Sameer Khakhar: ʻಪುಷ್ಪಕ ವಿಮಾನʼ ಸಿನಿಮಾ ಖ್ಯಾತಿಯ ನಟ ಸಮೀರ್ ಖಖ್ಖರ್ ಇನ್ನಿಲ್ಲ Vistara News
Connect with us

ಬಾಲಿವುಡ್

Sameer Khakhar: ʻಪುಷ್ಪಕ ವಿಮಾನʼ ಸಿನಿಮಾ ಖ್ಯಾತಿಯ ನಟ ಸಮೀರ್ ಖಖ್ಖರ್ ಇನ್ನಿಲ್ಲ

ಸಮೀರ್ ಖಖ್ಖರ್ (Sameer Khakhar) ಅವರ ಅಂತ್ಯಕ್ರಿಯೆ ಮಾರ್ಚ್‌ 15ರ ಬೆಳಗ್ಗೆ 10.30ಕ್ಕೆ ಬೊರಿವಲಿಯ ಬಾಭಾಯಿ ನಾಕಾ ಸ್ಮಶಾನದಲ್ಲಿ ನಡೆಯಲಿ ಎಂದು ಕುಟುಂಬ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದೆ.

VISTARANEWS.COM


on

Pushpak Vimana Fame Sameer Khakhar Passes Away
Koo

ಬೆಂಗಳೂರು: ಟೆಲಿವಿಷನ್‌ ಐಕಾನಿಕ್ ಶೋ ʻನುಕ್ಕಡ್‌ʼ (Nukkad) ಹಾಗೂ ಕಮಲ್‌ ಹಾಸನ್‌ ಅಭಿನಯದ ಪುಷ್ಪಕ ವಿಮಾನ ಖ್ಯಾತಿಯ ನಟ ಸಮೀರ್ ಖಖ್ಖರ್ (Sameer Khakhar) ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ನಟ ಉಸಿರಾಟ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಬೊರಿವಲಿಯ ಎಂಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಿಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸಮೀರ್ ಅವರ ಅಂತ್ಯಕ್ರಿಯೆ ಮಾರ್ಚ್‌ 15ರ ಬೆಳಗ್ಗೆ 10.30ಕ್ಕೆ ಬೊರಿವಲಿಯ ಬಾಭಾಯಿ ನಾಕಾ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬವು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದೆ.

ಸಮೀರ್ ಅವರ ಸಹೋದರ ಗಣೇಶ್ ಮಾಧ್ಯಮದವರೊಂದಿಗೆ ಮಾತನಾಡಿ, ʻʻಸಮೀರ್ ಮಾರ್ಚ್‌ 14ರಂದು ಬೆಳಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಾವು ವೈದ್ಯರನ್ನು ಮನೆಗೆ ಕರೆಸಿಕೊಂಡು ಕೇಳಿದಾಗ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಐಸಿಯುನಲ್ಲಿ ಇದ್ದ ಅವರು ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಮಾರ್ಚ್‌ 15ರಂದು ಮುಂಜಾನೆ 4.30ಕ್ಕೆ ಕೊನೆಯುಸಿರೆಳೆದರುʼʼಎಂದು ಹೇಳಿದರು.

ಇದನ್ನೂ ಓದಿ: Death in Flight : ಮಾರ್ಗ ಮಧ್ಯೆ ಪ್ರಯಾಣಿಕ ನಿಧನ; ದಿಲ್ಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

Pushpak Vimana Fame Sameer Khakhar Passes Away

ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕುಂದನ್ ಶಾ ಮತ್ತು ಸಯೀದ್ ಅಖ್ತರ್ ಮಿರ್ಜಾ ನಿರ್ದೇಶನದ ʻನುಕ್ಕಡ್‌ʼ ಟಿವಿ ಸಿರೀಸ್‌ನಲ್ಲಿ ಖ್ಯಾತಿ ಗಳಿಸಿದರು. ಸರ್ಕಸ್, ನಯಾ ನುಕ್ಕಡ್, ಶ್ರೀಮಾನ್ ಶ್ರೀಮತಿ ಮತ್ತು ಅದಾಲತ್ ಮುಂತಾದ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸುಧೀರ್ ಮಿಶ್ರಾ ಅವರ ನೆಟ್‌ಫ್ಲಿಕ್ಸ್ ಸಿನಿಮಾವಾದ ʻಸೀರಿಯಸ್ ಮೆನ್ʼ ಹಾಗೂ ZEE5 ಸಿರೀಸ್‌ನ ʻಸನ್‌ಫ್ಲವರ್ʼ, ಪ್ರೈಮ್ ವಿಡಿಯೊದ ʻಫರ್ಜಿʼಯಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.

ಗೋವಿಂದ-ಕರಿಷ್ಮಾ ಕಪೂರ್ ಅವರ 1994ರ ಹಿಟ್ ಚಿತ್ರ ʻರಾಜಾ ಬಾಬುʼನಲ್ಲಿ ನಟಿಸಿದ್ದಾರೆ. ಶಾಹೆನ್‌ಶಾ (1988), ದಿಲ್‌ವಾಲೆ (1994), ಪ್ರೇಮ್ ಶಕ್ತಿ (1994), ಹಸೀ ತೋ ಫಾಸಿ (2014), ಜೈ ಹೋ (2014) ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Raghav-Parineeti: ಆಪ್‌ ನಾಯಕ ರಾಘವ್‌ ಚಡ್ಡಾ ಹಾಗೂ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳಿಗೆ ವಾರದಲ್ಲಿಯೇ ನಡೆದ ಮೂರನೇ ಭೇಟಿಯು ಪುಷ್ಟಿ ನೀಡಿದೆ.

VISTARANEWS.COM


on

Edited by

Amid wedding rumours AAP MP Raghav Chadha picks up Parineeti Chopra from Delhi airport
Koo

ನವದೆಹಲಿ: ಪಂಜಾಬ್‌ ಆಪ್‌ ನಾಯಕ, ರಾಜ್ಯಸಭೆ ಸದಸ್ಯ ರಾಘವ್‌ ಚಡ್ಡಾ ಹಾಗೂ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ (Raghav-Parineeti) ಅವರು ಕೆಲ ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಇಬ್ಬರೂ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಕಾರಣ ಇಬ್ಬರೂ ವದಂತಿಗಳಿಗೆ ಆಹಾರವಾಗಿದ್ದರು. ಈ ಕುರಿತು ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ರಾಘವ್‌ ಚಡ್ಡಾ ಹಾರಿಕೆಯ ಉತ್ತರ ನೀಡಿದ್ದರು. ಈಗ ಜೋಡಿಯು ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದು ವಾರದಲ್ಲಿ ಮೂರನೇ ಭೇಟಿಯಾಗಿದೆ. ಹಾಗಾಗಿ, ಇಬ್ಬರೂ ಜೋಡಿ ಹಕ್ಕಿಗಳಾಗಿದ್ದಾರೆ ಎಂಬ ಮಾತಿಗೆ ಹಚ್ಚಿನ ಪುಷ್ಟಿ ಬಂದಂತಾಗಿದೆ.

ಮಾರ್ಚ್‌ 29ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪರಿಣೀತಿ ಚೋಪ್ರಾ ಅವರನ್ನು ಪಿಕ್‌ ಮಾಡಲು ಆಮ್‌ ಆದ್ಮಿ ಪಕ್ಷದ ನಾಯಕ ರಾಘವ್‌ ಚಡ್ಡಾ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ರಾಘವ್‌ ಚಡ್ಡಾ ಕಾರಿನಲ್ಲಿಯೇ ಪರಿಣೀತಿ ಚೋಪ್ರಾ ಅವರು ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡ ಫೋಟೊಗಳು ಪಾಪರಾಜಿಗಳಿಗೆ ಸಿಕ್ಕಿದ್ದು, ಫೋಟೊಗಳು ವೈರಲ್‌ ಆಗಿವೆ. ಅಲ್ಲದೆ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದಾಗಿ ಜಾಲತಾಣಗಳಲ್ಲಿ ಮತ್ತೆ ಹೇಳಲು ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಮಾಧ್ಯಮದವರು ಇಬ್ಬರನ್ನೂ ಮಾತನಾಡಿಸಲು ಯತ್ನಿಸಿದರಾದರೂ, ಜೋಡಿಯು ಪ್ರತಿಕ್ರಿಯಿಸದೆ ತೆರಳಿದೆ.

ಏರ್‌ಪೋರ್ಟ್‌ನಲ್ಲಿ ಜೋಡಿ ಹಕ್ಕಿ

ಒಟ್ಟಿಗೆ ಊಟ, ಒಂದೇ ಕಾರಿನಲ್ಲಿ ತಿರುಗಾಟ

ಕಳೆದ ಒಂದು ವಾರದಲ್ಲಿ ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಮೂರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಚ್‌ 22ರಂದು ರಾಘವ್‌ ಹಾಗೂ ಪರಿಣೀತಿ ಅವರು ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಹೋಟೆಲ್‌ ಪ್ರವೇಶಿಸುವ ಹಾಗೂ ಹೋಟೆಲ್‌ನಿಂದ ಹೊರಬರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ. ಇದಾದ ಮರುದಿನವೇ (ಮಾರ್ಚ್‌ 23) ಇಬ್ಬರೂ ಮತ್ತೆ ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗೆ ಪದೇಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್‌ ಕುರಿತು ಮಾತುಗಳು ಕೇಳಿಬರುತ್ತಿವೆ.

ಹಾರಿಕೆಯ ಉತ್ತರ ನೀಡಿದ್ದ ಚಡ್ಡಾ

ಪರಿಣೀತಿ ಜತೆಗಿನ ಡೇಟಂಗ್‌ ಕುರಿತು ಇತ್ತೀಚೆಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಲೇ ನಾಚಿ ನೀರಾಗಿದ್ದ ರಾಘವ್‌ ಚಡ್ಡಾ, “ನನಗೆ ಪರಿಣೀತಿ ಬಗ್ಗೆ ಅಲ್ಲ, ರಾಜನೀತಿ ಬಗ್ಗೆ ಪ್ರಶ್ನೆ ಕೇಳಿ” ಎಂದು ನಕ್ಕಿದ್ದರು. ಹಾಗೆಯೇ, ನೀವು ಮದುವೆ ಆಗುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ, “ನಾನು ಮದುವೆಯಾಗುವಾಗ ನಿಮಗೆ ಖಂಡಿತವಾಗಿಯೂ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.

ಪಂಜಾಬ್‌ ಆಪ್‌ ನಾಯಕ, ರಾಜ್ಯಸಭೆಯ ಯುವ ಸದಸ್ಯರಾಗಿರುವ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗಾಗಿ, ಇಬ್ಬರಿಗೂ ಮೊದಲಿನಿಂದಲೂ ಪರಿಚಯ ಇದೆ ಎಂದು ತಿಳಿದುಬಂದಿದೆ. ಆದರೆ, ಮೂಲಗಳ ಪ್ರಕಾರ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಬ್ಬರೂ ಆತ್ಮೀಯರಾಗಿದ್ದಾರೆ. ಹಾಗಾಗಿ, ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Raghav Chadha: ಆಪ್‌ ನಾಯಕ ರಾಘವ್‌ ಚಡ್ಡಾ, ಪರಿಣೀತಿ ಚೋಪ್ರಾ ಈಗ ಜೋಡಿ ಹಕ್ಕಿ? ಜತೆಗೇ ಸುತ್ತಿ ಚಡ್ಡಾ ಹೇಳಿದ್ದೇನು?

Continue Reading

South Cinema

Rajkummar Rao: ಶಾರುಖ್ ಖಾನ್ ವ್ಯಕ್ತಿತ್ವ ಕೊಂಡಾಡಿದ ನಟ ರಾಜಕುಮಾರ್ ರಾವ್, ತಮ್ಮ ತಾಯಿಯ ಬಗ್ಗೆ ಹೇಳಿದ್ದೇನು?

ಹ್ಯೂಮನ್ಸ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ, ರಾಜ್‌ಕುಮಾರ್ ರಾವ್ (Rajkummar Rao)ಅವರು ಶಾರುಖ್‌ ಅವರಿಂದ ಯಾವ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂಬುದರ ಕುರಿತು ಮಾತನಾಡಿದರು. ಶಾರುಖ್ ಖಾನ್ ಜತೆಗಿನ ಖುಷಿಯ ಕ್ಷಣಗಳ ಜತೆಗೆ ತಾಯಿಯ ಕುರಿತಾಗಿ ನಟ ರಾಜ್‌ಕುಮಾರ್ ರಾವ್ ಮಾತನಾಡಿದ್ದಾರೆ.

VISTARANEWS.COM


on

Edited by

Rajkummar Rao vocal about his admiration for Shah Rukh Khan
Koo

ನವದೆಹಲಿ: ಬಾಲಿವುಡ್ ಸ್ಟಾರ್ ರಾಜ್‌ಕುಮಾರ್ ರಾವ್ (Rajkummar Rao) ಅವರು ಸೂಪರ್‌ಸ್ಟಾರ್ ಶಾರುಖ್ ಖಾನ್ ಬಗ್ಗೆ ಯಾವಾಗಲೂ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ., ಹ್ಯೂಮನ್ಸ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ, ರಾಜ್‌ಕುಮಾರ್ ರಾವ್ ಅವರು ಶಾರುಖ್‌ ಅವರಿಂದ ಯಾವ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂಬುದರ ಕುರಿತು ಮಾತನಾಡಿದರು.

ರಾಜ್‌ಕುಮಾರ್ ರಾವ್ ಮಾತನಾಡಿ, “ಶಾರುಖ್‌ ಅವರಿಂದ ಕಲಿಯಲು ಬಹಳಷ್ಟು ಇದೆ. ಶಾರುಖ್ ಸರ್, ಅವರು ನಿಮ್ಮನ್ನು ನಡೆಸಿಕೊಳ್ಳುವ ರೀತಿ, ಹಾಗೇ ತುಂಬ ಗೌರವವನ್ನು ನೀಡುತ್ತಾರೆ. ಶಾರುಖ್‌ ಅವರು ಯಾವಾಗಲೂ ಸಂಪೂರ್ಣ ಗಮನವು ನಿಮ್ಮ ಮೇಲೆ, ನಿಮ್ಮ ಕಡೆಗೆ ಇರಿಸುತ್ತಾರೆ. ನಿಮ್ಮ ಬಾಯಿಂದ ಬರುವ ಪ್ರತಿಯೊಂದು ಪದವನ್ನು ಬಹಳ ಎಚ್ಚರಿಕೆಯಿಂದ ಕೇಳುತ್ತಾರೆ. ಪ್ರತಿ ಪಾರ್ಟಿಯ ನಂತರ ಅವರು ಹೊರಬರುವ ರೀತಿ, ಮೂರು ಫ್ಲೋರ್‌ನಿಂದ ಇಳಿದು, ಕಾರಿನ ಹತ್ತಿರ ಬಂದು, ಬಾಗಿಲು ತೆರೆದು ನಿಮ್ಮನ್ನು ಕುಳ್ಳಿರಿಸಿ, ನೀವು ಹೋಗುವವರೆಗೂ ಅಲ್ಲಿಯೇ ನಿಂತು, ಬೈ ಎಂದು ಹೇಳಿ ಕಳುಹಿಸುತ್ತಾರೆ. ಅದನ್ನೆಲ್ಲ ಅವರು ಮಾಡಬೇಕಾಗಿಲ್ಲ. ಆದರೆ ಅವರ ವ್ಯಕ್ತಿತ್ವ ಅಂತಹದುʼʼಎಂದರು.

ಮಾತು ಮುಂದುವರಿಸಿ “ನಾವು ಶಾರುಖ್ ಖಾನ್ ಅವರ ಮನೆಯಲ್ಲಿ ಸಾಕಷ್ಟು ಬಾರಿ ಇದ್ದೆವು. ಅವರೊಂದಿಗೆ ಮಾತನಾಡಿದ್ದೇವೆ. ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಅವರ ಈ ಗುಣಕ್ಕೆ ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ. ಪಠಾಣ್ ಸಿನಿಮಾ ಕೂಡ ಅವರು ತುಂಬಾ ಚೆನ್ನಾಗಿ ಮಾಡಿದ್ದಕ್ಕಾಗಿ ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ಅವರು ಅದಕ್ಕೆ ಹೆಚ್ಚು ಅರ್ಹರುʼʼಎಂದರು.

ಹ್ಯೂಮನ್ಸ್ ಆಫ್ ಬಾಂಬೆ ಪೋಸ್ಟ್‌

ತಾಯಿಯೊಂದಿಗಿನ ಬಾಂಧವ್ಯದ ಕುರಿತು ಮಾತನಾಡಿದ ರಾಜ್‌ಕುಮಾರ್ ರಾವ್

ಶಾರುಖ್ ಖಾನ್ ಬಗ್ಗೆ ರಾಜ್‌ಕುಮಾರ್ ರಾವ್ ಮಾತನಾಡಿರುವ ಇನ್‌ಸ್ಟಾಗ್ರಾಮ್ ವಿಡಿಯೊ ಜತೆಗೆ, ಹ್ಯೂಮನ್ಸ್ ಆಫ್ ಬಾಂಬೆ, ಶಿರ್ಷಿಕೆಯಲ್ಲಿ ರಾಜ್‌ಕುಮಾರ್ ರಾವ್ ಅವರ ದಿವಂಗತ ತಾಯಿಯೊಂದಿಗಿನ ಬಾಂಧವ್ಯದ ಕುರಿತು ಕೆಲವು ಒಳನೋಟಗಳನ್ನು ಸಹ ಹಂಚಿಕೊಂಡಿದೆ.

ರಾಜ್‌ಕುಮಾರ್ ರಾವ್ ಮಾತನಾಡಿ ʻʻನಾನು ನ್ಯೂಟನ್‌ನ ಸೆಟ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ನನ್ನ ತಾಯಿಯ ಬಗ್ಗೆ ಕರೆ ಬಂದಿತು. ಅವರು ಇನ್ನಿಲ್ಲ ಎಂದು. ನಾನು ಛತ್ತೀಸ್‌ಗಢದಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಆಕೆಗೆ ಅಂತಿಮ ವಿದಾಯ ಹೇಳಲು ನಾನು ವಿಮಾನದಲ್ಲಿ ಗುರ್‌ಗಾಂವ್‌ಗೆ ಹಿಂತಿರುಗಿದೆ. ಎಲ್ಲಾ ವಿಧಿವಿಧಾನಗಳನ್ನು ಮಾಡಿ, ನಾನು ಮತ್ತೆ ಹಿಂತಿರುಗಿದಾಗ, ಶೂಟಿಂಗ್‌ ಸಮಯದಲ್ಲಿ ನನ್ನ ಕೆಲಸದತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆ ಕ್ಷಣದಲ್ಲಿ, ನನ್ನ ತಾಯಿಯನ್ನು ಹೆಚ್ಚು ಸಂತೋಷಪಡಿಸಿದ ವಿಷಯ ನನಗೆ ನೆನಪಾಯಿತು. ಅವಳು ನನ್ನ ಸರ್ವಸ್ವವಾಗಿದ್ದಳು. ನಾನು ಪ್ರತಿ ಚಿಕ್ಕ ಕ್ಷಣಗಳನ್ನು ಅವಳೊಂದಿಗೆ ಚರ್ಚಿಸುತ್ತಿದ್ದೆ. ನನ್ನ ಪ್ರತಿ ಗೆಲುವನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ಒಮ್ಮೆ ಅವರು ದಿನಸಿಗೆಂದು ಹೊರಗಡೆ ಹೋದಾಗ, ಆವರನ್ನು ನೋಡಿ ಸ್ಥಳೀಯರು ರಾಜ್‌ಕುಮಾರ್ ರಾವ್ ಅವರ ತಾಯಿ ಎಂದಿದ್ದರು. ಆ ಬಗ್ಗೆ ಹೆಮ್ಮೆಯನ್ನೂ ಅವರು ಹೊಂದಿದ್ದರು.ಅಮ್ಮಂದಿರು ಯಾವಾಗಲೂ ವಿಶೇಷʼʼಎಂದರು.

ಇದನ್ನೂ ಓದಿ: Priyanka Chopra : ಬಾಲಿವುಡ್​ನ ಪೊಲಿಟಿಕ್ಸ್​ಗೆ ಹೆದರಿ ಹಾಲಿವುಡ್​ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ

ಕೆಲಸದ ಮುಂಭಾಗದಲ್ಲಿ, ರಾಜ್‌ಕುಮಾರ್ ರಾವ್ ಕೊನೆಯದಾಗಿ ಅನುಭವ್ ಸಿನ್ಹಾ ನಿರ್ದೇಶಿಸಿದ ʻಭೀಡ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಭೂಮಿ ಪೆಡ್ನೇಕರ್, ದಿಯಾ ಮಿರ್ಜಾ ಮತ್ತು ಪಂಕಜ್ ಕಪೂರ್ ಮುಂತಾದವರು ನಟಿಸಿದ್ದಾರೆ. ರಾಜ್‌ಕುಮಾರ್ ರಾವ್ ಅವರು ಟ್ರಾಪ್ಡ್, ನ್ಯೂಟನ್, ಶಾಹಿದ್, ಒಮೆರ್ಟಾ ಮತ್ತು ಕೈ ಪೊ ಚೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Continue Reading

ಬಾಲಿವುಡ್

Kangana Ranaut : ಪ್ರಿಯಾಂಕಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್‌ ಜೋಹರ್ ಕಾರಣ ಎಂದ ಕಂಗನಾ!

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ತೊರೆಯುವುದಕ್ಕೆ ನಿರ್ದೇಶಕ ಕರಣ್‌ ಜೋಹರ್‌ ಅವರೇ ಕಾರಣ ಎಂದು ನಟಿ ಕಂಗನಾ ರಣಾವತ್‌ (Kangana Ranaut) ಆರೋಪಿಸಿದ್ದಾರೆ.

VISTARANEWS.COM


on

Edited by

Koo

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಸದಾ ಸೋಶಿಯಲ್‌ ಮೀಡಿಯಾ ಮೂಲಕ ಸುದ್ದಿ ಮಾಡುವವರು. ಇದೀಗ ನಟಿ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್‌ ಜೋಹರ್‌ ಅವರ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್‌ ಅವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Kangana Ranaut: ಚಿತ್ರರಂಗದಲ್ಲೇ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಬಳಸುತ್ತಿರುವ ನಟಿ ಕಂಗನಾ ರಣಾವತ್!
ಟ್ವಿಟರ್‌ನಲ್ಲಿ ಸಾಲು ಸಾಲು ಟ್ವೀಟ್‌ ಮಾಡಿರುವ ನಟಿ, “ಪ್ರಿಯಾಂಕಾ ವಿರುದ್ಧ ಹಲವರು ಗ್ಯಾಂಗ್‌ ಮಾಡಿಕೊಂಡರು. ಅವರ ಸಿನಿಮಾ ಕ್ಷೇತ್ರವನ್ನು ಬಿಟ್ಟು ಹೋಗುವಂತೆ ಹಿಂದೆ ಬಿದ್ದರು. ಸ್ವಯಂ ಪ್ರಯತ್ನದಿಂದ ಮೇಲೆ ಬಂದಿದ್ದ ಹೆಣ್ಣೊಬ್ಬರು ಭಾರತವನ್ನೇ ಬಿಟ್ಟು ಹೋಗುವಂತೆ ಮಾಡಿದರು. ಕರಣ್‌ ಜೋಹರ್‌ ಅವರು ಆಕೆಯನ್ನು ಬ್ಯಾನ್‌ ಮಾಡಿದ ವಿಚಾರ ಎಲ್ಲರಿಗೂ ತಿಳಿದಿದೆ” ಎಂದು ಬರೆದುಕೊಂಡಿದ್ದಾರೆ.


“ಶಾರುಖ್‌ ಖಾನ್‌ ಅವರೊಂದಿಗೆ ಪ್ರಿಯಾಂಕಾ ಸ್ನೇಹದಿಂದ ಇದ್ದಿದ್ದು ಕರಣ್‌ಗೆ ಆಗಲಿಲ್ಲ. ಹಾಗಾಗಿ ಅವರ ವಿರುದ್ಧ ಎಲ್ಲರನ್ನೂ ಎತ್ತಿಕಟ್ಟಿದರು. ಅದೇ ಕಾರಣಕ್ಕೆ ಆಕೆ ಭಾರತವನ್ನೇ ತೊರೆಯಬೇಕಾಯಿತು. ಈ ಅಸಹ್ಯಕರ, ಅಸೂಯೆ, ನೀಚ ಮತ್ತು ವಿಷಕಾರಿ ವ್ಯಕ್ತಿಗೆ ಚಲನಚಿತ್ರೋದ್ಯಮದ ಸಂಸ್ಕೃತಿ ಮತ್ತು ಪರಿಸರವನ್ನು ಹಾಳು ಮಾಡಿದ್ದಾರೆ. ಅವರ ಗ್ಯಾಂಗ್‌ ಮೇಲೆ ದಾಳಿ ನಡೆಸಿ ಬಂಧಿಸಬೇಕು” ಎಂದು ನಟಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Kangana Ranaut: ಇನ್ನೂ ಗದ್ದೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಕಂಗನಾ ತಾಯಿ! ನಾನೇ ಕಾರಣ ಎಂದ ಕಂಗನಾ
ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ತಾವು ಬಾಲಿವುಡ್‌ ತೊರೆಯುವುದಕ್ಕೆ ಕಾರಣ ಹೇಳಿಕೊಂಡಿದ್ದರು. “ಬಾಲಿವುಡ್‌ನಲ್ಲಿ ನನ್ನ ಮೂಲೆಗೆ ಹಾಕಲಾಯಿತು. ರಾಜಕೀಯ ಮಾಡಲಾಯಿತು. ಅದರಿಂದ ಬೇಸತ್ತು ಹೊರಬಂದೆ” ಎಂದು ಅವರು ಹೇಳಿದ್ದರು. ನಟಿ 2015ರಲ್ಲಿ ಬಾಲಿವುಡ್‌ ತೊರೆದು ಹಾಲಿವುಡ್‌ ಸೇರಿಕೊಂಡಿದ್ದಾರೆ.

Continue Reading

South Cinema

Kareena Kapoor: ಉರ್ಫಿ ತುಂಬ ಧೈರ್ಯಶಾಲಿ ಎಂದು ಹಾಡಿ ಹೊಗಳಿದ ಕರೀನಾ ಕಪೂರ್‌

ಕರೀನಾ ಕಪೂರ್ (Kareena Kapoor) ಸಂದರ್ಶನವೊಂದರಲ್ಲಿ ಉರ್ಫಿಯನ್ನು ಹೊಗಳಿದ್ದಾರೆ. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್‌ ಅವರಷ್ಟು ಧೈರ್ಯಶಾಲಿಯಲ್ಲ ಎಂದಿದ್ದಾರೆ. ಸದಾ ಉಡುಪಿನ ಮೂಲಕವೇ ಕೆಂಗಣ್ಣಿಗೆ ಗುರಿಯಾಗುತ್ತಿರುವ ನಟಿಯ ಬಗ್ಗೆ ಕೆಲವು ಬಾಲಿವುಡ್‌ ಸೆಲೆಬ್ರಿಟಿಗಳು ನಟಿಯ ಫ್ಯಾಶನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ.

VISTARANEWS.COM


on

Edited by

Kareena Kapoor Tells urfi javed confidence
Koo

ಬೆಂಗಳೂರು: ಫ್ಯಾಷನ್‌ ಐಕಾನ್‌ ಅಂತಯೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (urfi javed) ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿಯನ್ನು ಗಳಿಸಿದರು. ಸದಾ ಉಡುಪಿನ ಮೂಲಕವೇ ಕೆಂಗಣ್ಣಿಗೆ ಗುರಿಯಾಗುತ್ತಿರುವ ನಟಿಯ ಬಗ್ಗೆ ಕೆಲವು ಬಾಲಿವುಡ್‌ ಸೆಲೆಬ್ರಿಟಿಗಳು ನಟಿಯ ಫ್ಯಾಶನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ತಾರೆ ಕರೀನಾ ಕಪೂರ್ (Kareena Kapoor) ಅವರು ಉರ್ಫಿ ಜಾವೇದ್ ಅವರನ್ನು ಹೊಗಳಿದ್ದಾರೆ. ʻʻಉರ್ಫಿ ತುಂಬ ‘ಧೈರ್ಯಶಾಲಿ’ ಎಂದು ಹೇಳಿದ್ದಾರೆ.

ಕರೀನಾ ಕಪೂರ್ ಸಂದರ್ಶನವೊಂದರಲ್ಲಿ ಉರ್ಫಿಯನ್ನು ಹೊಗಳಿದ್ದಾರೆ. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್‌ ಅವರಷ್ಟು ಧೈರ್ಯಶಾಲಿಯಲ್ಲ. ಫ್ಯಾಷನ್ ಎನ್ನುವುದು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಅವರ ಒಂದು ಈ ಆತ್ಮವಿಶ್ವಾಸ ಇಂದು ಇಲ್ಲಿಗೆ ತಂದಿದೆ. ಉರ್ಫಿ ಅದ್ಭುತವಾಗಿ ಕಾಣುತ್ತಾರೆ ಎಂದು ನಾನು ಭಾವಿಸುತ್ತೇನೆʼʼಎಂದರು.

ಮಾತು ಮುಂದುವರಿಸಿ ʻʻತನಗೆ ಬೇಕಾದಂತಹ ಫ್ಯಾಷನ್‌ ಅನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಫ್ಯಾಷನ್‌ ಅಂದರೆ. ನಿಮ್ಮ ಸ್ಕಿನ್‌ಗೆ ಯಾವುದು ಆರಾಮದಾಯಕವಾಗಿರುತ್ತದೆಯೋ ಅದನ್ನು ನೀವು ಮುಂದುವರಿಸಿ. ಉರ್ಫಿ ಅವರ ನಾನು ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ. ನಾನು ಆತ್ಮವಿಶ್ವಾಸದ ಹುಡುಗಿ. ಉರ್ಫಿ ಅವರು ನಡೆದುಕೊಳ್ಳುವ ರೀತಿಯನ್ನು ಪ್ರೀತಿಸುತ್ತೇನೆ. ಹ್ಯಾಟ್ಸ್ ಆಫ್ ಉರ್ಫಿ.”ಎಂದಿದ್ದಾರೆ.

ಇದನ್ನೂ ಓದಿ: Urfi Javed: ಇದು ಡಬಲ್ ಧಮಾಕಾ! ಒಟ್ಟಿಗೆ ಕಾಣಿಸಿಕೊಂಡ ಉರ್ಫಿ ಜಾವೇದ್‌ ಮತ್ತು ಸನ್ನಿ ಲಿಯೋನ್!

ಕೆಲಸದ ಮುಂಭಾಗದಲ್ಲಿ, ಕರೀನಾ ಕೊನೆಯದಾಗಿ ಅಮೀರ್ ಖಾನ್ ಅವರೊಂದಿಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡರು. ಮುಂದೆ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್, ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಮತ್ತು ದಿ ಕ್ರ್ಯೂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading
Advertisement
Man commits suicide after wife commits suicide in Srirangapatna
ಕರ್ನಾಟಕ3 hours ago

Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು

Amid wedding rumours, AAP MP Raghav Chadha picks up Parineeti Chopra from Delhi airport
ದೇಶ3 hours ago

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Do you know how much marks Virat Kohli got in iron pea maths?
ಕ್ರಿಕೆಟ್4 hours ago

Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ?

Manmohan Lalwani says Solar powered system best tool to cross digital gap
ಕರ್ನಾಟಕ4 hours ago

SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ

Four farmers seriously injured in lathi charge by forest department personnel
ಕರ್ನಾಟಕ4 hours ago

Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ

Bengaluru company to gift ChatGPT Plus subscription to employees after seeing rise in productivity
ಕರ್ನಾಟಕ4 hours ago

ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್‌ ನೀಡಿದ ಬೆಂಗಳೂರು ಕಂಪನಿ

No prejudice about Hindi, such imposition is not worth it
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು

Google Layoffs: Some employees may get up to Rs 2.60 crore in severance pay
ದೇಶ4 hours ago

Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

Former bowler of Rajasthan Royals who joined Chennai Super Kings
ಕ್ರಿಕೆಟ್5 hours ago

IPL 2023 : ಚೆನ್ನೈ ಸೂಪರ್​ ಕಿಂಗ್ಸ್​ ಬಳಗ ಸೇರಿದ ರಾಜಸ್ಥಾನ್​ ರಾಯಲ್ಸ್​ನ ಮಾಜಿ ಬೌಲರ್​

ಕರ್ನಾಟಕ5 hours ago

Prof. Madhav Kulkarni: ಖ್ಯಾತ ಲೇಖಕ, ವಿಮರ್ಶಕ ಪ್ರೊ. ಮಾಧವ ಕುಲಕರ್ಣಿ ಇನ್ನಿಲ್ಲ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ9 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ15 hours ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 weeks ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

ಟ್ರೆಂಡಿಂಗ್‌

error: Content is protected !!