ಬೆಂಗಳೂರು: ರಜನಿಕಾಂತ್ (Actor Rajinikanth) ಅಭಿನಯದ ʻಜೈಲರ್ ಸಿನಿಮಾ ಈಗಾಗಲೇ ವಿಶ್ವಾದ್ಯಂತ ಭಾರಿ ಕಲೆಕ್ಷನ್ ಮಾಡಿ ಮುನ್ನುಗ್ಗಿದೆ. ಚಲನಚಿತ್ರದ ಅದ್ಭುತ ಯಶಸ್ಸಿನ ಬಳಿಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ರಜನಿಕಾಂತ್ ಹೊರಹೊಮ್ಮಿದ್ದಾರೆ. ಜೈಲರ್ ಐತಿಹಾಸಿಕ ಯಶಸ್ಸನ್ನು ಗಳಿಸುತ್ತಿದ್ದಂತೆ, ಸನ್ ಪಿಕ್ಚರ್ಸ್‌ನ ನಿರ್ಮಾಪಕ ಕಲಾನಿಧಿ ಮಾರನ್ ( Kalanithi Maran) ರಜನಿಕಾಂತ್ ಅವರನ್ನು ಭೇಟಿಯಾಗಿ ಬರೋಬ್ಬರಿ 100 ಕೋಟಿ ರೂ. ಚೆಕ್ (Cheque of Rs 100 Cr From Jailer) ನೀಡಿದ್ದಾರೆ. ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಭಾವನೆ ಹಣವನ್ನು (Kalanithi Maran of Sun Pictures) ಈ ಮೊದಲೇ ನೀಡಲಾಗಿದೆ. ಇದರ ಜತೆಗೆ ಪ್ರಾಫಿಟ್ನಲ್ಲೂ ರಜನಿಕಾಂತ್ ಪಾಲು ಸಿಕ್ಕಿದೆ. ಒಟ್ಟು – 210 ಕೋಟಿ ರೂ. ರಜನಿಕಾಂತ್ ಪಾಲಾಗಿದೆ.
ಸನ್ ಪಿಕ್ಚರ್ಸ್ ಅಧಿಕೃತ ಖಾತೆ ಈ ಬಗ್ಗೆ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು ʻʻಕಲಾನಿಧಿ ಮಾರನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿ, ಜೈಲರ್ ಐತಿಹಾಸಿಕ ಯಶಸ್ಸಿನ ಸಂಭ್ರಮಾಚರಣೆ ಮಾಡಿದ್ದಾರೆ” ಎಂದು ಬರೆದುಕೊಂಡಿದೆ.
ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಭಾವನೆ ಹಣವನ್ನು ಈ ಮೊದಲೇ ನೀಡಲಾಗಿದೆ. ಇದರ ಜತೆಗೆ ಪ್ರಾಫಿಟ್ನಲ್ಲೂ ರಜನಿಗೆ ಪಾಲು ಸಿಕ್ಕಿದೆ. ಒಟ್ಟು – 210 ಕೋಟಿ ರೂ. ರಜನಿ ಪಾಲಾಗಿದೆ. ಆಗಸ್ಟ್ 10 ರಂದು ಬಿಡುಗಡೆಯಾದ ಜೈಲರ್ ಕೇವಲ 10 ದಿನಗಳಲ್ಲಿ ವಿಶ್ವಾದ್ಯಂತ 500 ಕೋಟಿ ರೂ. ಗಳಿಕೆ ಕಂಡಿತು. ಜೈಲರ್ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಕಲಾನಿಧಿ ಮಾರನ್ ಅವರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ನೆಟ್‌ಫ್ಲಿಕ್ಸ್ ಸಹಯೋಗದೊಂದಿಗೆ ಪಡೆದುಕೊಂಡಿದೆ ಎಂದು ಇತ್ತೀಚೆಗೆ ವರದಿಯಾಗಿದೆ.
ಇದನ್ನೂ ಓದಿ: Actor Rajinikanth: ಕೇಕ್ ಕತ್ತರಿಸಿ ಜೈಲರ್ ‘ಸಕ್ಸೆಸ್’ ಸಂಭ್ರಮಿಸಿದ ರಜಿನಿಕಾಂತ್!
ಟಿ ಜೆ ಜ್ಞಾನವೇಲ್ ಅವರ ʻತಲೈವರ್ 170ʼನಲ್ಲಿ ರಜನಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ. ಹೊಂಬಾಳೆ ಫಿಲ್ಮ್ಸ್ ರಜನಿಕಾಂತ್ ಅವರಿಗೆ ಸಿನಿಮಾ ಮಾಡಲಿದೆ ಎಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ವಿಕ್ರಮ್’ (Vikram) ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಜತೆ ಚಿತ್ರ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡಿದೆ. ರಜನಿಕಾಂತ್‌ಗಾಗಿಯೇ ಲೋಕೇಶ್ ಈಗಾಗಲೇ ಕಥೆ ಮಾಡಿದ್ದಾರೆ. ತಲೈವಾ 171ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಅವರು ಲೋಕೇಶ್ ಕಥೆ ಕೇಳಿ ಸಮ್ಮತಿಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.