Site icon Vistara News

Actor Rajinikanth: ಕೇಕ್‌ ಕತ್ತರಿಸಿ ಜೈಲರ್ ‘ಸಕ್ಸೆಸ್‌’ ಸಂಭ್ರಮಿಸಿದ ರಜಿನಿಕಾಂತ್‌!

RAJINIKANTH CELEBRATES JAILER SUCCESS

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ (Actor Rajinikanth) ಅವರ ಚಿತ್ರ ‘ಜೈಲರ್’ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು (Jailer success) ಕಂಡಿದೆ. 2.0 ಮತ್ತು ಪೊನ್ನಿyನ್ ಸೆಲ್ವನ್: 1 ಸಿನಿಮಾ ಬಳಿಕ 500 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಮೂರನೇ ತಮಿಳು ಚಿತ್ರವಾಗಿದೆ. ಈ ಚಿತ್ರ ಶೀಘ್ರದಲ್ಲೇ ವಿಶ್ವಾದ್ಯಂತ ರೂ 600 ಕೋಟಿ ರೂ. ಗಡಿ ದಾಟಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿ ʻಟೈಗರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 25ರ ರಾತ್ರಿ ರಜನಿಕಾಂತ್ ಮತ್ತು ಚಿತ್ರತಂಡ ‘ಜೈಲರ್’ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿತ್ತು. ಸೂಪರ್ ಸ್ಟಾರ್ ಕೂಡ ಕೇಕ್ ಕತ್ತರಿಸಿ ಸಂಭ್ರಮಿಸಿದರು.

‘ಜೈಲರ್’ ಆಗಸ್ಟ್ 10 ರಂದು ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಈ ಯಶಸ್ಸನ್ನು ಆಚರಿಸಲು ರಜನಿಕಾಂತ್ ಅವರು ತಮ್ಮ ತಂಡದೊಂದಿಗೆ ಸೇರಿಕೊಂಡರು. ಈ ಸಕ್ಸೆಸ್‌ ಮೀಟ್‌ನಲ್ಲಿ ಅನಿರುದ್ಧ್ ರವಿಚಂದರ್, ರಮ್ಯಾ ಕೃಷ್ಣನ್ ಇತರ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: Jailer OTT Rights: ʼಜೈಲರ್‌ʼ ಓಟಿಟಿ ಹಕ್ಕು ಮಾರಾಟದ ಮೊತ್ತ ಕೇಳಿ ಚಿತ್ರೋದ್ಯಮಿಗಳೇ ತಬ್ಬಿಬ್ಬು!

ಜೈಲರ್‌ʼ ಓಟಿಟಿ ಹಕ್ಕು ಮಾರಾಟ

ಭಾರತದಲ್ಲಿ ‘ಜೈಲರ್’ 300 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಡಿಜಿಟಲ್ ಸ್ಟ್ರೀಮಿಂಗ್ (Jailer OTT Rights) ಪ್ಲಾಟ್‌ಫಾರ್ಮ್‌ಗೆ ಬರುತ್ತಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ ʼಜೈಲರ್‌ʼ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಹಕ್ಕನ್ನು 100 ಕೋಟಿ ರೂ.ಗೆ ಪಡೆದುಕೊಂಡಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಟಿ ಜೆ ಜ್ಞಾನವೇಲ್ ಅವರ ʻತಲೈವರ್ 170ʼನಲ್ಲಿ ರಜನಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ. ಹೊಂಬಾಳೆ ಫಿಲ್ಮ್ಸ್‌ ರಜನಿಕಾಂತ್‌ ಅವರಿಗೆ ಸಿನಿಮಾ ಮಾಡಲಿದೆ ಎಂದು ಕೆಲವು ದಿನಗಳ ಹಿಂದೆ ವೈರಲ್‌ ಆಗಿತ್ತು. ವಿಕ್ರಮ್’ (Vikram) ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಜತೆ ಚಿತ್ರ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡಿದೆ. ರಜನಿಕಾಂತ್‌ಗಾಗಿಯೇ ಲೋಕೇಶ್ ಈಗಾಗಲೇ ಕಥೆ ಮಾಡಿದ್ದಾರೆ. ತಲೈವಾ 171ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಅವರು ಲೋಕೇಶ್ ಕಥೆ ಕೇಳಿ ಸಮ್ಮತಿಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್‌ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Exit mobile version