Site icon Vistara News

Puneeth Rajkumar | ಅಪ್ಪು ಟ್ವಿಟರ್‌ ಖಾತೆಯಿಂದ ಬ್ಲೂ ಟಿಕ್ ಮಾಯ: ಸಿಟ್ಟಿಗೆದ್ದ ಫ್ಯಾನ್ಸ್‌

Puneeth Rajkumar

ಬೆಂಗಳೂರು : 2021 ರ ಅಕ್ಟೋಬರ್‌ 29ರಂದು ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಿಧನರಾದ ಸುದ್ದಿ ಕೇಳಿ ಕರ್ನಾಟಕದ ಜನತೆಗೆ ಆದ ದುಃಖವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರ ಮಧ್ಯೆ ಅವರ ಟ್ವಿಟರ್‌ ಖಾತೆಗೆ ಇದ್ದ ಬ್ಲೂ ಟಿಕ್‌ ಅನ್ನು ಕಂಪನಿ ತೆಗೆದು ಹಾಕಿದೆ.

ಇದಕ್ಕೆ ಟ್ವಿಟರ್ ವಿರುದ್ಧ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಗರಂ ಆಗಿದ್ದಾರೆ. ಸೆಲೆಬ್ರೆಟಿಗಳ ಟ್ವಿಟರ್ ಸೇರಿದಂತೆ ಬಹುತೇಕ ಎಲ್ಲ ಸೋಶಿಯಲ್ ಮೀಡಿಯಾ ಖಾತೆಗಳು ನೀಲಿ ಟಿಕ್ ಹೊಂದಿರುತ್ತವೆ. ಸ್ಟಾರ್‌ಗಳ ಖಾತೆಗಳನ್ನು ಕಿಡಿಗೇಡಿಗಳು ನಕಲು ಮಾಡಬಾರದು ಎಂಬ ಕಾರಣದಿಂದ ಖಾತೆಗೆ ನೀಲಿ ಟಿಕ್ ಅನ್ನು ನೀಡಿರುತ್ತಾರೆ.

ಹೀಗಿರುವಾಗ ಟ್ವಿಟರ್‌ನಲ್ಲಿರುವ ಪುನೀತ್ ರಾಜ್‌ಕುಮಾರ್‌ ಅವರ ಖಾತೆಯ ನೀಲಿ ಟಿಕ್ ಟ್ವಿಟರ್ ಸಂಸ್ಥೆ ತೆಗೆದು ಹಾಕಿದ್ದು, ಈ ನಡೆ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಲಾಲ್​ಬಾಗ್​ ಪುಷ್ಪ ಪ್ರದರ್ಶನ | ಪುನೀತ್​ ರಾಜ​ಕುಮಾರ್ ಸ್ಮರಣೆಗೆ ಸರ್ಕಾರದ ಸಿದ್ಧತೆ

ಪುನೀತ್ ರಾಜ್‌ಕುಮಾರ್ ಮೃತಪಟ್ಟು ಸುಮಾರು 9 ತಿಂಗಳು ಆಗುತ್ತಾ ಬಂದಿದೆ. ಹೀಗಾಗಿ ಅಪ್ಪು ಅಗಲಿದ ಬಳಿಕ ಅವರ ಟ್ವಿಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಜತೆಗೆ ಕಳೆದ 8 ತಿಂಗಳಿಂದ ಅವರ ಖಾತೆ ಆಕ್ಟೀವ್ ಆಗಿಲ್ಲ ಎಂಬ ಕಾರಣಕ್ಕೆ ನೀಲಿ ಟಿಕ್ ತೆಗೆದಿದ್ದಾರೆ ಎನ್ನಲಾಗಿದೆ. ಆದರೆ ಈಗಾಗಲೇ ಮೃತಪಟ್ಟಿರುವ ಬಾಲಿವುಡ್ ನಟರಾದ ಸಿದ್ಧಾರ್ಥ್ ಶುಕ್ಲಾ ಹಾಗೂ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಟ್ವಿಟರ್ ಖಾತೆಯ ನೀಲಿ ಟಿಕ್ ಇನ್ನೂ ಹಾಗೆ ಇದೆ. ಆದರೆ ಅಪ್ಪು ಖಾತೆಯ ನೀಲಿ ಟಿಕ್ ತೆಗೆದಿದ್ದು ಯಾಕೆ ಎಂದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಟ್ವಿಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪುನೀತ್‌ ರಾಜಕುಮಾರ್‌ ಅವರು ಕೂಡ ಟ್ವಿಟರ್‌ ಬಳಕೆ ಮಾಡಿದ್ದು ಇತ್ತಿಚೆಗೆ. ಅಭಿಮಾನಿಗಳ ಜತೆ ಸಂಪರ್ಕ ಇಟ್ಟು ಕೊಳ್ಳಲು ಬಳಕೆ ಮಾಡುತ್ತಿದ್ದರು. ಭಜರಂಗಿ-2 ಗೆಲುವಿಗಾಗಿ ವಿಶ್‌ ಮಾಡಿ ಟ್ವೀಟ್‌ ಮಾಡಿದ್ದುದೇ ಕೊನೆಯದಾಗಿತ್ತು.

ಟ್ವಿಟರ್‌ ನಿಯಮ

ಟ್ವಿಟರ್‌ ಖಾತೆ ಬಹಳ ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ, ಅದು ತನ್ನ ಬ್ಲೂ ಟಿಕ್‌ ಅನ್ನು ಕಳೆದುಕೊಳ್ಳುತ್ತದೆ. ಟ್ವೀಟ್‌ ಮಾಡದೇ ಇದ್ದರೂ ಪ್ರೊಫೈಲ್‌ ಫೋಟೊ ಅಥವಾ ಬ್ಯಾನರ್‌ಗಳನ್ನಾದರೂ ಬದಲಾಯಿಸುತ್ತಿರಬೇಕು. ಇಲ್ಲದೇ ಇದ್ದಲ್ಲಿ ನಿಷ್ಕ್ರೀಯ ಎಂದು ಟ್ವಿಟರ್‌ ನಿರ್ಧರಿಸಿ ಖಾತೆಯನ್ನು ತೆಗೆದು ಹಾಕುತ್ತದೆ.

ಇದನ್ನೂ ಓದಿ | James Movie | ಪವರ್‌ ಸ್ಟಾರ್‌ ಪುನೀತ್‌ ಧ್ವನಿಯಲ್ಲಿ ಜೇಮ್ಸ್: ಜುಲೈ 17ಕ್ಕೆ ಸುವರ್ಣ ವರ್ಲ್ಡ್‌ ಪ್ರೀಮಿಯರ್‌

Exit mobile version