ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಇವೆಂಟ್ ಪುನೀತ ಪರ್ವ (Puneeth Parva) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಅಪ್ಪು ಬಾಲನಟನಾಗಿ ಮಾಡಿದ ಪಾತ್ರಗಳನ್ನು ಮಕ್ಕಳು ಮಾಡುವ ಮೂಲಕ ಪುನೀತ್ ರಾಜಕುಮಾರ್ ಅವರ ಅಮೋಘ ನಟನೆಯನ್ನು ನೆನಪಿಸಿದರು. ಇನ್ನು ರಾಘವೇಂದ್ರ ರಾಜಕುಮಾರ್ ಅವರು ಅಪ್ಪು ಹಾಡಿದ ಮೊದಲ ಹಾಡನ್ನು ಹಾಡುವ ಮೂಲಕ ಎಲ್ಲರನ್ನೂ ಅಪ್ಪು ನೆನಪಿನ ಮಡುವಿನಲ್ಲಿ ಸಿಲುಕುವಂತೆ ಮಾಡಿದರು.
ಪುನೀತ್ ರಾಜಕುಮಾರ್ ಅವರು ಹಾಡಿದ ಮೊದಲ ಹಾಡಾದ “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ” ಎಂಬ ಹಾಡನ್ನು ಹಾಡಿದರು. ಇದಕ್ಕೂ ಮೊದಲು ಪುನೀತ್ ರಾಜಕುಮಾರ್ ಅವರು ಐದು ವರ್ಷದವರಿದ್ದಾಗಲೇ ಈ ಹಾಡನ್ನು ಹೇಗೆ ಹಾಡಿದರು, ರಾಜಕುಮಾರ್ ಅವರು ಹೇಗೆ ಅವರು ಹಾಡುವಂತೆ ಮಾಡಿದರು, ಹಾಡುವುದನ್ನು ಕಲಿಸಿದರು ಎಂಬುದನ್ನು ಮೆಲುಕು ಹಾಕಿದರು.
“ಅದು 1980ನೇ ಇಸವಿ. ಪುನೀತ್‌ಗೆ ಆಗ ಐದು ವರ್ಷ. ಅವನು ತಂದೆಯವರ ಜತೆಯೇ ಇರುತ್ತಿದ್ದ. ಆಗಾಗ ಹಾಡುತ್ತಿದ್ದ. ಇದನ್ನು ನೋಡಿದ ಅಪ್ಪಾಜಿಯವರು, ಅಪ್ಪುವಿನಿಂದ ಒಂದು ಹಾಡು ಹಾಡಿಸಬೇಕು ಎಂದರು. ಕೊನೆಗೆ ಅಪ್ಪು ಹಾಡುವಾಗ ಅಪ್ಪಾಜಿಯವರು ಸ್ಟೂಡಿಯೊಗೆ ಹೋಗಲು ಆಗದೆ, ಸಿನಿಮಾ ಶೂಟಿಂಗ್‌ಗೆ ಹೋದರು. ಆದರೆ, ಅವರಿಗೆ ಅಪ್ಪು ಹೇಗೆ ಹಾಡಿದ ಎಂಬ ಕಳವಳ ಇತ್ತು. ಮರುದಿನ ಮನೆಗೆ ಬಂದು ಅಪ್ಪು ಹಾಡಿದ ಹಾಡು ಕೇಳಿ ಖುಷಿಪಟ್ಟರು. ಅಪ್ಪು ಹಾಡಿದ ಮೊದಲ ಹಾಡು ನನ್ನ ಜೀವ ಇರುವವರೆಗೆ ಇರುತ್ತದೆ” ಎಂದು ರಾಘವೇಂದ್ರ ರಾಜಕುಮಾರ್ ಹಾಡಿದರು.
ಇದನ್ನೂ ಓದಿ | Puneeth Parva | ಪುನೀತ ಪರ್ವ ಕಾರ್ಯಕ್ರಮಕ್ಕಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್ ಏರಿದ ಅಭಿಮಾನಿ