Site icon Vistara News

Raghavendra Rajkumar | ಸೆಟ್ಟೇರಲು ಸಜ್ಜಾಗಿದೆ ರಾಘವೇಂದ್ರ ರಾಜ್‌ಕುಮಾರ್‌ ಆಪರೇಷನ್‌ U ಚಿತ್ರ!

Raghavendra Rajkumar

ಬೆಂಗಳೂರು: ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಸಿನಿಮಾಗಳಲ್ಲಿ ಮತ್ತೆ ಆ್ಯಕ್ಟಿವ್‌ ಆಗುತ್ತಿದ್ದಾರೆ. ಜೇಮ್ಸ್‌ ಚಿತ್ರದಲ್ಲಿ ಗುರೂಜಿ ಪಾತ್ರವನ್ನು ನಿರ್ವಹಿಸಿದ ಇವರು ಮತ್ತೆ ಅಂತಹದ್ದೇ ರೋಲ್‌ ಈ ಸಿನಿಮಾದಲ್ಲಿ ಮಾಡುತ್ತಿದ್ದಾರೆ. ಇವರ ಅಭಿನಯದ ʻಆಪರೇಷನ್‌ Uʼ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

ಶೀರ್ಷಿಕೆಯೇ ತುಂಬಾ ಕುತೂಹಲಕರವಾಗಿದೆ. ಚಿತ್ರಕ್ಕೆ ಅವಿರಾಮ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದ ಕಥೆ ಟೈಟಲ್‌ನಲ್ಲಿಯೇ ಕಥೆ ಅಡಗಿದ್ದು, ಚಿತ್ರತಂಡ ಈ ಸಿನಿಮಾದ ಅರ್ಥದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ʻಬಿ ಅವೇರ್‌…ಯು ಆರ್‌ ಟಾರ್ಗೇಟೆಡ್‌ʼ (Be aware… you are targeted) ಎಂಬ ಟ್ಯಾಗ್‌ ಲೈನ್‌ ಕೂಡ ಹೊಂದಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆಮಾಡಿದೆ.

ಈ ಸಿನಿಮಾ ಸಸ್ಪೆನ್ಸ್‌ ಜಾನರ್‌ನಲ್ಲಿ ಮೂಡಿ ಬರುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಯಶ್ ಶೆಟ್ಟಿ ಮೇನ್ ಲೀಡ್‌ನಲ್ಲಿದ್ದಾರೆ. ಸೋನಲ್ ಮೊಂಥೆರೋ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಲಾಸ್ಯಾ ನಾಗರಾಜ್ ಕೂಡ ಇಲ್ಲಿರುವುದು ವಿಶೇಷ. ಈ ಚಿತ್ರದಲ್ಲಿ ರವಿಶಂಕರ್‌, ಧರ್ಮ, ಅವಿನಾಶ್‌, ಮಾಳವಿಕಾ, ಸ್ಪರ್ಶ ರೇಖಾ, ಗೋವಿಂದೇ ಗೌಡ (ಜಿಜಿ), ವೀಣಾ ಸುಂದರ್‌ ಹೀಗೆ ಅನೇಕರು ಅಭಿನಯಿಸುತ್ತಿದ್ದಾರೆ. ವಿದ್ಮಹಿ ಪ್ರೊಡಕ್ಷನ್ಸ್ ಅಡಿಯಲ್ಲಿ ಮಂಜುನಾಥ ಆರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಆಪರೇಷನ್‌ U ಸಿನಿಮಾದ ತಂಡ ಸೆ.10ರಂದು ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಸಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಶೂಟಿಂಗ್‌ ಪ್ರಾರಂಭಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ | Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Exit mobile version