Site icon Vistara News

Chandramukhi-2 | ಸೂಪರ್‌ ಸ್ಟಾರ್‌ ರಜನಿಕಾಂತ್‌ ಆಶೀರ್ವಾದದೊಂದಿಗೆ ಚಂದ್ರಮುಖಿ-2 ಶೂಟಿಂಗ್‌ ಕಿಕ್‌ ಸ್ಟಾರ್ಟ್‌

Chandramukhi 2

ಬೆಂಗಳೂರು : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ನಟಿಸಿರುವ ಚಂದ್ರಮುಖಿ ಮೊದಲ ಭಾಗ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಅಂದ ಹಾಗೆ ಹಲವು ಭಾಷೆಗೆ ಆ ಸಿನಿಮಾ ಡಬ್ ಆಗಿ ಕಮಾಲ್ ಮಾಡಿತ್ತು. ಈಗ ಚಂದ್ರಮುಖಿ-2 ಸಿನಿಮಾ (Chandramukhi-2 ) ಶೂಟಿಂಗ್ ಶುರುವಾಗಿದೆ. ಇದರ ನಿಮಿತ್ತ ಶುಕ್ರವಾರ (ಜು.15) ನಟ ರಾಘವ ಲಾರೆನ್ಸ್ ಅವರು ಗುರು ರಜನಿಕಾಂತ್ ಅವರ ಆಶಿರ್ವಾದ ಪಡೆದು ಶೂಟಿಂಗ್‌ ಕಿಕ್‌ಸ್ಟಾರ್ಟ್‌ ಮಾಡಿದ್ದಾರೆ.

ವಿಶೇಷ ಅಂದರೆ ಚಂದ್ರಮುಖಿ-2 ಸಿನಿಮಾದಲ್ಲಿ ರಾಘವ ಲಾರೆನ್ಸ್ ನಟಿಸುತ್ತಿದ್ದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಚಂದ್ರಮುಖಿ-2 ಸಿನಿಮಾಗೆ ಮೈಸೂರಿನಲ್ಲಿ ಚಿತ್ರೀಕರಣ ಮಾಡುವುದಾಗಿ ಟ್ವೀಟ್‌ ಮೂಲಕ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Women Film Directors | ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಪ್ರಮುಖ ಮಹಿಳಾ ನಿರ್ದೇಶಕಿಯರು

2005ರಲ್ಲಿ ಬಿಡುಗಡೆಯಾದ ಈ ಚಿತ್ರವು ಮಲಯಾಳಂ ಚಲನಚಿತ್ರ ʻಮಣಿಚಿತ್ರತ್ತಾಳ್‌ʼನ ರಿಮೇಕ್ ಆಗಿತ್ತು. ನಿರ್ದೇಶಕ ಪಿ.ವಾಸು ಅವರು ನಿರ್ದೇಶಿಸಿದ ಚಿತ್ರಕ್ಕೆ ರಜನಿಕಾಂತ್, ಪ್ರಭು, ಜ್ಯೋತಿಕಾ, ವಡಿವೇಲು ಮತ್ತು ನಯನತಾರಾ ನಟಿಸಿದ್ದರು.

ಚಿತ್ರದ ಮುಂದುವರಿದ ಭಾಗವನ್ನು ನಿರ್ದೇಶಕ ಪಿ.ವಾಸು ನಿರ್ದೇಶಿಸಲಿದ್ದಾರೆ. ನಟ ರಾಘವ ಲಾರೆನ್ಸ್ ಮತ್ತು ವಡಿವೇಲು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಆರ್‌.ಡಿ ರಾಜಶೇಖರ್ ಛಾಯಾಗ್ರಹಣ ಮಾಡುತ್ತಿದ್ದು, ಎಂ.ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ರಾಘವ್ ಲಾರೆನ್ಸ್ ಈ ಹಿಂದೆ ʻಶಿವಲಿಂಗʼ, ʻಕಾಂಚನʼ, ʻಪಾಂಡಿʼ ಮತ್ತು ʻಸ್ಟೈಲ್ʼ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಟ ಅಕ್ಷಯ್ ಕುಮಾರ್ ಮತ್ತು ಕಿಯಾರಾ ಆಡ್ವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಾಲಿವುಡ್ ಚಿತ್ರ ಲಕ್ಷ್ಮಿಯನ್ನು ಸಹ ನಿರ್ದೇಶಿಸಿದ್ದಾರೆ. ಇದು ಅವರದೇ ತಮಿಳು ಚಿತ್ರ ಕಾಂಚನದ ರಿಮೇಕ್ ಆಗಿತ್ತು.

ಇದನ್ನೂ ಓದಿ | Captain Miller Film | ಐತಿಹಾಸಿಕ ಕಥೆಯೊಂದಿಗೆ ಬರುತ್ತಿದ್ದಾರೆ ನಟ ಧನುಷ್‌: ಸೆಟ್ಟೇರಲಿದೆ ಕ್ಯಾಪ್ಟನ್ ಮಿಲ್ಲರ್

Exit mobile version