ ಕನ್ನಡ ಚಿತ್ರಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕೆ. ಶಿವರಾಮ್ (K Shivaram) ಇನ್ನಿಲ್ಲ. ರಾಜ್ಯ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದು ಬಳಿಕ ಬಣ್ಣದ ಲೋಕಕ್ಕೆ ಆಕರ್ಷಿತರಾಗಿ ಅಲ್ಲೂ ಜನಪ್ರಿಯತೆಯ ಉತ್ತುಂಗಕ್ಕೇರಿದ ಅವರು ಗುರುವಾರ ಸಂಜೆ ಕೊನೆಯುಸಿರೆಳೆದರು. ಅವರು ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಅಧಿಕಾರಿ ಎಂಬುದು ವಿಶೇಷ.

ಸುಮಾರು 20 ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಬೆಳಗ್ಗಿನಿಂದಲೇ ಹಲವಾರು ಸುದ್ದಿಗಳು ಹರಿದಾಡಿದ್ದವು. ಸ್ವತಃ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಅವರು ಸಂತಾಪ ಸೂಚಿಸಿದ್ದರು. ಆದರೆ, ಕುಟುಂಬ ಇನ್ನೂ ಶಿವರಾಮ್‌ ಅವರು ಜೀವಂತವಾಗಿಯೇ ಇದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಟ್ವೀಟ್‌ ಡಿಲೀಟ್‌ ಮಾಡಿದ್ದರು. ಹಲವು ಗಣ್ಯರು ಸಂತಾಪ ಸೂಚನೆ ಮಾಡಿದ್ದರು. ಅಂತಿಮವಾಗಿ ಸಂಜೆಯ ಹೊತ್ತಿಗೆ ಕೆ. ಶಿವರಾಮ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಪ್ರಕಟಿಸಲಾಗಿದೆ. ‌ ಅವರು ಸಂಜೆ 4.15ರ ಹೊತ್ತಿಗೆ ಕೊನೆಯುಸಿರೆಳೆದರು ಎಂದು ಅವರ ಅಳಿಯ ಪ್ರದೀಪ್‌ ಪ್ರಕಟಿಸಿದರು.

ಮರೆಯಲಾಗದ ಸಿನಿಮಾ ನೀಡಿದ ಶಿವರಾಮ್‌

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಕಾದಂಬರಿ ಆಧರಿತ, ಅವರೇ ನಿರ್ದೇಶಿಸಿದ “ಬಾ ನಲ್ಲೆ ಮಧುಚಂದ್ರಕೆ” ಎಂಬ ಕನ್ನಡ ಸಿನಿಮಾ ಲೋಕ ಎಂದೂ ಮರೆಯದ ಚಿತ್ರವನ್ನು ಶಿವರಾಮ್‌ ನೀಡಿದ್ದಾರೆ.

Actor K Shivaram no more1

ವಸಂತಕಾವ್ಯ, ಪ್ರತಿಭಟನೆ, ಸಾಂಗ್ಲಿಯಾನ 3 ಖಳ ನಾಯಕ, ಯಾರಿಗೆ ಬೇಡ ದುಡ್ಡು, ಪ್ರೀತಿಗಾಗಿ ಆಟ, ನಾಗ, ಮೂಡಲ ಸೀಮೆಯಲಿ, ಸುಭಾಷ್, ಟೈಗರ್ ಸೇರಿದಂತೆ 10 ಚಿತ್ರಗಳಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ.

ಇದನ್ನೂ ಓದಿ : Death News: ಶಾಸಕ ರಾಜಾ ವೆಂಕಟಪ್ಪ ನಾಯಕ ಸಾವಿನ ಸುದ್ದಿ ಕೇಳಿ ಅಭಿಮಾನಿಗೆ ಹಾರ್ಟ್‌ ಅಟ್ಯಾಕ್‌

ಕನ್ನಡದಲ್ಲಿ ಐಎಎಸ್‌ ಪಾಸ್‌ ಮಾಡಿದ ಮೊದಲ ಕನ್ನಡಿಗ

ಕೆ ಶಿವರಾಮ್ 1953ರ ಏಪ್ರಿಲ್ 6ರಂದು ರಾಮನಹಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು.

ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು.

1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುದೀರ್ಘ ಐಎಎಸ್ ವೃತ್ತಿಜೀವನದಲ್ಲಿ ಬಿಜಾಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: K. Shivram: ಮಾವ ಕೆ. ಶಿವರಾಮ್‌ರನ್ನು ನೋಡಲು ಆಸ್ಪತ್ರೆಗೆ ನಟ ಪ್ರದೀಪ್ ಭೇಟಿ

ರಾಜಕೀಯ ಜೀವನದಲ್ಲೂ ಮಿಂಚಿದ ಶಿವರಾಮ್

2013 ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.‌

ಅಂತಿಮ ದರ್ಶನಕ್ಕೆ ಅವಕಾಶ

ಕೆ. ಶಿವರಾಮ್‌ ಅವರ ನಿಧನಕ್ಕೆ ನಾಡಿನ ಗಣ್ಯರು, ಚಿತ್ರ ನಟರು-ನಟಿಯರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದ್ದು, ಅದಕ್ಕೆ ಮೊದಲು ಮೋದಿ ರಸ್ತೆಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Continue Reading

ಸ್ಯಾಂಡಲ್ ವುಡ್

Rashmika Mandanna: ಧನುಷ್‌ -ರಶ್ಮಿಕಾ ಅಭಿನಯದ ಸಿನಿಮಾವೊಂದರ ದೃಶ್ಯ ಲೀಕ್‌!

Rashmika Mandanna: ಧನುಷ್‌ ಹಾಗೂ ರಶ್ಮಿಕಾ ನಟಿಸುತ್ತಿರುವ ದೃಶ್ಯವೊಂದರ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ವಿಡಿಯೊದಲ್ಲಿ ರಶ್ಮಿಕಾ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಾರೆ.

VISTARANEWS.COM


on

Leaked video Dhanush and Rashmika Mandanna D 51
Koo

ಬೆಂಗಳೂರು: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್‌ನಲ್ಲಿ ಅತ್ಯಂತ ಬೇಡಿಕೆ ಇರುವ ನಟಿ. ಧನುಷ್‌​ ನಟನೆಯ 51ನೇ ಸಿನಿಮಾವನ್ನು ‘ಡಿ 51’ (D 51 Movie) ಎಂದು ಕರೆಯಲಾಗುತ್ತಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ. ನಿರ್ದೇಶಕ ಶೇಖರ್ ಕಮ್ಮುಲ ಅವರ ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಧುನುಷ್‌ ಹಾಗೂ ರಶ್ಮಿಕಾ ನಟಿಸುತ್ತಿರುವ ದೃಶ್ಯವೊಂದರ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ವಿಡಿಯೊದಲ್ಲಿ ರಶ್ಮಿಕಾ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಾರೆ.

ಇದೇ ಮೊದಲ ಬಾರಿಗೆ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ವರದಿಯ ಪ್ರಕಾರ ಇದೊಂದು ರಾಜಕೀಯ ವಸ್ತುವುಳ್ಳ ಕತೆಯಾಗಿದ್ದು, ರಾಜಕೀಯ ಕುತಂತ್ರಗಳನ್ನು ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ಎದುರಿಸುತ್ತಾನೆ, ರಾಜಕೀಯದ ದೌರ್ಜನ್ಯಕ್ಕೆ ಹೇಗೆ ತುತ್ತಾಗುತ್ತಾನೆ ಅದರಿಂದ ಹೊರಗೆ ಹೇಗೆ ಬರುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.

ಶ್ರೀವೆಂಕಟೇಶ್ವರ ಸಿನಿಮಾಸ್​ ಮತ್ತು ಒಮಿಗೋಸ್​ ಕ್ರಿಯೇಷನ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್‌​​ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಾಂತ್ರಿಕ ವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬರುವುದು ಬಾಕಿ ಇದೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

ಲೀಕ್ ವಿಡಿಯೊ

ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಪೋಸ್ಟರ್‌ ಲುಕ್‌ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ.

Continue Reading

ಸ್ಯಾಂಡಲ್ ವುಡ್

Actor Yash: ಕರುವಿಗೆ ಬಾಟಲ್ ಹಾಲು ಕುಡಿಸಿದ ರಾಕಿಂಗ್ ಫ್ಯಾಮಿಲಿ!

Actor Yash: ಒಂದು ಫೋಟೋದಲ್ಲಿ ರಾಧಿಕಾ ಪಂಡಿತ್ ಅವರ ತಂದೆ ತಾಯಿ ಮೊಮ್ಮಗಳು ಐರಾ ಯಶ್ ಜತೆಗಿರುವುದನ್ನು ಕಾಣಬಹುದು. ಅವರು ಮೊಮ್ಮಕ್ಕಳ ಜತೆ ಕರುವಿನ ಜತೆ ಸಮಯ ಕಳೆದಿದ್ದಾರೆ

VISTARANEWS.COM


on

Actor Yash spending time with family
Koo
Actor Yash

ರಾಧಿಕಾ ಪಂಡಿತ್‌ (Actor Yash) ಆಗಾಗ ತಮ್ಮ ಫ್ಯಾಮಿಲಿ ಜತೆ ಸಮಯ ಕಳೆದಿರುವ ಫೋಟೊವನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

Actor Yash

ಒಂದು ಫೋಟೋದಲ್ಲಿ ರಾಧಿಕಾ ಪಂಡಿತ್ ಅವರ ತಂದೆ, ತಾಯಿ, ಮೊಮ್ಮಗಳು ಐರಾ, ಯಶ್ ಜತೆಗಿರುವುದನ್ನು ಕಾಣಬಹುದು. ಅವರು ಮೊಮ್ಮಕ್ಕಳ ಜತೆ ಕರುವಿನ ಜತೆ ಸಮಯ ಕಳೆದಿದ್ದಾರೆ

Actor Yash
ಇನ್ನೊಂದು ಫೋಟೋದಲ್ಲಿ ಐರಾ ಯಶ್ ಮುದ್ದಾಗಿ ಕರುವಿಗೆ ಹಾಲು ಕುಡಿಸುತ್ತಿರುವುದು ಕಂಡುಬಂದಿದೆ. ಯಶ್ ಮಕ್ಕಳು ಕರುವನ್ನು ಮುದ್ದಿಸಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Actor Yash: ಅಭಿಮಾನಿಯ ಕಾಲಿನ ಮೇಲೆ ಯಶ್ ಬೆಂಗಾವಲು ಪಡೆ ವಾಹನದ ಚಕ್ರ!

Actor Yash

ಐರಾ ಪಿಂಕ್ ಬಣ್ಣದ ಫ್ರಾಕ್ ಧರಿಸಿ ಕ್ಯೂಟ್ ಆಗಿ ಕಾಣಿಸಿದರೆ ಯಥರ್ವ್ ಬ್ಲೂ ಶಾರ್ಟ್ಸ್ ಶರ್ಟ್ ಧರಿಸಿ ಕೂಲ್ ಆಗಿದ್ದರು.

Actor Yash

ಕೆಜಿಎಫ್‌ʼ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ʼಕೆಜಿಎಫ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್‌ ಅಭಿನಯದ ʼಟಾಕ್ಸಿಕ್‌ʼ (Toxic) ಸಿನಿಮಾ ಘೋಷಣೆಯಾಗಿದೆ. 

Continue Reading
Advertisement
Modi GDP
ಪ್ರಮುಖ ಸುದ್ದಿ12 mins ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ12 mins ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್14 mins ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ25 mins ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ42 mins ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ1 hour ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Rowdy sheeter kidnaps cricket bookie
ಕ್ರಿಕೆಟ್1 hour ago

WPL 2024 : ಮಹಿಳಾ ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಟ್ಟಿದ ಬುಕ್ಕಿಯೇ ಕಿಡ್ನ್ಯಾಪ್‌!

GDP Growth
ಪ್ರಮುಖ ಸುದ್ದಿ1 hour ago

GDP Growth : ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ; ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ

film festival
ಸಿನಿಮಾ1 hour ago

Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

BJP protest demanding action against those who shouted pro Pak slogan
ಉತ್ತರ ಕನ್ನಡ2 hours ago

Uttara Kannada News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ15 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌