Site icon Vistara News

Urfi Javed: ಶಿಲ್ಪಾ ಶೆಟ್ಟಿ ಪತಿ, ಉರ್ಫಿ ಮುಖಾಮುಖಿ; ಐಕಾನಿಕ್ ಬ್ರಹ್ಮಾಂಡಗಳು ಅಂದ್ರು ನೆಟ್ಟಿಗರು!

Raj Kundr Urfi Javed

ಬೆಂಗಳೂರು: ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ (Raj kundra) ಅವರು ಇದುವರೆಗೂ ಸಾರ್ವಜನಿಕವಾಗಿ ಮುಖವನ್ನು ತೋರಿಸಿಯೇ ಇಲ್ಲ. ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಜೈಲಿಗೆ ಹೋಗಿಬಂದ ಬಳಿಕ ಈಗ ಅವರು ಬಹಿರಂಗವಾಗಿ ಕಾಣಿಸಿಕೊಂಡೇ ಇಲ್ಲ. ಇದೀಗ ಚರ್ಚೆಯಲ್ಲಿರುವುದು ಉರ್ಫಿ (Urfi Javed) ಬಗ್ಗೆ. ಉರ್ಫಿ ವಿಚಿತ್ರ ಡ್ರೆಸ್‌ನಲ್ಲಿ ಆಗಾಗ ಕಾಣುವುದು ಇದೇನೂ ಹೊಸತಲ್ಲ. ಆದರೀಗ ಉರ್ಫಿ ಹಾಗೂ ರಾಜ್‌ಕುಂದ್ರಾ ಮುಖಾಮುಖಿಯಾಗಿದ್ದಾರೆ. ಉರ್ಫಿ ಸದ್ಯ ಮೈ ಮುಚ್ಚುವಂತಹ ಡ್ರೆಸ್‌ ಧರಿಸಿ ಸುದ್ದಿಯಲ್ಲಿದ್ದಾರೆ. ರಾಜ್‌ ಮತ್ತು ಉರ್ಫಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಾಜ್ ಅವರು ಪ್ರವೇಶಿಸುತ್ತಿದ್ದಂತೆ ಉರ್ಫಿ ಅಲ್ಲಿಂದ ನಿರ್ಗಮಿಸುತ್ತಿರುವುದು ಕಂಡುಬಂದಿತು. ಇಬ್ಬರೂ ಪರಸ್ಪರ ಮುಖಾಮುಖಿಯಾಗಿ ಶುಭಾಶಯ ಕೋರಿದರು. ಫೋಟೊಗ್ರಾಫರ್‌ಗಳು ಇಬ್ಬರೂ ಒಟ್ಟಿಗೆ ಪೋಸ್ ನೀಡುವಂತೆ ವಿನಂತಿಸಿರುವುದು ಕಂಡು ಬಂದಿದೆ. ರಾಜ್ ಕುಂದ್ರಾ ಮತ್ತು ಉರ್ಫಿ ಜಾವೇದ್ ಒಟ್ಟಿಗೆ ಪೋಸ್ ನೀಡದಿದ್ದರೂ, ನೆಟ್ಟಿಗರು ಅವರಿಬ್ಬರ ಬಟ್ಟೆಗಳ ಬಗ್ಗೆ ಟ್ರೋಲ್‌ ಮಾಡಿದ್ದಾರೆ. ನೆಟ್ಟಿಗರೊಬ್ಬರು ʻʻಎರಡು ಐಕಾನಿಕ್ ಬ್ರಹ್ಮಾಂಡಗಳುʼʼ ಎಂದು ಕಮೆಂಟ್‌ ಮಾಡಿದ್ದಾರೆ, ಇನ್ನೊಬ್ಬರು ʻʻಸೂಪರ್‌ ಜೋಡಿʼʼ ಎಂದು ಕಮೆಂಟ್‌ ಮಾಡಿದ್ದಾರೆ. ರಾಜ್ ಇತ್ತೀಚೆಗೆ ಸ್ಟ್ಯಾಂಡ್-ಅಪ್ ಕಾಮಿಡಿಗೆ ಪದಾರ್ಪಣೆ ಮಾಡಿದ್ದರು. ಒಂದು ಜೋಕ್‌ನಲ್ಲಿ ಅವರು ಉರ್ಫಿಯ ಬಟ್ಟೆಗಳ ಬಗ್ಗೆಯೂ ಉಲ್ಲೇಖಿಸಿದ್ದರು.

ಇದನ್ನೂ ಓದಿ: Urfi Javed: ಹಿಂದು ಯುವಕನ ಜತೆ ಉರ್ಫಿ ಜಾವೇದ್‌ ನಿಶ್ಚಿತಾರ್ಥ? ಹೋಮಕುಂಡದ ಬಳಿ ಕುಳಿತು ಪೂಜೆ ಮಾಡಿದ ನಟಿ!

‘ನನ್ನನ್ನು ಈ ಎರಡು ವರ್ಷಗಳಲ್ಲಿ ಪ್ರೀತಿಸಿದವರು ಫೋಟೊಗ್ರಾಫರ್‌ಗಳು ಮಾತ್ರ. ಅವರ ಪಾಲಿಗೆ ಇರುವ ಇಬ್ಬರು ಸ್ಟಾರ್​ಗಳು ಎಂದರೆ ಅದು ನಾನು ಮತ್ತು ಉರ್ಫಿ ಜಾವೇದ್​ ಮಾತ್ರ. ನಾನು ಏನು ಧರಿಸುತ್ತೇನೆ ಮತ್ತು ಉರ್ಫಿ ಜಾವೇದ್​ ಏನು ಧರಿಸುವುದಿಲ್ಲ ಎಂದು ತಿಳಿದುಕೊಳ್ಳಲು ಮಾಧ್ಯಮಗಳು ಬಯಸುತ್ತವೆ’ ಎಂದು ಅವರು ಹಾಸ್ಯ ಮಾಡಿದ್ದರು. ಅದರಿಂದ ಉರ್ಫಿ ಜಾವೇದ್​ ಸಿಟ್ಟಾಗಿ, ಇನ್‌ಸ್ಟಾ ಸ್ಟೋರಿ ಮೂಲಕ ತಿರುಗೇಟು ನೀಡಿದ್ದರು.

ಹೋಮಕುಂಡದ ಬಳಿ ಕುಳಿತು ಪೂಜೆ ಮಾಡಿದ್ದ ಉರ್ಫಿ

ಕೆಲವು ದಿನಗಳ ಹಿಂದೆ ಉರ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಪೂರಕವೆಂಬಂತೆ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿಗೂಢ ವ್ಯಕ್ತಿಯೊಂದಿಗೆ ಹೋಮಕುಂಡದ ಬಳಿ ಕುಳಿತು ಪೂಜೆ ಸಮಾರಂಭದಲ್ಲಿ ಭಾಗಿಯಾಗಿರುವುದು ಕಂಡುಬಂದಿತ್ತು.

ವೈರಲ್ ಚಿತ್ರದಲ್ಲಿ, ಉರ್ಫಿ ನಿಗೂಢ ವ್ಯಕ್ತಿಯೊಂದಿಗೆ ಹೋಮಕುಂಡದ ಬಳಿ ಕುಳಿತು ಪೂಜೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆಕೆಯ ಸಹೋದರಿ ಉರುಸಾ ಹಂಚಿಕೊಂಡ ಫೋಟೊದಲ್ಲಿ, ಉರ್ಫಿ ನೀಲಿ ಸಲ್ವಾರ್ ಕಮೀಜ್ ಧರಿಸಿ ತಲೆಯ ಮೇಲೆ ದುಪಟ್ಟಾ ಧರಿಸಿದ್ದರು. ಫೋಟೋದಲ್ಲಿರುವ ವ್ಯಕ್ತಿ ಪ್ಯಾಟು, ಶರ್ಟ್ ಧರಿಸಿದ್ದಾರೆ. ಆದರೆ, ಅವರ ಮುಖವನ್ನು ಹಾರ್ಟ್ ಸಿಂಬಲ್‌ನಿಂದ ಮುಚ್ಚಿಡಲಾಗಿದೆ. ಈ ಜೋಡಿ ಪವಿತ್ರ ಹೋಮ ಕುಂಡದ ಮುಂದೆ ಕುಳಿತು ಅರ್ಚಕರು ಹೇಳಿದಂತೆ ಮಾಡುತ್ತಿದ್ದಾರೆ. ಹೀಗಾಗಿ ಉರ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ನಂಬಿದ್ದರು. ಆದಾಗ್ಯೂ, ಉರ್ಫಿ ಅಥವಾ ಅವರ ಕುಟುಂಬದವರು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

Exit mobile version