ಬೆಂಗಳೂರು: ನಟಿ ಜೂಹಿ ಚಾವ್ಲಾ ಹಾಗೂ ಆರ್ ಮಾಧವನ್ ಅಭಿನಯಸಿರುವ ರೈಲ್ವೇ ಮೆನ್ ವೆಬ್ ಸಿರೀಸ್ ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆರ್ ಮಾಧವನ್ ಅವರು ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿರುವುದಾಗಿ ತಾಯಿಗೆ ಒಮ್ಮೆ ಹೇಳಿದ್ದೆ ಎಂದು ಇದೀಗ ರಿವೀಲ್ ಮಾಡಿದ್ದಾರೆ. ಖಯಾಮತ್ ಸೆ ಕಯಾಮತ್ ತಕ್ (1988) ಚಿತ್ರದಲ್ಲಿ ಜೂಹಿ ಚಾವ್ಲಾ ಅವರನ್ನು ವೀಕ್ಷಿಸಿದ ನಂತರ ನಟ ತಮ್ಮ ಆಸೆಯನ್ನು ತಾಯಿಗೆ ಹೇಳಿದ್ದರಂತೆ. ಮಾಧವನ್ (R Madhavan) ಅವರು ನೆಟ್‌ಫ್ಲಿಕ್ಸ್ ಇಂಡಿಯಾ ಹಂಚಿಕೊಂಡ ವೀಡಿಯೊದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ನೆಟ್‌ಫ್ಲಿಕ್ಸ್ ಮೂಲ ವೆಬ್ ಸೀರೀಸ್ ದಿ ರೈಲ್ವೇ ಮೆನ್ ತಂಡವನ್ನು ಸೇರಲು ಕಾರಣವನ್ನು ಜೂಹಿ ಚಾವ್ಲಾ ವಿವರಿಸಿದ ನಂತರ, ಮಾಧವನ್ ಮಾತನಾಡಿ, “ನಾನು ನಿಮಗೆ ಒಂದು ವಿಚಾರ ಹೇಳಲೇಬೇಕು, ನಾನು ಖಯಾಮತ್ ಸೆ ಖಯಾಮತ್ ಸಿನಿಮಾ ವೀಕ್ಷಿಸಿದಾಗ ಅಮ್ಮನಿಗೆ ‘ನಾನು ಜೂಹಿ ಚಾವ್ಲಾರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದೆ. ಆಗ ನನಗೆ ಜೂಹಿ ಚಾವ್ಲಾಳನ್ನು ಮದುವೆಯಾಗುವುದು ಒಂದೇ ಗುರಿಯಾಗಿತ್ತು.” ಎಂದು ಹೇಳಿದ್ದಾರೆ.
ಮನ್ಸೂರ್ ಖಾನ್ ನಿರ್ದೇಶಿಸಿದ, ಖಯಾಮತ್ ಸೆ ಕಯಾಮತ್ ತಕ್, ಆಮೀರ್ ಖಾನ್ ಜತೆ ಜೂಹಿ ಚಾವ್ಲಾ ಕಾಣಿಸಿಕೊಂಡರು. ಮಾತ್ರವಲ್ಲ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಗಳಿಸಿತು. ಜೂಹಿ ಚಾವ್ಲಾ ಅವರು ಅತ್ಯುತ್ತಮ ನಟಿ ಚೊಚ್ಚಲ ಪ್ರಶಸ್ತಿ ಪಡೆದುಕೊಂಡರು. ಹಾಗೂ ಸಿನಿಮಾ ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗಳಿಸಿತು. ಮಾಧವನ್ ಅವರ ಪುತ್ರ ವೇದಾಂತ್ ಈಗ ಸ್ವಿಮ್ಮಿಂಗ್ ಚಾಂಪಿಯನ್ ಆಗಿದ್ದಾರೆ ಮತ್ತು ಈ ವರ್ಷದ ಆರಂಭದಲ್ಲಿ ಮಲೇಷ್ಯಾ ಇನ್ವಿಟೇಶನಲ್ ಏಜ್ ಗ್ರೂಪ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದರು.
ಇದನ್ನೂ ಓದಿ; Salman Khan : ಜೂಹಿ ಚಾವ್ಲಾರನ್ನು ಮದುವೆಯಾಗಲು ಮುಂದಾಗಿದ್ದ ಸಲ್ಮಾನ್ ಖಾನ್; ಹೆಣ್ಣು ಕೇಳುವುದಕ್ಕೂ ಹೋಗಿದ್ದರು!
ಖಯಾಮತ್ ಸೆ ಕಯಾಮತ್ ತಕ್ ಬಿಡುಗಡೆಯಾದಾಗ, ಮಾಧವನ್ ಇನ್ನೂ ನಟನೆಗೆ ಪದಾರ್ಪಣೆ ಮಾಡಿರಲಿಲ್ಲ. 1993ರಲ್ಲಿ ಅವರು ಜನಪ್ರಿಯ ಟಿವಿ ಶೋ ಬನೇಗಿ ಅಪ್ನಿ ಬಾತ್‌ನೊಂದಿಗೆ ಪ್ರವೇಶಿಸಿದರು. ಸೀ ಹಾಕ್ಸ್ ಸೇರಿದಂತೆ ಹಲವಾರು ಹಿಟ್ ಶೋಗಳಲ್ಲಿ ಕೆಲಸ ಮಾಡಿದ ನಂತರ, ಅವರು 1997ರಲ್ಲಿ ಇನ್ಫರ್ನೊ ಮೂಲಕ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು.
ಮಾಧವನ್ 1998ರಲ್ಲಿ ಶಾಂತಿ ಶಾಂತಿ ಶಾಂತಿ ಸಿನಿಮಾ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ವಿವಿಧ ಭಾರತೀಯ ಭಾಷೆಗಳಲ್ಲಿ ಹಲವಾರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಪ್ರಿಯಮಾನ ತೋಝಿ, ಆಯ್ತಾ ಎಳುತ್ತು, ರಂಗ್ ದೇ ಬಸಂತಿ, ಮುಂಬೈ ಮೇರಿ ಜಾನ್, 3 ಈಡಿಯಟ್ಸ್ ಮತ್ತು ತನು ವೆಡ್ಸ್ ಮನು ಸೇರಿದಂತೆ ಹಲವು ಸಿನಿಮಾಗಳು ಸೇರಿವೆ. ಕಳೆದ ವರ್ಷ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ಗಾಗಿ ಡೈರೆಕ್ಟರ್ ಕ್ಯಾಪ್ ಧರಿಸಿದ್ದರು.