Site icon Vistara News

Actor Rajinikanth: ತಲೈವರ್ 170 ಸೆಟ್‌ನಲ್ಲಿ ಅಮಿತಾಭ್‌ ಜತೆ ಪೋಸ್‌ ಕೊಟ್ಟ ರಜನಿ!

Rajinikanth Poses With Amitabh Bachchan

ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್ (Actor Rajinikanth) ಮುಂಬರುವ ಸಿನಿಮಾ ʼತಲೈವರ್ 170ʼ ಈಗಾಗಲೇ (Thalaivar 170 ) ಪಾತ್ರವರ್ಗವನ್ನು ಬಹಿರಂಗಪಡಿಸಿದೆ. ಇದೀಗ ರಜನಿಕಾಂತ್‌ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ʼತಲೈವರ್ 170ʼರ ಸೆಟ್‌ ಫೋಟೊವನ್ನು ಹಂಚಿಕೊಂಡಿದ್ದಾರೆ. ಜತೆಗೆ ಅಮಿತಾಭ್‌ ಇದ್ದಾರೆ. ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಚಿತ್ರಕ್ಕಾಗಿ ತಮಿಳಿನ ಸೂಪರ್‌ಸ್ಟಾರ್ ಮತ್ತು ಲೆಜೆಂಡರಿ ಬಾಲಿವುಡ್ ಸ್ಟಾರ್ 33 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಈ ಸುದ್ದಿಯನ್ನು ಕೆಲವು ವಾರಗಳ ಹಿಂದೆ ಲೈಕಾ ಪ್ರೊಡಕ್ಷನ್ಸ್ ಖಚಿತಪಡಿಸಿತ್ತು. ಈಗ ರಜನಿಕಾಂತ್ ಅವರು ಅಮಿತಾಭ್‌ ಅವರೊಂದಿಗೆ ಪೋಸ್ ನೀಡಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಫೋಟೊದಲ್ಲಿ, ರಜನಿಕಾಂತ್ ಅವರು ಬಿಳಿ ಬಟ್ಟೆಯನ್ನು ಧರಿಸಿದ್ದರು ಮತ್ತು ಅಮಿತಾಭ್‌ ಗುಲಾಬಿ, ನೀಲಿ ಮುದ್ರಿತ ಜಾಕೆಟ್‌ ಧರಿಸಿದ್ದರು. ರಜನಿಕಾಂತ್ ಅವರ ಹೆಗಲ ಮೇಲೆ ಅಮಿತಾಭ್‌ ಕೈ ಹಾಕಿ ಪೋಸ್‌ ನೀಡಿದರು. ಫೋಟೊವನ್ನು ಹಂಚಿಕೊಂಡಿರುವ ರಜನಿಕಾಂತ್, “33 ವರ್ಷಗಳ ನಂತರ, ನಾನು ನನ್ನ ಮಾರ್ಗದರ್ಶಕ, ಧೀಮಂತ ಅಮಿತಾಭ್‌ ಬಚ್ಚನ್ ಅವರೊಂದಿಗೆ ಮುಂಬರುವ ಲೈಕಾ ಅವರ “ತಲೈವರ್ 170″ ಸಿನಿಮಾದಲ್ಲಿ. ಟಿ.ಜೆ ಜ್ಞಾನವೇಲ್ ನಿರ್ದೇಶನದಲ್ಲಿ ಮತ್ತೆ ಕೆಲಸ ಮಾಡುತ್ತಿದ್ದೇನೆ. ನನಗೆ ಸಂತೋಷವಾಗಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Rajinikanth: ಚಡ್ಡಿ ಧರಿಸಿ, ಸ್ಟೈಲ್‌ ಆಗಿ ಕಂಡ ರಜನಿಕಾಂತ್‌; ಅಸಲಿ ವಿಷ್ಯಾನೇ ಬೇರೆ!

ರಿತಿಕಾ ಸಿಂಗ್, ಮಂಜು ವಾರಿಯರ್, ತುಷಾರ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಸಹ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನಟ ರಜನಿಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಚಿತ್ರ ಫೇಕ್‌ ಎನ್‌ಕೌಂಟರ್‌ನ ಬಗ್ಗೆ ಇರಲಿದೆ ಎಂದು ಹೇಳಲಾಗಿದೆ. ಪೇಟ್ಟಾ, ದರ್ಬಾರ್, ಜೈಲರ್ ನಂತರ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ರಜನಿಕಾಂತ್ ಅವರ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸಾಮಾಜಿಕ ಸಂದೇಶವುಳ್ಳ ಮನರಂಜನೆಯ ಚಿತ್ರವಾಗಿರುವ ಈ ಚಿತ್ರದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

Exit mobile version