ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ʻಜೈಲರ್ʼ ಸಿನಿಮಾ (Rajinikanth starrer Jailer) ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರಿಸುತ್ತಲೇ ಇದೆ. ವರದಿಗಳ ಪ್ರಕಾರ, ವಿಶ್ವಾದ್ಯಂತ 600 ಕೋಟಿ ರೂ. ಕಲೆಕ್ಷನ್‌ನತ್ತ ಮುನ್ನುಗ್ಗುತ್ತಿದೆ. ಎರಡು ವಾರಗಳಲ್ಲಿ ಚಿತ್ರ ಸುಮಾರು 535 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಭಾರತದಲ್ಲಿ ‘ಜೈಲರ್’ 300 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಡಿಜಿಟಲ್ ಸ್ಟ್ರೀಮಿಂಗ್ (Jailer OTT Rights) ಪ್ಲಾಟ್‌ಫಾರ್ಮ್‌ಗೆ ಬರುತ್ತಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ ʼಜೈಲರ್ʼ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಹಕ್ಕನ್ನು 100 ಕೋಟಿ ರೂ.ಗೆ ಪಡೆದುಕೊಂಡಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ʼಜೈಲರ್ʼ ಚಿತ್ರವು ತಮಿಳು ಸಿನಿಮಾಗಳಲ್ಲಿ 500 ಕೋಟಿ ರೂ. ಗಳಿಕೆ ಮಾಡಿಕೊಂಡ ಮೂರನೇ ಸಿನಿಮಾವಾಗಿದೆ. ಈ ಹಿಂದೆ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ಅತಿ ವೇಗವಾಗಿ 500 ಕೋಟಿ ರೂ. ಕ್ಲಬ್ ಸೇರಿಕೊಂಡಿತ್ತು. ಅದಾದ ನಂತರ ಅತಿ ಬೇಗ 500 ಕೋಟಿ ರೂ. ಗಳಿಸಿಕೊಂಡ ಸಿನಿಮಾವಾಗಿ ಜೈಲರ್ ಸಿನಿಮಾ ಹೊರಹೊಮ್ಮಿದೆ.
ʼಜೈಲರ್ʼ ಸಿನಿಮಾ ಮೊದಲನೇ ವಾರದಲ್ಲಿ ವಿಶ್ವದಾದ್ಯಂತ ಒಟ್ಟು 450.80 ಕೋಟಿ ರೂ. ಗಳಿಸಿತ್ತು. ಎರಡನೇ ವಾರದ ಮೊದಲನೇ ದಿನದಂದು 19.37 ಕೋಟಿ ರೂ., ಎರಡನೇ ದಿನದಂದು 17.22 ಕೋಟಿ ರೂ., ಮೂರನೇ ದಿನದಂದು 26.86 ಕೋಟಿ ರೂ. ಹಾಗೂ ನಾಲ್ಕನೇ ದಿನದಂದು 29.71 ಕೋಟಿ ರೂ. ಗಳಿಸಿಕೊಂಡಿದೆ. ಅಲ್ಲಿಗೆ ಒಟ್ಟಾರೆ ಗಳಿಗೆ 543.96 ಕೋಟಿ ರೂ. ಆಗಿದೆ. ಸೋಮವಾರದಂದು ಸಿನಿಮಾ ಕನಿಷ್ಠ 7 ಕೋಟಿ ರೂ. ಗಳಿಸಿಕೊಳ್ಳಲಿದ್ದು, ಸಿನಿಮಾದ ಒಟ್ಟಾರೆ ಗಳಿಕೆ 550 ಕೋಟಿ ರೂ. ದಾಟಲಿದೆ.
ಇದನ್ನೂ ಓದಿ: Jailer Movie : 550 ಕೋಟಿ ರೂ. ಬಾಚಿಕೊಳ್ಳುವತ್ತ ಜೈಲರ್! ಹೊಸ ದಾಖಲೆ
ಇದನ್ನೂ ಓದಿ: Jailer Movie : 550 ಕೋಟಿ ರೂ. ಬಾಚಿಕೊಳ್ಳುವತ್ತ ಜೈಲರ್! ಹೊಸ ದಾಖಲೆ
ಟಿ ಜೆ ಜ್ಞಾನವೇಲ್ ಅವರ ʻತಲೈವರ್ 170ʼನಲ್ಲಿ ರಜನಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ. ಹೊಂಬಾಳೆ ಫಿಲ್ಮ್ಸ್ ರಜನಿಕಾಂತ್ ಅವರಿಗೆ ಸಿನಿಮಾ ಮಾಡಲಿದೆ ಎಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ವಿಕ್ರಮ್’ (Vikram) ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಜತೆ ಚಿತ್ರ ಮಾಡಲು ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡಿದೆ. ರಜನಿಕಾಂತ್‌ಗಾಗಿಯೇ ಲೋಕೇಶ್ ಈಗಾಗಲೇ ಕಥೆ ಮಾಡಿದ್ದಾರೆ. ತಲೈವಾ 171ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಅವರು ಲೋಕೇಶ್ ಕಥೆ ಕೇಳಿ ಸಮ್ಮತಿಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.