ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್ (Rahul And Athiya) ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಇದೇ ತಿಂಗಳು (ಜನವರಿ) 23ರಂದು ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಜೋಡಿ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ ಎರಡೂ ಕುಟುಂಬಗಳ ಮನೆಯ ಮುಂದೆ ದೀಪಗಳಿಂದ ಅಲಂಕರಿಸಲಾಗಿದೆ. ಫೋಟೊಗಳು ವೈರಲ್ ಆಗಿವೆ. ಮೊದಲ ಬಾರಿಗೆ ಕೆ.ಎಲ್ ರಾಹುಲ್ ಅವರು ಅಥಿಯಾ ಜತೆಗಿನ ಸಂಬಂಧವನ್ನು ಅಧಿಕೃತಗೊಳಿಸಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನವೆಂಬರ್ 5, 2021ರಂದು ಅಥಿಯಾ ಅವರ ಜನುಮದಿನಕ್ಕೆ ಮೊದಲ ಬಾರಿಗೆ ಕೆ.ಎಲ್ ರಾಹುಲ್ ಅವರು ಅಥಿಯಾ ಅವರನ್ನು ಅಪ್ಪಿಕೊಂಡಿರುವ ಫೋಟೊ ಶೇರ್ ಮಾಡಿಕೊಂಡಿದ್ದರು. ʻʻಹುಟ್ಟುಹಬ್ಬದ ಶುಭಾಶಯಗಳು ಎಂದು ಕೆಂಪು ಹೃದಯದ ಎಮೋಜಿಯೊಂದಿಗೆ” ಪೋಸ್ಟ್ ಶೇರ್ ಮಾಡಿದ್ದರು.
ಇದನ್ನೂ ಓದಿ | Rahul And Athiya | ದೀಪಗಳಿಂದ ಅಲಂಕರಿಸಿದ ಕೆ.ಎಲ್ ರಾಹುಲ್ ನಿವಾಸ: ಮದುವೆ ತಯಾರಿ ಬಲು ಜೋರು?
ಜನವರಿ 21 ರಿಂದ ಜನವರಿ 23ರವರೆಗೆ ಮುಂಬೈನ ಖಂಡಾಲಾದ ಸುನೀಲ್ ಶೆಟ್ಟಿ ಅವರ ಮನೆ ಜಹಾನ್ನಲ್ಲಿ ಮದುವೆ ಸಂಭ್ರಮ ನೆರವೇರಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎನ್ನಲಾಗುತ್ತಿದೆ. ಅಥಿಯಾ ಮತ್ತು ಕೆ.ಎಲ್ ರಾಹುಲ್ ಈ ವಾರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವುದರಿಂದ ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ಹೌಸ್ ಬೆಳಗುತ್ತಿದೆ ಎಂದು ವರದಿಯಾಗಿದೆ.
ಅಥಿಯಾ ಮತ್ತು ರಾಹುಲ್ ಅವರ ವಿವಾಹ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದ್ದು, ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ರಾಹುಲ್ ಆಗಲಿ ಅಥಿಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯ ದಿನಾಂಕದ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
ಇದನ್ನೂ ಓದಿ | Rahul And Athiya | ಜನವರಿ 23ಕ್ಕೆ ವಿವಾಹವಾಗಲಿದ್ದಾರೆ ಕೆ.ಎಲ್ ರಾಹುಲ್, ಅಥಿಯಾ ಶೆಟ್ಟಿ; ವರದಿ