ಬೆಂಗಳೂರು : ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ದುಶ್ಚಟಗಳಿಗೆ ದಾಸರಾಗಿದ್ದು ತಮ್ಮ ಪತ್ನಿ ಲತಾ ಅವರೇ ನನ್ನನ್ನು ಬದಲಾಯಿಸಿದ್ದರು ಎಂದು ಖಾಸಗಿ ಜೀವನದ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ವೈ ಜಿ ಮಹೇಂದ್ರನ್ ಅವರ ಚಾರುಕೇಸಿ ನಾಟಕದ 50ನೇ ದಿನದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ರಜನಿಕಾಂತ್. ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್, ʻʻವೈ ಜಿ ಮಹೇಂದ್ರನ್ ಅವರು ಲತಾ ಅವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದ. ಲತಾ ಅವರು ನನ್ನ ಜೀವನದಲ್ಲಿ ಬಂದ ಮೇಲೆ ಹಲವಾರು ಬದಲಾವಣೆಗಳಾಗಿವೆ. ಕಂಡಕ್ಟರ್ ಆಗಿದ್ದಾಗ, ನಟನಾದ ನಂತರವೂ ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಬಿದ್ದಿದ್ದೆ. ಅದೆಲ್ಲವನ್ನು ಸಂಪೂರ್ಣ ಬಿಡುವಂತೆ ಮಾಡಿದ್ದು ನನ್ನ ಪತ್ನಿ. ನಾನು ಮದ್ಯಪಾನ ಮತ್ತು ಸಿಗರೇಟಿನ ವ್ಯಸನಿಯಾಗಿದ್ದೆ ಎಂದು ರಜಿನಿಕಾಂತ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ʻʻನಾನು ವಿಪರೀತ ಮಾಂಸ ತಿನ್ನುತ್ತಿದೆ. ದಿನಕ್ಕೆ ಎರಡು ಹೊತ್ತಾದರೂ ಮಾಂಸ ಬೇಕಿತ್ತು. ಮದ್ಯ ಸೇವಿಸುತ್ತಿದ್ದೆ. ಸಿಗರೇಟು ಸೇದುತ್ತಿದ್ದೆ. ಯಾವುದೂ ನನ್ನ ಕಂಟ್ರೋಲ್‌ನಲ್ಲಿ ಇರಲಿಲ್ಲ. ಮದುವೆ ನಂತರದ ದಿನಗಳಲ್ಲಿ ಅವುಗಳನ್ನು ಕಡಿಮೆ ಮಾಡಿಸಿದ್ದು ಮತ್ತು ಸಂಪೂರ್ಣ ಬಿಡುವಂತೆ ಮಾಡಿದ್ದು ನನ್ನ ಪತ್ನಿ. ನನ್ನ ಪ್ರಕಾರ, ಈ ಮೂರನ್ನು ಹೆಚ್ಚು ಕಾಲ ಸೇವಿಸುವವರು 60ರ ನಂತರ ಆರೋಗ್ಯಕರ ಜೀವನವನ್ನು ನಡೆಸುವುದಿಲ್ಲ, ವಾಸ್ತವವಾಗಿ, ನನ್ನ ಹೆಂಡತಿ ಲತಾ ಅವರು ನನ್ನ ಮೇಲೆ ಪ್ರೀತಿಯಿಂದ ನನ್ನನ್ನು ಬದಲಾಯಿಸಿದರು. ನಾನು ಶಿಸ್ತಿನ ಜೀವನವನ್ನು ನಡೆಸಲು ಅವರು ದಾರಿ ತೋರಿದರುʼʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Santro Ravi case | ಸ್ಯಾಂಟ್ರೋ ರವಿ ಈಗ ಕೈದಿ ನಂಬರ್ 18894: ಜೈಲರ್ ಮಹೇಶ್ ಬೆಂಗಳೂರಿಗೆ ಶಿಫ್ಟ್
ಇದನ್ನೂ ಓದಿ: Rajinikanth | ʻಜೈಲರ್ʼ ಸಿನಿಮಾ ಬಳಿಕ ಖ್ಯಾತ ನಿರ್ದೇಶಕರ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರಂತೆ ರಜನಿಕಾಂತ್!
ರಜನಿಕಾಂತ್ ಕೊನೆಯದಾಗಿ ನಿರ್ದೇಶಕ ಸಿರುತೈ ಶಿವ ಅವರ ಅಣ್ಣಾತ್ತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನೆಲ್ಸನ್ ದಿಲೀಪ್ ಕುಮಾರ್ ಅವರ ಜೈಲರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುನಿಲ್, ತಮನ್ನಾ, ವಿಜಯಕನ್, ವಸಂತ್ ರವಿ ಮತ್ತು ರಮ್ಯಾ ಕೃಷ್ಣನ್ ಪೋಷಕ ಪಾತ್ರಗಳ ಭಾಗವಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.