Site icon Vistara News

Rakhi Sawant | ರಾಖಿ ಸಾವಂತ್‌ ಅಳುವಿನ ಬೆನ್ನಲ್ಲೇ ಮದುವೆ ಪೋಸ್ಟ್‌ ಹಂಚಿಕೊಂಡ ಪತಿ ಆದಿಲ್ ಖಾನ್ ದುರಾನಿ!

Rakhi Sawant

ಬೆಂಗಳೂರು : ಯಾವಾಗಲೂ ಆನ್‌ಲೈನ್‌ನಲ್ಲಿ ಹಾಸ್ಯಮಯ ಸಂಗತಿಗಳೊಂದಿಗೆ ತನ್ನ ಅಭಿಮಾನಿಗಳನ್ನು ರಂಜಿಸಲು ಹೆಸರುವಾಸಿಯಾಗಿರುವ ರಾಖಿ ಸಾವಂತ್ (Rakhi Sawant) ಮದುವೆ ವಿಚಾರದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಆದಿಲ್ ಖಾನ್ ದುರಾನಿ ಜತೆಗಿನ ಮದುವೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆ ಆಗಿದ್ದರೂ ಆದಿಲ್ ಒಪ್ಪಿಕೊಳ್ಳುತ್ತಿಲ್ಲ ಎಂದು ರಾಖಿ ಗೋಳಾಡಿದ್ದರು. ಇದರ ಬೆನ್ನಲ್ಲೇ ತಮ್ಮ ಮದುವೆಯ ಬಗ್ಗೆ ಆದಿಲ್ ಖಾನ್ ಮೌನ ಮುರಿದಿದ್ದಾರೆ. ಇದೀಗ ಅಧಿಕೃತ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆ ಮಂದಿಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂದು ರಾಖಿ ಹೇಳಿಕೊಂಡಿದ್ದರು.

ಇದನ್ನೂ ಓದಿ | Rakhi Sawant | ನನಗೀಗ ಮದುವೆಯಾಗಿದೆ, ದೂರ ನಿಲ್ಲಿ: ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಭಿಮಾನಿಗೆ ರಾಖಿ ತಪರಾಕಿ!

ನಿನ್ನೆ ರಾಖಿ ಅಳುತ್ತಿರುವುದನ್ನು ಕಂಡು ನೆಟಿಜನ್‌ಗಳು ಆಕೆಯ ಪತಿ ಆದಿಲ್ ಅವರನ್ನು ತೊರೆದಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಅಂತಿಮವಾಗಿ, ಆದಿಲ್ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಿದ್ದಾರೆ. ಆದಿಲ್‌ ಪೋಸ್ಟ್‌ ಹಂಚಿಕೊಂಡು ನಾನು ರಾಖಿಯನ್ನು ಮದುವೆಯಾಗಿದ್ದಾಗಿ ಹೇಳಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿತ್ತು. ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ವಿಚಾರವನ್ನು ಮುಚ್ಚಿಟ್ಟೆ. ರಾಖಿ ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದಿದ್ದಾರೆ.

ರಾಖಿ ಸಾವಂತ್ ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಕೆಲವು ನೆಟಿಜನ್‌ಗಳು ಲವ್ ಜಿಹಾದ್‌ನೊಂದಿಗೆ ಮದುವೆಗೆ ಸಂಬಂಧಿಸಿದ್ದರೆ, ಇನ್ನು ಕೆಲವರು ದಂಪತಿಗೆ ಶುಭಾಶಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Rakhi Sawant | ನನಗೀಗ ಮದುವೆಯಾಗಿದೆ, ದೂರ ನಿಲ್ಲಿ: ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಭಿಮಾನಿಗೆ ರಾಖಿ ತಪರಾಕಿ!

Exit mobile version