Site icon Vistara News

Rajinikanth | ಸುಶಾಂತ್‌ ಸಿಂಗ್‌ ಅಭಿನಯದ ಸಿನಿಮಾವನ್ನು ರಿಮೇಕ್‌ ಮಾಡ್ತಿದ್ದಾರಾ ರಜನಿಕಾಂತ್‌? ಯಾವ ಸಿನಿಮಾ?

Rajinikanth (sushant singh)

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಸದ್ಯ ʻಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ರಜನಿಕಾಂತ್‌ ಅವರು ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ ನಟನೆಯ ‘ಕಾಯ್ ಪೋ ಚೆ’ (Kai Po Che) ಸಿನಿಮಾ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

2013ರಲ್ಲಿ ಸುಶಾಂತ್ ಸಿಂಗ್ ನಟನೆಯ ‘ಕಾಯ್ ಪೋ ಚೆ’ ಸಿನಿಮಾ ತೆರೆಗೆ ಬಂದಿತ್ತು. ಚೇತನ್ ಭಗತ್ ಬರೆದ ‘ದಿ ಥ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್’ ಕಾದಂಬರಿ ಆಧರಿಸಿ ಅಭಿಷೇಕ್ ಕಪೂರ್ ಈ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಕಟ್ಟಿಕೊಟ್ಟಿದ್ದರು. ಸುಶಾಂತ್ ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರಕ್ಕೆ ರಜನಿಕಾಂತ್‌ ಅವರು ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Kantara Movie | ರಜನಿಕಾಂತ್‌ ಭೇಟಿ ವೇಳೆ ರಿಷಬ್‌ ಶೆಟ್ಟಿ ಪಂಚೆ ಬದಲು ಜೀನ್ಸ್‌ ಧರಿಸಿದ್ಯಾಕೆ? ನಟ ಹೇಳಿದ್ದೇನು?

ಲೈಕಾ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಟಿಸುತ್ತಿರುವ 2 ಸಿನಿಮಾಗಳಲ್ಲಿ ಒಂದು ಚಿತ್ರಕ್ಕೆ ಪುತ್ರಿ ಐಶ್ವರ್ಯ ನಿರ್ದೇಶನ ಮಾಡುತ್ತಿದ್ದಾರೆ. ‘ಲಾಲ್‌ ಸಲಾಂ’ ಎನ್ನುವ ಟೈಟಲ್‌ ಕೂಡ ಫಿಕ್ಸ್ ಆಗಿದೆ. ಇದೀಗ ʻಲಾಲ್‌ ಸಲಾಂʼ ಚಿತ್ರ ಸುಶಾಂತ್‌ ಸಿಂಗ್‌ ನಟನೆಯ ‘ಕಾಯ್ ಪೋ ಚೆ’ ಸಿನಿಮಾ ರಿಮೇಕ್‌ ಎಂದು ಹೇಳಲಾಗುತ್ತಿದೆ. ಕಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ | Rajinikanth | ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ʻಜೈಲರ್‌ʼ ಸೆಟ್‌ನಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌!

Exit mobile version