Site icon Vistara News

Rajinikanth: ರಜನಿಕಾಂತ್‌ಗೆ ಆ್ಯಕ್ಷನ್‌ ಕಟ್‌ ಹೇಳ್ತಿದ್ದಾರೆ ʻಜೈ ಭೀಮ್ʼ ಖ್ಯಾತಿಯ ಟಿಜಿ ಜ್ಞಾನವೇಲ್‌: ಹೊಸ ಸಿನಿಮಾ ಘೋಷಣೆ

Rajinikanth's Thalaivar 170 to be helmed by Jai Bhim director

ಬೆಂಗಳೂರು: ಕಾಲಿವುಡ್‌ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ `ತಲೈವರ್ 170′ ಅನ್ನು ಮಾರ್ಚ್ 2ರಂದು ಲೈಕಾ ಪ್ರೊಡಕ್ಷನ್ಸ್ ಘೋಷಿಸಿದೆ. ಈ ಚಿತ್ರವನ್ನು ʻಜೈ ಭೀಮ್ʼ ಖ್ಯಾತಿಯ ಟಿಜಿ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಮತ್ತು ಅನಿರುದ್ಧ್ ಅವರ ಸಂಗೀತವಿದೆ. ಮತ್ತೊಮ್ಮೆ ಲೈಕಾ ಪ್ರೊಡಕ್ಷನ್ಸ್‌ನೊಂದಿಗೆ (Lyca Productions) ರಜನಿಕಾಂತ್ ಕೈ ಜೋಡಿಸುತ್ತಿರುವುದರಿಂದ ಕುತೂಹಲಕಾರಿ ಯೋಜನೆಯಾಗಿ ಹೊರಹೊಮ್ಮಲಿದೆ. ಹೆಸರಿಡದ ಈ ಚಿತ್ರಕ್ಕೆ ಇನ್ನಷ್ಟೇ ಮಾಹಿತಿ ಚಿತ್ರತಂಡ ಹಂಚಿಕೊಳ್ಳಬೇಕಾಗಿದೆ.

ಲೈಕಾ ಅಧ್ಯಕ್ಷ ಸುಭಾಸ್ಕರನ್ ಅವರ ಹುಟ್ಟುಹಬ್ಬದ ದಿನದಂದು ಲೈಕಾ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ, ರಜನಿಕಾಂತ್ ಸನ್ ಪಿಕ್ಚರ್ಸ್ ಅವರ ʻಜೈಲರ್ʼ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರ ʻಲಾಲ್ ಸಲಾಂʼ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Rajini in Mangalore : ಪಿಲಿಕುಳದ ಗುತ್ತಿನ ಮನೆಯಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌; ಜೈಲರ್‌‌ ಸಿನಿಮಾ ಶೂಟಿಂಗ್‌

ಜೈಲರ್

ಜೈಲರ್ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾವಾಗಿದೆ. ಚಿತ್ರದ ಶೂಟಿಂಗ್ ನಡೆಯುತ್ತಿದೆ. ರಜನಿಕಾಂತ್ ಹೊರತುಪಡಿಸಿ, ಈ ಚಿತ್ರದಲ್ಲಿ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ಯೋಗಿ ಬಾಬು ಮತ್ತು ಮಲಯಾಳಂ ನಟ ವಿನಾಯಕನ್ ಸೇರಿದಂತೆ ತಾರಾಗಣವಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version