Site icon Vistara News

Thalapathy Vijay: ನಟ ವಿಜಯ್‌ರನ್ನು ಬಂಧಿಸಿ; ರಾಜೇಶ್ವರಿ ಪ್ರಿಯಾ ಆಕ್ರೋಶ!

Rajeshwari Priya leo

ಬೆಂಗಳೂರು: ದಳಪತಿ ವಿಜಯ್‌ (Thalapathy Vijay) ನಟನೆಯ ಲಿಯೋ ಸಿನಿಮಾದ ʻನಾ ರೆಡಿʼ ಹಾಡು ಈಗಾಗಲೇ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಆದರೆ ಈ ಹಾಡು ವಿವಾದಕ್ಕೆ ಒಳಗಾಗಿದೆ. ಸಾಮಾಜಿಕ ಕಾರ್ಯಕರ್ತ ಸೆಲ್ವಂ ಎಂಬುವವರು ‘ನಾ ರೆಡಿ’ ಹಾಡಿನಲ್ಲಿ ಡ್ರಗ್ಸ್ ವೈಭವೀಕರಣ ಹಾಗೂ ರೌಡಿಸಂ ಹೊಗಳಲಾಗಿದೆ, ಹಾಗಾಗಿ ಚಿತ್ರತಂಡದ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯಿದೆ’ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ದೂರು ದಾಖಲಿಸಿದ್ದರು. ಈ ಹಾಡಿನ ಬಗ್ಗೆ ‘ಆಲ್‌ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ’ ನಾಯಕಿ ರಾಜೇಶ್ವರಿ ಪ್ರಿಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ವಿಜಯ್ ತನ್ನ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿ ಬೇಕಂತಲೇ ತಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಪ್ರಿಯಾ ಇದೀಗ ಆರೋಪಿಸಿದ್ದಾರೆ.

ನಾ ರೆಡಿ ವಿಡಿಯೊ ಹಾಡು ಇನ್ನೂ ಅನಾವರಣಗೊಳ್ಳದಿದ್ದರೂ, ಹಾಡಿನ ಕೆಲವು ಸ್ಟಿಲ್‌ಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇದರಲ್ಲಿ ವಿಜಯ್ ಸಿಗರೇಟ್ ಸೇದುತ್ತಿರುವಾಗ ಹಾಡಿನಲ್ಲಿ ನೂರಾರು ನೃತ್ಯಗಾರರು ಬಿಯರ್ ಮಗ್‌ಗಳನ್ನು ಹಿಡಿದಿದ್ದಾರೆ

ರಾಜೇಶ್ವರಿ ಪ್ರಿಯಾ ಈ ಬಗ್ಗೆ ಮಾತನಬಾಡಿ ʻ ವಿಜಯ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮಾತನಾಡುತ್ತ ನಿರಂತರವಾಗಿ ಬೆದರಿಸುತ್ತಿದ್ದಾರೆ. ನಟ ವಿಜಯ್ ಟ್ವಿಟರ್ ಐಡಿಯನ್ನು ಟ್ಯಾಗ್ ಮಾಡಿ ಸಾಕಷ್ಟು ಅಸಭ್ಯಕರ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಹಣ ಕೊಟ್ಟು ಕೆಟ್ಟ ಕೆಟ್ಟ ಕಮೆಂಟ್ ಮಾಡಿಸಲಾಗುತ್ತಿದೆ. ಇದನ್ನು ನೋಡಿಯು ಸುಮ್ಮನಿದ್ದು ವಿಜಯ್ ಕೂಡ ಬೆದರಿಸುತ್ತಿದ್ದಾರೆ. ಬೇರೆ ಯಾರಾದರೂ ಆಗಿದ್ದರೆ ಈಗಾಗಲೇ ತಮ್ಮ ಅಭಿಮಾನಿಗಳಿಗೆ ಸುಮ್ಮನಿರುವಂತೆ ಹೇಳುತ್ತಿದ್ದರು. ವಿಜಯ್ ಆ ರೀತಿ ಮಾಡುತ್ತಿಲ್ಲ. ಅದಕ್ಕೆ ಆತನ ಅಭಿಮಾನಿಗಳು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಈ ರೀತಿ ಟ್ರೋಲ್ ಮಾಡುತ್ತಿದ್ದಾರೆ” ಎಂದು ಪ್ರಿಯಾ ಆರೋಪಿಸಿದ್ದಾರೆ. ನಟ ವಿಜಯ್‌ ಅವರು ಬಂಧಿಸಬೇಕು ಪ್ರಿಯಾ ಆಗ್ರಹಿಸಿದ್ದಾರೆ.

2021ರಲ್ಲಿ ಬಿಡುಗಡೆಯಾದ ‘ಮಾಸ್ಟರ್’ ಸಿನಿಮಾದಲ್ಲಿ ದಳಪತಿ ವಿಜಯ್ (Thalapathy Vijay) ಮತ್ತು ಲೋಕೇಶ್ ಕನಕರಾಜ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಎರಡು ವರ್ಷಗಳ ನಂತರ, ನಟ-ನಿರ್ದೇಶಕ ಜೋಡಿ ಮತ್ತೆ ಒಂದಾಗಿದೆ. ಅದೇ ‘ಲಿಯೋ’ ಸಿನಿಮಾಗಾಗಿ.

ಇದನ್ನೂ ಓದಿ: Thalapathy Vijay: ಧೂಮಪಾನದ ವೈಭವೀಕರಣ; `ಲಿಯೋ’ ನಟ ದಳಪತಿ ವಿಜಯ್‌ ವಿರುದ್ಧ ದೂರು ದಾಖಲು

‘ನಾ ರೆಡಿದಾ ವರವಾ’ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಚಿತ್ರದಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಯೋ ಚಿತ್ರ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ಮೆನನ್, ಮ್ಯಾಥ್ಯೂ ಥಾಮಸ್, ಮಿಸ್ಕಿನ್, ಸ್ಯಾಂಡಿ ಮತ್ತು ಮನ್ಸೂರ್ ಅಲಿ ಖಾನ್ ಸೇರಿದಂತೆ ಪ್ರಮುಖ ತಾರಾಗಣವನ್ನು ಹೊಂದಿದೆ.

ಈ ಚಿತ್ರವನ್ನು ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ.ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. 40‌ ವರ್ಷದ ದರೋಡೆಕೋರನ ಪಾತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. 14 ವರ್ಷಗಳ ಸುದೀರ್ಘ ಗ್ಯಾಪ್‌ ಬಳಿಕ ವಿಜಯ್‌ ಹಾಗೂ ತ್ರಿಶಾ ತೆರೆ ಮೆಲೆ ಮತ್ತೆ ಒಂದಾಗುತ್ತಿದ್ದಾರೆ. ಸಂಜಯ್ ದತ್ ಸಿನಿಮಾದಲ್ಲಿ ವಿಲನ್‌ ಪಾತ್ರ ನಿಭಾಯಿಸುತ್ತಿದ್ದು, ಚಿತ್ರದಲ್ಲಿ ವಿಜಯ್ ಅವರ ತಂದೆಯ ಪಾತ್ರವನ್ನು ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ.

Exit mobile version