Site icon Vistara News

Jailer Audio launch: ʻಸೂಪರ್ ಸ್ಟಾರ್ʼ ಪದ ತೆಗೆಯಲು ಹೇಳಿದೆ, ಅನೇಕ ಜನರನ್ನು ತಿರಸ್ಕರಿಸಿದೆ ಎಂದ ರಜನಿ!

Rajanikanth

ಬೆಂಗಳೂರು: ಇದೇ ಆಗಸ್ಟ್‌ 10ರಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ʻಜೈಲರ್‌ʼ ಸಿನಿಮಾ (Jailer Audio launch) ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಚೆನ್ನೈನಲ್ಲಿ ಈಗಾಗಲೇ ಆಡಿಯೊ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅವರು ಕೂಡ ಕುಟುಂಬ ಸಮೇತ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ರಜನಿಕಾಂತ್‌ ಮಾತನಾಡಿ ʻʻ’ಹುಕುಂ’ ಹಾಡಿನ ಸಾಹಿತ್ಯವನ್ನು ಕೇಳಿದಾಗ ಸೂಪರ್ ಸ್ಟಾರ್ ಪದವನ್ನು ತೆಗೆದುಹಾಕಲು ನಾನು ಹೇಳಿದ್ದೆʼʼ ಎಂಬುದಾಗಿ ತಿಳಿಸಿದರು.

ಸಿನಿಮಾ ಬಗ್ಗೆ ರಜನಿಕಾಂತ್‌ ಮಾತನಾಡಿ ʻ ‘ಬೀಸ್ಟ್’ ಸಿನಿಮಾ ರಿಲೀಸ್‌ಗೂ ಮುನ್ನ ನಿರ್ದೇಶಕ ನೆಲ್ಸನ್ ಬಂದು ‘ಜೈಲರ್’ ಒನ್‌ಲೈನ್ ಸ್ಟೋರಿ ಹೇಳಿದ್ದರು. ನನಗೂ ಇಷ್ಟವಾಗಿತ್ತು. ನಂತರ ಅವರು ‘ಬೀಸ್ಟ್’ ಸಿನಿಮಾ ಮುಗಿಸಿ ಬಂದು ಸಂಪೂರ್ಣ ಕಥೆ ಹೇಳಿದರು. ಮೊದಲು ಹೇಳಿದ್ದಕ್ಕಿಂತ ಬಹಳ ಚೆನ್ನಾಗಿ ಎನಿಸಿತು. ಬೀಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನ ‘ಜೈಲರ್’ ಸಿನಿಮಾ ಓಕೆ ಆಗಿತ್ತು. ನಿರ್ದೇಶಕರನ್ನು ಬದಲಾಯಿಸುವಂತೆ ನನಗೆ ವಿತರಕರಿಂದ ಸಾಕಷ್ಟು ಕರೆಗಳು ಬಂದವು. ಯಾವತ್ತು ಕೂಡ ನಿರ್ದೇಶರು ಸೋಲಲ್ಲ. ಅವರು ಮಾಡುವ ಸಬ್ಜೆಕ್ಟ್‌ ಸೋಲುತ್ತವೆ ಅಷ್ಟೆ” ಎಂದಿದ್ದಾರೆ.

ಇದನ್ನೂ ಓದಿ: Jailer Audio launch: ರಜನಿಕಾಂತ್‌ ನನ್ನ ಚಿಕ್ಕಪ್ಪನ ಹಾಗೆ ಎಂದ ಶಿವಣ್ಣ!

ಸೂಪರ್ ಸ್ಟಾರ್ ಪದವನ್ನು ತೆಗೆದುಹಾಕಲು ಹೇಳಿದೆ

ರಜನಿಕಾಂತ್‌ ಮಾತು ಮುಂದುವರಿಸಿ ʻ ಮೊದಲ ಬಾರಿಗೆ ‘ಹುಕುಂ’ ಹಾಡಿನ ಸಾಹಿತ್ಯವನ್ನು ಕೇಳಿದಾಗ ಹಾಡಿನಲ್ಲಿ ಸೂಪರ್ ಸ್ಟಾರ್ ಪದವನ್ನು ತೆಗೆದುಹಾಕಲು ನಾನು ಕೇಳಿದೆ. ಸೂಪರ್ ಸ್ಟಾರ್ ಟೈಟಲ್ ನನಗೆ ಸದಾ ಕಷ್ಟ ಎನಿಸುತ್ತದೆ. ನಾನು ಸೂಪರ್ ಸ್ಟಾರ್ ಟೈಟಲ್ ಬೇಡ ಎಂದು ಬಹಳ ಹಿಂದೆಯೇ ಹೇಳಿದೆ ಎಂದರು.

ಅನೇಕ ಜನರನ್ನು ತಿರಸ್ಕರಿಸಿದೆ

“ಅಣ್ಣಾತ್ತೆ ಚಿತ್ರದ ನಂತರ ದೊಡ್ಡ ಗ್ಯಾಪ್ ಆಯಿತು. ಕಾರಣ ಸರಿಯಾದ ನಿರ್ದೇಶಕರು, ಒಳ್ಳೆ ಕಥೆ ಸಿಗಲಿಲ್ಲ. ನನ್ನ ವೃತ್ತಿಜೀವನವನ್ನು ನನ್ನ ನಿರ್ದೇಶಕರು ತಿದ್ದಿ ತೀಡಿದ್ದಾರೆ. ಅಣ್ಣಾತ್ತೆ ಬಳಿಕ ನಾನು ಸಾಕಷ್ಟು ಕಥೆಗಳನ್ನು ಕೇಳಿದೆ. ಹಲವರು ಬಂದು ಕಥೆ ಹೇಳಿದರು. ನಾನು ಅನೇಕ ಜನರನ್ನು ತಿರಸ್ಕರಿಸಿದೆ. ನಾನು ರೀತಿ ಎಲ್ಲರನ್ನು ತಿರಸ್ಕರಿಸುವುದು ನನಗೆ ಬೇಸರವಾಯಿತು. ಅದಕ್ಕೆ ಕಥೆಗಳನ್ನು ಕೇಳುವುದೇ ಬಿಟ್ಟೆ” ಎಂದು ರಜನಿಕಾಂತ್‌ ಹೇಳಿದರು.

ಸೂಪರ್‌ಸ್ಟಾರ್ ಜೊತೆಗೆ, ಚಿತ್ರದಲ್ಲಿ ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್ ಮತ್ತು ಮೋಹನ್‌ಲಾಲ್ ಅವರ ವಿಶೇಷ ಅತಿಥಿ ಪಾತ್ರವನ್ನು ಒಳಗೊಂಡಂತೆ ತಾರಾ ಬಳಗವಿದೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಜಾನಿ ಮಾಸ್ಟರ್ ಈ ಮ್ಯೂಸಿಕ್ ವಿಡಿಯೊಗೆ ಕೊರಿಯೋಗ್ರಫಿ ಮಾಡಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ. ʻಜೈಲರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.

ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Exit mobile version