ಬೆಂಗಳೂರು: ʼಜಿಗರ್ ಥಂಡಾ ಡಬಲ್ ಎಕ್ಸ್ʼ ಸಿನಿಮಾ ತಂಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ (Actor Rajinikanth) ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಜತೆಗೆ ತಂಡಕ್ಕೆ ಪತ್ರವನ್ನು ಬರೆದಿದ್ದಾರೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಘವ ಲಾರೆನ್ಸ್ ಹಾಗೂ ಎಸ್.ಜೆ.ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿ ನಟಿಸಿದ ‘ಜಪಾನ್’ ಸಿನಿಮಾ ಕೂಡ ಒಟ್ಟಿಗೆ ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಅದಕ್ಕಿಂತಲೂ ಹೆಚ್ಚು ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
ಪತ್ರದಲ್ಲಿ ರಜನಿಕಾಂತ್ ʻʻಕಾರ್ತಿಕ್ ಸುಬ್ಬರಾಜ್ ಅವರ ಅದ್ಭುತ ಕೆಲಸ, ವಿಭಿನ್ನ ಕಥೆ ಮತ್ತು ಕಥಾವಸ್ತು ನನ್ನ ಮೆಚ್ಚುಗೆ. ಸಿನಿಮಾ ಅಭಿಮಾನಿಗಳು ಹಿಂದೆಂದೂ ನೋಡಿರದ ಹೊಸ ದೃಶ್ಯಗಳು ಇವೆ. ʻಲಾರೆನ್ಸ್ʼ ಈ ರೀತಿ ವರ್ತಿಸಬಹುದೇ ಎಂದು ನಮಗೆ ಆಶ್ಚರ್ಯವಾಗುತ್ತದೆ. ಎಸ್ ಜೆ ಸೂರ್ಯ ಇಂದಿನ ನಟ. ಅವರು ಖಳನಟ, ಹಾಸ್ಯ ಮತ್ತು ಪಾತ್ರವನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಈ ಚಿತ್ರವನ್ನು ಇಷ್ಟು ಅದ್ಧೂರಿಯಾಗಿ ನಿರ್ಮಿಸಿದ ನಿರ್ಮಾಪಕರಿಗೆ ನನ್ನ ವಿಶೇಷ ಅಭಿನಂದನೆಗಳು. ತಿರು ಅವರ ಕ್ಯಾಮೆರಾ ವರ್ಕ್ ಅದ್ಭುತವಾಗಿದೆ. ಕಲಾ ನಿರ್ದೇಶಕರ ಕೆಲಸ ಅದ್ಭುತವಾಗಿದೆ. ದಿಲೀಪ್ ಸುಬ್ಬರಾಯರ ಆಕ್ಷನ್ ದೃಶ್ಯಗಳು ಕೂಡ. ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತದ ಮೂಲಕ ಜೀವ ತುಂಬಿ ತಾನೊಬ್ಬ ಮೇರು ಸಂಗೀತ ಸಂಯೋಜಕ ಎಂದು ಸಾಬೀತುಪಡಿಸಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಈ ಚಿತ್ರದಲ್ಲಿ ಜನ ಚಪ್ಪಾಳೆ ತಟ್ಟುವಂತೆ ಮಾಡಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actor Rajinikanth: ತಲೈವರ್ 170 ಸೆಟ್‌ನಲ್ಲಿ ಅಮಿತಾಭ್ ಜತೆ ಪೋಸ್ ಕೊಟ್ಟ ರಜನಿ!
When Thalaivar said….
— karthik subbaraj (@karthiksubbaraj) November 14, 2023
"For my boys" ❤️#JigarthandaDoubleX
Love you Thalaivaaa ❤️❤️ pic.twitter.com/bkNtkedlyU
‘ಜಿಗರ್ ಥಂಡಾ ಡಬಲ್ ಎಕ್ಸ್’ ಕೇವಲ ನಾಲ್ಕು ದಿನದಲ್ಲಿ 35 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ. ಕಾರ್ತಿಕ್ ಸುಬ್ಬರಾಜ್ ‘ಪೆಟ್ಟಾ’ ಸಿನಿಮಾ ನಿರ್ದೇಶಿಸಿದ್ದರು. ಹೀಗಾಗಿ ಸಿನಿಮಾ ನೋಡಿ ಚಿತ್ರತಂಡಕ್ಕೆ ಪತ್ರ ಬರೆದಿದ್ದಾರೆ. ‘
ರಜನಿಕಾಂತ್ ಕೊನೆಯ ಬಾರಿಗೆ ಜೈಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ವಿಶ್ವಾದ್ಯಂತ 650 ಕೋಟಿ ರೂ. ಗಳಿಸಿತು. 33 ವರ್ಷಗಳ ನಂತರ ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ ʼತಲೈವರ್ 170ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.