Site icon Vistara News

Sameer Khakhar: ʻಪುಷ್ಪಕ ವಿಮಾನʼ ಸಿನಿಮಾ ಖ್ಯಾತಿಯ ನಟ ಸಮೀರ್ ಖಖ್ಖರ್ ಇನ್ನಿಲ್ಲ

Pushpak Vimana Fame Sameer Khakhar Passes Away

ಬೆಂಗಳೂರು: ಟೆಲಿವಿಷನ್‌ ಐಕಾನಿಕ್ ಶೋ ʻನುಕ್ಕಡ್‌ʼ (Nukkad) ಹಾಗೂ ಕಮಲ್‌ ಹಾಸನ್‌ ಅಭಿನಯದ ಪುಷ್ಪಕ ವಿಮಾನ ಖ್ಯಾತಿಯ ನಟ ಸಮೀರ್ ಖಖ್ಖರ್ (Sameer Khakhar) ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ನಟ ಉಸಿರಾಟ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಬೊರಿವಲಿಯ ಎಂಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಿಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸಮೀರ್ ಅವರ ಅಂತ್ಯಕ್ರಿಯೆ ಮಾರ್ಚ್‌ 15ರ ಬೆಳಗ್ಗೆ 10.30ಕ್ಕೆ ಬೊರಿವಲಿಯ ಬಾಭಾಯಿ ನಾಕಾ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬವು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದೆ.

ಸಮೀರ್ ಅವರ ಸಹೋದರ ಗಣೇಶ್ ಮಾಧ್ಯಮದವರೊಂದಿಗೆ ಮಾತನಾಡಿ, ʻʻಸಮೀರ್ ಮಾರ್ಚ್‌ 14ರಂದು ಬೆಳಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಾವು ವೈದ್ಯರನ್ನು ಮನೆಗೆ ಕರೆಸಿಕೊಂಡು ಕೇಳಿದಾಗ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಐಸಿಯುನಲ್ಲಿ ಇದ್ದ ಅವರು ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಮಾರ್ಚ್‌ 15ರಂದು ಮುಂಜಾನೆ 4.30ಕ್ಕೆ ಕೊನೆಯುಸಿರೆಳೆದರುʼʼಎಂದು ಹೇಳಿದರು.

ಇದನ್ನೂ ಓದಿ: Death in Flight : ಮಾರ್ಗ ಮಧ್ಯೆ ಪ್ರಯಾಣಿಕ ನಿಧನ; ದಿಲ್ಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕುಂದನ್ ಶಾ ಮತ್ತು ಸಯೀದ್ ಅಖ್ತರ್ ಮಿರ್ಜಾ ನಿರ್ದೇಶನದ ʻನುಕ್ಕಡ್‌ʼ ಟಿವಿ ಸಿರೀಸ್‌ನಲ್ಲಿ ಖ್ಯಾತಿ ಗಳಿಸಿದರು. ಸರ್ಕಸ್, ನಯಾ ನುಕ್ಕಡ್, ಶ್ರೀಮಾನ್ ಶ್ರೀಮತಿ ಮತ್ತು ಅದಾಲತ್ ಮುಂತಾದ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸುಧೀರ್ ಮಿಶ್ರಾ ಅವರ ನೆಟ್‌ಫ್ಲಿಕ್ಸ್ ಸಿನಿಮಾವಾದ ʻಸೀರಿಯಸ್ ಮೆನ್ʼ ಹಾಗೂ ZEE5 ಸಿರೀಸ್‌ನ ʻಸನ್‌ಫ್ಲವರ್ʼ, ಪ್ರೈಮ್ ವಿಡಿಯೊದ ʻಫರ್ಜಿʼಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.

ಗೋವಿಂದ-ಕರಿಷ್ಮಾ ಕಪೂರ್ ಅವರ 1994ರ ಹಿಟ್ ಚಿತ್ರ ʻರಾಜಾ ಬಾಬುʼನಲ್ಲಿ ನಟಿಸಿದ್ದಾರೆ. ಶಾಹೆನ್‌ಶಾ (1988), ದಿಲ್‌ವಾಲೆ (1994), ಪ್ರೇಮ್ ಶಕ್ತಿ (1994), ಹಸೀ ತೋ ಫಾಸಿ (2014), ಜೈ ಹೋ (2014) ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version