Site icon Vistara News

Actor Rajinikanth: ಲೋಕೇಶ್‌ ಕನಕರಾಜ್‌ ಜತೆ ರಜನಿ ಸಿನಿಮಾ ಪಕ್ಕಾ; ʻಲಿಯೋʼ ಕಥೆ ಎನು?

Rajinikanth Lokesh Kanagaraj

ಬೆಂಗಳೂರು: ‘ಜೈಲರ್’ ಬಳಿಕ ರಜನಿಕಾಂತ್ (Actor Rajinikanth) ‘ಲಾಲ್ ಸಲಾಂ’ (Lal Salaam) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ನಂತರ ಜ್ಞಾನವೇಲ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್‌ ಕೊಟ್ಟಿದ್ದಾರೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಲೈವಾ ನಟಿಸುವುದು ಫಿಕ್ಸ್‌ ಆಗಿದೆ. ‘ತಲೈವರ್ 171’ ಗಾಗಿ (Thailaiver 171) ಲೋಕೇಶ್ ಕನಕರಾಜ್ ಅವರೊಂದಿಗೆ ಕೈ ಜೋಡಿಸುವುದು ಪಕ್ಕಾ ಎಂದು ಸನ್ ಪಿಕ್ಚರ್ಸ್‌ನ ಅಧಿಕೃತ ಟ್ವಿಟರ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದೆ.

ಮಗಳ ʼಲಾಲ್ ಸಲಾಂʼ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಸೂಪರ್ ಸ್ಟಾರ್, ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ‘ತೈಲೈವರ್ 171’ ಪ್ರಾರಂಭಿಸುವ ನಿರೀಕ್ಷೆಯಿದೆ. ಈ ಚಿತ್ರ ‘ಎಂಥಿರನ್’, ‘ಪೆಟ್ಟಾ’, ‘ಅನ್ನತ್ತೆ’ ಮತ್ತು ‘ಜೈಲರ್’ ಸಿನಿಮಾ ಬಳಿಕ ಸನ್ ಪಿಕ್ಚರ್ಸ್‌ನೊಂದಿಗೆ ಸೂಪರ್‌ಸ್ಟಾರ್ ಅವರ ಐದನೇ ಬಾರಿಯ ಸಹಯೋಗ. ಲೋಕೇಶ್‌ ಕನಕರಾಜ್‌ ಈ ಸಿನಿಮಾವಲ್ಲದೇ ದಳಪತಿ ವಿಜಯ್ ಜತೆ ʼಲಿಯೋʼ ಸಿನಿಮಾ ಚಿತ್ರೀಕರಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಇದೀಗ ಸನ್ ಪಿಕ್ಚರ್ಸ್‌ ಟ್ವಿಟರ್‌ನಲ್ಲಿ ʻʻಸೂಪರ್‌ಸ್ಟಾರ್ ರಜನಿಕಾಂತ್‌ ಅವರ ‘ತಲೈವರ್ 171’ ಘೋಷಿಸಲು ನಾವು ಸಂತೋಷಪಡುತ್ತೇವೆ. ಲೋಕೇಶ್ ಕನಕರಾಜ್ ಅವರು ಬರೆದು ನಿರ್ದೇಶಿಸಿದ್ದಾರೆ, ಅನಿರುದ್ಧ ಸಂಗೀತ ಇರುತ್ತದೆ ʼʼ ಎಂದು ಟ್ವೀಟ್‌ ಹಂಚಿಕೊಂಡಿದೆ.

ಈ ಸುದ್ದಿ ಬರುವುದಕ್ಕೂ ಮೊದಲು ದಿಢೀರನೆ ‘ತಲೈವರ್ 171′ ಸಿನಿಮಾ ನಿಂತು ಹೋಯಿತು, ಅದಕ್ಕೆ ಸ್ವತಃ ರಜನಿಕಾಂತ್ ಕಾರಣ ಎನ್ನುವ ಸುಳ್ಳು ಸುದ್ದಿಗಳು ವೈರಲ್‌ ಆಗಿತ್ತು. ʻಲಿಯೋ’ ಔಟ್‌ಫುಟ್ ನೋಡಿ ಖುದ್ದು ಲೋಕೇಶ್ ಬೇಸರಗೊಂಡಿದ್ದಾರೆ. ಅದೇ ಕಾರಣಕ್ಕೆ ಈ ಸಿನಿಮಾದ ಸಹವಾಸ ಸಾಕು ಎಂದು ʼತಲೈವರ್‌ 171ʼ ಸಿನಿಮಾ ಕಡೆ ಮುಖ ಮಾಡಿದ್ದಾರೆ ಎನ್ನುವ ಮತ್ತೊಂದು ಸುಳ್ಳು ಸುದ್ದಿ ಪ್ರಚಾರ ಆಗಿತ್ತು.

ಇದನ್ನೂ ಓದಿ: Actor Rajinikanth: ʻಜೈಲರ್‌ʼ ಯಶಸ್ಸಿಗೆ ರಜನಿಗೆ 100 ಕೋಟಿ ರೂ. ಚೆಕ್; ʻತಲೈವಾʼ ಪಾಲಾದ ಒಟ್ಟು ಹಣ ಎಷ್ಟು?

ಲಿಯೋ ಹೊಸ ದಾಖಲೆ!

ಬಿಡುಗಡೆಗೆ (Leo Movie) ಇನ್ನೂ ಒಂದು ತಿಂಗಳ ಕಾಲಾವಕಾಶವಿದ್ದು, ಈಗಿನಿಂದಲೇ (10k tickets booked) ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುತ್ತಿದೆ. ಅಹಿಂಸಾ ಎಂಟರ್‌ಟೈನ್‌ಮೆಂಟ್ ಕಂಪನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕಂಪನಿಯ ಪ್ರಕಾರ, ‘ಲಿಯೋ’ ಜಾಗತಿಕ ಬಿಡುಗಡೆಗೆ 42 ದಿನಗಳ ಮೊದಲು ಒಂದೇ ದಿನದಲ್ಲಿ ಚಿತ್ರಕ್ಕಾಗಿ ಈಗಾಗಲೇ 10,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ. ಚಿತ್ರದಲ್ಲಿ ನಟ ದಳಪತಿ ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 19 ರಂದು ಲಿಯೋ ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ದಳಪತಿ ವಿಜಯ್, ತ್ರಿಶಾ, ಸಂಜಯ್ ದತ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್ ಮತ್ತು ಮ್ಯಾಥ್ಯೂ ಥಾಮಸ್ ತಾರಾಗಣವನ್ನು ಒಳಗೊಂಡಿದೆ.

ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ಲಿಯೋ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ಮಾಸ್ಟರ್ʼ ಸಿನಿಮಾ ಬಳಿಕ ವಿಜಯ್‌ ಮತ್ತು ಲೋಕೇಶ್‌ ಕನಕರಾಜ್‌ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ.

Exit mobile version