ಬೆಂಗಳೂರು: ರಜನಿಕಾಂತ್ ಇತ್ತೀಚೆಗೆ ‘ಜೈಲರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ 169ನೇ ಚಿತ್ರವಾಗಿತ್ತು. ಈಗ, ಅವರು ಅಮಿತಾಭ್ ಬಚ್ಚನ್ ಸೇರಿದಂತೆ ಬೃಹತ್ ತಾರಾಗಣವನ್ನು ಒಳಗೊಂಡಿರುವ ಅವರ 170ನೇ (Thalaivar 170) ಪ್ರಾಜೆಕ್ಟ್ ಮೇಲೆ ಗಮನ ಹರಿಸಿದ್ದಾರೆ. ಈಗಾಗಲೇ 170ನೇ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರಕ್ಕಾಗಿ ತಮಿಳಿನ ಸೂಪರ್‌ಸ್ಟಾರ್ ಮತ್ತು ಲೆಜೆಂಡರಿ ಬಾಲಿವುಡ್ ಸ್ಟಾರ್ 33 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಇದೀಗ ಲೈಕಾ ಪ್ರೊಡಕ್ಷನ್ ರಜನಿ, ಅಮಿತಾಭ್ ಒಟ್ಟಿಗೆ ಇರುವ ಫೋಟೊ ಹಂಚಿಕೊಂಡು ಮುಂಬೈ ಶೆಡ್ಯೂಲ್ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.
‘ತಲೈವರ್ 170’ ಸೂಪರ್ ಸ್ಟಾರ್ ರಜನಿಕಾಂತ್ ಅವರ ವೃತ್ತಿಜೀವನದ 170ನೇ ಚಿತ್ರವಾಗಿದೆ. ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಚಿತ್ರೀಕರಣ ಪ್ರಾರಂಭವಾಗಿದೆ. ಮುಂಬೈನಲ್ಲಿ ಆರಂಭಿಕ ಹಂತದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಲೈಕಾ ಪ್ರೊಡಕ್ಷನ್ಸ್, ಭಾನುವಾರ (ಅ.29)ರಜನಿ ಹಾಹೂ ಅಮಿತಾಭ್ ಹಿರಿಯ ನಟರ ಚಿತ್ರವನ್ನು ಹಂಚಿಕೊಂಡಿದೆ. ʻ33 ವರ್ಷಗಳ ನಂತರ ತೆರೆ ಮೇಲೆ ಮತ್ತೆ ಮಿಲನʼ ಎಂದು ಶೀರ್ಷಿಕೆ ಬರೆಯಲಾಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ಅವರ ‘ಜೈಲರ್’ ಚಿತ್ರ ವಿಶ್ವದಾದ್ಯಂತ 650 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಜೈಲರ್’ ಚಿತ್ರದ ಯಶಸ್ಸಿನ ನಂತರ ಅವರು ಕೇರಳದ ತಿರುವನಂತಪುರದಲ್ಲಿ ‘ತಲೈವರ್ 170’ ಚಿತ್ರೀಕರಣವನ್ನು ಪ್ರಾರಂಭಿಸಿದರು.
ಇದನ್ನೂ ಓದಿ: Actor Rajinikanth: ತಲೈವರ್ 170 ಸೆಟ್‌ನಲ್ಲಿ ಅಮಿತಾಭ್ ಜತೆ ಪೋಸ್ ಕೊಟ್ಟ ರಜನಿ!
When Superstar and Shahenshah met on the sets of #Thalaivar170 🤩
— Lyca Productions (@LycaProductions) October 29, 2023
Reunion on screens after 33 years! 🤗 #Thalaivar170 is gonna be double dose of legends! 💥 @rajinikanth @SrBachchan
Done with MUMBAI Schedule 📍📽️✨@tjgnan @LycaProductions #Subaskaran @gkmtamilkumaran… pic.twitter.com/LfyV3rP2JI
ಟಿ.ಜೆ ಜ್ಞಾನವೇಲ್ ‘ತಲೈವರ್ 170’ ನಿರ್ದೇಶನ ಮಾಡುತ್ತಿದ್ದಾರೆ. ರಿತಿಕಾ ಸಿಂಗ್, ಮಂಜು ವಾರಿಯರ್, ತುಷಾರ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹಾದ್ ಫಾಸಿಲ್ ಸಹ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನಟ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಚಿತ್ರ ಫೇಕ್ ಎನ್‌ಕೌಂಟರ್‌ನ ಬಗ್ಗೆ ಇರಲಿದೆ ಎಂದು ಹೇಳಲಾಗಿದೆ. ಪೆಟ್ಟಾ, ದರ್ಬಾರ್, ಜೈಲರ್ ನಂತರ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ರಜನಿಕಾಂತ್ ಅವರ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.