ಬಾಲಿವುಡ್
Salman Khan : ಜೂಹಿ ಚಾವ್ಲಾರನ್ನು ಮದುವೆಯಾಗಲು ಮುಂದಾಗಿದ್ದ ಸಲ್ಮಾನ್ ಖಾನ್; ಹೆಣ್ಣು ಕೇಳುವುದಕ್ಕೂ ಹೋಗಿದ್ದರು!
ಸಲ್ಮಾನ್ ಖಾನ್ ಅವರು ನಟಿ ಜೂಹಿ ಚಾವ್ಲಾರನ್ನು ಮದುವೆಯಾಗಬೇಕು ಎಂದುಕೊಂಡಿದ್ದರಂತೆ. ಅದಕ್ಕಾಗಿ ಆಕೆಯ ತಂದೆಯ ಬಳಿ ಕೇಳಿಕೊಂಡಿದ್ದರು ಕೂಡ. ಈ ವಿಚಾರವನ್ನು ಸಲ್ಮಾನ್ ಸಂದರ್ಶನವೊಂದರಲ್ಲಿ ಹೇಳಿರುವ ವಿಡಿಯೊ ಕ್ಲಿಪ್ ವೈರಲ್ ಆಗಿದೆ.
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಇನ್ನೂ ಅವಿವಾಹಿತರಾಗಿಯೇ ಇದ್ದಾರೆ. ಈ ನಟನ ಮದುವೆ ಬಗ್ಗೆ ಹಲವು ಬಾರಿ ಸುದ್ದಿಗಳಾಗಿವೆಯಾದರೂ ಅವು ಯಾವುವೂ ನಿಜವಾಗಲಿಲ್ಲ. ಅಂದ ಹಾಗೆ ಸಲ್ಮಾನ್ ಅವರು ನಟಿ ಜೂಹಿ ಚಾವ್ಲಾರನ್ನು ಇಷ್ಟ ಪಟ್ಟಿದ್ದರಂತೆ. ಮದುವೆ ಮಾಡಿಕೊಡಿ ಎಂದು ಜೂಹಿ ಅವರ ತಂದೆಯನ್ನೂ ಕೇಳಿಕೊಂಡಿದ್ದರಂತೆ.
ಇದನ್ನೂ ಓದಿ: Salman Khan | ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್, ಹಿಂಸ್ರಪಶು: 8 ವರ್ಷಗಳ ಸಂಬಂಧದ ಕಹಿ ಹಂಚಿಕೊಂಡ ಮಾಜಿ ಪ್ರೇಯಸಿ ಸೋಮಿ ಅಲಿ
ಹೌದು. ಸಲ್ಮಾನ್ ತಾವು ಜೂಹಿಯನ್ನು ಇಷ್ಟಪಟ್ಟು ಅವರ ತಂದೆಯ ಬಳಿ ಮದುವೆ ಮಾಡಿಕೊಡಿ ಎಂದು ಕೇಳಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಾಕಷ್ಟು ಹಳೆಯದಾಗಿರುವ ಈ ಸಂದರ್ಶನದ ಸಣ್ಣ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ತುಣುಕನ್ನು ಟ್ವಿಟರ್‌ನಲ್ಲಿ ಆರ್ಶಿ ಸಿದ್ದಿಕಿ ಹೆಸರಿನವರು ಹಂಚಿಕೊಂಡಿದ್ದಾರೆ.
ಆ ವಿಡಿಯೊ ತುಣುಕಲ್ಲಿ ಸಲ್ಮಾನ್ ಖಾನ್ ಅವರು, “ಜೂಹಿ ತುಂಬಾ ಒಳ್ಳೆ ಹುಡುಗಿ. ಅದಕ್ಕಾಗಿ ಅವರ ತಂದೆಯ ಬಳಿ ಮದುವೆ ಮಾಡಿಕೊಡಿ ಎಂದು ಕೇಳಿದೆ. ಆದರೆ ಅವರು ಅದಕ್ಕೆ ನೋ ಎಂದರು” ಎಂದು ಹೇಳುವುದನ್ನು ಕಾಣಬಹುದಾಗಿದೆ. ಮದುವೆಗೆ ಒಪ್ಪದಿರುವುದಕ್ಕೆ ಕಾರಣ ಏನು ಎನ್ನುವುದನ್ನು ಅವರ ತಂದೆ ಹೇಳಲಿಲ್ಲವಂತೆ.
ಸಲ್ಮಾನ್ ಖಾನ್ ಮತ್ತು ಜೂಹಿ ಚಾವ್ಲಾ 1997ರಲ್ಲಿ ದೀವಾನಾ ಮಸ್ತಾನ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಮತ್ತು ಗೋವಿಂದಾ ಕೂಡ ನಟಿಸಿದ್ದಾರೆ.
ದೇಶ
Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?
Raghav-Parineeti: ಆಪ್ ನಾಯಕ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳಿಗೆ ವಾರದಲ್ಲಿಯೇ ನಡೆದ ಮೂರನೇ ಭೇಟಿಯು ಪುಷ್ಟಿ ನೀಡಿದೆ.
ನವದೆಹಲಿ: ಪಂಜಾಬ್ ಆಪ್ ನಾಯಕ, ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Raghav-Parineeti) ಅವರು ಕೆಲ ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಇಬ್ಬರೂ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಕಾರಣ ಇಬ್ಬರೂ ವದಂತಿಗಳಿಗೆ ಆಹಾರವಾಗಿದ್ದರು. ಈ ಕುರಿತು ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ರಾಘವ್ ಚಡ್ಡಾ ಹಾರಿಕೆಯ ಉತ್ತರ ನೀಡಿದ್ದರು. ಈಗ ಜೋಡಿಯು ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದು ವಾರದಲ್ಲಿ ಮೂರನೇ ಭೇಟಿಯಾಗಿದೆ. ಹಾಗಾಗಿ, ಇಬ್ಬರೂ ಜೋಡಿ ಹಕ್ಕಿಗಳಾಗಿದ್ದಾರೆ ಎಂಬ ಮಾತಿಗೆ ಹಚ್ಚಿನ ಪುಷ್ಟಿ ಬಂದಂತಾಗಿದೆ.
ಮಾರ್ಚ್ 29ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪರಿಣೀತಿ ಚೋಪ್ರಾ ಅವರನ್ನು ಪಿಕ್ ಮಾಡಲು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ರಾಘವ್ ಚಡ್ಡಾ ಕಾರಿನಲ್ಲಿಯೇ ಪರಿಣೀತಿ ಚೋಪ್ರಾ ಅವರು ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡ ಫೋಟೊಗಳು ಪಾಪರಾಜಿಗಳಿಗೆ ಸಿಕ್ಕಿದ್ದು, ಫೋಟೊಗಳು ವೈರಲ್ ಆಗಿವೆ. ಅಲ್ಲದೆ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದಾಗಿ ಜಾಲತಾಣಗಳಲ್ಲಿ ಮತ್ತೆ ಹೇಳಲು ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಮಾಧ್ಯಮದವರು ಇಬ್ಬರನ್ನೂ ಮಾತನಾಡಿಸಲು ಯತ್ನಿಸಿದರಾದರೂ, ಜೋಡಿಯು ಪ್ರತಿಕ್ರಿಯಿಸದೆ ತೆರಳಿದೆ.
ಏರ್‌ಪೋರ್ಟ್‌ನಲ್ಲಿ ಜೋಡಿ ಹಕ್ಕಿ
ಒಟ್ಟಿಗೆ ಊಟ, ಒಂದೇ ಕಾರಿನಲ್ಲಿ ತಿರುಗಾಟ
ಕಳೆದ ಒಂದು ವಾರದಲ್ಲಿ ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಮೂರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಚ್ 22ರಂದು ರಾಘವ್ ಹಾಗೂ ಪರಿಣೀತಿ ಅವರು ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಹೋಟೆಲ್ ಪ್ರವೇಶಿಸುವ ಹಾಗೂ ಹೋಟೆಲ್‌ನಿಂದ ಹೊರಬರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ. ಇದಾದ ಮರುದಿನವೇ (ಮಾರ್ಚ್ 23) ಇಬ್ಬರೂ ಮತ್ತೆ ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗೆ ಪದೇಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್ ಕುರಿತು ಮಾತುಗಳು ಕೇಳಿಬರುತ್ತಿವೆ.
ಹಾರಿಕೆಯ ಉತ್ತರ ನೀಡಿದ್ದ ಚಡ್ಡಾ
ಪರಿಣೀತಿ ಜತೆಗಿನ ಡೇಟಂಗ್ ಕುರಿತು ಇತ್ತೀಚೆಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಲೇ ನಾಚಿ ನೀರಾಗಿದ್ದ ರಾಘವ್ ಚಡ್ಡಾ, “ನನಗೆ ಪರಿಣೀತಿ ಬಗ್ಗೆ ಅಲ್ಲ, ರಾಜನೀತಿ ಬಗ್ಗೆ ಪ್ರಶ್ನೆ ಕೇಳಿ” ಎಂದು ನಕ್ಕಿದ್ದರು. ಹಾಗೆಯೇ, ನೀವು ಮದುವೆ ಆಗುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ, “ನಾನು ಮದುವೆಯಾಗುವಾಗ ನಿಮಗೆ ಖಂಡಿತವಾಗಿಯೂ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.
ಪಂಜಾಬ್ ಆಪ್ ನಾಯಕ, ರಾಜ್ಯಸಭೆಯ ಯುವ ಸದಸ್ಯರಾಗಿರುವ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗಾಗಿ, ಇಬ್ಬರಿಗೂ ಮೊದಲಿನಿಂದಲೂ ಪರಿಚಯ ಇದೆ ಎಂದು ತಿಳಿದುಬಂದಿದೆ. ಆದರೆ, ಮೂಲಗಳ ಪ್ರಕಾರ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಬ್ಬರೂ ಆತ್ಮೀಯರಾಗಿದ್ದಾರೆ. ಹಾಗಾಗಿ, ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Raghav Chadha: ಆಪ್ ನಾಯಕ ರಾಘವ್ ಚಡ್ಡಾ, ಪರಿಣೀತಿ ಚೋಪ್ರಾ ಈಗ ಜೋಡಿ ಹಕ್ಕಿ? ಜತೆಗೇ ಸುತ್ತಿ ಚಡ್ಡಾ ಹೇಳಿದ್ದೇನು?
South Cinema
Rajkummar Rao: ಶಾರುಖ್ ಖಾನ್ ವ್ಯಕ್ತಿತ್ವ ಕೊಂಡಾಡಿದ ನಟ ರಾಜಕುಮಾರ್ ರಾವ್, ತಮ್ಮ ತಾಯಿಯ ಬಗ್ಗೆ ಹೇಳಿದ್ದೇನು?
ಹ್ಯೂಮನ್ಸ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ, ರಾಜ್‌ಕುಮಾರ್ ರಾವ್ (Rajkummar Rao)ಅವರು ಶಾರುಖ್ ಅವರಿಂದ ಯಾವ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂಬುದರ ಕುರಿತು ಮಾತನಾಡಿದರು. ಶಾರುಖ್ ಖಾನ್ ಜತೆಗಿನ ಖುಷಿಯ ಕ್ಷಣಗಳ ಜತೆಗೆ ತಾಯಿಯ ಕುರಿತಾಗಿ ನಟ ರಾಜ್‌ಕುಮಾರ್ ರಾವ್ ಮಾತನಾಡಿದ್ದಾರೆ.
ನವದೆಹಲಿ: ಬಾಲಿವುಡ್ ಸ್ಟಾರ್ ರಾಜ್‌ಕುಮಾರ್ ರಾವ್ (Rajkummar Rao) ಅವರು ಸೂಪರ್‌ಸ್ಟಾರ್ ಶಾರುಖ್ ಖಾನ್ ಬಗ್ಗೆ ಯಾವಾಗಲೂ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ., ಹ್ಯೂಮನ್ಸ್ ಆಫ್ ಬಾಂಬೆ ಪಾಡ್‌ಕ್ಯಾಸ್ಟ್‌ನಲ್ಲಿ, ರಾಜ್‌ಕುಮಾರ್ ರಾವ್ ಅವರು ಶಾರುಖ್ ಅವರಿಂದ ಯಾವ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂಬುದರ ಕುರಿತು ಮಾತನಾಡಿದರು.
ರಾಜ್‌ಕುಮಾರ್ ರಾವ್ ಮಾತನಾಡಿ, “ಶಾರುಖ್ ಅವರಿಂದ ಕಲಿಯಲು ಬಹಳಷ್ಟು ಇದೆ. ಶಾರುಖ್ ಸರ್, ಅವರು ನಿಮ್ಮನ್ನು ನಡೆಸಿಕೊಳ್ಳುವ ರೀತಿ, ಹಾಗೇ ತುಂಬ ಗೌರವವನ್ನು ನೀಡುತ್ತಾರೆ. ಶಾರುಖ್ ಅವರು ಯಾವಾಗಲೂ ಸಂಪೂರ್ಣ ಗಮನವು ನಿಮ್ಮ ಮೇಲೆ, ನಿಮ್ಮ ಕಡೆಗೆ ಇರಿಸುತ್ತಾರೆ. ನಿಮ್ಮ ಬಾಯಿಂದ ಬರುವ ಪ್ರತಿಯೊಂದು ಪದವನ್ನು ಬಹಳ ಎಚ್ಚರಿಕೆಯಿಂದ ಕೇಳುತ್ತಾರೆ. ಪ್ರತಿ ಪಾರ್ಟಿಯ ನಂತರ ಅವರು ಹೊರಬರುವ ರೀತಿ, ಮೂರು ಫ್ಲೋರ್‌ನಿಂದ ಇಳಿದು, ಕಾರಿನ ಹತ್ತಿರ ಬಂದು, ಬಾಗಿಲು ತೆರೆದು ನಿಮ್ಮನ್ನು ಕುಳ್ಳಿರಿಸಿ, ನೀವು ಹೋಗುವವರೆಗೂ ಅಲ್ಲಿಯೇ ನಿಂತು, ಬೈ ಎಂದು ಹೇಳಿ ಕಳುಹಿಸುತ್ತಾರೆ. ಅದನ್ನೆಲ್ಲ ಅವರು ಮಾಡಬೇಕಾಗಿಲ್ಲ. ಆದರೆ ಅವರ ವ್ಯಕ್ತಿತ್ವ ಅಂತಹದುʼʼಎಂದರು.
ಮಾತು ಮುಂದುವರಿಸಿ “ನಾವು ಶಾರುಖ್ ಖಾನ್ ಅವರ ಮನೆಯಲ್ಲಿ ಸಾಕಷ್ಟು ಬಾರಿ ಇದ್ದೆವು. ಅವರೊಂದಿಗೆ ಮಾತನಾಡಿದ್ದೇವೆ. ಅವರೊಂದಿಗೆ ಒಳ್ಳೆಯ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಅವರ ಈ ಗುಣಕ್ಕೆ ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ. ಪಠಾಣ್ ಸಿನಿಮಾ ಕೂಡ ಅವರು ತುಂಬಾ ಚೆನ್ನಾಗಿ ಮಾಡಿದ್ದಕ್ಕಾಗಿ ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ಅವರು ಅದಕ್ಕೆ ಹೆಚ್ಚು ಅರ್ಹರುʼʼಎಂದರು.
ಹ್ಯೂಮನ್ಸ್ ಆಫ್ ಬಾಂಬೆ ಪೋಸ್ಟ್
ತಾಯಿಯೊಂದಿಗಿನ ಬಾಂಧವ್ಯದ ಕುರಿತು ಮಾತನಾಡಿದ ರಾಜ್‌ಕುಮಾರ್ ರಾವ್
ಶಾರುಖ್ ಖಾನ್ ಬಗ್ಗೆ ರಾಜ್‌ಕುಮಾರ್ ರಾವ್ ಮಾತನಾಡಿರುವ ಇನ್‌ಸ್ಟಾಗ್ರಾಮ್ ವಿಡಿಯೊ ಜತೆಗೆ, ಹ್ಯೂಮನ್ಸ್ ಆಫ್ ಬಾಂಬೆ, ಶಿರ್ಷಿಕೆಯಲ್ಲಿ ರಾಜ್‌ಕುಮಾರ್ ರಾವ್ ಅವರ ದಿವಂಗತ ತಾಯಿಯೊಂದಿಗಿನ ಬಾಂಧವ್ಯದ ಕುರಿತು ಕೆಲವು ಒಳನೋಟಗಳನ್ನು ಸಹ ಹಂಚಿಕೊಂಡಿದೆ.
ರಾಜ್‌ಕುಮಾರ್ ರಾವ್ ಮಾತನಾಡಿ ʻʻನಾನು ನ್ಯೂಟನ್‌ನ ಸೆಟ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ನನ್ನ ತಾಯಿಯ ಬಗ್ಗೆ ಕರೆ ಬಂದಿತು. ಅವರು ಇನ್ನಿಲ್ಲ ಎಂದು. ನಾನು ಛತ್ತೀಸ್‌ಗಢದಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಆಕೆಗೆ ಅಂತಿಮ ವಿದಾಯ ಹೇಳಲು ನಾನು ವಿಮಾನದಲ್ಲಿ ಗುರ್‌ಗಾಂವ್‌ಗೆ ಹಿಂತಿರುಗಿದೆ. ಎಲ್ಲಾ ವಿಧಿವಿಧಾನಗಳನ್ನು ಮಾಡಿ, ನಾನು ಮತ್ತೆ ಹಿಂತಿರುಗಿದಾಗ, ಶೂಟಿಂಗ್ ಸಮಯದಲ್ಲಿ ನನ್ನ ಕೆಲಸದತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆ ಕ್ಷಣದಲ್ಲಿ, ನನ್ನ ತಾಯಿಯನ್ನು ಹೆಚ್ಚು ಸಂತೋಷಪಡಿಸಿದ ವಿಷಯ ನನಗೆ ನೆನಪಾಯಿತು. ಅವಳು ನನ್ನ ಸರ್ವಸ್ವವಾಗಿದ್ದಳು. ನಾನು ಪ್ರತಿ ಚಿಕ್ಕ ಕ್ಷಣಗಳನ್ನು ಅವಳೊಂದಿಗೆ ಚರ್ಚಿಸುತ್ತಿದ್ದೆ. ನನ್ನ ಪ್ರತಿ ಗೆಲುವನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ಒಮ್ಮೆ ಅವರು ದಿನಸಿಗೆಂದು ಹೊರಗಡೆ ಹೋದಾಗ, ಆವರನ್ನು ನೋಡಿ ಸ್ಥಳೀಯರು ರಾಜ್‌ಕುಮಾರ್ ರಾವ್ ಅವರ ತಾಯಿ ಎಂದಿದ್ದರು. ಆ ಬಗ್ಗೆ ಹೆಮ್ಮೆಯನ್ನೂ ಅವರು ಹೊಂದಿದ್ದರು.ಅಮ್ಮಂದಿರು ಯಾವಾಗಲೂ ವಿಶೇಷʼʼಎಂದರು.
ಇದನ್ನೂ ಓದಿ: Priyanka Chopra : ಬಾಲಿವುಡ್‌ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
ಕೆಲಸದ ಮುಂಭಾಗದಲ್ಲಿ, ರಾಜ್‌ಕುಮಾರ್ ರಾವ್ ಕೊನೆಯದಾಗಿ ಅನುಭವ್ ಸಿನ್ಹಾ ನಿರ್ದೇಶಿಸಿದ ʻಭೀಡ್ʼ ಸಿನಿಮಾದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಭೂಮಿ ಪೆಡ್ನೇಕರ್, ದಿಯಾ ಮಿರ್ಜಾ ಮತ್ತು ಪಂಕಜ್ ಕಪೂರ್ ಮುಂತಾದವರು ನಟಿಸಿದ್ದಾರೆ. ರಾಜ್‌ಕುಮಾರ್ ರಾವ್ ಅವರು ಟ್ರಾಪ್ಡ್, ನ್ಯೂಟನ್, ಶಾಹಿದ್, ಒಮೆರ್ಟಾ ಮತ್ತು ಕೈ ಪೊ ಚೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಬಾಲಿವುಡ್
Kangana Ranaut : ಪ್ರಿಯಾಂಕಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್ ಜೋಹರ್ ಕಾರಣ ಎಂದ ಕಂಗನಾ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆಯುವುದಕ್ಕೆ ನಿರ್ದೇಶಕ ಕರಣ್ ಜೋಹರ್ ಅವರೇ ಕಾರಣ ಎಂದು ನಟಿ ಕಂಗನಾ ರಣಾವತ್ (Kangana Ranaut) ಆರೋಪಿಸಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದಾ ಸೋಶಿಯಲ್ ಮೀಡಿಯಾ ಮೂಲಕ ಸುದ್ದಿ ಮಾಡುವವರು. ಇದೀಗ ನಟಿ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್ ಜೋಹರ್ ಅವರ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗುವುದಕ್ಕೆ ಕರಣ್ ಅವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Kangana Ranaut: ಚಿತ್ರರಂಗದಲ್ಲೇ ಅತ್ಯಂತ ದುಬಾರಿ ವ್ಯಾನಿಟಿ ವ್ಯಾನ್ ಬಳಸುತ್ತಿರುವ ನಟಿ ಕಂಗನಾ ರಣಾವತ್!
ಟ್ವಿಟರ್‌ನಲ್ಲಿ ಸಾಲು ಸಾಲು ಟ್ವೀಟ್ ಮಾಡಿರುವ ನಟಿ, “ಪ್ರಿಯಾಂಕಾ ವಿರುದ್ಧ ಹಲವರು ಗ್ಯಾಂಗ್ ಮಾಡಿಕೊಂಡರು. ಅವರ ಸಿನಿಮಾ ಕ್ಷೇತ್ರವನ್ನು ಬಿಟ್ಟು ಹೋಗುವಂತೆ ಹಿಂದೆ ಬಿದ್ದರು. ಸ್ವಯಂ ಪ್ರಯತ್ನದಿಂದ ಮೇಲೆ ಬಂದಿದ್ದ ಹೆಣ್ಣೊಬ್ಬರು ಭಾರತವನ್ನೇ ಬಿಟ್ಟು ಹೋಗುವಂತೆ ಮಾಡಿದರು. ಕರಣ್ ಜೋಹರ್ ಅವರು ಆಕೆಯನ್ನು ಬ್ಯಾನ್ ಮಾಡಿದ ವಿಚಾರ ಎಲ್ಲರಿಗೂ ತಿಳಿದಿದೆ” ಎಂದು ಬರೆದುಕೊಂಡಿದ್ದಾರೆ.
“ಶಾರುಖ್ ಖಾನ್ ಅವರೊಂದಿಗೆ ಪ್ರಿಯಾಂಕಾ ಸ್ನೇಹದಿಂದ ಇದ್ದಿದ್ದು ಕರಣ್‌ಗೆ ಆಗಲಿಲ್ಲ. ಹಾಗಾಗಿ ಅವರ ವಿರುದ್ಧ ಎಲ್ಲರನ್ನೂ ಎತ್ತಿಕಟ್ಟಿದರು. ಅದೇ ಕಾರಣಕ್ಕೆ ಆಕೆ ಭಾರತವನ್ನೇ ತೊರೆಯಬೇಕಾಯಿತು. ಈ ಅಸಹ್ಯಕರ, ಅಸೂಯೆ, ನೀಚ ಮತ್ತು ವಿಷಕಾರಿ ವ್ಯಕ್ತಿಗೆ ಚಲನಚಿತ್ರೋದ್ಯಮದ ಸಂಸ್ಕೃತಿ ಮತ್ತು ಪರಿಸರವನ್ನು ಹಾಳು ಮಾಡಿದ್ದಾರೆ. ಅವರ ಗ್ಯಾಂಗ್ ಮೇಲೆ ದಾಳಿ ನಡೆಸಿ ಬಂಧಿಸಬೇಕು” ಎಂದು ನಟಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Kangana Ranaut: ಇನ್ನೂ ಗದ್ದೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಕಂಗನಾ ತಾಯಿ! ನಾನೇ ಕಾರಣ ಎಂದ ಕಂಗನಾ
ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ತಾವು ಬಾಲಿವುಡ್ ತೊರೆಯುವುದಕ್ಕೆ ಕಾರಣ ಹೇಳಿಕೊಂಡಿದ್ದರು. “ಬಾಲಿವುಡ್‌ನಲ್ಲಿ ನನ್ನ ಮೂಲೆಗೆ ಹಾಕಲಾಯಿತು. ರಾಜಕೀಯ ಮಾಡಲಾಯಿತು. ಅದರಿಂದ ಬೇಸತ್ತು ಹೊರಬಂದೆ” ಎಂದು ಅವರು ಹೇಳಿದ್ದರು. ನಟಿ 2015ರಲ್ಲಿ ಬಾಲಿವುಡ್ ತೊರೆದು ಹಾಲಿವುಡ್ ಸೇರಿಕೊಂಡಿದ್ದಾರೆ.
South Cinema
Kareena Kapoor: ಉರ್ಫಿ ತುಂಬ ಧೈರ್ಯಶಾಲಿ ಎಂದು ಹಾಡಿ ಹೊಗಳಿದ ಕರೀನಾ ಕಪೂರ್
ಕರೀನಾ ಕಪೂರ್ (Kareena Kapoor) ಸಂದರ್ಶನವೊಂದರಲ್ಲಿ ಉರ್ಫಿಯನ್ನು ಹೊಗಳಿದ್ದಾರೆ. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್ ಅವರಷ್ಟು ಧೈರ್ಯಶಾಲಿಯಲ್ಲ ಎಂದಿದ್ದಾರೆ. ಸದಾ ಉಡುಪಿನ ಮೂಲಕವೇ ಕೆಂಗಣ್ಣಿಗೆ ಗುರಿಯಾಗುತ್ತಿರುವ ನಟಿಯ ಬಗ್ಗೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ನಟಿಯ ಫ್ಯಾಶನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ.
ಬೆಂಗಳೂರು: ಫ್ಯಾಷನ್ ಐಕಾನ್ ಅಂತಯೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (urfi javed) ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿಯನ್ನು ಗಳಿಸಿದರು. ಸದಾ ಉಡುಪಿನ ಮೂಲಕವೇ ಕೆಂಗಣ್ಣಿಗೆ ಗುರಿಯಾಗುತ್ತಿರುವ ನಟಿಯ ಬಗ್ಗೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ನಟಿಯ ಫ್ಯಾಶನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ತಾರೆ ಕರೀನಾ ಕಪೂರ್ (Kareena Kapoor) ಅವರು ಉರ್ಫಿ ಜಾವೇದ್ ಅವರನ್ನು ಹೊಗಳಿದ್ದಾರೆ. ʻʻಉರ್ಫಿ ತುಂಬ ‘ಧೈರ್ಯಶಾಲಿ’ ಎಂದು ಹೇಳಿದ್ದಾರೆ.
ಕರೀನಾ ಕಪೂರ್ ಸಂದರ್ಶನವೊಂದರಲ್ಲಿ ಉರ್ಫಿಯನ್ನು ಹೊಗಳಿದ್ದಾರೆ. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್ ಅವರಷ್ಟು ಧೈರ್ಯಶಾಲಿಯಲ್ಲ. ಫ್ಯಾಷನ್ ಎನ್ನುವುದು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಅವರ ಒಂದು ಈ ಆತ್ಮವಿಶ್ವಾಸ ಇಂದು ಇಲ್ಲಿಗೆ ತಂದಿದೆ. ಉರ್ಫಿ ಅದ್ಭುತವಾಗಿ ಕಾಣುತ್ತಾರೆ ಎಂದು ನಾನು ಭಾವಿಸುತ್ತೇನೆʼʼಎಂದರು.
ಮಾತು ಮುಂದುವರಿಸಿ ʻʻತನಗೆ ಬೇಕಾದಂತಹ ಫ್ಯಾಷನ್ ಅನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಫ್ಯಾಷನ್ ಅಂದರೆ. ನಿಮ್ಮ ಸ್ಕಿನ್‌ಗೆ ಯಾವುದು ಆರಾಮದಾಯಕವಾಗಿರುತ್ತದೆಯೋ ಅದನ್ನು ನೀವು ಮುಂದುವರಿಸಿ. ಉರ್ಫಿ ಅವರ ನಾನು ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ. ನಾನು ಆತ್ಮವಿಶ್ವಾಸದ ಹುಡುಗಿ. ಉರ್ಫಿ ಅವರು ನಡೆದುಕೊಳ್ಳುವ ರೀತಿಯನ್ನು ಪ್ರೀತಿಸುತ್ತೇನೆ. ಹ್ಯಾಟ್ಸ್ ಆಫ್ ಉರ್ಫಿ.”ಎಂದಿದ್ದಾರೆ.
ಇದನ್ನೂ ಓದಿ: Urfi Javed: ಇದು ಡಬಲ್ ಧಮಾಕಾ! ಒಟ್ಟಿಗೆ ಕಾಣಿಸಿಕೊಂಡ ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್!
ಕೆಲಸದ ಮುಂಭಾಗದಲ್ಲಿ, ಕರೀನಾ ಕೊನೆಯದಾಗಿ ಅಮೀರ್ ಖಾನ್ ಅವರೊಂದಿಗೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡರು. ಮುಂದೆ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್, ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಮತ್ತು ದಿ ಕ್ರ್ಯೂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
ಕರ್ನಾಟಕ16 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್17 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್14 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ15 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!