Site icon Vistara News

Rajinikanth: ಬೆಂಗಳೂರಿನಲ್ಲಿ ಶಿವರಾತ್ರಿ ಆಚರಿಸಿದ ಸೂಪರ್‌ ಸ್ಟಾರ್‌ ರಜನಿಕಾಂತ್

Rajinikanth and wife Latha Maha Shivratri celebrations in Bengaluru

ಬೆಂಗಳೂರು: ಫೆಬ್ರವರಿ 18ರಂದು ರಜನಿಕಾಂತ್ (Rajinikanth) ಮತ್ತು ಅವರ ಪತ್ನಿ (Rajinikanth and wife Latha) ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮಹಾ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಿದ್ದರು. ಶ್ರೀ ಶ್ರೀ ರವಿಶಂಕರ್ ಅವರ ಲಿವಿಂಗ್ ಆರ್ಟ್ ಆರ್ಗನೈಸೇಶನ್ ಆಯೋಜಿಸಿದ್ದ ಮಹಾ ಶಿವರಾತ್ರಿ ಉತ್ಸವದಲ್ಲಿ ರಜನಿಕಾಂತ್ ಭಾಗವಹಿಸಿರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರದಲ್ಲಿ ಪತಿ-ಪತ್ನಿ ಇಬ್ಬರೂ ಧ್ಯಾನ ಮಾಡುತ್ತಿರುವ ಫೋಟೊಗಳು ವೈರಲ್‌ ಆಗಿವೆ.

ಲತಾ ಅವರು ಪಿಂಕ್ ಸೂಟ್ ಧರಿಸಿದ್ದರೆ, ರಜನಿಕಾಂತ್ ಸಾದಾ ಬಿಳಿ ಕುರ್ತಾ ಧರಿಸಿದ್ದರು. ರಜನಿಕಾಂತ್ ಪುತ್ರಿ ಐಶ್ವರ್ಯ ಕೂಡ ಮಹಾಶಿವರಾತ್ರಿ ಆಚರಣೆಗಾಗಿ ಬೆಂಗಳೂರಿಗೆ ತೆರಳಿದ್ದರು. ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಆಗಿರುವ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ನಡೆಯುತ್ತಿದೆ. ರಜನಿಕಾಂತ್ ಹೊರತುಪಡಿಸಿ, ಈ ಚಿತ್ರದಲ್ಲಿ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ಯೋಗಿ ಬಾಬು ಮತ್ತು ಮಲಯಾಳಂ ನಟ ವಿನಾಯಕನ್ ತಾರಾಗಣವಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಜೈಲರ್ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ರಜನಿಕಾಂತ್ ಕೊನೆಯದಾಗಿ ನಿರ್ದೇಶಕ ಸಿರುತೈ ಶಿವ ಅವರ ಅಣ್ಣಾತ್ತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

#image_title

ಇದನ್ನೂ ಓದಿ: Rajinikanth: ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಪ್ರತಿಮೆ ದರ್ಶನ ಪಡೆದ ತಲೈವಾ ರಜಿನಿಕಾಂತ್

ಇದನ್ನೂ ಓದಿ: Actor Rajinikanth : ಜೈಸಲ್ಮೇರ್‌ನಲ್ಲಿ ರಜನಿಕಾಂತ್‌ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು

ಐಶ್ವರ್ಯ ಅವರು ನಿರ್ದೇಶಿಸುತ್ತಿರುವ ‘ಲಾಲ್ ಸಲಾಮ್’ ಸಿನಿಮಾದಲ್ಲೂ ನಟಿಸುವುದಕ್ಕೆ ರಜನಿಕಾಂತ್‌ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಲೈಕಾ ಪ್ರೊಡಕ್ಷನ್ ನಿರ್ಮಾಣ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ ‘ಲಾಲ್ ಸಲಾಮ್’ (Laal Salam) ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ರಜನಿಕಾಂತ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version