Rahul And Athiya | ಜ. 23ಕ್ಕೆ ಮದುವೆ: ಅಥಿಯಾ ಜತೆಗಿನ ಸಂಬಂಧದ ಬಗ್ಗೆ ಕೆ.ಎಲ್‌. ರಾಹುಲ್‌ ಹೇಳಿಕೊಂಡ ಮೊದಲ ಪೋಸ್ಟ್‌ ಈಗ ವೈರಲ್‌ - Vistara News

ಬಾಲಿವುಡ್

Rahul And Athiya | ಜ. 23ಕ್ಕೆ ಮದುವೆ: ಅಥಿಯಾ ಜತೆಗಿನ ಸಂಬಂಧದ ಬಗ್ಗೆ ಕೆ.ಎಲ್‌. ರಾಹುಲ್‌ ಹೇಳಿಕೊಂಡ ಮೊದಲ ಪೋಸ್ಟ್‌ ಈಗ ವೈರಲ್‌

ಮೊದಲ ಬಾರಿಗೆ ಕೆ.ಎಲ್‌ ರಾಹುಲ್‌ ಅವರು ಅಥಿಯಾ‌ (Rahul And Athiya) ಜತೆಗಿನ ಸಂಬಂಧವನ್ನು ಅಧಿಕೃತಗೊಳಿಸಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

VISTARANEWS.COM


on

Rahul And Athiya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟೀಮ್​​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್ (Rahul And Athiya) ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಇದೇ ತಿಂಗಳು (ಜನವರಿ) 23ರಂದು ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಜೋಡಿ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ ಎರಡೂ ಕುಟುಂಬಗಳ ಮನೆಯ ಮುಂದೆ ದೀಪಗಳಿಂದ ಅಲಂಕರಿಸಲಾಗಿದೆ. ಫೋಟೊಗಳು ವೈರಲ್‌ ಆಗಿವೆ. ಮೊದಲ ಬಾರಿಗೆ ಕೆ.ಎಲ್‌ ರಾಹುಲ್‌ ಅವರು ಅಥಿಯಾ ಜತೆಗಿನ ಸಂಬಂಧವನ್ನು ಅಧಿಕೃತಗೊಳಿಸಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ನವೆಂಬರ್ 5, 2021ರಂದು ಅಥಿಯಾ ಅವರ ಜನುಮದಿನಕ್ಕೆ ಮೊದಲ ಬಾರಿಗೆ ಕೆ.ಎಲ್‌ ರಾಹುಲ್‌ ಅವರು ಅಥಿಯಾ ಅವರನ್ನು ಅಪ್ಪಿಕೊಂಡಿರುವ ಫೋಟೊ ಶೇರ್‌ ಮಾಡಿಕೊಂಡಿದ್ದರು. ʻʻಹುಟ್ಟುಹಬ್ಬದ ಶುಭಾಶಯಗಳು ಎಂದು ಕೆಂಪು ಹೃದಯದ ಎಮೋಜಿಯೊಂದಿಗೆ” ಪೋಸ್ಟ್‌ ಶೇರ್‌ ಮಾಡಿದ್ದರು.

ಇದನ್ನೂ ಓದಿ | Rahul And Athiya | ದೀಪಗಳಿಂದ ಅಲಂಕರಿಸಿದ ಕೆ.ಎಲ್‌ ರಾಹುಲ್ ನಿವಾಸ: ಮದುವೆ ತಯಾರಿ ಬಲು ಜೋರು?

ಜನವರಿ 21 ರಿಂದ ಜನವರಿ 23ರವರೆಗೆ ಮುಂಬೈನ ಖಂಡಾಲಾದ ಸುನೀಲ್ ಶೆಟ್ಟಿ ಅವರ ಮನೆ ಜಹಾನ್‌ನಲ್ಲಿ ಮದುವೆ ಸಂಭ್ರಮ ನೆರವೇರಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎನ್ನಲಾಗುತ್ತಿದೆ. ಅಥಿಯಾ ಮತ್ತು ಕೆ.ಎಲ್ ರಾಹುಲ್ ಈ ವಾರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವುದರಿಂದ ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್ ಬೆಳಗುತ್ತಿದೆ ಎಂದು ವರದಿಯಾಗಿದೆ.

ಅಥಿಯಾ ಮತ್ತು ರಾಹುಲ್ ಅವರ ವಿವಾಹ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದ್ದು, ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ರಾಹುಲ್​ ಆಗಲಿ ಅಥಿಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯ ದಿನಾಂಕದ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ | Rahul And Athiya | ಜನವರಿ 23ಕ್ಕೆ ವಿವಾಹವಾಗಲಿದ್ದಾರೆ ಕೆ.ಎಲ್​ ರಾಹುಲ್, ಅಥಿಯಾ ಶೆಟ್ಟಿ; ವರದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Hamare Baarah: ಮುಸ್ಲಿಂ ಮಹಿಳೆಯರ ಕುರಿತ ಹಮಾರೆ ಬಾರಾ ಸಿನಿಮಾ ರಿಲೀಸ್‌ಗೆ ಕೋರ್ಟ್‌ ಗ್ರೀನ್‌ ಸಿಗ್ನಲ್!

Hamare Baarah: ಹಮಾರೆ ಬಾರಾ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಬಾಂಬೆ ಹೈಕೋರ್ಟ್‌ ಆದೇಶ ಹೊರಡಿಸಿದೆ. ಅದರಂತೆ, ಜೂನ್‌ 7ರಂದು ಸಿನಿಮಾ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

VISTARANEWS.COM


on

Hamare Baarah
Koo

ಮುಂಬೈ: ಇಸ್ಲಾಂ, ಮುಸ್ಲಿಂ ಮಹಿಳೆಯರು, ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತ ಕಥಾಹಂದರ ಹೊಂದಿರುವ, ಆದರೆ, ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಕಾರಣವಾಗಿದ್ದ ಹಮಾರೆ ದೋ (Hamare Baarah) ಸಿನಿಮಾವನ್ನು ಬಿಡುಗಡೆಗೊಳಿಸಲು ಕೊನೆಗೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಹಮಾರೆ ದೋ ಸಿನಿಮಾವನ್ನು ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್‌ (Bombay High Court) ಅನುಮತಿ ನೀಡಿದ್ದು, ಅದರಂತೆ ಶುಕ್ರವಾರ (ಜೂನ್‌ 6) ಸಿನಿಮಾ ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ಒಂದಷ್ಟು ದೃಶ್ಯಗಳನ್ನು, ಸಂಭಾಷಣೆಯನ್ನು ತೆಗೆಯಬೇಕು. ಒಬ್ಬ ಮುಸ್ಲಿಂ ಸದಸ್ಯ ಸೇರಿ ಮೂವರು ಇರುವ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್‌ ತಿಳಿಸಿತು. ಅದರಂತೆ, ಜೂನ್‌ 7ರಂದು ಸಿನಿಮಾ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸಿನಿಮಾದ ಕತೆ ಏನು?

ಮನ್ಸೂರ್‌ ಅಲಿ ಖಾನ್‌ ಸಂಜಾರಿ ಎಂಬ ಮುಸ್ಲಿಂ ವ್ಯಕ್ತಿಯ ಸುತ್ತಲೂ ನಡೆಯುವ ಕತೆಯನ್ನು ಹೆಣೆಯಲಾಗಿದೆ. ಮನ್ಸೂರ್‌ ಅಲಿ ಖಾನ್‌ ಸಂಜಾರಿಯ ಮೊದಲ ಪತ್ನಿಯು ಹೆರಿಗೆ ವೇಳೆಯೇ ನಿಧನರಾಗುತ್ತಾರೆ. ಆದರೆ, ಮಕ್ಕಳು ಬೇಕು ಎಂಬ ಕಾರಣಕ್ಕಾಗಿ ಎರಡನೇ ಮದುವೆಯಾಗುವ ಆತನು, ಎರಡನೇ ಪತ್ನಿಯೊಂದಿಗೆ 5 ಮಕ್ಕಳೊಂದಿಗೆ ಪಡೆಯುವ ಆತನು, ಪತ್ನಿಯು 6ನೇ ಬಾರಿ ಗರ್ಭಿಣಿಯಾಗುತ್ತಾರೆ. ಆಗ ವೈದ್ಯರು, ಮಹಿಳೆ ಜೀವಕ್ಕೆ ಕುತ್ತಿದೆ, ಗರ್ಭಪಾತ ಮಾಡಿಸಬೇಕು ಎಂದು ಹೇಳುತ್ತಾರೆ. ಆದರೆ, ಗರ್ಭಪಾತಕ್ಕೆ ಮನ್ಸೂರ್‌ ಅಲಿ ಖಾನ್‌ ಸಂಜಾರಿ ನಿರಾಕರಿಸುತ್ತಾನೆ.

ಮನ್ಸೂರ್‌ ಅಲಿ ಖಾನ್‌ ಸಂಜಾರಿಯ ಮೊದಲನೇ ಪತ್ನಿಯ ಮಗಳು ಮಲತಾಯಿಯ ಹಕ್ಕುಗಳಿಗಾಗಿ ಹೋರಾಡಲು ಕೋರ್ಟ್‌ ಮೊರೆ ಹೋಗುತ್ತಾಳೆ. ಕೋರ್ಟ್‌ನಲ್ಲಿ ಆಕೆಯ ವಾದ ಏನಿರುತ್ತದೆ? ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳೇನು? ಮುಸ್ಲಿಂ ಮಹಿಳೆಯರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡುತ್ತಾಳೆ. ಕತೆಯಲ್ಲಿ ಮುಂದೇನಾಗುತ್ತದೆ ಎಂಬುದೇ ಕುತೂಹಲವಾಗಿದೆ. ಆದರೆ, ಸಿನಿಮಾಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಸಂಘಟನೆಗಳು ಕೋರ್ಟ್‌ ಮೊರೆ ಹೋಗಿದ್ದವು.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

Continue Reading

ಬಾಲಿವುಡ್

Bajrangi Bhaijaan 2: `ಬಜರಂಗಿ ಭಾಯಿಜಾನ್ 2ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌!

Bajrangi Bhaijaan 2: ಆಯುಷ್ ಶರ್ಮಾ ಅವರ ಮುಂಬರುವ ಚಿತ್ರ ‘ರುಸ್ಲಾನ್’ ಪ್ರಚಾರಕ್ಕಾಗಿ ಕೆಕೆ ರಾಧಾಮೋಹನ್ ಹೈದರಾಬಾದ್‌ನಲ್ಲಿದ್ದರು. ಅಲ್ಲಿಯೇ ಈ ಹಿಂದೆ ‘ಬಜರಂಗಿ ಭಾಯಿಜಾನ್ 2’ ‘ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ವಿಜಯೇಂದ್ರ ಪ್ರಸಾದ್ ನನಗಾಗಿ ಎರಡು ಕಥೆಗಳನ್ನು ಬರೆದಿದ್ದಾರೆ. ಒಂದು ‘ವಿಕ್ರಮಾರ್ಕುಡು 2’, ಅದು ಹಿಂದಿಯಲ್ಲಿ ‘ರೌಡಿ ರಾಥೋರ್ 2’ ಎಂದು ಆಗುತ್ತಿದೆ. ಸದ್ಯ ಉತ್ತಮ ಪಾತ್ರಕ್ಕಾಗಿ ತಾರೆಯರನ್ನು ಹುಡುಕುತ್ತಿದ್ದೇವೆʼʼ ಎಂದಿದ್ದರು. ಈ ಹಿಂದೆ ಸಲ್ಮಾನ್ ಖಾನ್ ಕೂಡ ‘ಬಜರಂಗಿ ಭಾಯಿಜಾನ್ 2’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಚಿತ್ರಕ್ಕೆ ‘ಪವನ್ ಪುತ್ರ ಭಾಯಿಜಾನ್’ ಎಂದು ಟೈಟಲ್ ಇಡುವುದಾಗಿಯೂ ಹೇಳಿದ್ದರು.

VISTARANEWS.COM


on

Bajrangi Bhaijaan 2 Kabir Khan Says Sequel Of Salman Khan
Koo

ಬೆಂಗಳೂರು: ಕಬೀರ್ ಖಾನ್ ಅವರ `ಬಜರಂಗಿ ಭಾಯಿಜಾನ್” (Bajrangi Bhaijaan 2) ಚಿತ್ರದಲ್ಲಿ ಸಲ್ಮಾನ್ ಖಾನ್ ತಮ್ಮ ಅಭಿನಯದಿಂದ ಫ್ಯಾನ್ಸ್‌ ಹೃದಯ ಗೆದ್ದಿದ್ದರು. ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಆರ್‌ಆರ್‌ಆರ್‌ ಪ್ರಿ-ರಿಲೀಸ್ ಸಮಾರಂಭದಲ್ಲಿ, ನಟ ಬಜರಂಗಿ ಭಾಯಿಜಾನ್‌ ಚಿತ್ರದ ಸೀಕ್ವೆಲ್‌ ಬರಲಿದೆ ಎಂದು ಘೋಷಿಸಿದ್ದರು. ಮೂಲ ಚಿತ್ರವನ್ನು ಬರೆದ ಎಸ್ ಎಸ್ ರಾಜಮೌಳಿ ಅವರ ತಂದೆ ಕೆ ವಿ ವಿಜಯೇಂದ್ರ ಪ್ರಸಾದ್ ಅವರು ಮುಂದಿನ ಭಾಗವನ್ನು ಬರೆಯಲಿದ್ದಾರೆ ಎನ್ನಲಾಗಿದೆ. ಕಬೀರ್ ಖಾನ್ 2015 ರಲ್ಲಿ ಬಿಡುಗಡೆಯಾದ `ಬಜರಂಗಿ ಭಾಯಿಜಾನ್ 1” ನಿರ್ದೇಶಿಸಿದರು. ಇದೀಗ ಸೀಕ್ವೆಲ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಕಬಿರ್ ಖಾನ್ ಉತ್ತರಿಸಿ ʻʻಬಜರಂಗಿ ಭಾಯಿಜಾನ್​ ಚಿತ್ರದ ಸೀಕ್ವೆಲ್​ಗೆ ಸ್ಕ್ರಿಪ್ಟ್ ರೆಡಿ ಇದೆಯೇ ಎಂದು ಕೇಳಿದರೆ ಇಲ್ಲ ಎಂಬುದು ನನ್ನ ಉತ್ತರ. ಈ ಸಿನಿಮಾನ ಮುಂದುವರಿಸಲು ಕೆಲವು ಆಲೋಚನೆಗಳು ಇವೆʼʼಎಂದು ಹೇಳಿದ್ದಾರೆ. ಆಯುಷ್ ಶರ್ಮಾ ಅವರ ಮುಂಬರುವ ಚಿತ್ರ ‘ರುಸ್ಲಾನ್’ ಪ್ರಚಾರಕ್ಕಾಗಿ ಕೆಕೆ ರಾಧಾಮೋಹನ್ ಹೈದರಾಬಾದ್‌ನಲ್ಲಿದ್ದರು. ಅಲ್ಲಿಯೇ ಈ ಹಿಂದೆ ‘ಬಜರಂಗಿ ಭಾಯಿಜಾನ್ 2’ ‘ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ವಿಜಯೇಂದ್ರ ಪ್ರಸಾದ್ ನನಗಾಗಿ ಎರಡು ಕಥೆಗಳನ್ನು ಬರೆದಿದ್ದಾರೆ. ಒಂದು ‘ವಿಕ್ರಮಾರ್ಕುಡು 2’, ಅದು ಹಿಂದಿಯಲ್ಲಿ ‘ರೌಡಿ ರಾಥೋರ್ 2’ ಎಂದು ಆಗುತ್ತಿದೆ. ಸದ್ಯ ಉತ್ತಮ ಪಾತ್ರಕ್ಕಾಗಿ ತಾರೆಯರನ್ನು ಹುಡುಕುತ್ತಿದ್ದೇವೆʼʼ ಎಂದಿದ್ದರು. ಈ ಹಿಂದೆ ಸಲ್ಮಾನ್ ಖಾನ್ ಕೂಡ ‘ಬಜರಂಗಿ ಭಾಯಿಜಾನ್ 2’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಚಿತ್ರಕ್ಕೆ ‘ಪವನ್ ಪುತ್ರ ಭಾಯಿಜಾನ್’ ಎಂದು ಟೈಟಲ್ ಇಡುವುದಾಗಿಯೂ ಹೇಳಿದ್ದರು.

ಇದನ್ನೂ ಓದಿ: Salman Khan: ರೆಡಿಯಾಗ್ತಿದೆ ‘ಬಜರಂಗಿ ಭಾಯಿಜಾನ್ 2’: ʻರೌಡಿ ರಾಥೋರ್ 2’ ರಿಲೀಸ್‌ ಯಾವಾಗ?

ಇದನ್ನೂ ಓದಿ: Salman Khan: ರೆಡಿಯಾಗ್ತಿದೆ ‘ಬಜರಂಗಿ ಭಾಯಿಜಾನ್ 2’: ʻರೌಡಿ ರಾಥೋರ್ 2’ ರಿಲೀಸ್‌ ಯಾವಾಗ?

‘ಬಜರಂಗಿ ಭಾಯಿಜಾನ್’ ಸಿನಿಮಾ 2015ರ ಜುಲೈ 17ರಂದು ಬಿಡುಗಡೆ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. 

ʻಈದ್‌ʼಗೆ ಗುಡ್‌ ನ್ಯೂಸ್‌ ಕೊಟ್ಟ ಸಲ್ಮಾನ್ ಖಾನ್!

ಸಲ್ಮಾನ್ ಖಾನ್ (Salman Khan) ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು. ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದರು. ಸಿನಿಮಾಗೆ ‘ಸಿಕಂದರ್’ (Sikandar) ಎಂದು ಶೀರ್ಷಿಕೆ ನೀಡಲಾಗಿತ್ತು. ಈದ್ 2025ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ ಜತೆ ಮಾಹಿತಿ ಹಂಚಿಕೊಂಡಿದ್ದರು.

ಸಲ್ಮಾನ್ ಖಾನ್ ಏಪ್ರಿಲ್ 11ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದರು. ʻಬಡೆ ಮಿಯಾ ಚೋಟೆ ಮಿಯಾʼ ಮತ್ತು ʻಮೈದಾನ್ʼ ಸಿನಿಮಾಗಳನ್ನು ಈ ಈದ್‌ನಲ್ಲಿ ವೀಕ್ಷಿಸಿ, ಮುಂದಿನ ಈದ್‌ನಲ್ಲಿ, ʻಸಿಕಂದರ್‌ʼ ಸಿನಿಮಾ ನೋಡಿ. ನಿಮ್ಮೆಲ್ಲರಿಗೂ ಈದ್ ಮುಬಾರಕ್ ಶುಭಾಶಯಗಳುʼಎಂದು ಬರೆದುಕೊಂಡಿದ್ದರು.

ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

Continue Reading

ಬಾಲಿವುಡ್

Ira Khan: ಬಿಕಿನಿ ಧರಿಸಿ ಕುಣಿದು ಕುಪ್ಪಳಿಸಿದ ಆಮೀರ್ ಪುತ್ರಿ; ಟ್ರೋಲ್‌ ಆದ ಇರಾ ಖಾನ್!

Ira Khan ತಮ್ಮ ಹುಟ್ಟು ಹಬ್ಬದ ದಿನದಂದು ಕೇಕ್​ ಕತ್ತರಿಸುವಾಗ ಇರಾ ಖಾನ್​ ಬಿಕಿನಿ ಧರಿಸಿದ್ದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು.ಆಮಿರ್​ ಖಾನ್​ ಹಾಗೂ ಆಜಾದ್​ ಖಾನ್​ ಸ್ವಿಮ್ಮಿಂಗ್​ ಡ್ರೆಸ್​ನಲ್ಲಿಯೇ ಕಾಣಿಸಿಕೊಂಡಿದ್ದರು. ಎರಡನೇ ಪತ್ನಿ ಕಿರಣ್​ ರಾವ್​ ಅವರ ಪುತ್ರ ಆಜಾದ್​ ಖಾನ್​ ಕೂಡ ಇರಾ ಖಾನ್ ಜನ್ಮದಿನವನ್ನು ಆಚರಿಸಿದ್ದರು.

VISTARANEWS.COM


on

Ira Khan faces trolling for dancing in a bikini
Koo

ಬೆಂಗಳೂರು: ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan) ತಮ್ಮ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಕಿನಿ ಧರಿಸಿ ಪೋಸ್‌ ಕೊಟ್ಟ ವಿಡಿಯೊ ವೈರಲ್‌ ಆಗುತ್ತಿದೆ. ಇದು ಹಳೆಯ ವಿಡಿಯೊ ಆಗಿದ್ದು, ಈಗ ಸಖತ್‌ ಟ್ರೋಲ್‌ ಆಗುತ್ತಿದ್ದಾರೆ ಇರಾ ಖಾನ್‌. ಬಾಲಿವುಡ್ ಗಾಯಕಿ ಸೋನಾ ಮೊಹಾಪಾತ್ರ ಅವರೊಂದಿಗೆ ನೃತ್ಯ ಮಾಡುತ್ತಿರುವ ಹಳೆಯ ವಿಡಿಯೊ ಭಾರಿ ಚರ್ಚೆಗೆ ಒಳಗಾಗಿದೆ.

ಪೂಲ್ ಪಾರ್ಟಿಯಲ್ಲಿ ಬಿಕಿನಿಯನ್ನು ಧರಿಸಿದ್ದಕ್ಕಾಗಿ ಆಮೀರ್‌ ಪುತ್ರಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಕುಟುಂಬದ ಈವೆಂಟ್‌ಗೆ ಈ ಅವತಾರ ಸರಿ ಅಲ್ಲ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಮೀರ್, ನೂಪುರ್ ಶಿಖರೆ ಮತ್ತು ಇತರ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ತಮ್ಮ ಹುಟ್ಟು ಹಬ್ಬದ ದಿನದಂದು ಕೇಕ್​ ಕತ್ತರಿಸುವಾಗ ಇರಾ ಖಾನ್​ ಬಿಕಿನಿ ಧರಿಸಿದ್ದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದರು.ಆಮಿರ್​ ಖಾನ್​ ಹಾಗೂ ಆಜಾದ್​ ಖಾನ್​ ಸ್ವಿಮ್ಮಿಂಗ್​ ಡ್ರೆಸ್​ನಲ್ಲಿಯೇ ಕಾಣಿಸಿಕೊಂಡಿದ್ದರು. ಎರಡನೇ ಪತ್ನಿ ಕಿರಣ್​ ರಾವ್​ ಅವರ ಪುತ್ರ ಆಜಾದ್​ ಖಾನ್​ ಕೂಡ ಇರಾ ಖಾನ್ ಜನ್ಮದಿನವನ್ನು ಆಚರಿಸಿದ್ದರು.

ಇದನ್ನೂ ಓದಿ: Murder Case: ಅಪ್ಪ-ಅಮ್ಮನ ಜಗಳ ಬಿಡಿಸಲು ಹೋದ ಇನ್‌ಫೋಸಿಸ್‌ ಎಂಜಿನಿಯರ್ ತಂದೆಯ ಇರಿತಕ್ಕೆ ಬಲಿ

ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಪುತ್ರಿ, ಇರಾ ಖಾನ್ (Ira Khan and Nupur Wedding: ), ಜನವರಿ 10ರಂದು ಉದಯಪುರದಲ್ಲಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ವಿವಾಹವಾದರು. ಜನವರಿ 3ರಂದು ಈ ಯುವಜೋಡಿ ರಿಜಿಸ್ಟರ್ ಮದುವೆಯಾಗಿತ್ತು. ಜನವರಿ 10ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು. ಜನವರಿ 8ರ ಬೆಳಗ್ಗೆ ಮೆಹಂದಿ ಕಾರ್ಯಕ್ರಮ ನೆರವೇರಿತ್ತು. ಮೆಹಂದಿ ಸಂಭ್ರಮದ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಮೆಹಂದಿ ಸಮಾರಂಭದಲ್ಲಿ ಇರಾ ಹಾಲ್ಟರ್ ನೆಕ್ ಉಡುಪನ್ನು ಧರಿಸಿದ್ದರು.

ಇನ್ನು ವಿವಾಹದ ಸಂದರ್ಭದಲ್ಲಿ ನೂಪುರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಮದುಮಗ ಸಾಮಾನ್ಯವಾಗಿ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆದಿತ್ತು.

Continue Reading

ಬಾಲಿವುಡ್

Hamare Baarah: ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬ್ಯಾನ್‌ ಮಾಡಿದ ಕರ್ನಾಟಕ ಸರ್ಕಾರ

Hamare Baarah:  ಆದೇಶದ ಪ್ರಕಾರ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಚಿತ್ರಮಂದಿರಗಳು, ಖಾಸಗಿ ದೂರದರ್ಶನ ಚಾನೆಲ್‌ಗಳು ಮತ್ತು ಇತರ ಮಾಧ್ಯಮಗಳಲ್ಲಿ ಚಲನಚಿತ್ರ ಮತ್ತು ಟ್ರೈಲರ್‌ ಪ್ರಸಾರವನ್ನು ಸರ್ಕಾರ ನಿಷೇಧಿಸಿದೆ. ಸಿನಿಮಾ ಇದೇ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು.

VISTARANEWS.COM


on

Hamare Baarah Karnataka bans release of movie
Koo

ಬೆಂಗಳೂರು: ‘ ಹಮ್ ದೋ, ಹಮಾರೆ ಬಾರಾ’ (Hamare Baarah) ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧ ಮಾಡಿ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಚಿತ್ರಮಂದಿರಗಳು, ಖಾಸಗಿ ದೂರದರ್ಶನ ಚಾನೆಲ್‌ಗಳು ಮತ್ತು ಇತರ ಮಾಧ್ಯಮಗಳಲ್ಲಿ ಚಲನಚಿತ್ರ ಮತ್ತು ಟ್ರೈಲರ್‌ ಪ್ರಸಾರವನ್ನು ಸರ್ಕಾರ ನಿಷೇಧಿಸಿದೆ. ಸಿನಿಮಾ ಇದೇ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ನಾವಿಬ್ಬರು, ನಮಗೆ ಹನ್ನೆರಡು ಮಂದಿ ಮಕ್ಕಳು ಎನ್ನುವುದು ಈ ಚಿತ್ರದ ಸಾರವಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಮುಸ್ಲಿಂ ಸಂಘಗಳಿಂದ ರಾಜ್ಯ ಸರ್ಕಾರ ಮನವಿ ಕೂಡ ಸ್ವೀಕರಿಸಿತ್ತು. “ಇಂತಹ ಚಿತ್ರಗಳಿಗೆ ಅವಕಾಶ ನೀಡಿದರೆ ಧರ್ಮ, ಜಾತಿಗಳ ನಡುವೆ ದ್ವೇಷ ಸೃಷ್ಟಿಯಾಗುತ್ತದೆ. ದೇಶದಲ್ಲಿ ಉದ್ದೇಶಪೂರ್ವಕವಾಗಿ ಒಂದು ಧರ್ಮವನ್ನು ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ, ದೇಶದಲ್ಲಿ ಅಶಾಂತಿ ಉಂಟುಮಾಡುವ, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರ ಇದಾಗಿದೆ. ಸಮಾಜದಲ್ಲಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕಿರುವಂತಿದೆ ಈ ಸಿನಿಮಾ. ಜೂನ್ 07 ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ವಿವಾದಾತ್ಮಕ ಚಲನಚಿತ್ರ “ಹಮಾರೆ ಬಾರಾ” ಅನ್ನು ಬಿಡುಗಡೆ ಮಾಡದಿರಿʼʼ ಎಂದು ಮನವಿ ಮಾಡಿದ್ದರು. ಧಾರ್ಮಿಕ ಸಮುದಾಯದ ಕಾರ್ಯಕರ್ತರು ಚಿತ್ರದ ಬಿಡುಗಡೆಯ ವಿರುದ್ಧ ಮುಂಬೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Kannada New Movie: ನಾಳೆಯಿಂದ ʻಸಹಾರಾʼ ಆಟ ಶುರು; ಕನ್ನಡದ ಮೊದಲ ಮಹಿಳಾ ಕ್ರಿಕೆಟ್ ಕಥೆಯಾಧಾರಿತ ಸಿನಿಮಾ!

ಸಿನಿಮಾದ ಬಿಡುಗಡೆಗೆ ತಡೆ

ಈ ಸಿನಿಮಾದ ವಿರುದ್ಧ ಅಜರ್ ತಂಬೋಲ್ ಎಂಬುವರು, ಸಿನಿಮಾದ ಟೀಸರ್ ಅನ್ನು ಆಧರಿಸಿ ಸಿನಿಮಾದ ವಿರುದ್ಧ ಬಾಂಬೆ ಹೈಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್, ಜೂನ್ 14 ರವರೆಗೆ ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಅಂದು ಮರು ವಿಚಾರಣೆ ನಡೆಯಲಿದೆ. ಇತ್ತೀಚೆಗೆ ಪುಣೆಯ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ‘ಹಮಾರಾ ಬರಾ’ ಚಿತ್ರದ ಬಿಡುಗಡೆ ದಿನಾಂಕವನ್ನು ಜೂನ್ 14ಕ್ಕೆ ಮುಂದೂಡಿದೆ.‘ಹಮಾರಾ ಬಾರಾಹ್’ ಚಿತ್ರದ ಕೆಲವು ಡೈಲಾಗ್‌ಗಳ ಮೇಲೂ ಆಕ್ಷೇಪ ವ್ಯಕ್ತವಾಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಆ ಬಗ್ಗೆ ಪ್ರಶ್ನೆಗಳೂ ಎದ್ದಿವೆ.

“ನಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ. ನಾವು ಕಷ್ಟಪಟ್ಟು ದುಡಿದ ಕೋಟಿಗಟ್ಟಲೆ ಹಣವನ್ನು ಸಿನಿಮಾಗೆ ಹಾಕಿ, ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾವನ್ನು ನೋಡದೆ ತಡೆಯಾಜ್ಞೆ ತಂದಿರುವುದರಿಂದ ನಮಗೆ ಆಘಾತ ಮತ್ತು ನಿರಾಶೆಯಾಗಿದೆʼʼ ಎಂದು ಚಿತ್ರತಂಡ ಕೂಡ ಹೇಳಿಕೊಂಡಿದೆ.

Continue Reading
Advertisement
Narendra Modi
ದೇಶ6 mins ago

Narendra Modi: ಹಂಗಾಮಿ ಪ್ರಧಾನಿ ಮೋದಿಗೆ ಮೊಸರು-ಸಕ್ಕರೆ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

Narendra Modi
ಸಂಪಾದಕೀಯ28 mins ago

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

T20 World Cup
ಪ್ರಮುಖ ಸುದ್ದಿ28 mins ago

T20 World Cup : ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

Naxals
ದೇಶ32 mins ago

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

Gas leak
ಪ್ರಮುಖ ಸುದ್ದಿ1 hour ago

Gas Leakage : ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

soraba BJP Mandala president prakash talakaalukoppa pressmeet
ಶಿವಮೊಗ್ಗ1 hour ago

Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

Chandrababu Naidu
ದೇಶ1 hour ago

Chandrababu Naidu: 5 ದಿನದಲ್ಲಿ 870 ಕೋಟಿ ರೂ. ಗಳಿಸಿದ ‘ಕಿಂಗ್‌ ಮೇಕರ್’‌ ಚಂದ್ರಬಾಬು ನಾಯ್ಡು; ಹೇಗಂತೀರಾ?

Shreyas Iyer
ಕ್ರೀಡೆ2 hours ago

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

assault case
ಕ್ರೈಂ2 hours ago

Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ

Narendra Modi
ದೇಶ3 hours ago

Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ5 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌