Rakhi Sawant | ರಾಖಿ ಸಾವಂತ್‌ ಅಳುವಿನ ಬೆನ್ನಲ್ಲೇ ಮದುವೆ ಪೋಸ್ಟ್‌ ಹಂಚಿಕೊಂಡ ಪತಿ ಆದಿಲ್ ಖಾನ್ ದುರಾನಿ! - Vistara News

ಬಾಲಿವುಡ್

Rakhi Sawant | ರಾಖಿ ಸಾವಂತ್‌ ಅಳುವಿನ ಬೆನ್ನಲ್ಲೇ ಮದುವೆ ಪೋಸ್ಟ್‌ ಹಂಚಿಕೊಂಡ ಪತಿ ಆದಿಲ್ ಖಾನ್ ದುರಾನಿ!

ರಾಖಿ ಸಾವಂತ್ (Rakhi Sawant) ಮದುವೆ ವಿಚಾರದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಆದಿಲ್ ಖಾನ್ ದುರಾನಿ ಜತೆಗಿನ ಮದುವೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Rakhi Sawant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಯಾವಾಗಲೂ ಆನ್‌ಲೈನ್‌ನಲ್ಲಿ ಹಾಸ್ಯಮಯ ಸಂಗತಿಗಳೊಂದಿಗೆ ತನ್ನ ಅಭಿಮಾನಿಗಳನ್ನು ರಂಜಿಸಲು ಹೆಸರುವಾಸಿಯಾಗಿರುವ ರಾಖಿ ಸಾವಂತ್ (Rakhi Sawant) ಮದುವೆ ವಿಚಾರದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಆದಿಲ್ ಖಾನ್ ದುರಾನಿ ಜತೆಗಿನ ಮದುವೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆ ಆಗಿದ್ದರೂ ಆದಿಲ್ ಒಪ್ಪಿಕೊಳ್ಳುತ್ತಿಲ್ಲ ಎಂದು ರಾಖಿ ಗೋಳಾಡಿದ್ದರು. ಇದರ ಬೆನ್ನಲ್ಲೇ ತಮ್ಮ ಮದುವೆಯ ಬಗ್ಗೆ ಆದಿಲ್ ಖಾನ್ ಮೌನ ಮುರಿದಿದ್ದಾರೆ. ಇದೀಗ ಅಧಿಕೃತ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆ ಮಂದಿಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂದು ರಾಖಿ ಹೇಳಿಕೊಂಡಿದ್ದರು.

ಇದನ್ನೂ ಓದಿ | Rakhi Sawant | ನನಗೀಗ ಮದುವೆಯಾಗಿದೆ, ದೂರ ನಿಲ್ಲಿ: ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಭಿಮಾನಿಗೆ ರಾಖಿ ತಪರಾಕಿ!

ನಿನ್ನೆ ರಾಖಿ ಅಳುತ್ತಿರುವುದನ್ನು ಕಂಡು ನೆಟಿಜನ್‌ಗಳು ಆಕೆಯ ಪತಿ ಆದಿಲ್ ಅವರನ್ನು ತೊರೆದಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಅಂತಿಮವಾಗಿ, ಆದಿಲ್ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಿದ್ದಾರೆ. ಆದಿಲ್‌ ಪೋಸ್ಟ್‌ ಹಂಚಿಕೊಂಡು ನಾನು ರಾಖಿಯನ್ನು ಮದುವೆಯಾಗಿದ್ದಾಗಿ ಹೇಳಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿತ್ತು. ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ವಿಚಾರವನ್ನು ಮುಚ್ಚಿಟ್ಟೆ. ರಾಖಿ ನಮಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದಿದ್ದಾರೆ.

ರಾಖಿ ಸಾವಂತ್ ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಕೆಲವು ನೆಟಿಜನ್‌ಗಳು ಲವ್ ಜಿಹಾದ್‌ನೊಂದಿಗೆ ಮದುವೆಗೆ ಸಂಬಂಧಿಸಿದ್ದರೆ, ಇನ್ನು ಕೆಲವರು ದಂಪತಿಗೆ ಶುಭಾಶಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Rakhi Sawant | ನನಗೀಗ ಮದುವೆಯಾಗಿದೆ, ದೂರ ನಿಲ್ಲಿ: ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಭಿಮಾನಿಗೆ ರಾಖಿ ತಪರಾಕಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

The Lion King: ನಟರು ಮತ್ತು ಅಭಿಮಾನಿಗಳು ʻದಿ ಲಯನ್ ಕಿಂಗ್ʼನಲ್ಲಿ ಕೆಲಸ ಮಾಡಿರುವಂತಹ ನೆನಪುಗಳು, ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. 30 ವರ್ಷಗಳ ಹಿಂದೆ ಜೂನ್ 15 ರಂದು ಬಿಡುಗಡೆಯಾದ `ದಿ ಲಯನ್ ಕಿಂಗ್’ (1994) ಎಲ್ಲ ವಯೋಮಾನದವರನ್ನು ರಂಜಿಸಿತ್ತು. ಇಂದಿಗೂ ಈ ಕಾರ್ಟೂನ್‌ನಲ್ಲಿರುವ ಅದ್ಭುತ ಸನ್ನಿವೇಶಗಳನ್ನು ಹಲವರು ನೆನಪಿಸಿಕೊಳ್ಳುತ್ತಾರೆ.

VISTARANEWS.COM


on

The Lion King 30 years influence on fans and actors
Koo

ಬೆಂಗಳೂರು: ʻದಿ ಲಯನ್ ಕಿಂಗ್ʼ ತನ್ನ 30ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದರ ನಟರು ಮತ್ತು ಅಭಿಮಾನಿಗಳು ʻದಿ ಲಯನ್ ಕಿಂಗ್ʼನಲ್ಲಿ ಕೆಲಸ ಮಾಡಿರುವಂತಹ ನೆನಪುಗಳು, ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. 30 ವರ್ಷಗಳ ಹಿಂದೆ ಜೂನ್ 15 ರಂದು ಬಿಡುಗಡೆಯಾದ `ದಿ ಲಯನ್ ಕಿಂಗ್’ (1994) ಎಲ್ಲ ವಯೋಮಾನದವರನ್ನು ರಂಜಿಸಿತ್ತು. ಇಂದಿಗೂ ಈ ಕಾರ್ಟೂನ್‌ನಲ್ಲಿರುವ ಅದ್ಭುತ ಸನ್ನಿವೇಶಗಳನ್ನು ಹಲವರು ನೆನಪಿಸಿಕೊಳ್ಳುತ್ತಾರೆ. 2019ರ ಫೋಟೊರಿಯಾಲಿಸ್ಟಿಕ್ ಆವೃತ್ತಿಯನ್ನು ಒಳಗೊಂಡಂತೆ ಹಲವಾರು ಬಾರಿ ರೀಮೇಕ್ ಮಾಡಲಾಗಿದೆ. ಲಯನ್ ಕಿಂಗ್ ಹಿಂದಿಯಲ್ಲಿ ಬಿಡುಗಡೆಯಾಯಿತು, ಇದರಲ್ಲಿ ಶಾರುಖ್ ಖಾನ್, ಆಶಿಶ್ ವಿದ್ಯಾರ್ಥಿ, ಅಸ್ರಾನಿ, ಶ್ರೇಯಸ್ ತಲ್ಪಾಡೆ ಮತ್ತು ಸಂಜಯ್ ಮಿಶ್ರಾ ಮುಂತಾದ ಹೆಸರುಗಳನ್ನು ಒಳಗೊಂಡ ಪಾತ್ರಗಳು ಇದ್ದವು. ಇದೀಗ `ದಿ ಲಯನ್ ಕಿಂಗ್‌ಗೆ 30 ವರ್ಷ ಸಂದಿದೆ.

ನಟ ಶ್ರೇಯಸ್ ತಲ್ಪಾಡೆ ಈ ಬಗ್ಗೆ ಮಾತನಾಡಿ ʻʻಹಿಂದಿ ಆವೃತ್ತಿಯಲ್ಲಿ ಶಾರುಖ್ ಖಾನ್, ಸಂಜಯ್ ಮಿಶ್ರಾ ಮತ್ತು ಆಶಿಶ್ ವಿದ್ಯಾರ್ಥಿ ಸೇರಿದಂತೆ ಪೌರಾಣಿಕ ನಟರು ಕೆಲಸ ಮಾಡಿದ್ದರು. ಲಯನ್‌ ಕಿಂಗ್ ಮಾಡಲು ಮುಖ್ಯ ಕಾರಣವೆಂದರೆ ನನ್ನ ಮಗಳು.ಅವಳ ತಂದೆ ಈ ಲಯನ್‌ ಕಿಂಗ್‌ ಆವೃತ್ತಿಗೆ ಧ್ವನಿ ನೀಡಿದ್ದಾರೆ ಎಂದರೆ ಖಷಿ ಪಡುತ್ತಿದ್ದಳುʼʼಎಂದರು.

ಇದನ್ನೂ ಓದಿ: Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

ಲಯನ್ ಕಿಂಗ್ ಹಲವಾರು ಕಾರಣಗಳಿಗಾಗಿ ನೋಡುಗರನ್ನು ಮೆಚ್ಚಿಸಿದೆ. ತಾಂತ್ರಿಕ ಕಾರಂಣಗಳಿಂದಲೂ ಪ್ರೇಕ್ಷರನ್ನು ಮೆಚ್ಚಿಸಿತ್ತು. ಬಿಡುಗಡೆ ಕಂಡಾಗ ಈ ಸಿನಿಮಾ ವರ್ಷದ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯುತ್ತಮ ಮೂಲ ಸ್ಕೋರ್ ಮತ್ತು ಅತ್ಯುತ್ತಮ ಮೂಲ ಗೀತೆಗಾಗಿ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತ್ತು.
ಲಯನ್ ಕಿಂಗ್ ಬಗ್ಗೆ ಜನರು ಹೆಚ್ಚು ನೆನಪಿಸಿಕೊಳ್ಳುವ ವಿಷಯವೆಂದರೆ ಅದರ ಸೊಗಸಾದ ಸಂಗೀತ. ಸಂಯೋಜಕ ಹ್ಯಾನ್ಸ್ ಝಿಮ್ಮರ್ ಈ ಹಿಂದೆ ಡಿಸ್ನಿ ಸಂಗೀತ ತಂಡದೊಂದಿಗೆ ಮಾತನಾಡುತ್ತಾ, ʻದಿ ಲಯನ್ ಕಿಂಗ್ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಕೇವ ಸಂಗೀತವನ್ನು ಸಂಯೋಜಿಸಿದ ಮಾತ್ರಕ್ಕಲ್ಲʼʼ ಎಂದು ಹೇಳಿದರು.

ಅನೇಕ ಅಭಿಮಾನಿಗಳಿಗೆ, ಲಯನ್ ಕಿಂಗ್ ಅನ್ನು ವೀಕ್ಷಿಸುವುದು ಅವರ ಬಾಲ್ಯದ ಪ್ರಮುಖ ಭಾಗವಾಗಿತ್ತು.
ಚಿತ್ರದ ಹಿಂದಿ ಆವೃತ್ತಿಯಲ್ಲಿ ʻಸ್ಕಾರ್‌ʼ ಪಾತ್ರಕ್ಕೆ ಧ್ವನಿ ನೀಡಿದ ನಟ ಆಶಿಶ್ ವಿದ್ಯಾರ್ಥಿ, ಡಬ್ಬಿಂಗ್ ಸವಾಲುಗಳ ಬಗ್ಗೆ ಅದೆಷ್ಟೋ ಬಾರಿ ಹೇಳಿಕೊಂಡಿದ್ದರು.

“ಸ್ಕಾರ್ ಒಂದು ಒಳ್ಳೆಯ ಪಾತ್ರವಾಗಿದೆ, ಅದಕ್ಕೆ ನನ್ನ ಧ್ವನಿಯನ್ನು ನೀಡುವ ಅನುಭವವು ಅಸಾಧಾರಣವಾಗಿದೆ. ತುಂಬ ಸವಾಲಾಗಿತ್ತು. ಮೂಲ ಇಂಗ್ಲಿಷ್ ಆವೃತ್ತಿ ಆದರೂ ಹಿಂದಿಯಲ್ಲಿ ಪಾತ್ರದ ಡೈಲಾಗ್‌ ಕೂಡ ಚೆನ್ನಾಗಿ ಬರೆಯಲಾಗಿದೆ ಹಿಂದಿ ಆವೃತ್ತಿ ಕೂಡ ಚೆಂದವಾಗಿ ಮೂಡಿತ್ತು. ‘ಹೂನ್ ತಯಾರ್’ ಹಾಡನ್ನು ಹಾಡಲು ನನ್ನನ್ನು ಕರೆದರು. ಹಾಡುವಾಗ, ಸ್ಕಾರ್‌ಗಾಗಿ ಸಂಪೂರ್ಣ ಧ್ವನಿಯನ್ನು ಏಕೆ ಮಾಡಬಾರದು ಎಂದು ಸಲಹೆ ನೀಡಿದರು. ಅದರಂತೆ ಬಳಿಕ ಧ್ವನಿ ನೀಡಿದೆʼʼಎಂದು ಹೇಳಿದರು. ಬಿಡುಗಡೆಯಾಗಿ ಮೂವತ್ತು ವರ್ಷಗಳೇ ಕಳೆದರೂ ಚಿತ್ರ ಇನ್ನೂ ಔಟ್‌ ಡೇಟ್ ಆಗಿಲ್ಲ.

Continue Reading

ಸಿನಿಮಾ

Sonakshi Sinha Wedding: ಸೋನಾಕ್ಷಿ ಮದುವೆ ಬಗ್ಗೆ ಅಸಮಾಧಾನ ಇತ್ತು, ಆದರೆ…: ಶತ್ರುಘ್ನ ಸಿನ್ಹಾ ವಿವರಣೆ

ಜೂನ್ 23ರಂದು ಸೋನಾಕ್ಷಿ ಸಿನ್ಹಾ ಮದುವೆಯ (Sonakshi Sinha Wedding) ಆರತಕ್ಷತೆಯಲ್ಲಿ ಭಾಗವಹಿಸುತ್ತಿದ್ದೇವೆ. ನನ್ನ ಕುಟುಂಬದ ಯಾರೂ ಮದುವೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಕೆಲವು ಮಾಧ್ಯಮಗಳು ಕೇವಲ ವಿಷಯಗಳನ್ನು ಊಹಿಸುತ್ತಿವೆ. ಖಾಸಗಿ ಕೌಟುಂಬಿಕ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ ಎಂದು ನಟ – ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

VISTARANEWS.COM


on

By

Sonakshi Sinha Wedding
Koo

ಮುಂಬಯಿ: ವಿವಾಹದ ಮೊದಲು ಕೆಲವೊಂದು ಭಿನಾಭಿಪ್ರಾಯಗಳು ಸಾಮಾನ್ಯ. ಈಗ ಎಲ್ಲವೂ ಸರಿಯಾಗಿದೆ. ಒತ್ತಡ ಏನೇ ಇರಲಿ ಅದನ್ನು ಸರಿಪಡಿಸಲಾಗಿದೆ ಎಂದು ನಟ – ರಾಜಕಾರಣಿ (Actor-politician) ಶತ್ರುಘ್ನ ಸಿನ್ಹಾ (Shatrughan Sinha) ಹೇಳಿದ್ದಾರೆ. ಮಗಳು, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆ (Sonakshi Sinha Wedding) ವಿಚಾರವಾಗಿ ವದಂತಿಗಳ ಕುರಿತು ಅವರು ಪ್ರತಿಕ್ರಿಯಿಸಿದರು.

ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಅವರ ಮದುವೆಯ ಬಗ್ಗೆ ತಮ್ಮ ಕುಟುಂಬದಲ್ಲಿ ಕೆಲವು ಒತ್ತಡಗಳಿವೆ ಎನ್ನುವುದನ್ನು ಶತ್ರುಘ್ನ ಸಿನ್ಹಾ ಒಪ್ಪಿಕೊಂಡಿದ್ದಾರೆ. ಈಗ ಎಲ್ಲಾ ಒತ್ತಡವನ್ನು ಪರಿಹರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಹಲವಾರು ವರದಿಗಳು ಉಲ್ಲೇಖಿಸಿದಂತೆ ಜೂನ್ 23ರಂದು ಸೋನಾಕ್ಷಿಯ ಮದುವೆಯ ದಿನಾಂಕವಲ್ಲ ಎಂದು ಶತ್ರುಘ್ನ ಬಹಿರಂಗಪಡಿಸಿದರು. ವಾಸ್ತವವಾಗಿ, ಇದು ಅವಳ ಆರತಕ್ಷತೆಯ ದಿನಾಂಕವಾಗಿದೆ ಎಂದು ತಿಳಿಸಿದರು.

ಜೂನ್ 23ರಂದು ಸಂಜೆ ನಾವೆಲ್ಲರೂ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸುತ್ತಿದ್ದೇವೆ. ನನ್ನ ಕುಟುಂಬದ ಯಾರೂ ಮದುವೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಕೆಲವು ಮಾಧ್ಯಮಗಳು ಕೇವಲ ವಿಷಯಗಳನ್ನು ಊಹಿಸುತ್ತಿವೆ. ಖಾಸಗಿ ಕೌಟುಂಬಿಕ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ. ವಿವಾಹದ ಮೊದಲು ಘರ್ಷಣೆಗಳು ಸಾಮಾನ್ಯವಾಗಿದೆ. ನಾವೆಲ್ಲರೂ ಈಗ ಚೆನ್ನಾಗಿದ್ದೇವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಅವರು ಹೇಳಿದರು.

ಶತ್ರುಘ್ನ ಸಿನ್ಹಾ ಅವರ ಮಗಳು ಎಂಬ ಕಾರಣಕ್ಕೆ ಸೋನಾಕ್ಷಿ ಜೀವನದಲ್ಲಿ ತನಗೆ ಬೇಕಾದುದನ್ನು ಪಡೆಯದೆ ತ್ಯಾಗ ಮಾಡಬಾರದು ಎಂದೇನಿಲ್ಲ. ನಾವು ಪೋಷಕರು ಏನೇ ಹೇಳಬಹುದು. ಆದರೆ ನಿರ್ಧಾರ ಅವರದ್ದು ಎಂದರು.

ಮಗಳು ಸೋನಾಕ್ಷಿ ಮದುವೆ ಬಗ್ಗೆ ತನಗೆ ತಿಳಿದಿಲ್ಲ ಎಂದು ನಟ ಹೇಳಿದ ಅನಂತರ ಮೊದಲ ಬಾರಿಗೆ ಸೋನಾಕ್ಷಿ ಮತ್ತು ಶತ್ರುಘ್ನ ನಡುವಿನ ಬಿರುಕುಗಳ ವದಂತಿಗಳು ಪ್ರಾರಂಭವಾದವು. ಆದರೂ ಶತ್ರುಘ್ನ ಇತ್ತೀಚಿನ ಸಂದರ್ಶನವೊಂದರಲ್ಲಿ, ನನ್ನ ಏಕೈಕ ಪುತ್ರಿ ಸೋನಾಕ್ಷಿ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಆಕೆಯನ್ನು ಅಪಾರವಾಗಿ ಇಷ್ಟಪಡುತ್ತೇನೆ. ಅವಳು ನನ್ನನ್ನು ತನ್ನ ಶಕ್ತಿಯ ಮೂಲ ಎಂದು ಹೇಳುತ್ತಿರುತ್ತಾಳೆ. ನಾನು ಮದುವೆಗೆ ಖಂಡಿತ ಇರುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

ಸೋನಾಕ್ಷಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕು ಇದೆ ಎಂದು ಹೇಳಿರುವ ಅವರು, ಸೋನಾಕ್ಷಿ ಮತ್ತು ಜಹೀರ್ ತಮ್ಮ ಜೀವನವನ್ನು ಒಟ್ಟಿಗೆ ಬದುಕಬೇಕು. ಅವರು ಒಟ್ಟಿಗೆ ತುಂಬಾ ಚೆನ್ನಾಗಿ ಕಾಣುತ್ತಾರೆ. ಸುಳ್ಳು ಸುದ್ದಿಗಳನ್ನು ಹೊರತರುತ್ತಿರುವವರು ಈ ಸಂತೋಷದಾಯಕ ಸಂದರ್ಭದಿಂದ ತುಂಬಾ ನಿರಾಶೆಗೊಂಡಿದ್ದಾರೆ. ಯಾಕೆಂದರೆ ಅವರು ಸುಳ್ಳನ್ನು ಹೊರತುಪಡಿಸಿ ಏನನ್ನೂ ಹರಡುತ್ತಿಲ್ಲ. ನಾನು ಅವರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಇದು ನಮ್ಮ‌ ಖಾಸಗಿ ವಿಷಯ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

Continue Reading

ಬಾಲಿವುಡ್

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

Sonakshi Sinha: ಸೋನಾಕ್ಷಿ ಸಿನ್ಹಾ ಅವರು ಮನೆಯವರ ಒಪ್ಪಿಗೆ ಪಡೆಯುವುದು ಬಿಡಿ, ಕನಿಷ್ಠ ಮಾಹಿತಿಯನ್ನೂ ನೀಡದೆ ಮದುವೆ ದಿನಾಂಕ ಫಿಕ್ಸ್‌ ಮಾಡಿರುವುದು ಆಕೆಯ ತಂದೆ ಶತ್ರುಘ್ನ ಸಿನ್ಹಾ ಮಾತ್ರವಲ್ಲ, ತಾಯಿ ಹಾಗೂ ಸಹೋದರನಿಗೂ ಬೇಸರ ತಂದಿತ್ತು. ಇದರಿಂದಾಗಿ ಶತ್ರುಘ್ನ ಸಿನ್ಹಾ ಮಾತ್ರವಲ್ಲದೆ ತಾಯಿ, ಸಹೋದರನೂ ಸೋನಾಕ್ಷಿ ಮದುವೆಗೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಶತ್ರುಘ್ನ ಮುನಿಸು ಕೂಡ ಶಮನವಾಗಿದೆ. ಇದರ ಮಧ್ಯೆಯೇ, ಸೋನಾಕ್ಷಿ ಸಿನ್ಹಾಗೆ ಮೆಹಂದಿ ಹಾಕುವ ಶಾಸ್ತ್ರವು ಅದ್ಧೂರಿಯಾಗಿ ನೆರವೇರಿದೆ.

VISTARANEWS.COM


on

Sonakshi Sinha
Koo

ಮುಂಬೈ: ಬಾಲಿವುಡ್ ನಟಿ (Bollywood Actress) ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮುಸ್ಲಿಂ ಯುವಕ ಜಹೀರ್‌ ಇಕ್ಬಾಲ್‌ (Zaheer Iqbal) ಅವರ ಜತೆ ಮದುವೆಯಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರು ಜೂನ್‌ 23ರಂದು ಮದುವೆಯಾಗಲಿದ್ದು, ಶುಕ್ರವಾರ (ಜೂನ್‌ 21) ಮೆಹಂದಿ ಶಾಸ್ತ್ರವೂ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರದ ಮೊದಲ ಫೋಟೊ ಕೂಡ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಂಬೈನಲ್ಲಿ ನಡೆದ ಮೆಹಂದಿ ಶಾಸ್ತ್ರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗವಹಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು ಜಹೀರ್‌ ಇಕ್ಬಾಲ್‌ ಹಾಗೂ ಗೆಳೆಯರೊಂದಿಗೆ ನಿಂತಿರುವ ಫೋಟೊ ಲಭ್ಯವಾಗಿದೆ. ಜಹೀರ್‌ ಇಕ್ಬಾಲ್‌ ಅವರ ಸಹೋದರಿ ಸನಮ್‌ ರತಾನ್ಸಿ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಜಹೀರ್‌ ಇಕ್ಬಾಲ್‌ ಕೂಡ ಕುರ್ತಾ ಧರಿಸಿ ಭಾವಿ ಪತ್ನಿಯೊಂದಿಗೆ ಮಿಂಚಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ಫೋಟೊ ವೈರಲ್‌ ಆಗುತ್ತಲೇ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಹಾಜರ್‌ ಎಂದ ಶತ್ರುಘ್ನ ಸಿನ್ಹಾ

ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದಕ್ಕೆ, ಅದರಲ್ಲೂ ಮದುವೆ ದಿನಾಂಕವನ್ನೂ ಹೇಳದಿರುವುದಕ್ಕೆ ಮೊದಲು ನಟ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಇದಕ್ಕೂ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಶತ್ರುಘ್ನ ಸಿನ್ಹಾ, ನಟಿಯ ತಾಯಿ ಹಾಗೂ ಸಹೋದರ ಕೂಡ ಭಾಗಿಯಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವದಂತಿಗಳಿಗೆಲ್ಲ ಶತ್ರುಘ್ನ ಸಿನ್ಹಾ ಅವರು ತೆರೆ ಎಳೆದಿದ್ದಾರೆ. “ಮೊದಲು ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗಿದ್ದವು. ಈಗ ಎಲ್ಲವೂ ಬಗೆಹರಿದಿದೆ. ಜೂನ್‌ 23ರಂದು ನಾವೆಲ್ಲ ಮದುವೆಗೆ ಹೋಗಲಿದ್ದೇವೆ” ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು. ನಂತರ ಎಲ್ಲವೂ ಸರಿಹೋಗಿದೆ.

ಇದನ್ನೂ ಓದಿ: Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Continue Reading

ಬಾಲಿವುಡ್

Isha Koppikar: ಖ್ಯಾತ ನಟ ನನಗೆ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದ ʻಸೂರ್ಯವಂಶʼ ನಟಿ!

Isha Koppikar: ಸ್ಟಾರ್‌ ಹೀರೋಗಳ ಜತೆಗೆ ನೀನು ಯಾವಾಗಲೂ ಕ್ಲೋಸ್‌ ಆಗಿ ಮೂವ್‌ ಆಗಬೇಕು. ನಮ್ಮಗಳ ಸ್ನೇಹವನ್ನು ನೀನು ಹೊಂದಿರಬೇಕು ಎನ್ನುತ್ತಲೇ ಭುಜ ಹಿಸುಕಿ, ಅನುಚಿತವಾಗಿ ಆ ಸ್ಟಾರ್‌ ನಟ ನನ್ನ ಜೊತೆ ವರ್ತಿಸಿದ್ದ ಎಂದೂ ಹೇಳಿಕೊಂಡಿದ್ದಾರೆ. ಕನ್ನಡದ ನಟ ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’, ರವಿಚಂದ್ರನ್ ಜೊತೆ ‘ಓ ನನ್ನ ನಲ್ಲೆ’, ‘ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳಲ್ಲಿ ನಟಿಸಿದ್ದಾರೆ.

VISTARANEWS.COM


on

Isha Koppikar recalls casting couch experience
Koo

ಬೆಂಗಳೂರು: ಅನೇಕ ಸೌತ್ ಚಿತ್ರಗಳಲ್ಲಿ ನಟಿಸಿ, ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿ, ಕನ್ನಡದ ʻಸೂರ್ಯವಂಶʼ ಸಿನಿಮಾದಿಂದ ಕನ್ನಡಿಗರ ಹೃದಯ ಗೆದ್ದ ಇಶಾ ಕೊಪ್ಪಿಕರ್ (Isha Koppikar) ತಮ್ಮ ಬದುಕಿನ ಕಹಿ ಅನುಭವ ಹಂಚಿಕೊಂಡಿದ್ದಾರೆ. ʻಫಿಜಾʼ ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದ್ದರು ಇಶಾ ಕೊಪ್ಪಿಕರ್. ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಇಶಾ ಮಾತನಾಡಿ ʻʻಆಗೆಲ್ಲ ಮಿ ಟೂ ಭಿಯಾನ ಇರಲಿಲ್ಲ. ನನ್ನ ಕಾಲದಲ್ಲಿ ಅನೇಕ ನಟಿಯರು ಇಂಡಸ್ಟ್ರಿ ತೊರೆದರು. ಕೆಲವೇ ಕೆಲವರು ಇಂಡಸ್ಟ್ರಿಯಲ್ಲಿ ಇದ್ದರು. ಅದರಲ್ಲಿ ನಾನೂ ಒಬ್ಬಳು. ನಾನು 18 ವರ್ಷವನಿದ್ದಾಗ ನಟ ಕಾಸ್ಟಿಂಗ್ ಕೌಚ್‌ಗಾಗಿ ಸಂಪರ್ಕಿಸಿದರು. ಕೆಲಸ ಸಿಗಬೇಕಾದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಬೇಕು ಅಂತ ಹೇಳಿದ್ರು. ನೀವು ಯಾವ ಅರ್ಥದಲ್ಲಿ ‘ಫ್ರೆಂಡ್ಲಿ’ ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಮರು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ. ಇನ್ನೂ.. ಇದೊಂದೇ ಅಲ್ಲ. ಮತ್ತೊಮ್ಮೆ.. ಮತ್ತೊಬ್ಬ ಸ್ಟಾರ್‌ ನನಗೆ ಸಿಂಗಲ್ ಆಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದಿದ್ದಾರೆ. ಡ್ರೈವರ್ ಅಥವಾ ಬೇರೆ ಯಾರನ್ನೂ ಜತೆಗೆ ಕರೆದುಕೊಂಡು ಬರಬಾರದು ಎಂಬ ಷರತ್ತನ್ನೂ ಹಾಕಿದ್ದ ಎಂದಿರುವ ಇಶಾ ಕೊಪ್ಪಿಕರ್, ಆ ಕಾಲಕ್ಕೆ ಆತ ಹಿಂದಿ ಚಿತ್ರರಂಗದ ‘ಎ’ ದರ್ಜೆಯ ನಾಯಕನಾಗಿದ್ದ ಎಂದು ಕೂಡ ಹೇಳಿದ್ದಾರೆ. ನನ್ನ ಜೊತೆ ಚಿತ್ರರಂಗದ ಬಂದ ಹಲವಾರು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಕಾರಣಕ್ಕೆ ಚಿತ್ರರಂಗದಿಂದ ದೂರ ಸರೆದರು ಎಂದು ಹೇಳಿಕೊಂಡಿದ್ದಾರೆ.

ಸ್ಟಾರ್‌ ಹೀರೋಗಳ ಜತೆಗೆ ನೀನು ಯಾವಾಗಲೂ ಕ್ಲೋಸ್‌ ಆಗಿ ಮೂವ್‌ ಆಗಬೇಕು. ನಮ್ಮಗಳ ಸ್ನೇಹವನ್ನು ನೀನು ಹೊಂದಿರಬೇಕು ಎನ್ನುತ್ತಲೇ ಭುಜ ಹಿಸುಕಿ, ಅನುಚಿತವಾಗಿ ಆ ಸ್ಟಾರ್‌ ನಟ ನನ್ನ ಜೊತೆ ವರ್ತಿಸಿದ್ದ ಎಂದೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಅಂದಹಾಗೆ, ತೆಲುಗಿನ ‘ಚಂದ್ರಲೇಖಾ’ ಸಿನಿಮಾದಲ್ಲಿ ನಾಗಾರ್ಜುನಗೆ (Nagarjuna) ನಾಯಕಿಯಾಗಿ ಇಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ ನಟ ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’, ರವಿಚಂದ್ರನ್ ಜೊತೆ ‘ಓ ನನ್ನ ನಲ್ಲೆ’, ‘ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳಲ್ಲಿ ನಟಿಸಿದ್ದಾರೆ.

Continue Reading
Advertisement
Empty Stomach Foods
ಆರೋಗ್ಯ36 mins ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ1 hour ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ2 hours ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ2 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ3 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ7 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

T20 world cup 2024
ಪ್ರಮುಖ ಸುದ್ದಿ8 hours ago

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

Mangalya chain was stolen by pretending to be a police in Shira
ಕರ್ನಾಟಕ8 hours ago

Theft Case: ಶಿರಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಕಳವು!

Union Minister Pralhad Joshi statement
ಕರ್ನಾಟಕ8 hours ago

Pralhad Joshi: ಕೇವಲ ಶೇ.0.1 ಮತ ಗಳಿಕೆ ಹೆಚ್ವಿದ್ದಕ್ಕೇ ಕಾಂಗ್ರೆಸ್ ಗೆದ್ದ ಭ್ರಮೆಯಲ್ಲಿದೆ; ಪ್ರಲ್ಹಾದ್ ಜೋಶಿ ಗೇಲಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌