ಬೆಂಗಳೂರು: ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ (Aishwarya Rajinikanth) ನಿರ್ದೇಶನದ ಲಾಲ್ ಸಲಾಮ್ (Lal Salaam Poster) ಚಿತ್ರದ ಚಿತ್ರೀಕರಣ ಜುಲೈನಲ್ಲಿ ಪೂರ್ಣಗೊಂಡಿದ್ದು, ಇದೀಗ,ಚಿತ್ರದ ಬಿಡುಗಡೆಯನ್ನು ಹೊಸ ಪೋಸ್ಟರ್‌ನೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ 2024ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಪಿಲ್ ದೇವ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಲಾಲ್ ಸಲಾಮ್ ಪೋಸ್ಟರ್
“ಲಾಲ್ ಸಲಾಮ್2024ರ ಸಂಕ್ರಾಂತಿಯಂದು(ಪೊಂಗಲ್) ತೆರೆಗೆ ಬರಲಿದೆ” ಎಂದು ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದೆ ಚಿತ್ರತಂಡ ಅ.1ರಂದು ಟ್ವೀಟ್ ಹಂಚಿಕೊಂಡಿದೆ. ಹೊಸ ಪೋಸ್ಟರ್ ಕೆಂಪು ಬಣ್ಣದ ಪ್ಯಾಲೆಟ್ (ಕಲರ್) ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, ‘ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು, “ರಜನಿಕಾಂತ್ ಅವರ ಮತ್ತೊಂದು ಬ್ಲಾಕ್‌ಬಸ್ಟರ್‌ಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದೆ” ಎಂದು ಬರೆದಿದ್ದಾರೆ.
ಮುಂದಿನ ವರ್ಷ ಜನವರಿಯಲ್ಲಿ ಹಲವು ತಮಿಳು ಸಿನಿಮಾಗಳು ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ. ಶಿವಕಾರ್ತಿಕೇಯನ್ ಅಭಿನಯದ ʻಅಯಾಲನ್ ಪೊಂಗಲ್ʼ , ಸುಂದರ್ ಸಿ ಅವರ ಅರಣ್ಮನೈ 4, ಅರುಣ್ ವಿಜಯ್ ಅವರ ʻವನಂಗಾನ್ʼ ಮತ್ತು ಜಯಂ ರವಿ ಅವರ ʻಸೈರನ್ ಪೊಂಗಲ್ʼ ಬಿಡುಗಡೆಗೆ ಸಜ್ಜಾಗುತ್ತಿರುವ ಸಿನಿಮಾಗಳು. ಇವವೆಲ್ಲ ಸಿನಿಮಾಗಳ ಜತೆ ʻಲಾಲ್ ಸಲಾಮ್ ʼ ಪೈಪೋಟಿ ನಡೆಸಲಿದೆ.
ಇದನ್ನೂ ಓದಿ: Lal Salaam : ರಜನಿಕಾಂತ್ ಜತೆ ಬಣ್ಣ ಹಚ್ಚಲಿದ್ದಾರೆ ಕಪಿಲ್ ದೇವ್
LAL SALAAM to hit 🏏 screens on PONGAL 2024 🌾☀️✨
— Lyca Productions (@LycaProductions) October 1, 2023
🌟 @rajinikanth
🎬 @ash_rajinikanth
🎶 @arrahman
💫 @TheVishnuVishal & @vikranth_offl
🎥 @DOP_VishnuR
⚒️ @RamuThangraj
✂️🎞️ @BPravinBaaskar
👕 @NjSatz
🎙️ @RIAZtheboss @V4umedia_
🎨🖼️ @kabilanchelliah
🤝 @gkmtamilkumaran… pic.twitter.com/4XOg3sozSs
ಲಾಲ್ ಸಲಾಮ್ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಎ ಸುಬಾಸ್ಕರನ್ ಪ್ರಸ್ತುತಪಡಿಸಿದ್ದಾರೆ. ಲಾಲ್ ಸಲಾಮ್ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ, ವಿಷ್ಣು ಮತ್ತು ವಿಕ್ರಾಂತ್ ಅವರ ಮೊದಲ ಸಹಯೋಗದಲ್ಲಿ ಎಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಲಾಲ್ ಸಲಾಮ್ ಸಿನಿಮಾ ಮೂಲಕ ಐಶ್ವರ್ಯಾ ರಜನಿಕಾಂತ್ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಐಶ್ವರ್ಯಾ ಅವರ ಕೊನೆಯ ನಿರ್ದೇಶನದ ಪ್ರಾಜೆಕ್ಟ್ ತಮಿಳು ಆ್ಯಕ್ಷನ್-ಥ್ರಿಲ್ಲರ್ ʻವೈ ರಾಜಾ ವೈʼ. ಇದರಲ್ಲಿ ಧನುಷ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ರಜನಿಕಾಂತ್ ಅವರು ಭಾರತೀಯ ಸಿನಿಮಾ ಕ್ಷೇತ್ರದ ದಿಗ್ಗಜ ಎನಿಸಿಕೊಂಡಿದ್ದರೆ, ಕಪಿಲ್ ದೇವ್ ಅವರು ವಿಶ್ವ ಕ್ರಿಕೆಟ್ನ ಶ್ರೇಷ್ಠ ಆಟಗಾರ. ಅವರಿಬ್ಬರೂ ಜತೆಯಾಗಿ ನಟಿಸಿರುವ ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.